ಬೆಂಗಳೂರಿನ ಅಲ್ಟ್ರಾವೈಲೆಟ್ F77 ಸ್ಪೇಸ್ ಎಡಿಷನ್ ಇ-ಬೈಕ್ ಖರೀದಿಸಿದ ಖ್ಯಾತ ನಟ: 5 ಲಕ್ಷ ಬೆಲೆ.. ವಿಶೇಷತೆಗಳೇನು?
ಬೈಕ್‌ಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.. ಸಾಮಾನ್ಯರಿಂದ ಸಿನಿಮಾ ನಟರವರೆಗೆ ದ್ವಿಚಕ್ರ ವಾಹನಗಳ ಬಗ್ಗೆ ವಿಶಿಷ್ಟವಾದ ಕ್ರೇಜ್ ಹೊಂದಿರುತ್ತಾರೆ. ಸದ್ಯ, ಬಾಲಿವುಡ್ ಸಿನಿಮಾ & ಟಿವಿ ನಟ ರೋಹಿತ್ ರಾಯ್ (Rohit Roy) ಬೆಂಗಳೂರಿನ ಅಲ್ಟ್ರಾವೈಲೆಟ್ F77 ಸ್ಪೇಸ್ ಎಡಿಷನ್ (Ultraviolette F77 Space Edition) ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದಾರೆ.
ಇದು ಪ್ರೀಮಿಯಂ ಬೈಕ್ ಆಗಿದ್ದು, ರೂ.5.60 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ನಟ ರೋಹಿತ್ ರಾಯ್ ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ವಿತರಣೆ ಪಡೆದು, ರೈಡ್ ಮಾಡುತ್ತಿರುವ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೂತನ ಅಲ್ಟ್ರಾವೈಲೆಟ್ F77 ಸ್ಪೇಸ್ ಎಡಿಷನ್ ಎಲೆಕ್ಟ್ರಿಕ್ ಬೈಕ್ ಕುರಿತು ಹೇಳುವುದಾದರೆ, ಚಂದ್ರಯಾನ - 3 ಗೌರವಾರ್ಥ ಈ ಬೈಕ್‌ನ್ನು ಕಂಪನಿಯು ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು.

ಕೇವಲ 10 ಯುನಿಟ್ ಮಾತ್ರ ಉತ್ಪಾದಿಸಲಾಗುವುದು ಎಂದು ಅಂದೇ ಘೋಷಣೆ ಮಾಡಿತ್ತು. ಅದರಲ್ಲೂ ಬುಕ್ಕಿಂಗ್ ವಿಂಡೋ ತೆರೆದ ಕೇವಲ 90 ಸೆಕೆಂಡುಗಳಲ್ಲಿ ಎಲ್ಲ ಎಫ್77 ಸ್ಪೇಸ್ ಎಡಿಷನ್ ಬೈಕ್‌ಗಳು ಸೋಲ್ಡ್ ಆಗಿದ್ದವು. ಹೊಸ ಅಲ್ಟ್ರಾವೈಲೆಟ್ F77 ಸ್ಪೇಸ್ ಎಡಿಷನ್ ಬೈಕ್ನಲ್ಲಿ ಶಕ್ತಿಯುತ ಮೋಟಾರ್ ಉಪಯೋಗಿಸಲಾಗಿದ್ದು, 30.2 kW ಅಥವಾ 40.5 hp ಗರಿಷ್ಠ ಪವರ್ ಹಾಗೂ 100 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಪಡೆದಿದೆ.
ನೂತನ ಅಲ್ಟ್ರಾವೈಲೆಟ್ F77 ಸ್ಪೇಸ್ ಎಡಿಷನ್ ಇ-ಬೈಕ್ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಎಲೆಕ್ಟ್ರಿಕ್ ಕಾರುಗಳಂತೆ ಕಾರ್ಯಕ್ಷಮತೆಯನ್ನು ಹೊಂದಿದ್ದು, ಫುಲ್ ಚಾರ್ಜ್ ನಲ್ಲಿ 307 km ರೇಂಜ್ ಕೊಡುತ್ತದೆ. ಕೇವಲ 2.9 ಸೆಕೆಂಡುಗಳಲ್ಲಿ 0 - 60 km/hr ವೇಗವನ್ನು ಪಡೆಯಲಿದ್ದು, 152 km/hr ಟಾಪ್ ಸ್ವೀಡ್ ಹೊಂದಿದೆ.

ಸದ್ಯ, ಭಾರತದಲ್ಲಿ ಖರೀದಿಗೆ ಸಿಗುವ ಸಾಮಾನ್ಯ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಬೈಕ್, ರೂ.3.8 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದ್ದು, ಶ್ಯಾಡೋ, ಲೈಟ್ನಿಂಗ್ ಹಾಗೂ ಲೇಸರ್ ರೂಪಾಂತರದ ಆಯ್ಕೆಯಲ್ಲಿ ದೊರೆಯುತ್ತದೆ. 5 - ಇಂಚಿನ TFT ಇನ್ಸ್ಟ್ರುಮೆಂಟಲ್ ಕನ್ಸೋಲ್, LED ಲೈಟಿಂಗ್, ನ್ಯಾವಿಗೇಷನ್ ಸೇರಿಂದಂತೆ ವಿವಿಧ ಫೀಚರ್ಸ್ ಒಳಗೊಂಡಿದ್ದು, ಹೆಚ್ಚು ಅತ್ಯಾಧುನಿಕವಾಗಿದೆ.
ಈ ಬೈಕ್ ಸಂಪೂರ್ಣ ಚಾರ್ಜ್ ನಲ್ಲಿ 307 km ರೇಂಜ್ ಕೊಡುತ್ತದೆ. ಕೇವಲ 7.8 ಸೆಕೆಂಡುಗಳಲ್ಲಿ 0 - 100 km/hr ವೇಗವನ್ನು ಪಡೆಯಲಿದೆ. ಮುಂಭಾಗ ಹಾಗೂ ಹಿಂಭಾಗ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. ಅಲ್ಟ್ರಾವೈಲೆಟ್ ಬೆಂಗಳೂರಿನ ತನ್ನ ಫ್ಯಾಕ್ಟರಿಯಲ್ಲಿ ಈ ಎಲೆಕ್ಟ್ರಿಕ್ ಬೈಕ್‌ಗಳನ್ನು 2016ರಿಂದ ತಯಾರಿಸಿರುವುದನ್ನು ಶುರು ಮಾಡಿ, 2019ರಲ್ಲಿ ಮೊದಲ ಬಾರಿಗೆ ಪ್ರದರ್ಶನ ಮಾಡಿತ್ತು. ಆದರೆ, ಕೊರೋನಾ ಕಾರಣ ಬಿಡುಗಡೆಯನ್ನು ಮುಂದೂಡಿತ್ತು.

2022ರ ನವೆಂಬರ್ ತಿಂಗಳಲ್ಲಿ ಲಾಂಚ್ ಆದ ಅಲ್ಟ್ರಾವೈಲೆಟ್ F77 ಬೈಕ್ಗೆ ಗ್ರಾಹಕರಿಂದ ನೀರಿಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದಕ್ಕೆ ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಖರೀದಿಸಿರುವುದೇ ಸಾಕ್ಷಿ. ಮೂಲಗಳ ಪ್ರಕಾರ, ಕಂಪನಿಯು ಕಡಿಮೆ ಬೆಲೆಯ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸುತ್ತದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆ ಬಗ್ಗೆ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications
