ವಿಡಿಯೋ: ಕಿಚ್ಚ ಸುದೀಪ್ Toyota ಕಾರಿಗೆ ಎಂತಹ ರಕ್ಷಣೆಯಿದೆ ಗೊತ್ತಾ?.. ಇಲ್ಲಿದೆ ಮಾಹಿತಿ

ಪ್ಯಾನ್ ಇಂಡಿಯಾ ನಟನಾಗಿ ಕಿಚ್ಚ ಸುದೀಪ್ ಖ್ಯಾತಿಗಳಿಸಿದ್ದು, ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಿನಿಮಾ ಮಾತ್ರವಲ್ಲದೆ, ವಿಧಾನಸಭಾ ಚುನಾವಣಾ ಪ್ರಚಾರದಲ್ಲೂ ಭಾಗವಹಿಸಿ, ಭಾರೀ ಸುದ್ದಿ ಮಾಡಿದ್ದರು. ಇತರೆ ಚಿತ್ರ ನಟರಂತೆ ಸುದೀಪ್ ಕೂಡ ಕಾರುಗಳ ಕ್ರೇಜ್ ಹೊಂದಿದ್ದು, ತಮ್ಮ ನೆಚ್ಚಿನ ಟೊಯೋಟಾ ಕಾರನ್ನು ಕೊಂಚ ನವೀಕರಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಡ್ರೈವ್‌ಹುಡ್ ಎಂಬ ಯೂಟ್ಯೂಬ್ ವಾಹಿನಿಯೊಂದರಲ್ಲಿ ಶೇರ್ ಮಾಡಲಾಗಿದ್ದು, ಟೊಯೊಟೊ ವೆಲ್‌ಫೈರ್ ಎಂಪಿವಿಗೆ ಗ್ಯಾರೇಜ್ ನಲ್ಲಿ ಅಚ್ಚುಕಟ್ಟಾಗಿ 'ಮ್ಯಾಟ್ ಪಿಪಿಎಫ್‌' ಮಾಡುತ್ತಿರುವುದನ್ನು ಕಾಣಬಹುದು. ಜೊತೆಗೆ ತಮ್ಮ ಮನೆ ಮುಂದೆ, ನವೀಕರಣದೊಂದಿಗೆ ರೆಡಿಯಾಗಿ ನಿಂತಿರುವ ಎಂಪಿವಿಯನ್ನು ಕಂಡು, ನಟ ಸುದೀಪ್ ಗ್ಯಾರೇಜ್ ಮಾಲೀಕರಿಗೆ ಧನ್ಯವಾದ ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು.

ವಿಡಿಯೋ: ಕಿಚ್ಚ ಸುದೀಪ್ Toyota ಕಾರಿಗೆ ಎಂತಹ ರಕ್ಷಣೆಯಿದೆ ಗೊತ್ತಾ?.. ಇಲ್ಲಿದೆ ಮಾಹಿತಿ

ಬಹುತೇಕರಿಗೆ ಈಗ ಮ್ಯಾಟ್ ಪಿಪಿಎಫ್‌ ಎಂದರೇನೆಂಬ ಪ್ರಶ್ನೆ ಕಾಡಬಹುದು. ಅದಕ್ಕೂ ಉತ್ತರ ನೀಡುವ ಪ್ರಯತ್ನ ಮಾಡಿದ್ದೇವೆ. ಪಿಪಿಎಫ್‌ ವಿಸ್ತೃತ ರೂಪ 'ಪೇಂಟ್ ಪ್ರೊಟೆಕ್ಷನ್ ಫಿಲ್ಮ್' ಆಗಿದೆ. ಇದು, ರಾಸಾಯನಿಕ ಹಾಗೂ ಹವಾಗುಣ ನಿರೋಧಕವಾಗಿದ್ದು, ಸಂಪೂರ್ಣ ವಾಹನ ಇಲ್ಲವೇ, ಫ್ರಂಟ್ ಬಂಪರ್ ಹಾಗೂ ಬಾನೆಟ್ ಗೆ ಇದರ ರಕ್ಷಣೆಯಿದ್ದರೆ, ಯಾವುದೇ ಸ್ಕ್ರೇಟ್ಚ್, ರಾಕ್ ಚಿಪ್ಸ್ ಸೇರಿದಂತೆ ಇತರೆ ಡ್ಯಾಮೇಜ್ ಆಗುವುದನ್ನು ತಡೆದು ವಾಹನದ ಲುಕ್ ಅನ್ನು ಕಾಪಾಡುತ್ತದೆ.

ಸುದೀಪ್ ಬಳಿಯಿರುವ ಟೊಯೊಟೊ ವೆಲ್‌ಫೈರ್ ಕುರಿತಂತೆ ಒಂದಷ್ಟು ವಿಚಾರಗಳನ್ನು ಹೇಳುವುದಾದರೆ, ಕಂಪನಿ ಮಾರಾಟ ಮಾಡುವ ದುಬಾರಿ ಹಾಗೂ ಐಷಾರಾಮಿ ಎಂಪಿವಿಯಲ್ಲಿ ಇದು ಕೂಡ ಒಂದಾಗಿದೆ. ಏಳು ಆಸನ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, 96.55 ಲಕ್ಷ ಎಕ್ಸ್ ಶೋ ರೂಂ ಬೆಲೆಯನ್ನು ಹೊಂದಿದೆ. ಜೊತೆಗೆ 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ವಿಡಿಯೋ: ಕಿಚ್ಚ ಸುದೀಪ್ Toyota ಕಾರಿಗೆ ಎಂತಹ ರಕ್ಷಣೆಯಿದೆ ಗೊತ್ತಾ?.. ಇಲ್ಲಿದೆ ಮಾಹಿತಿ

ಈ ಎಂಪಿವಿ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಇದು 2.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಪವರ್ ಫುಲ್ ಎಂಜಿನ್ ಹೊಂದಿದ್ದು, 180 PS ಗರಿಷ್ಠ ಪವರ್ ಹಾಗೂ 235 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ CVT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, 16.35 km/l ಮೈಲೇಜ್ ನೀಡಲಿದೆ.

ಟೊಯೊಟೊ ವೆಲ್‌ಫೈರ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನೋಡುವುದಾದರೆ, ಇದು ಡುಯಲ್ ಸನ್‌ರೂಫ್, 3 ಜೋನ್ ಕ್ಲೇಮೇಟ್ ಕಂಟ್ರೋಲ್, 17-ಸ್ಪೀಕರ್ JBL ಸೌಂಡ್ ಸಿಸ್ಟಮ್ ಅನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಸ್ಟಾರ್ಟ್ ಅಸಿಸ್ಟ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಹೊಂದಿದೆ.

ಇನ್ನು, ಟೊಯೊಟೊ ವೆಲ್‌ಫೈರ್ ಮಾತ್ರವಲ್ಲದೆ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಸಂಗ್ರಹವೇ ಇದೆ. ಪ್ರಮುಖವಾಗಿ ವೋಲ್ವೋ XC90, ಜಾಗ್ವಾರ್ XJL, ಜೀಪ್ ಕಂಪಾಸ್, ಜೀಪ್ ರಾಂಗ್ಲರ್, ರೇಂಜ್ ರೋವರ್ ವೋಗ್, BMW M5 ಸೇರಿದಂತೆ ಹಲವು ಕಾರುಗಳಿವೆ. ಇದೀಗ, ತಮ್ಮ ಮೆಚ್ಚಿನ ಟೊಯೊಟೊ ವೆಲ್‌ಫೈರ್ ಕಾರಿನ ಲುಕ್ ಅನ್ನು ಧೀರ್ಘಕಾಲ ಕಾಪಾಡಲು ಮ್ಯಾಟ್ ಪಿಪಿಎಫ್‌ ಮಾಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ನಿಮ್ಮ ಸ್ನೇಹಿತ ಜೊತೆಗೂ ಶೇರ್ ಮಾಡಿ.

Article Published On: Friday, May 12, 2023, 10:48 [IST]
English summary
Actor sudeep gets his toyota vellfire protected ppf details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+