ಭದ್ರತೆಗಾಗಿ ದುಬೈನಿಂದ ಹೊಸ ಬುಲೆಟ್ ಪ್ರೂಫ್ 'ನಿಸ್ಸಾನ್' ಕಾರು ತರಿಸಿದ ನಟ ಸಲ್ಮಾನ್ ಖಾನ್: ಕಾರಣವೇನು?
ಬಾಲಿವುಡ್ ಜನಪ್ರಿಯ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಪಾತಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೀವ ಬೆದರಿಕೆಯೊಡ್ಡುತ್ತಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಆಪ್ತರಾಗಿದ್ದ ಮಾಜಿ ಸಚಿವ ಬಾಬಾ ಸಿದ್ದಿಕ್ (ಅಜಿತ್ ಪವರ್ ಬಣ) ಅವರನ್ನು ಇದೇ ಲಾರೆನ್ಸ್ ಬಿಷ್ಣೋಯ್ ಸಹಚರರು ಹತ್ಯೆ ಮಾಡಿದ್ದಾರೆ ಎನ್ನಲಾಗಿದ್ದು, ಮಹಾರಾಷ್ಟ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸದ್ಯ, ಸಲ್ಮಾನ್ ಖಾನ್ ಭಾರಿ ಭದ್ರತೆಯಲಿದ್ದಾರೆ. ಮುನ್ನೆಚ್ಚರಿಕೆಯಾಗಿ ದುಬೈನಿಂದ ಬುಲೆಟ್ ಪ್ರೂಫ್ ನಿಸ್ಸಾನ್ ಪೆಟ್ರೋಲ್ (Nissan Patrol) ಎಸ್‌ಯುವಿಯನ್ನು ತಮ್ಮ ಮುಂಬೈ ನಿವಾಸಕ್ಕೆ ತರಿಸಿಕೊಂಡಿದ್ದಾರೆ. ಈ ಕಾರು ಬರೋಬ್ಬರಿ ರೂ.2 ಕೋಟಿ ಬೆಲೆಯನ್ನು ಹೊಂದಿದೆ ಎಂದು ವರದಿಯಾಗಿದೆ.
1998ರಲ್ಲಿ ರಾಜಸ್ತಾನದಲ್ಲಿ ನಡೆಯುತ್ತಿದ್ದ 'ಹಮ್ ಸಾಥ್ ಸಾಥ್ ಹೈ' ಶೂಟಿಂಗ್ ವೇಳೆಯಲ್ಲಿ ನಟ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿ ಕೊಂದ ಆರೋಪ ಎದುರಿಸುತ್ತಿದ್ದಾರೆ. ಬಿಷ್ಣೋಯ್ ಸಮುದಾಯ ಕೃಷ್ಣಮೃಗವನ್ನು ಪೂಜಿಸುತ್ತದೆ. ಇದರಿಂದಾಗಿ ಆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದು, ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಹಲವು ಬೆದರಿಕೆಗಳು ಬರುತ್ತಿವೆ.

ನಟ ಸಲ್ಮಾನ್ ಖಾನ್ ದುಬೈನಿಂದ ತರಿಸಿರುವ ಬುಲೆಟ್ ಪ್ರೂಫ್ ನಿಸ್ಸಾನ್ ಪೆಟ್ರೋಲ್ ಎಸ್‌ಯುವಿ ಪ್ರಯಾಣಿಕರ ರಕ್ಷಣೆಗಾಗಿ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಕಾರು, ಭಾರಿ ಗುಂಡಿನ ದಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಪಡೆದಿದೆ. ಜೊತೆಗೆ ಬಾಂಬ್ ಅಲರ್ಟ್ ಸಿಸ್ಟಮ್ (ಬಾಂಬ್ ಎಚ್ಚರಿಕೆ ವ್ಯವಸ್ಥೆ) ಅನ್ನು ಒಳಗೊಂಡಿದೆ.
1951ರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 'ನಿಸ್ಸಾನ್ ಪೆಟ್ರೋಲ್' ಎಸ್‌ಯುವಿಯನ್ನು ಮಾರಾಟ ಮಾಡಲಾಗುತ್ತಿದೆ. ಅಂದಿನಿಂದಲೂ ಈ ಕಾರು ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಪ್ರಸ್ತುತ ಇದರ 6ನೇ ತಲೆಮಾರಿನ (6th Generation) ಎಸ್‌ಯುವಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಆದರೆ, ಕಂಪನಿಯು ಈ ಕಾರನ್ನು ದೇಶೀಯವಾಗಿ ಮಾರಾಟ ಮಾಡುತ್ತಿಲ್ಲ. ಖರೀದಿದಾರರು ವಿದೇಶದಿಂದ ಮಾತ್ರ ಆಮದು ಮಾಡಿಕೊಳ್ಳಬೇಕಾಗಿದೆ.
ನೂತನ ನಿಸ್ಸಾನ್ ಪೆಟ್ರೋಲ್ (Nissan Patrol) ಕಾರು ಶಕ್ತಿಯುತವಾದ ಎರಡು ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. ಇದರ 3.8-ಲೀಟರ್ ವಿ6 ಪೆಟ್ರೋಲ್ ಎಂಜಿನ್ 316 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 386 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.
ಮತ್ತೊಂದು 3.5-ಲೀಟರ್ ವಿ6 ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ 425 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 700 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 9-ಸ್ಪೀಡ್ ಆಟೋಮೆಟಿಕ್ ಟ್ರಾಸ್ಮಿಷನ್ (ಗೇರ್‌ಬಾಕ್ಸ್) ಕೂಡ ಹೊಂದಿದೆ. ಸರಿ ಸುಮಾರು 15 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ.
ಈ ಕಾರು ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸ ಹೊಂದಿದ್ದು, ಸಿ-ಆಕಾರಕ್ಕೆ ಹೋಲಿಕೆಯಾಗುವ ಹೆಡ್‌ಲೈಟ್‌ಗಳು ಹಾಗೂ ಪನೋರಮಿಕ್ ಪನೊರೊಮಿಕ್ ಸನ್‌ರೂಫ್‌ನ್ನು ಪಡೆದಿದೆ. ಇದು 8 ಆಸನಗಳನ್ನು ಒಳಗಗೊಂಡಿದೆ. ರೇರ್ ವ್ಯೂ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೆನ್ಸರ್‌ಗಳು, ಪ್ಯಾಡಲ್ ಶಿಫ್ಟರ್, 12.3-ಇಂಚಿನ ಡಿಸ್‌ಪ್ಲೇ, ಆಫ್-ರೋಡ್ ಬಂಪರ್ ಮತ್ತು ಮೆಷಿನ್ ಕಟ್ ಅಲಾಯ್ ವೀಲ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಕಳೆದ ವರ್ಷವು ನಟ ಸಲ್ಮಾನ್ ಖಾನ್, ತಮ್ಮ ಭದ್ರತೆಯಾಗಿ ಇದೇ ನಿಸ್ಸಾನ್ ಪೆಟ್ರೋಲ್ ಎಸ್‌ಯುವಿಯನ್ನು ಖರೀದಿಸಿದ್ದರು. ಈಗ ದುಬೈನಿಂದ ಎರಡನೇ ಕಾರನ್ನು ತರಿಸಿಕೊಂಡಿದ್ದಾರೆ. ಈ ಹಿಂದೆ, ಟೊಯೊಟಾ ಫಾರ್ಚುನರ್ (Toyota Fortuner) ಎಸ್‌ಯುವಿಯನ್ನು ಸಹ ಅವರ ವೈಯಕ್ತಿಕ ಭದ್ರತೆಯ ವಾಹನವಾಗಿ ಬಳಕೆ ಮಾಡಲಾಗುತ್ತಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications