ಬಡ ರೈತರಿಗೆ ನಟ ರಾಘವ ಲಾರೆನ್ಸ್‌ರಿಂದ ಸಹಾಯ.. 10 ಮಹೀಂದ್ರಾ ಟ್ರಾಕ್ಟರ್ ಉಡುಗೊರೆ, ಭಾರೀ ಮೆಚ್ಚುಗೆ

ಕಾಲಿವುಡ್ ನಟ ರಾಘವ ಲಾರೆನ್ಸ್‌ (Raghava Lawrence) ಅವರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಡ್ಯಾನ್ಸ್ ಕೊರಿಯೋಗ್ರಾಫರ್‌ರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು, ತೆಲುಗು ಸಿನಿಮಾ ಮೂಲಕ ಆಕ್ಟಿಂಗ್ ಕೆರಿಯರ್ ಶುರು ಮಾಡಿದ್ದರು. ಇಂದು ಕೇವಲ ಸ್ಟಾರ್ ಆಗಿ ಮಾತ್ರವಲ್ಲದೆ, ನಿಜ ಜೀವನದಲ್ಲಿ ಕೂಡ ಹಲವರಿಗೆ ನೆರವಾಗುವ ಮೂಲಕ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ.

2015ರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ನಿಧನರಾದ ಬಳಿಕ, ಅವರ ಗೌರವಾರ್ಥವಾಗಿ ನಟ ರಾಘವ ಲಾರೆನ್ಸ್ ಚಾರಿಟಬಲ್ ಟ್ರಸ್ಟ್​ವೊಂದನ್ನು ಸ್ಥಾಪಿಸಿ ರೂ.1 ಕೋಟಿ ದೇಣಿಗೆಯನ್ನು ನೀಡಿದ್ದರು. ಸದ್ಯ, ಬದುಕು ಕಟ್ಟಿಕೊಳ್ಳಲು ಹೊರಡುವ ಶ್ರಮಿಕರನ್ನು ಗುರುತಿಸಿ, ಅವರಿಗೆ ಸಹಾಯವನ್ನು ಮಾಡುತ್ತಿರುತ್ತಾರೆ. ಬುಧವಾರ ಬಡ ರೈತರಿಗೆ 10 ಮಹೀಂದ್ರಾ ಟ್ರಾಕ್ಟರ್‌ಗಳನ್ನು ಉಡೊಗೊರೆಯಾಗಿ ಕೊಟ್ಟಿದ್ದಾರೆ.

Actor Raghava Lawrence Gifts 10 Mahindra Tractors For Poor farmers

ಈ ಬಗ್ಗೆ ತಮ್ಮ 'ಎಕ್ಸ್' ಖಾತೆಯಲ್ಲಿ ಸ್ವತಃ ನಟ ರಾಘವ ಲಾರೆನ್ಸ್ ಅವರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. 'ಕಾರ್ಮಿಕರ ದಿನಾಚರಣೆಯಂದು, ನಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ 'ಸೇವೆಯೇ ದೇವರು' ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಂತೋಷವಾಗಿದೆ. ದೇಶದ ಬೆನ್ನೆಲುಬಾಗಿರುವ ರೈತರಿಗೆ ನನ್ನ ಸ್ವಂತ ಹಣದಲ್ಲಿ ಮೊದಲಿಗೆ 10 ಟ್ರ್ಯಾಕ್ಟರ್‌ಗಳನ್ನು ನೀಡಲಾಗುವುದು. ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುವ ಈ ನಿಸ್ವಾರ್ಥ ಪ್ರಯಾಣದಲ್ಲಿ ಎಲ್ಲರೂ ಬಂದು ಸೇರಿ' ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ.

ನಟ ರಾಘವ ಲಾರೆನ್ಸ್ ಮಾಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. 'ನಿಜವಾಗಿಯೂ ನಿಮ್ಮಿಂದ ಒಂದು ಬದಲಾವಣೆ ಆಗುತ್ತದೆ ಲಾರೆನ್ಸ್ ಸರ್... ಸೂಪರ್' ಎಂದು ಹೊಗಳಿದ್ದಾರೆ. 76 ಸಾವಿರಕ್ಕೂ ಹೆಚ್ಚಿನ ಮಂದಿ ವಿಡಿಯೋವನ್ನು ವೀಕ್ಷಿಸಿದ್ದು, 5 ಸಾವಿರದಷ್ಟು ಲೈಕ್ ಪಡೆದುಕೊಂಡಿದೆ.

Actor Raghava Lawrence Gifts 10 Mahindra Tractors For Poor farmers

ಹೋದ ತಿಂಗಳು ಕೂಡ ನಟ ರಾಘವ ಲಾರೆನ್ಸ್, ವಿಶೇಷ ಚೇತನ ಸಾಧಕರಿಗೆ 13 ಸ್ಕೂಟರ್‌ಗಳನ್ನು ಉಡೊಗೊರೆಯಾಗಿ ನೀಡುರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಅವರು, 'ಸುದ್ದಿಗೋಷ್ಠಿಯಲ್ಲಿ ವಿಶೇಷ ಚೇತನ ಯುವಕರು ತುಂಬಾ ಧೈರ್ಯದಿಂದ 'ಮಲ್ಲಕಂಬ' ಪ್ರದರ್ಶಿದ್ದರು ಎಂದು ಹೇಳಿದ್ದೆ. ಅವರ ದೃಢಸಂಕಲ್ಪ, ಶ್ರಮವನ್ನು ನೋಡಿ ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗಿದೆ' ಎಂದಿದ್ದರು.

ಮುಂದುವರಿದು, 'ಅವರಿಗೆ ದ್ವಿಚಕ್ರ ವಾಹನ ಮತ್ತು ಮನೆಯನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದೆ. ಅದರ ಭಾಗವಾಗಿ ಮೊದಲಿಗೆ 13 ಸ್ಕೂಟರ್‌ಗಳನ್ನು ನೀಡುವ ನನ್ನ ಮಾತನ್ನು ಈಡೇರಿಸಿದ್ದೇನೆ. ಎಲ್ಲ ಸ್ಕೂಟರ್‌ಗಳನ್ನು ತ್ರಿಚಕ್ರ ವಾಹನಗಳಾಗಿ ಪರಿವರ್ತಿಸಲಾಗುವುದು. ಅವರಿಗೆ ಭರವಸೆ ನೀಡಿದಂತೆ ಶೀಘ್ರವೇ ಮನೆಯನ್ನು ಕಟ್ಟಿಸಿ ಕೊಡುತ್ತೇನೆ. ನನಗೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ಬೇಕು' ಎಂದು ಬರೆದುಕೊಂಡಿದ್ದರು.

ನಟ ರಾಘವ ಲಾರೆನ್ಸ್‌ ಗಿಫ್ಟ್ ನೀಡಿರುವ ಮಹೀಂದ್ರಾ 575 ಡಿಐ (Mahindra 575 DI) ಟ್ರಾಕ್ಟರ್ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಇದು ರೂ.6.80 ಲಕ್ಷದಿಂದ ರೂ.7.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 45 ಹೆಚ್‌ಪಿ - 2730 ಸಿಸಿ ಡೀಸೆಲ್ ಎಂಜಿನ್ ಒಳಗೊಂಡಿದ್ದು, 8ಎಸ್+ 2ಆರ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆದಿದೆ. ಜೊತೆಗೆ ಡ್ರೈ ಡಿಸ್ಕ್ ಬ್ರೇಕ್ ಅನ್ನು ತನ್ನದಾಗಿಸಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 2, 2024, 18:47 [IST]
English summary
Actor raghava lawrence gifts 10 mahindra tractors for poor farmers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+