Thar Roxx: ಪುತ್ರನಿಗೆ ದುಬಾರಿ ಬೆಲೆಯ 'ಮಹೀಂದ್ರಾ ಥಾರ್ ರಾಕ್ಸ್' ಗಿಫ್ಟ್ ಕೊಟ್ಟ ನಟ ಸಲ್ಮಾನ್ ಖಾನ್ ಬಾಡಿಗಾರ್ಡ್!
ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan), ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮೇಲೆ ವಿಶೇಷವಾದ ಪ್ರೀತಿಯಿದೆ. ರೇಂಜ್ ರೋವರ್ ಎಸ್‌ವಿ ಎಲ್‌ಡಬ್ಲ್ಯೂಬಿ 3.0, ನಿಸ್ಸಾನ್ ಪೆಟ್ರೋಲ್, ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‌ಸಿ200, ರೇಂಜ್ ರೋವರ್ ವೋಗ್ ಆಟೋಬಯೋಗ್ರಫಿ, ಆಡಿ ಆರ್‌ಎಸ್7, ಮರ್ಸಿಡಿಸ್ ಬೆಂಜ್ ಜಿಎಲ್ ಕ್ಲಾಸ್ ಮತ್ತು ಮರ್ಸಿಡಿಸ್ ಬೆಂಜ್ ಜಿಎಲ್ಇ 43 ಎಎಂಜಿ ಸೇರಿದಂತೆ ಹತ್ತಾರು ಕಾರುಗಳ ಮಾಲೀಕರೂ ಆಗಿದ್ದಾರೆ.
ನಟ ಸಲ್ಮಾನ್ ಖಾನ್‌ರಂತೆಯೇ ಅವರ ಆಪ್ತರು ಕೂಡ ವಿಲಾಸಿ ಜೀವನ ನಡೆಸುತ್ತಿದ್ದಾರೆ. ಆಗಸ್ಟ್‌ನಲ್ಲಿ ಸಲ್ಲುಮಿಯಾ ಬಾಡಿಗಾರ್ಡ್ (ಅಂಗರಕ್ಷಕ) ಶೇರಾ ಸಿಂಗ್ ರೂ.2 ಕೋಟಿ ಬೆಲೆ ಬಾಳುವ ಹೊಚ್ಚ ಹೊಸ ರೇಂಜ್ ರೋವರ್ (Range Rover) ಎಸ್‌ಯುವಿ ಖರೀದಿಸಿ ಸಖತ್ ಸುದ್ದಿಯಾಗಿದ್ದರು. ಇದೀಗ, ಶೇರಾ ಸಿಂಗ್ ತಮ್ಮ ಪುತ್ರನಿಗೆ ನೂತನ ಮಹೀಂದ್ರಾ ಥಾರ್ ರಾಕ್ಸ್ ಆಫ್-ರೋಡ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ನೂತನ ಎಸ್‌ಯುವಿ ಎದುರಿಗೆ ತಂದೆ - ಮಗ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ. ನಟ ಸಲ್ಮಾನ್ ಖಾನ್ ಅವರಿಗೆ ಈ ಶೇರಾ ಸಿಂಗ್ ನಂಬಿಕಸ್ತ ಬಂಟನಾಗಿದ್ದು, 1995 ರಿಂದ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ ರೂ.2.7 ಕೋಟಿಯಷ್ಟು ವೇತನ ಪಡೆಯುತ್ತಾರೆ ಎಂದು ಈ ಹಿಂದೆಯೇ ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು.
ಸದ್ಯ ಶೇರಾ ಸಿಂಗ್ ತಮ್ಮ ಪುತ್ರನಿಗೆ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿಯ ಯಾವ ಮಾದರಿಯನ್ನು (ಮಾಡೆಲ್) ಉಡುಗೊರೆಯಾಗಿ ನೀಡಿದ್ದಾರೆ ಎಂಬುದರ ಕುರಿತಂತೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ದೇಶೀಯವಾಗಿ ಖರೀದಿಗೆ ದೊರೆಯುವ ಥಾರ್ ರಾಕ್ಸ್ ಕನಿಷ್ಠ ರೂ.12.99 ಲಕ್ಷದಿಂದ ಗರಿಷ್ಠ ರೂ.22.49 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಪಡೆದಿದೆ.

ಈ ಥಾರ್ ರಾಕ್ಸ್ ಎಸ್‌ಯುವಿ ಶಕ್ತಿಯುತವಾಗಿರುವ 2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) & 4ಡಬ್ಲ್ಯೂಡಿ (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.
ನೂತನ ಮಹೀಂದ್ರಾ ಥಾರ್ ರಾಕ್ಸ್ ಕಾರು, ಹೊರ ಹಾಗೂ ಒಳಭಾಗದಲ್ಲಿ ಸಾಕಷ್ಟು ಅತ್ಯಾಧುನಿಕವಾಗಿದೆ. ವಿನ್ಯಾಸದ ದೃಷ್ಟಿಯಿಂದ ಉತ್ತಮವಾಗಿರುವ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ಈ ಎಸ್‌ಯುವಿಯಲ್ಲಿ 5 ಜನರು ಸುಲಭವಾಗಿ ಸಂಚರಿಸಲು ಸಾದ್ಯವಾಗಲಿದ್ದು, ಲಗೇಜ್ ಸಾಗಿಸಲು 447 ಲೀಟರ್‌ನ ಬೂಟ್ ಸ್ಪೇಸ್‌ನ್ನು ಪಡೆದಿದೆ.
ಮಹೀಂದ್ರಾ ಥಾರ್ ರಾಕ್ಸ್ ಯುವ ಗ್ರಾಹಕರನ್ನು ಸೆಳೆಯುವ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. 10.25-ಇಂಚಿನಷ್ಟು ಇನ್ಫೋಟೈನ್‌ಮೆಂಟ್ ಸಿಸ್ಟಮ್, 9-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋ ಎಸಿ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ಸನ್‌ರೂಫ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು ಡಿಸ್ಕ್ ಬ್ರೇಕ್‌ಗಳನ್ನುಒಳಗೊಂಡಿದೆ.
ಇನ್ನು, ಹೊಸ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿ ಮಾರಾಟಕ್ಕೆ ಬಂದ ದಿನದಿಂದಲೇ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರನ್ನು ತನ್ನತ್ತ ಸೆಳೆದಿದೆ. ಅದಕ್ಕೆ ಸಾಕ್ಷಿಯಂತೆ ನೂತನ ಥಾರ್ ರಾಕ್ಸ್‌ನ್ನು 60 ನಿಮಿಷಗಳಲ್ಲಿ 1.76 ಲಕ್ಷಕ್ಕೂ ಅಧಿಕ ಗ್ರಾಹಕರು ಬುಕ್ಕಿಂಗ್ ಮಾಡಿದ್ದರು. ಈಗ ವಿವಿಧ ನಗರಗಳನ್ನು ಅವಲಂಭಿಸಿ 1.5 ರಿಂದ 2 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications