ವಿಶಿಷ್ಟ ರೀತಿಯಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ನಟ ಸೋನು ಸೂದ್

ಕೊರೋನಾ ಸಂಕಷ್ಟದ ಸಮಯದಲ್ಲಿ ದೇಶದ ಯಾವುದೇ ಭಾಗದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರಿಗೆ ನಿರಂತರ ನೆರವು ನೀಡಿಕೊಂಡು ಬಂದಿರುವ ಬಹುಭಾಷಾ ನಟ ಸೋನು ಸೂದ್. ಈ ಬಾರಿ ಅವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ.

ವಿಶಿಷ್ಟ ರೀತಿಯಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ನಟ ಸೋನು ಸೂದ್

ವಿದ್ಯಾರ್ಥಿಗಳಿಗಾಗಿ ಸಿನಿಮಾ ಶೂಟಿಂಗ್​ಗೆ ಸೈಕಲ್​ ಮೇಲೆ ತೆರಳಿದ್ದಾರೆ. ಸಿಬಿಎಸ್​ಇ ವಿದ್ಯಾರ್ಥಿಗಳ ಪರೀಕ್ಷೆ ರದ್ದು ಮಾಡುವಂತೆ ಬಹುಭಾಷಾ ನಟ ಸೋನು ಸೂದ್ ಕಳೆದ ಕೆಲ ದಿನಗಳ ಹಿಂದೆ ಮನವಿ ಮಾಡಿದ್ದರು. ಅದರ ಭಾಗವಾಗಿ ಹೈದರಾಬಾದ್​ನಲ್ಲಿ ಅವರು ಸಿನಿಮಾ ಶೂಟಿಂಗ್​ ಸೆಟ್​ಗೆ ಸೈಕಲ್​ ಸವಾರಿ ನಡೆಸಿದ್ದಾರೆ. ಇದರ ವಿಡಿಯೋ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಶಿಷ್ಟ ರೀತಿಯಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ನಟ ಸೋನು ಸೂದ್

ಇದರ ಬಗ್ಗೆ ಅವರು ಮಾತನಾಡಿ, ಉತ್ತಮ ಆರೋಗ್ಯದ ಪ್ರಾಮುಖ್ಯತೆಯನ್ನು ಹೇಳುತ್ತಾ ಸೈಕ್ಲಿಂಗ್‌ನಂತಹ ಮುಂಜಾನೆ ತಾಲೀಮುಗಳು ದೇಹಕ್ಕೆ ಒಳ್ಳೆಯದು ಮತ್ತು ವಿಶೇಷವಾಗಿ ಹೈದರಾಬಾದ್‌ನಂತಹ ಸುಂದರ ನಗರದಲ್ಲಿ ಉಲ್ಲಾಸಕರವಾಗಿರುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ವಿಶಿಷ್ಟ ರೀತಿಯಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ನಟ ಸೋನು ಸೂದ್

ನಾನು ಯಾವಾಗಲೂ ನನ್ನ ಶೂಟಿಂಗ್​ ಸೆಟ್‌ಗಳಿಗೆ ಸೈಕ್ಲಿಂಗ್ ಮಾಡುವಂತೆ ಭಾವಿಸುತ್ತೇನೆ. ನಾನು ಇದನ್ನು ಮುಂಬೈನಲ್ಲಿ ಒಂದೆರಡು ಬಾರಿ ಮಾಡಿದ್ದೇನೆ. ಮತ್ತು ನಾನು ಹೈದರಾಬಾದ್‌ನಲ್ಲಿ ಶೂಟಿಂಗ್​ ಸೆಟ್‌ಗಳಿಗೆ ಹೋಗುವಾಗ ಸೈಕ್ಲಿಂಗ್ ಬಗ್ಗೆ ಯೋಚಿಸಿದೆ

ವಿಶಿಷ್ಟ ರೀತಿಯಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ನಟ ಸೋನು ಸೂದ್

ಸೈಕಲ್ ಸವಾರಿ ಆಹ್ಲಾದಕರವಾಗಿರುತ್ತದೆ. ಹೈದರಾಬಾದ್​ನಲ್ಲಿ ಬೆಳಿಗ್ಗೆ ಮಳೆಯಾಗಿದ್ದರಿಂದ ಇನ್ನಷ್ಟು ಸುಂದರವಾಗಿತ್ತು ಎಂದು ನಟ ಸೋನು ಸೂದ್ ಹೇಳಿದ್ದಾರೆ. ಸೈಕಲ್ ಸವಾರಿ ವಿಡಿಯೋದಲ್ಲಿ 'ನಮ್ಮ ವಿದ್ಯಾರ್ಥಿಗಳಿಗೆ ಸವಾರಿ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ವಿಶಿಷ್ಟ ರೀತಿಯಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ನಟ ಸೋನು ಸೂದ್

ಹೈದರಾಬಾದ್​ನ ಮುಂಬೈ ರೋಡ್​ನಲ್ಲಿ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಚಿತ್ರೀಕರಣವಾಗುತ್ತಿದೆ. ಈ ಚಿತ್ರೀಕರಣದಲ್ಲಿ ಭಾಗಿಯಾಗಲು ನಟ ಸೋನು ಸೂದ್ ಅವರು 25 ಕಿ.ಮೀ ದೂರ ಸೈಕಲ್​ ತುಳಿದುಕೊಂಡು ಹೋಗಿದ್ದಾರೆ.

ವಿಶಿಷ್ಟ ರೀತಿಯಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ನಟ ಸೋನು ಸೂದ್

ಸಿಬಿಎಸ್​​ಇ ವಿದ್ಯಾರ್ಥಿಗಳ ಪರೀಕ್ಷೆ ವಿಚಾರವಾಗಿ ಹೆಚ್ಚಿನ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ಧುಗೊಳಿಸಿದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ ಮಾಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಪರೀಕ್ಷಾ ಕೇಂದ್ರಗಳನ್ನು ಕೊರೋನಾ ಹಾಟ್ ಸ್ಪಾಟ್ ಮಾಡಬೇಡಿ ಎಂದು ನಟ ಸೋನು ಟ್ವೀಟ್ ಮಾಡಿದ್ದರು. ಪರೀಕ್ಷೆಯಲ್ಲಿ ಪಾಸ್ ಅಥವಾ ಫೇಲ್ ಮುಖ್ಯವಲ್ಲ. ಎಲ್ಲದಕ್ಕಿಂತ ಮುಖ್ಯ ಜೀವನವಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಎಲ್ಲರ ಬೆಂಬಲ ಬೇಕಿದೆ ಎಂದು ಕೇಳಿಕೊಂಡಿದ್ದಾರೆ.

ವಿಶಿಷ್ಟ ರೀತಿಯಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ನಟ ಸೋನು ಸೂದ್

ಪರೀಕ್ಷೆ ಮುಂದೂಡಿಕೆ ಆಗುತ್ತಿದ್ದಂತೆ ಕೊನೆಗೂ ಇದು ಸಾಧ್ಯವಾಗಿದ್ದು, ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ. ಇನ್ನು ದೇಶದಲ್ಲಿ ಕೊರೋನಾ ಎರಡನೇ ಅಲೆ ಎದ್ದಿದೆ. ಮತ್ತೆ ಸೋನು ಸೂದ್ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವು ನೀಡುತ್ತಿದ್ದಾರೆ.

ವಿಶಿಷ್ಟ ರೀತಿಯಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ನಟ ಸೋನು ಸೂದ್

ಇಂಧೋರ್​ನಲ್ಲಿ ಆಕ್ಸಿಜನ್ ಕೊರತೆ ಸಮಸ್ಯೆ ಎದುರಿಸುತ್ತಿದ್ದ ರೋಗಿಗಳಿಗೆ ಸ್ಪಂದಿರುವ ನಟ ಸೋನು ಸೂದ್ 10 ಆಕ್ಸಿಜನ್ ಜನರೇಟರ್​ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಸಾಧ್ಯವಾದಷ್ಟು ನಾನು ಸಹಾಯ ಮಾಡುವೆ. ಈ ಕಠಿಣ ಕಾಲದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವ ಅಗತ್ಯವಿದೆ ಎಂದು ನಟ ಸೋನು ಸೂದ್ ಹೇಳಿದ್ದಾರೆ.

 

Most Read Articles

Kannada
English summary
Sonu Sood Pedals 25 km To Acharya Sets. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X