ಐಷಾರಾಮಿ ಕಾರುಗಳ ಒಡೆಯ: ಸಲಾರ್ ಚಿತ್ರದ ನಟ ಖರೀದಿಸಿದ ಹೊಸ ಕಾರಿನ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಮಲಯಾಳಂ ಚಲನಚಿತ್ರ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳ ಮೇಲೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ನಟ ಪೃಥ್ವಿರಾಜ್ ಅವರ ಬಳಿ ಐಷಾರಾಮಿ ಮತ್ತು ಮತ್ತು ಎಸ್‌ಯುವಿ ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಎರಡನೇ ಬಾರಿಗೆ ಲಂಬೋರ್ಗಿನಿ ಖರೀದಿಸಿದ ನಟನ ಗ್ಯಾರೇಜ್‌ಗೆ ಹೊಚ್ಚ ಹೊಸ ಸೂಪರ್‌ ಕಾರೊಂದು ಆಗಮಿಸಿದೆ. ಲ್ಯಾಂಬೋರ್ಗಿನಿ ಉರಸ್ ಮತ್ತು BMW 7 ಸೀರಿಸ್ ಹೊರತಾಗಿ, ಈ ಬಾರಿ ಇದು ಪೋರ್ಷೆ ಸ್ಪೋರ್ಟ್ಸ್ ಕಾರ್ ಬಂದಿದೆ. ನಟ ಪೃಥ್ವಿರಾಜ್ ಸುಕುಮಾರನ್ ಅವರು ಹೊಸದಾಗಿ ಖರೀದಿಸಿದ ಕಾರು ಪೋರ್ಷೆ 911 GT3 ಆಗಿದೆ.

ನಟ ಪೃಥ್ವಿರಾಜ್ ಸುಕುಮಾರನ್ ಅವರು ಖರೀದಿಸಿದ ಪೋರ್ಷೆ 911 GT3 ಕಾರಿನ ಬೆಲೆಯು 3.49 ಕೋಟಿ ರೂ. ಆಗಿದೆ. ನಟ ಪೃಥ್ವಿರಾಜ್ ಸುಕುಮಾರನ್ ಅವರು ಪೋರ್ಷೆ 911 GT3 ಟೂರಿಂಗ್ ಅನ್ನು ಡೆಲಿವರಿ ತೆಗೆದುಕೊಳ್ಳುತ್ತಿರುವ ದೃಶ್ಯಗಳನ್ನು ಪೋರ್ಷೆ ಇಂಡಿಯಾದ ಇನ್‌ಸ್ಟಾಗ್ರಾಮ್ ಪೇಜ್ ಮೂಲಕ ಕಂಪನಿ ಬಹಿರಂಗಪಡಿಸಿದೆ. ಜರ್ಮನಿಯಿಂದ ನೇರವಾಗಿ ಆಮದು ಮಾಡಿಕೊಂಡ ಹೊಸ ಸ್ಪೋರ್ಟ್ಸ್ ಕಾರು ಕೇರಳಕ್ಕೆ ಬಂದಿದೆ.

Actor Prithviraj Sukumaran

ಇನ್ನು ನಟ ಪೃಥ್ವಿರಾಜ್ ಎಸ್‌ಯುವಿ ಮತ್ತು ಸ್ಪೋರ್ಟ್ಸ್ ಕಾರ್ ಸಂಗ್ರಹವಿದೆ. ಅವರು ಕೇರಳದಲ್ಲಿ ನೋಂದಾಯಿಸಲ್ಪಟ್ಟ ಲ್ಯಾಂಬೂರ್ಗಿ ಹುರಾಕಾನ್ ಸ್ಪೋರ್ಟ್ಸ್ ಕಾರಿನ ಮೊದಲ ಮಾಲೀಕರಾಗಿದ್ದರು. ಅವರು ರೇಂಜ್ ರೋವರ್ ವೋಗ್, ಪೋರ್ಷೆ ಕಯೆನ್ನೆ ಮತ್ತು ಇತರ ಐಷಾರಾಮಿ ಬ್ರಾಂಡ್‌ಗಳ ಕಾರುಗಳಂತಹ ಎಸ್‌ಯುವಿಗಳನ್ನು ಹೊಂದಿದ್ದಾರೆ.ಈ ವರ್ಷದ ಆರಂಭದಲ್ಲಿ, ಪೃಥ್ವಿರಾಜ್ ಅವರ ಪತ್ನಿ ಸುಪ್ರಿಯಾ ಕೂಡ ಹೊಸ ಟಾಟಾ ಸಫಾರಿ ಅಡ್ವೆಂಚರ್ ಎಡಿಷನ್ ಅನ್ನು ಖರೀದಿಸಿದ್ದರು.

ನಟ ಪೃಥ್ವಿರಾಜ್ ಸುಕುಮಾರನ್ ಮ್ಮ ಪೋರ್ಷೆ ಸ್ಪೋರ್ಟ್ಸ್ ಕಾರಿನ ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಆವೃತ್ತಿಯನ್ನು ಖರೀದಿಸಿದ್ದಾರೆ. ಈ ಹಿಂದೆ ಪೃಥ್ವಿರಾಜ್ 911 ಕ್ಯಾಬ್ರಿಯೊಲೆಟ್ ಕನ್ವರ್ಟಿಬಲ್ ನಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದ್ದರು. ಇದನ್ನು ಮಾರಾಟ ಮಾಡಿದ ನಂತರ ನಟ ಪೃಥ್ವಿರಾಜ್ ಅವರು ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದರು.

Actor Prithviraj Sukumaran

ಪೋರ್ಷೆ 911 GT3 ಕಾರಿನ ಮೂಲ ಬೆಲೆ ರೂ 3.49 ಕೋಟಿಯಾಗಿದೆ. ಆದರೆ ಮಾಲೀಕರ ಆದ್ಯತೆಗಳ ಪ್ರಕಾರ ಗ್ರಾಹಕೀಕರಣವನ್ನು ಮಾಡಿದಾಗ ಈ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ. ಪೃಥ್ವಿರಾಜ್ ವಾಹನದಲ್ಲಿ ಯಾವ ಕಸ್ಟಮೈಸೇಶನ್ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ವಿಶೇಷ ಪೋರ್ಷೆ 911 GT3 ಟೂರಿಂಗ್ ನೀವು ಕಾಯ್ದಿರಿಸಿದರೆ ಮತ್ತು ದೀರ್ಘಕಾಲ ಕಾದರೆ ಮಾತ್ರ ಲಭ್ಯವಿರುತ್ತದೆ. ಭಾರತದಲ್ಲಿ ಕೆಲವೇ ಜನರು ಈ ಸೂಪರ್ ಕಾರನ್ನು ಹೊಂದಿದ್ದಾರೆ.

ಈ ಪಟ್ಟಿಗೆ ಪೃಥ್ವಿರಾಜ್ ಸುಕುಮಾರನ್ ಹೆಸರು ಸೇರ್ಪಡೆಯಾಗಿದೆ. ಪೋರ್ಷೆ 911 GT3 ಟೂರಿಂಗ್ ಪ್ಯಾಕೇಜ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ PDK ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾದ 4.0-ಲೀಟರ್ ಫ್ಲಾಟ್-ಸಿಕ್ಸ್ ನ್ಯಾಚುರಲ್ ಆಸ್ಪೈರ್ಡ್ ಎಂಜಿನ್ ಹೊಂದಿದೆ. ಇದು 502 bhp ಪವರ್ ಮತ್ತು 470 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಜರ್ಮನ್ ಬ್ರಾಂಡ್ ಹೇಳುತ್ತದೆ.

Actor Prithviraj Sukumaran

ಈ ಸೂಪರ್ ಕಾರ್ ಕೇವಲ 3.2 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಪೋರ್ಷೆ 911 GT3 ಕಾರಿನ ಟಾಪ್ ಸ್ಪೀಡ್ 317 ಕಿ.ಮೀ ಆಗಿದೆ. ಈ ಪೋರ್ಷೆ ಮಾದರಿಗೆ ಸುಮಾರು 9 ಕಿಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. 911 GT3 ಟೂರಿಂಗ್‌ನ ಅಗೇಟ್ ಗ್ರೇ ಮೆಟಾಲಿಕ್ ಬಣ್ಣವನ್ನು ನಟ ಹೊಂದಿದ್ದಾರೆ ಎಂದು ವರದಿಯಾಗಿದೆ.

ಈ ಪೋರ್ಷೆ 911 GT3 ಟೂರಿಂಗ್ ಕಾರು ಹೊರಭಾಗದ ಮುಖ್ಯಾಂಶಗಳು ಎರಡು ಏರ್ ಔಟ್‌ಲೆಟ್‌ಗಳೊಂದಿಗೆ ಹೊಸ ಕಾರ್ಬನ್ ಫೈಬರ್ ಬಾನೆಟ್, ದೊಡ್ಡ ರೇಡಿಯೇಟರ್ ಗ್ರಿಲ್ ಹೊಂದಿರುವ ಹೊಸ ಬಂಪರ್, ವಿಸ್ತರಿಸಬಹುದಾದ ಮುಂಭಾಗದ ಸ್ಪ್ಲಿಟರ್ ಹೊಸ ಡಿಫ್ಯೂಸರ್, ಅಡಾಪ್ಟಿವ್ ಸ್ಪಾಯ್ಲರ್ ಮತ್ತು ಕ್ರೋಮ್ ವಿಂಡೋ ಟ್ರಿಮ್ ಅನ್ನು ಹೊಂದಿದೆ.

More from DriveSpark

Article Published On: Monday, June 24, 2024, 19:58 [IST]
English summary
Actor prithviraj sukumaran buys new porsche 911 gt3 touring details
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+