ದುಬಾರಿ ಸೂಪರ್ ಬೈಕ್ ಕನ್ನಡದ ಖ್ಯಾತ ಸೀರಿಯಲ್ ನಟ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಸಿನಿಮಾ ನಟರಂತೆ ಸೀರಿಯಲ್ ನಟರಿಗೂ ದೊಡ್ಡ ಫ್ಯಾನ್ಸ್ ಬೇಸ್ ಇದೆ. ಕನ್ನಡದ ಖ್ಯಾತ ಸೀರಿಯಲ್ ನಟ ಶಮಂತ್ ಬ್ರೋ ಗೌಡ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಲಕ್ಷ್ಮೀ ಬಾರಮ್ಮ' ಧಾರವಾಹಿಯಲ್ಲಿ ಅಭಿನಯಿಸುವ ಮೂಲಕ ಶಮಂತ್ ಬ್ರೋ ಗೌಡ (Shamanth bro gowda) ಹೆಚ್ಚು ಜನಪ್ರಿಯರಾದರು. ಅವರು ನಟಿಸುತ್ತಿರುವ 'ವೈಷ್ಣವ್' ಪಾತ್ರ ವೀಕ್ಷಕರ ಮನ ಗೆದ್ದಿದೆ. ಬಿಗ್ ಬಾಸ್ ಕನ್ನಡದ ಸೀಸನ್ 8ನಲ್ಲಿಯೂ ಶಮಂತ್ ಬ್ರೋ ಗೌಡ ಭಾಗವಹಿಸಿದ್ದರು.

ಬಿಗ್ ಬಾಸ್ ಮನೆಯಿಂದ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಬಾಕಿಯಿರುವಾಗ ಶೋನಿಂದ ಹೊರ ನಡೆದಿದ್ದರು. ಗಾಯಕರಾಗಿ ಕೂಡ ಅವರು ಗುರುತಿಸಿಕೊಂಡಿದ್ದಾರೆ. ಶಮಂತ್ ಬ್ರೋ ಗೌಡ ಅವರಿಗೆ ಕಾರು ಹಾಗೂ ಬೈಕ್‌ಗಳ ಮೇಲೆಯೂ ವಿಶೇಷವಾದ ಪ್ರೀತಿಯಿದೆ. ಈ ಹಿಂದೆ ಅವರು, ಬಿಎಂಡಬ್ಲ್ಯೂ 5 ಸೀರೀಸ್ (BMW 5 Series) ಕಾರನ್ನು ಖರೀದಿ ಮಾಡಿದ್ದರು. ಸದ್ಯ, ಇದೇ ಕಾರು ರೂ.72.90 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Actor Shamanth Bro

ಇತ್ತೀಚೆಗೆ ನಟ ಶಮಂತ್ ಬ್ರೋ ಗೌಡ, ದುಬಾರಿ ಬೆಲೆಯ ಐಷಾರಾಮಿ ಸುಜುಕಿ ಹಯಾಬುಸಾ (Suzuki Hayabusa) ಬೈಕ್ ಅನ್ನು ಖರೀದಿಸಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅವರು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೂವಿನ ಹಾರ ಹಾಕಿ, ಪೂಜೆ ಮಾಡಿಸಿರುವ ನೂತನ ಬೈಕ್ ಮೇಲೆ ಕುಳಿತುಕೊಂಡು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ನಟ ಶಮಂತ್ ಬ್ರೋ ಗೌಡ ಖರೀದಿಸಿದ್ದಾರೆ ಎನ್ನಲಾದ ಹೊಚ್ಚ ಹೊಸ ಸುಜುಕಿ ಹಯಾಬುಸಾ ಬೈಕ್ ವಿಶೇಷತೆಗಳು ಇಲ್ಲಿದೆ.

ಜನಪ್ರಿಯತೆ: ಈ ಐಕಾನಿಕ್ ಸುಜುಕಿ ಹಯಾಬುಸಾ ಬೈಕ್ ಇಂದಿಗೂ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಧೂಮ್ ಎಂಬ ಸೂಪರ್ ಹಿಟ್ ಚಿತ್ರದಲ್ಲಿ ಜಾನ್ ಅಬ್ರಹಾಂ ಈ ಹಯಾಬುಸಾ ಬೈಕನ್ನು ಚಲಾಯಿಸುತ್ತಾರೆ. ಅಲ್ಲಿಂದ ಈ ಬೈಕ್ ಭಾರತದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿತ್ತು. ಇದೀಗ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾವು ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ತಲೆಮಾರಿನ ಹಯಬುಸಾ ಬೈಕನ್ನು ಮಾರಾಟ ಮಾಡುತ್ತಿದೆ.

Actor Shamanth Bro

ಬೆಲೆ ಮತ್ತು ಬಣ್ಣಗಳ ಆಯ್ಕೆ: ಸುಜುಕಿ ಹಯಾಬುಸಾ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.17 ಲಕ್ಷದಿಂದ ರೂ.17.80 ಲಕ್ಷವನ್ನು ಹೊಂದಿದೆ. ಈ ಹಯಾಬುಸಾ ಸೂಪರ್ ಬೈಕ್ ಮೆಟಾಲಿಕ್ ಥಂಡರ್ ಗ್ರೇ, ಕ್ಯಾಂಡಿ ಡೇರಿಂಗ್ ರೆಡ್ ಮತ್ತು ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.

ಎಂಜಿನ್: ಈ ಹೊಸ ಸುಜುಕಿ ಹಯಾಬುಸಾ ಸೂಪರ್ ಬೈಕಿನಲ್ಲಿ 1340 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 187.7 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ.

ಫೀಚರ್ಸ್: ಸುಜುಕಿ ಹಯಾಬುಸಾದಲ್ಲಿ ಕೆಲವು ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಏಡ್ಸ್, ಮೂರು ಪವರ್ ಮೋಡ್‌ಗಳು, ಲಾಂಚ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಕೂಡ ಹೊಂದಿವೆ. ಇದರೊಂದಿಗೆ ಕಾರ್ನರಿಂಗ್ ಎಬಿಎಸ್, ಹಿಲ್-ಹೋಲ್ಡ್ ಕಂಟ್ರೋಲ್, ಆಕ್ಟಿವ್ ಸ್ಪೀಡ್ ಲಿಮಿಟರ್, ಲೋ ಆರ್ಪಿಎಂ ಅಸಿಸ್ಟ್, ಕಂಬೈನ್ಡ್ ಬ್ರೇಕ್ ಸಿಸ್ಟಂ, ಹೊಸ ಸಿಕ್ಸ್-ಆಕ್ಸಿಸ್ ಐಎಂಯು ಮತ್ತು ಸ್ವಿಚ್ ಮಾಡಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ನಂತ ವಿವಿಧ ಫೀಚರ್ಸ್ ಗಳನ್ನು ಒಳಗೊಂಡಿದೆ.

ವಿನ್ಯಾಸ: ಸುಜುಕಿ ಹಯಾಬುಸಾ ಬೈಕ್ ಭಾರತದಲ್ಲಿ ಬಿಡುಗಡೆಯಾದ ಪ್ರಾರಂಭದಿಂದ ಇಲ್ಲಿಯವರೆಗೆ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡಿದೆ. ಒಟ್ಟಾರೆ ಸಿಲೂಯೆಟ್ ಅನ್ನು ಒಂದೇ ರೀತಿ ಇರಿಸಲಾಗಿದ್ದರೂ, ಸೂಪರ್ ಬೈಕ್ ಹೆಚ್ಚು ಅಗ್ರೇಸಿವ್ ವಿನ್ಯಾಸದೊಂದಿಗೆ ಅಗ್ರೇಸಿವ್ ಲೈನ್ ಗಳು ಮತ್ತು ಹೊಸ ಫಾಸಿಕದೊಂದಿಗೆ ಆಕರ್ಷಕವಾಗಿದೆ. ಈ ಸೂಪರ್ ಬೈಕ್ ಎಲ್ಇಡಿ ಲೈಟ್ ಗಳನ್ನು ಹೊಂದಿವೆ. ಇದು ಹೆಡ್ ಲ್ಯಾಂಪ್ ಮತ್ತು ಟೈಲ್ ಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ ಇಂಡಿಕೇಟರ್ ಸ್ಥಾನ ಲೈಟ್ ಗಳೊಂದಿಗೆ ಸಂಯೋಜಿಸಲಾಗಿದೆ.

ಈ ಸೂಪರ್ ಬೈಕ್ ಮುಂಭಾಗದ ಏರ್ ಟೆಕ್ ಹೊರಭಾಗದಲ್ಲಿ ಇರಿಸಲಾಗಿದ್ದು, ದೊಡ್ಡ ಡ್ಯುಯಲ್ ಕ್ರೋಮ್-ಲೇಪಿತ ಎಕ್ಸಾಸ್ಟ್ ಪೈಪ್ಸ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಅನ್ನು ಹೊಂದಿದ್ದು, ಇದರಲ್ಲಿ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಹೊಸ ಟಿಎಫ್‌ಟಿ ಡಿಸ್ ಪ್ಲೇಯನ್ನು ಕೂಡ ನೀಡಲಾಗಿದೆ. ಇದು ಹೊಸ ಸ್ವಿಚ್‌ಗಿಯರ್ ಜೊತೆಗೆ ರೈಡರಿಗೆ ವಿವಿಧ ರೈಡರ್ ಅಸಿಸ್ಟ್ ಆಯ್ಕೆಗಳ ನಡುವೆ ನ್ಯಾವಿಗೇಟ್ ಅನ್ನು ಹೊಂದಿದೆ.

Article Published On: Sunday, December 1, 2024, 14:30 [IST]
English summary
Actor shamanth bro gowda new suzuki hayabusa top things
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+