ರಸ್ತೆ ಮೇಲಿನ ಅರಮನೆಯಂತಿರುವ ಮರ್ಸಿಡಿಸ್ ಕಾರು ಖರೀದಿಸಿದ ಸಲ್ಮಾನ್ ಖಾನ್ ಅಳಿಯ: ಬೆಲೆ ಗೊತ್ತಾ?
ಕಾರುಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತದೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಇತ್ತೀಚೆಗೆ ನಟ ಆಯುಷ್ ಶರ್ಮಾ ದುಬಾರಿ ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಇಕ್ಯೂಎಸ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಇವರು ಬಾಲಿವುಡ್ ಸೂಪರ್ ಸ್ಟಾರ್ ಅಳಿಯ. 2014 ರಲ್ಲಿ ಸಲ್ಮಾನ್ ಖಾನ್ (Salman Khan) ಸಹೋದರಿ ಅರ್ಪಿತಾ ಹಾಗೂ ನಟ ಆಯುಷ್ ವಿವಾಹವಾಗಿದ್ದರು.
ಆಯುಷ್ ಶರ್ಮಾ 2018 ರ 'ಲವ್ರಾತ್ರಿ' (Loveyatri) ನಲ್ಲಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಮತ್ತು ಆಯುಷ್‌ಗೆ ಅಹಿಲ್ ಮತ್ತು ಮಗಳು ಆಯತ್ ಎಂಬ ಇಬ್ಬರು ಮಕ್ಕಳಿದ್ದಾರೆ. ನಟ ಆಯುಷ್ ಶರ್ಮಾ ಅವರು ಹಿಮಾಚಲ ಪ್ರದೇಶದ ಹಿರಿಯ ಕಾಂಗ್ರೆಸ್ ಮಾಜಿ ಮಂತ್ರಿ ಧುರೀಣರಾದ ಪಂಡಿತ್ ಸುಖ್ ರಾಮ್ ಅವರ ಮೊಮ್ಮಗ.

ನಟ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಹಾಗೂ ಅವರ ಪತಿ ಆಯುಷ್ ಶರ್ಮಾ ತಮ್ಮ ಮುಂಬೈನ ಬಾಂದ್ರಾನಲ್ಲಿದ್ದ 22 ಕೋಟಿ ರೂಪಾಯಿಗೆ ಇತ್ತೀಚೆಗೆ ಮಾರಾಟ ಮಾಡಿ ಸುದ್ದಿಯಾಗಿದ್ದರು. ಮುಂಬೈನ ವರ್ಲಿಯಲ್ಲಿರುವ ಇನ್ನೂ ದೊಡ್ಡ ಮತ್ತು ಐಶಾರಾಮಿ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಇದರ ಬೆಲೆಯು ಸುಮಾರು 50 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಆಯುಷ್ ಶರ್ಮಾ ಹೊಸ ಮರ್ಸಿಡಿಸ್-ಬೆಂಝ್ ಇಕ್ಯೂಎಸ್ (Mercedes-Benz EQS) ಎಸ್‍ಯುವಿಯನ್ನು ಖರೀದಿಸಿದ್ದಾರೆ. ಈ ಮರ್ಸಿಡಿಸ್-ಬೆಂಝ್ ಇಕ್ಯೂಎಸ್ ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.41 ಕೋಟಿಯಾಗಿದೆ. ಇಕ್ಯೂಎಸ್ ಎಸ್‍ಯುವಿ ಭಾರತದಲ್ಲಿ ಮರ್ಸಿಡಿಸ್‌ನ ಆರನೇ ಎಲೆಕ್ಟ್ರಿಕ್ ವಾಹನವಾಗಿದೆ. ಈ ಹೊಸ ಮರ್ಸಿಡಿಸ್ ಇಕ್ಯೂಇ ಎಸ್‍ಯುವಿ ಮಾದರಿಯು ಮತ್ತು ಮೇಬ್ಯಾಕ್ ಇಕ್ಯೂಎಸ್ ನಡುವಿನ ಸ್ಥಾನವನ್ನು ಪಡೆಯುತ್ತದೆ.

ಈ ಹೊಸ ಮರ್ಸಿಡಿಸ್-ಮೇಬ್ಯಾಕ್ EQS ಎಲೆಕ್ಟ್ರಿಕ್ ಎಸ್‍ಯುವಿಯ ಆಲ್-ವೀಲ್-ಡ್ರೈವ್ ಸೆಟಪ್‌ಗಾಗಿ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಜೋಡಿಯಾಗಿರುವ 107.8 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಂಡಿದೆ. ಈ ಸಂಯೋಜನೆಯು 649 bhp ಮತ್ತು 950 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿ 4 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.
ವಾಹನದ ಪವರ್‌ಟ್ರೇನ್ ಅನ್ನು ಮೊದಲು ಶಾಂಘೈ ಆಟೋ ಶೋದಲ್ಲಿ ಪ್ರದರ್ಶಿಸಲಾಯಿತು. ಇದು ಸಿಂಗಲ್ ಚಾರ್ಜ್‌ನಲ್ಲಿ 600km WLTP ರೇಂಜ್ ಅನ್ನು ನೀಡುತ್ತದೆ. ಮೇಬ್ಯಾಕ್ EQS ಐಷಾರಾಮಿ ಮತ್ತು ಕಾರ್ಯಕ್ಷಮತೆಯ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಈ ಐಷಾರಾಮಿ ಎಸ್‍ಯುವಿಯಲ್ಲಿ ವಿಸ್ತಾರವಾದ ಸೌಕರ್ಯಗಳ ಪಟ್ಟಿ, ಸುಧಾರಿತ ಸುರಕ್ಷತಾ ಸಿಸ್ಟಂಗಳು ಮತ್ತು ಲಕ್ಷುರಿ ಎಸ್‍ಯುವಿ ಅನುಭವವನ್ನು ಬಯಸುವವರಿಗೆ ಇದು ಉತ್ತಮವಾದ ಆಯ್ಕೆ ಇದಾಗಿದೆ.

ಈ ಮರ್ಸಿಡಿಸ್ ಬೆಂಝ್ ತನ್ನ ಮೇಬ್ಯಾಕ್ EQS 680 ಎಲೆಕ್ಟ್ರಿಕ್ ಎಸ್‍ಯುವಿಯು ಪ್ರಮುಖ ಗ್ರಿಲ್, ಕನೆಕ್ಟಿವಿಟಿ LED ಹೆಡ್‌ಲೈಟ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳು ಮತ್ತು ವಿಶೇಷವಾದ ಮೇಬ್ಯಾಕ್ ವಿನ್ಯಾಸ ಅಂಶಗಳನ್ನು ಪ್ರದರ್ಶಿಸುತ್ತದೆ. ಎಲೆಕ್ಟ್ರಿಕ್ ಎಸ್‍ಯುವಿಯು 1,721 mm ಎತ್ತರ ಮತ್ತು 5,125 mm ಉದ್ದವನ್ನು ಹೊಂದಿದೆ. ಇನ್ನು 3,210 mm ವ್ಹೀಲ್‌ಬೇಸ್ ಅನ್ನು ಹೊಂದಿದೆ.
ಈ ದುಬಾರಿ ಎಲೆಕ್ಟ್ರಿಕ್ ಎಸ್‍ಯುವಿಯ ಒಳಭಾಗದಲ್ಲಿ 15-ಸ್ಪೀಕರ್ ಬರ್ಮೆಸ್ಟರ್ 4D ಸರೌಂಡ್ ಸೌಂಡ್ ಸಿಸ್ಟಮ್, ಆಕ್ಟಿವ್ ಆಂಬಿಯೆಂಟ್ ಲೈಟಿಂಗ್, ನಪ್ಪಾ ಲೆದರ್ ಸೀಟ್‌ಗಳು ಮತ್ತು ರಿಯರ್ ಇನ್ಫೋಟೈನ್‌ಮೆಂಟ್ ಕಂಟ್ರೋಲ್‌ಗಳನ್ನು ಒಳಗೊಂಡಂತೆ ಹಲವಾರು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಂದಿಗೆ ಗ್ರಾಹಕರು ಹಿಂಭಾಗದ ಮನರಂಜನಾ ಡಿಸ್ ಪ್ಲೇಯನ್ನು ಹೊಂದಿದೆ. ಎರಡು ಹಿಂಬದಿಯ ಸೀಟುಗಳ ನಡುವೆ ಆರ್ಮ್‌ರೆಸ್ಟ್‌ನ ಹಿಂದೆ ರೆಫ್ರಿಜರೇಟರ್ ವಿಭಾಗವನ್ನು ಇರಿಸಲಾಗಿದೆ.


Click it and Unblock the Notifications








