ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ನಟ ರಮೇಶ್ ಅರವಿಂದ್
ಚಂದನವನದ ಚಿರಯೌವ್ವನ ನಟ ಮತ್ತು ವೀಕೆಂಡ್ ವಿಥ್ ರಮೇಶ್ ಖ್ಯಾತಿಯ ನಿರೂಪಕ ನಟ ರಮೇಶ್ ಅರವಿಂದ್ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ರಮೇಶ್ ಅರವಿಂದ್ ಅವರು ಹೊಚ್ಚ ಹೊಸ ಮರ್ಸಿಡೀಸ್ ಬೆಂಝ್ ಇ-ಕ್ಲಾಸ್ ಕಾರನ್ನು ಖರೀದಿಸಿದ್ದಾರೆ. ಇದು ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ.
ಚಂದನವನದ ಜನಪ್ರಿಯ ನಟ ರಮೇಶ್ ಇಂದಿಗೂ ಕೂಡ ಬೇಡಿಕೆಯ ನಟ. ಕೇವಲ ನಟನೆ ಮಾತ್ರವಲ್ಲದೇ ರಾಮ ಶಾಮ ಭಾಮದಂತಹ ಅನೇಕ ಚಿತ್ರಗಳನ್ನು ನಿರ್ದೇಶಿಸಿ, ನಿರ್ದೇಶಕ ಪಟ್ಟವನ್ನು ರಮೇಶ್ ಗಳಿಸಿದರು. ಅಷ್ಟೇ ಅಲ್ಲದೇ ತಮ್ಮ ಅದ್ಭುತ ನಿರೂಪಣಾ ಕೌಶಲ್ಯದಿಂದಲೂ ರಮೇಶ್ ಅರವಿಂದ್ ಅವರು ಕನ್ನಡಿಗರ ಮನಗೆದ್ದಿದ್ದಾರೆ. ಅವರು ತಮ್ಮ ಪ್ರಯಾಣಕ್ಕಾಗಿ ಜನಪ್ರಿಯ ಐಷಾರಾಮಿ ಬ್ಯಾಂಡ್ ಮರ್ಸಿಡಿಸ್ ಕಂಪನಿಯ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ನಟ ರಮೇಶ್ ಅರವಿಂದ್ ಅವರು ಖರೀದಿಸಿದ ಕಾರಿನ ಬಗ್ಗೆ ಹೇಳುವುದಾದರೆ, ಇದು ಇ-ಕ್ಲಾಸ್ ಮರ್ಸಿಡಿಸ್ ಬೆಂಝ್ ಇಂಡಿಯಾದ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಇದು ಆರಾಮದಾಯಕ ಮತ್ತು ಐಷಾರಾಮಿ ವಿನ್ಯಾಸ ಮತ್ತು ಕ್ಯಾಬಿನ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರಿನ E200 ರೂಪಾಂತರದಲ್ಲಿ 2.0-ಲೀಟರ್ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ,
ಈ ಎಂಜಿನ್ 194 bhp ಅನ್ನು ಅಭಿವೃದ್ಧಿಪಡಿಸುತ್ತದೆ, ಆದರೆ E 200d ನಲ್ಲಿರುವ 2.0-ಲೀಟರ್ ಡೀಸೆಲ್ ಎಂಜಿನ್ 191 bhp ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಇ-ಕ್ಲಾಸ್ ರೂಪಾಂತರದಲ್ಲಿರುವ E 350d ಅತ್ಯಂತ ಜನಪ್ರಿಯ ರೂಪಾಂತರವಾಗಿದೆ. ಇದರಲ್ಲಿ 3.0-ಲೀಟರ್ ಆರು-ಸಿಲಿಂಡರ್, ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 282 ಬಿಹೆಚ್‍ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಲ್ಲಾ ಎಂಜಿನ್ ಆಯ್ಕೆಗಳೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ, ಇದು ಹಿಂದಿನ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಬಲಗೈ ಡ್ರೈವ್ ಲಾಂಗ್ ವೀಲ್‌ಬೇಸ್ (LWB) ಇ-ಕ್ಲಾಸ್ ಅನ್ನು ಪಡೆಯುವ ಜಾಗತಿಕವಾಗಿ ಭಾರತವು ಏಕೈಕ ಮಾರುಕಟ್ಟೆಯಾಗಿದೆ, ಇದು ಇಲ್ಲಿ ಕಾರು ಎಷ್ಟು ಜನಪ್ರಿಯವಾಗಿದೆ ಎಂಬುದನ್ನು ತೋರಿಸುತ್ತದೆ.
ಈ ಐಷಾರಾಮಿ ಮರ್ಸಿಡೀಸ್ ಬೆಂಝ್ ಇ-ಕ್ಲಾಸ್ ಕಾರಿನ ಪರಿಷ್ಕೃತ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ ಹೆಡ್‌ಲ್ಯಾಂಪ್‌ಗಳು, ವಿಶಾಲವಾದ ಮೂರು-ಸ್ಲ್ಯಾಟ್ ಕ್ರೋಮ್ ಗ್ರಿಲ್ ಮತ್ತು ಹೊಸ ಅಲಾಯ್ ವ್ಹೀಲ್ ಗಳೊಂದಿಗೆ 2021ರ ಮಾರ್ಚ್ ತಿಂಗಳಿನಲ್ಲಿ ನವೀಕರಣವನ್ನು ನಡೆಸಿತು. ಇ-ಕ್ಲಾಸ್ ಕಾರಿನ ಒಳಭಾಗದಲ್ಲಿ MBUX UI ಅನ್ನು ಚಾಲನೆ ಮಾಡುವ ಡಿಜಿಟಲ್ ಕನ್ಸೋಲ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಡ್ಯುಯಲ್ 12.3-ಇಂಚಿನ ಡಿಸ್ ಪ್ಲೇಗಳೊಂದಿಗೆ ಕ್ಯಾಬಿನ್ ಫೀಚರ್ಸ್ ನಿಂದ ಒಳಗೊಂಡಿದೆ.
ಇದರೊಂದಿಗೆ ಕೆಪ್ಯಾಸಿಟಿವ್ ಟಚ್ ಕಂಟ್ರೋಲ್‌ಗಳೊಂದಿಗೆ ಹೊಸ ಸ್ಟೀರಿಂಗ್ ವೀಲ್, ಹೊಸ ರಿಯರ್-ಸೆಂಟರ್ ಆರ್ಮ್‌ರೆಸ್ಟ್ ಮತ್ತು ಹಿಂಭಾಗದಲ್ಲಿ ಎರಡು USB ಪೋರ್ಟ್‌ಗಳಿವೆ. ಇನ್ನು ಇತರ ಫೀಚರ್ಸ್ ಗಳೆಂದರೆ 590 ವ್ಯಾಟ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ಒರಗಿಕೊಳ್ಳುವ ಸೀಟುಗಳು, ಮೂರು ವಲಯ ಕ್ಲೈಮೆಂಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್‌ಗಳು ಮತ್ತು ಪನೊರಮಿಕ್ ಸನ್‌ರೂಫ್ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಪ್ರಮುಖ ಅಂಶವೆಂದರೆ ಏರ್ ಸಸ್ಪೆನ್ಷನ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನೀವು ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








