ವಿಂಟೇಜ್ Willys Jeep ಖರೀದಿಸಿದ ನಟ ರಣದೀಪ್ ಹೂಡಾ

ಕಾರು ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚಾಗೇ ಇರುತ್ತೆ. ಸಿನಿಮಾ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸಿನಿಮಾ ಸೆಲಬ್ರಿಟಿಗಳಿಗೆ ಒಂದು ಟ್ರೆಂಡ್ ಆಗಿದೆ.

ವಿಂಟೇಜ್ Willys Jeep ಖರೀದಿಸಿದ ನಟ ರಣದೀಪ್ ಹೂಡಾ

ಆದರೆ ಬಾಲಿವುಡ್ ನಟ ರಣದೀಪ್ ಹೂಡಾ ಅವರ ಆಯ್ಕೆ ವಿಭಿನ್ನವಾಗಿರುತ್ತದೆ. ಇವರು ಸಿನಿಮಾಗಳಲ್ಲಿಯು ಯಾವಾಗಲೂ ವಿಭಿನ್ನ ಪಾತ್ರಗಳನ್ನು ಆಯ್ಕೆಮಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಇತರ ಬಾಲಿವುಡ್ ಸೆಲೆಬ್ರಿಟಿಗಳು ಮರ್ಸಿಡಿಸ್ ಮೇಬ್ಯಾಕ್ ಅಥವಾ ಲ್ಯಾಂಬೋರ್ಗಿನಿ ಉರಸ್‌ನಂತಹ ಐಷಾರಾಮಿ ಎಸ್‍ಯುವಿಗಳನ್ನು ಖರೀದಿಸುತ್ತಿದ್ದಾರೆ. ಆದರೆ ನಟ ರಣದೀಪ್ ಹೂಡಾ ಮಾತ್ರ ವಿಂಟೇಜ್ 4×4 ವಿಲ್ಲೀಸ್ ಜೀಪ್ ಅನ್ನು ಖರೀದಿಸಿದ್ದಾರೆ. ಈ ವಿಲ್ಲೀಸ್ ಜೀಪ್ ಬಹುಬೇಡಿಕೆಯ ಐಕಾನಿಕ್ ಮಾದರಿಯಾಗಿದೆ.

ವಿಂಟೇಜ್ Willys Jeep ಖರೀದಿಸಿದ ನಟ ರಣದೀಪ್ ಹೂಡಾ

ನಟ ಇತ್ತೀಚೆಗೆ ಪಂಜಾಬ್‌ನ ಮೋಗಾದಲ್ಲಿ ತನ್ನ ಶೂಟಿಂಗ್ ಸ್ಥಳವೊಂದಕ್ಕೆ ತನ್ನ ವಿಲ್ಲೀಸ್ ಜೀಪ್ ನಲ್ಲಿ ಡ್ರೈವ್‌ ಮಾಡಿ ತೆರಳಿದ್ದಾರೆ. ಅವರು ಖರೀದಿಸಿದ ಓಪನ್-ಟಾಪ್ ವಿಲ್ಲೀಸ್ ಜೀಪ್ ಚೆನ್ನಾಗಿ ರಿಸ್ಟೋರ್ ಮಾಡಲಾದ ಮಾದರಿಯಾಗಿದೆ. ಈ ಜೀಪ್ ಕ್ಯಾಮಲ್ ಬೀಜ್ ಬಣ್ಣದಲ್ಲಿದೆ,

ವಿಂಟೇಜ್ Willys Jeep ಖರೀದಿಸಿದ ನಟ ರಣದೀಪ್ ಹೂಡಾ

ನಟ ರಣದೀಪ್ ಹೂಡಾ ತಮ್ಮ ಕನಸಿನ ಬೇರ್-ಬೋನ್ಸ್ ವಿಂಟೇಜ್ 4×4 ವಿಲ್ಲಿಸ್ ಜೀಪ್ ಖರೀಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಲ್ಲೀಸ್ ಜೀಪ್ ಅನ್ನು ಅದರ ಮೂಲ ಸ್ಥಿತಿಗೆ ರಿಸ್ಟೋರ್ ಮಾಡಲಾಗಿದೆ ಮತ್ತು ಸಾಂಪ್ರದಾಯಿಕ ವಾರ್ ಡೆಕಾಲ್‌ಗಳು, ಹೆಚ್ಚುವರಿ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ ಮತ್ತು ಮುಂಭಾಗದ ಬಂಪರ್‌ನಲ್ಲಿ ಜೋಡಿಸಲಾದ ಪುಲ್ಲಿಂಗ್ ರೂಪ್, ಕಿರಿದಾದ ಮತ್ತು ನಾಬಿ ಆಫ್-ರೋಡ್ ಟೈರ್‌ಗಳು, ಬಲಿಷ್ಠ ಬಾಡಿ, ಸೀಟ್ ಕವರ್‌ಗಳು. ಮತ್ತು ನವೀಕರಿಸಿದ ಗೇಜ್‌ಗಳಂತಹ ಹಲವಾರು ಮುಖ್ಯಾಂಶಗಳನ್ನು ಪಡೆಯುತ್ತದೆ.

ವಿಂಟೇಜ್ Willys Jeep ಖರೀದಿಸಿದ ನಟ ರಣದೀಪ್ ಹೂಡಾ

ರಣದೀಪ್ ಹೂಡಾ ಅವರು ವಿಲ್ಲೀಸ್ ಜೀಪ್ ಅನ್ನು ಹೊಂದುವುದು ಅವರ ಬಾಲ್ಯದ ಕನಸು ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಇದು ಕಳೆದ 30 ವರ್ಷಗಳಿಂದ ಅವರು ಹೇಳುತ್ತಾ ಬರುತ್ತಿದ್ದರು. ತನ್ನ ಬಾಲ್ಯದಲ್ಲಿ ಮಿಲಿಟರಿ ವಾಹನಗಳ ಸ್ಕೇಲ್ ಮಾಡೆಲ್‌ಗಳೊಂದಿಗೆ ಆಟವಾಡುತ್ತಿದ್ದಾಗ ವಿಲ್ಲೀಸ್ ಜೀಪ್ ಹೊಂದುವ ಅವನ ಕನಸು ಹುಟ್ಟಿತು.

ವಿಂಟೇಜ್ Willys Jeep ಖರೀದಿಸಿದ ನಟ ರಣದೀಪ್ ಹೂಡಾ

ವಿಲ್ಲೀಸ್ ಜೀಪ್ ಅನ್ನು ಹೊಂದಲು ಆವ್ರನ್ನು ಆಕರ್ಷಿಸಿದ ಅಂಶಗಳೆಂದರೆ ಅದರ ಸರಳತೆ, ಬಲಿಷ್ಠತೆ ಮತ್ತು ಬಾಳಿಕೆ, ಇದು ದೀರ್ಘಾವಧಿಯವರೆಗೂ ಬರುವ ಐಕಾನಿಕ್ ಮಾದರಿಯಾಗಿದೆ. ವಿಲ್ಲೀಸ್ ಜೀಪ್ ಅನ್ನು ಖರೀದಿಸಿದ ಬಳಿಕ ಹೋದ ದಲ ಲಾಂಗ್ ಡ್ರೈವ್ ಅನ್ನು ವಿವರಿಸಿದರು,

ವಿಂಟೇಜ್ Willys Jeep ಖರೀದಿಸಿದ ನಟ ರಣದೀಪ್ ಹೂಡಾ

ಅದರ ಉದ್ದೇಶವು ಪಂಜಾಬ್‌ನ ಮೋಗಾದಲ್ಲಿರುವ ಅವರ ಶೂಟಿಂಗ್ ಸ್ಥಳವೊಂದರಲ್ಲಿ ಅದನ್ನು ಮರಳಿ ತರುವುದಾಗಿತ್ತು. ವಿಲ್ಲೀಸ್ ಜೀಪ್ ಓಡಿಸುವ ಗಾಳಿಯ ಅನುಭವವು ನಿಜವಾಗಿಯೂ ಅವರಿಗೆ ವಿಶೇಷ ಅನುಭವವಾಗಿದೆ ಎಂದು ಅವರು ಹೇಳಿದರು. ಮೊದಲ ಲಾಂಗ್ ಡ್ರೈವಿನಲ್ಲಿ ಅವರು ವಿಲ್ಲೀಸ್ ಜೀಪ್ ಅನ್ನು 120 ಕಿ.ಮೀ ವೇಗವರೆಗೂ ಡ್ರೈವ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ವಿಂಟೇಜ್ Willys Jeep ಖರೀದಿಸಿದ ನಟ ರಣದೀಪ್ ಹೂಡಾ

ವಿಲ್ಲೀಸ್ ಜೀಪ್ ಅನ್ನು ರಣದೀಪ್ ಹೂಡಾ ಅವರು ಕುಟುಂಬ ಅಥವಾ ಸ್ನೇಹಿತರಲ್ಲಿ ಯಾರೂ ಅದನ್ನು ಹೊಂದಿರಲಿಲ್ಲ. ಈ 4×4 ವಾಹನವು ದೀರ್ಘಾವಧಿಯ ಪ್ರಯಾಣದಲ್ಲಿ ದೀರ್ಘಾವಧಿಯವರೆಗೆ ಹೆಚ್ಚು ಆರಾಮದಾಯಕವಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ಕಾಡಿನ ಪ್ರವಾಸಗಳಂತಹ ಸಣ್ಣ ವಾರಾಂತ್ಯದ ರಜೆಗಳಿಗಾಗಿ ಈ ಜೀಪ್ ಅನ್ನು ಬಳಸುತ್ತಾರೆ.

ವಿಂಟೇಜ್ Willys Jeep ಖರೀದಿಸಿದ ನಟ ರಣದೀಪ್ ಹೂಡಾ

ವಿಲ್ಲೀಸ್ ಜೀಪ್ ಹೊರತಾಗಿ, ರಣದೀಪ್ ಹೂಡಾ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಎಸ್‍ಯುವಿಯನ್ನು ಹೊಂದಿದ್ದಾರೆ. ಇನ್ನು ಅವರಿಗೆ ಕುದುರೆಗಳ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಅವುಗಳಿಗೆ ಲಾಯವನ್ನು ಸಹ ಹೊಂದಿದ್ದಾನೆ.

ಇನ್ನು ಜೀಪ್ ಕಂಪನಿಯು ತನ್ನ ಗ್ಲಾಡಿಯೇಟರ್ ಸ್ಪೋರ್ಟ್ ಮತ್ತು ಸ್ಪೋರ್ಟ್ ಎಸ್ ಅನ್ನು ಆಧರಿಸಿ 2021ರ ಗ್ಲಾಡಿಯೇಟರ್ ವಿಲ್ಲೀಸ್ ಎಂಬ ಹೊಸ ವೆರಿಯೆಂಟ್ ಅನ್ನು ಪರಿಚಯಿಸಿದೆ. 2021ರ ಹೊಸ ಗ್ಲಾಡಿಯೇಟರ್ ವಿಲ್ಲೀಸ್ ಅತ್ಯುತ್ತಮ ಆಫ್-ರೋಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈ ವಿಲ್ಲೀಸ್ ಮಾದರಿಗೂ ಹಳೇಯ ಐಕಾನಿಕ್ ಮಾದರಿಗಳಿಗೂ ಯಾವುದೇ ಸಂಬಂಧವಿಲ್ಲ,

ವಿಂಟೇಜ್ Willys Jeep ಖರೀದಿಸಿದ ನಟ ರಣದೀಪ್ ಹೂಡಾ

2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಆಫ್-ರೋಡರ್ ವಾಹನವಾಗಿರುವುದರಿಂದ ಸಾಕಷ್ಟು ಆಫ್-ರೋಡ್ ಫೀಚರ್ ಗಳು ಮತ್ತು ತಂತ್ರಜ್ಙಾನಗಳನ್ನು ಹೊಂದಿದೆ. ಈ ಆಫ್-ರೋಡರ್ ನಲ್ಲಿ ಲಿಮಿಟೆಡ್-ಸ್ಲಿಪ್ ಡಿಫರೆನ್ಷಿಯಲ್, ರುಬಿಕಾನ್ ಕ್ಯಾಬ್ ರಾಕ್ ರೈಲ್ ಮತ್ತು ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದೆ. ಇದರೊಂದಿಗೆ 32-ಇಂಚಿನ ಬಿಎಫ್‌ಗುಡ್ರಿಚ್ ಕೆಎಂ2 ಮಡ್ ಟೆರೆಯೆನ್ ಕಂಟ್ರೋಲ್, ಕಮಾಂಡ್-ಟ್ರ್ಯಾಕ್ 4X4 ಪಾರ್ಟ್ ಟೈಮ್ ಮತ್ತು 2 ಸ್ಪೀಡ್ ಟ್ರಾನ್ಸ್‌ಫರ್ ಕೇಸ್ ಅಳವಡಿಸಿದ್ದು, ಆಫ್-ರೋಡ್ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ವಿಂಟೇಜ್ Willys Jeep ಖರೀದಿಸಿದ ನಟ ರಣದೀಪ್ ಹೂಡಾ

2021ರ ಜೀಪ್ ಗ್ಲಾಡಿಯೇಟರ್ ವಿಲ್ಲೀಸ್ ಹುಡ್ ಡೆಕಾಲ್, ಹೆರಿಟೇಜ್ 4 ಡಬ್ಲ್ಯೂಡಿ ಟೈಲ್‌ಗೇಟ್ ಡೆಕಾಲ್, ಗ್ರೇ ಪ್ಯಾಡ್ ಹೊಂದಿರುವ ಕಪ್ಪು 17 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಗ್ಲೋಸ್ ಬ್ಲ್ಯಾಕ್ ಗ್ರಿಲ್ ಅನ್ನು ಒಳಗೊಂಡಿದೆ. ಇನ್ನು ಐಕಾನಿಕ್ ವಿಲ್ಲೀಸ್ ಜೀಪ್ ಕಾಣಲು ಸಿಗುವುದು ಕೂಡ ಅಪರೂಪವಾಗಿದೆ. ಹಳೆಯ ವಿಲ್ಲೀಸ್ ಜೀಪ್ ರಿಸ್ಟ್ರೋರ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಆದರೂ ಈ ವಿಲ್ಲೀಸ್ ಜೀಪ್ ಖರೀದಿಸುವುದಕ್ಕೆ ಸಿಗುವುದು ಅಪರೂಪವಾಗಿದೆ,

Most Read Articles

Kannada
English summary
Actor randeep hooda buys vintage willys jeep details
Story first published: Wednesday, November 3, 2021, 17:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X