Ram Charan: ದಿಢೀರನೆ ಆರ್‌ಟಿಒ ಕಚೇರಿಯಲ್ಲಿ ನಟ ರಾಮ್ ಚರಣ್ ಪ್ರತ್ಯಕ್ಷ: ಕಾರಣವೇನು?

'ಆರ್‌ಆರ್‌ಆರ್' ಸಿನಿಮಾದ ಸಕ್ಸಸ್ ಬಳಿಕ, ನಟ ರಾಮ್ ಚರಣ್ (Ram Charan) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ದೇಶಾದ್ಯಂತ ದೊಡ್ಡಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ, ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿರುವ ಗೇಮ್ ಚೇಂಜರ್ (Game Changer) ಸಿನಿಮಾದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಚಿತ್ರ 2025 ರಲ್ಲಿ ತೆರೆಗೆ ಬರಲಿದೆ. ರಾಮ್ ಚರಣ್ ಜೊತೆಗೆ ನಟಿ ಕಿಯಾರಾ ಅಡ್ವಾಣಿ (Kiara Advani) ಕೂಡ ಸ್ಕ್ರೀನ್ ಶೇರ್ ಮಾಡಿದ್ದಾರೆ.

ನಟ ರಾಮ್ ಚರಣ್ ಅವರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮೇಲೆ ವಿಶೇಷವಾದ ಪ್ರೀತಿಯಿದೆ. ಇತ್ತೀಚೆಗೆ, ಹೊಚ್ಚ ಹೊಸ ಕಪ್ಪು (ಬ್ಲ್ಯಾಕ್) ಬಣ್ಣದ ರೋಲ್ಸ್ ರಾಯ್ಸ್ ಸ್ಪೆಕ್ಟರ್ (Rolls-Royce Spectre) ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದರು. ಈ ಮೂಲಕ ರಾಮ್ ಚರಣ್ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರನ್ನು ತೆಗೆದುಕೊಂಡ ಹೈದರಾಬಾದ್‌ನ ಪ್ರಪ್ರಥಮ ಗ್ರಾಹಕರಾಗಿಯೂ ಹೊರಹೊಮ್ಮಿದ್ದರು.

Actor Ram Charan Register His New Rolls-Royce Spectre Car In Hyderabad RTO Office Video

ಮಂಗಳವಾರ, ನೂತನ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರನ್ನು ನೋಂದಣಿ ಮಾಡಲು ನಟ ರಾಮ್ ಚರಣ್ ಹೈದರಾಬಾದ್‌ನ ಖೈರತಾಬಾದ್‌ನಲ್ಲಿರುವ ಆರ್‌ಟಿಒ ಕಚೇರಿಗೆ ಭೇಟಿ ನೀಡಿದರು. ಈ ಕಾರಿಗೆ 'TG 09 C 2727' ನೋಂದಣಿ ಸಂಖ್ಯೆಯನ್ನು ಪಡೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ದಿಢೀರನೆ ಕಚೇರಿಗೆ ಬಂದ ನಟ ರಾಮ್ ಚರಣ್ ಅವರನ್ನು ಕಂಡ ಆರ್‌ಟಿಒ ಅಧಿಕಾರಿಗಳು ಅಚ್ಚರಿಗೆ ಒಳಗಾದರು. ಕೆಲವೊಬ್ಬರು ನೆಚ್ಚಿನ ನಟನೊಂದಿಗೆ ಸೆಲ್ಫಿಯನ್ನು ಕ್ಲಿಕಿಸಿಕೊಂಡರು.

ನಟ ರಾಮ್ ಚರಣ್ ಅವರ ಬಳಿಯಿರುವ ಈ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಬಗ್ಗೆ ಹೇಳುವುದಾದರೆ, ಇದು ರೂ.7.50 ಕೋಟಿ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಶಕ್ತಿಯುತವಾಗಿರುವ 102 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ ಸರಿ ಸುಮಾರು 530 ಕಿಲೋಮೀಟರ್‌ವರೆಗೆ ಕ್ರಮಿಸುತ್ತದೆ.

Actor Ram Charan Register His New Rolls-Royce Spectre Car In Hyderabad RTO Office Video

ಈ ಕಾರಿನಲ್ಲಿ ಡುಯಲ್ ಎಲೆಕ್ಟ್ರಿಕ್ ಮೋಟಾರ್ ಉಪಯೋಗಿಸಲಾಗಿದೆ. ಇದು 585 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 900 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4.5 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಇದರಲ್ಲಿ 4-ಜನರು ಸುಲಭವಾಗಿ ಓಡಾಟ ನಡೆಯಬಹುದು.

ಹೊಸ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಕಾರಿನಲ್ಲಿರುವ ಬ್ಯಾಟರಿ ಪ್ಯಾಕ್, 195 ಕೆಡಬ್ಲ್ಯೂ ಡಿಸಿ ಚಾರ್ಜರ್ ಬಳಕೆಯಲ್ಲಿ ಕೇವಲ 34 ನಿಮಿಷಗಳಲ್ಲಿ ಶೇಕಡ 10 ರಿಂದ 80% ಚಾರ್ಜ್ ಆಗಿಬಿಡುತ್ತದೆ. ಮಲ್ಟಿ-ಜೋನ್ ಕ್ಲೇಮೇಟ್ ಕಂಟ್ರೋಲ್, ಮಲ್ಟಿ-ಡಿಜಿಟಲ್ ಸ್ಕ್ರೀನ್, ನ್-ಟ್ಯಾಪ್ ಡೋರ್ ಓಪನ್ ಫಂಕ್ಷನ್, ವೆಂಟಿಲೇಟೆಡ್-ಹೀಟೆಡ್ & ಮಸಾಜ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಹಿಂದೆ, ನಟ ರಾಮ್ ಚರಣ್ ಪತ್ನಿ ಉಪಾಸನಾ ಹಾಗೂ ಮಗಳು ಕ್ಲಿನ್ ಕಾರಾ ಜೊತೆಯಲ್ಲಿ ಇದೇ ಕಾರಿನಲ್ಲಿ ಹೈದರಾಬಾದ್​​ನ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಅಲ್ಲಿಂದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ವಿಶೇಷ ವಿಮಾನದ ಮೂಲಕ ಮುಂಬೈಗೆ ಹಾರಿದ್ದರು.

ಕೆಲ ವರ್ಷಗಳ ಹಿಂದೆ, ನಟ ರಾಮ್ ಚರಣ್ ತಮ್ಮ ತಂದೆ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರಿಗೆ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಗಿಫ್ಟ್ ನೀಡಿದ್ದರು. ಈ ಕಾರು, ಕನಿಷ್ಠ ರೂ.8.99 ಕೋಟಿ ಹಾಗೂ ಗರಿಷ್ಠ ರೂ.10.48 ಕೋಟಿ ದರವನ್ನು ಒಳಗೊಂಡಿದೆ. 6.75-ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. ಇದರಲ್ಲಿ 5-ಮಂದಿ ಪ್ರಯಾಣಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 23, 2024, 12:54 [IST]
English summary
Actor ram charan register his new rolls royce spectre car hyderabad rto office video
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+