ಅತ್ಯಾಧುನಿಕ ಸೌಲಭ್ಯವುಳ್ಳ ಆಡಂಬರ ಕ್ಯಾರವ್ಯಾನ್ ಖರೀದಿಸಿದ ಜನಪ್ರಿಯ ನಟ
ಹಲವು ಜನಪ್ರಿಯ ಸಿನಿಮಾ ಸೆಲೆಬ್ರಿಟಿಗಳ ಜೊತೆ ಕ್ಯಾರವ್ಯಾನ್‌ಗಳನ್ನು ಹೆಚ್ಚಾಗಿ ನೋಡಬಹುದು. ಹೆಚ್ಚಾಗಿ ಶೂಟಿಂಗ್ ಸಮಯದಲ್ಲಿ ವಿಶ್ರಾಂತಿ ಪಡೆಯಲು ಅವರು ಕ್ಯಾರವ್ಯಾನ್‌ಗಳನ್ನು ಖರೀದಿಸುತ್ತಾರೆ. ಸಿನಿಮಾ ಸೆಲೆಬ್ರಿಟಿಗಳು ವಾಹನ ಖರೀದಿ ಮಾಡಿದರೆ ಸುದ್ದಿಯಾಗೋದು ಸಾಮಾನ್ಯ. ಅವರು ಖರೀದಿಸಿದ ವಾಹನ ಯಾವ ಕಂಪನಿಯದ್ದು, ಯಾವ ಮಾಡೆಲ್, ಅದಕ್ಕೆ ಎಷ್ಟು ಬೆಲೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತದೆ.
ಇದೀಗ ಟೊವಿನೋ ಥಾಮಸ್ ಅವರು ಹೊಸ ಕ್ಯಾರವ್ಯಾನ್ ಅನ್ನು ಖರೀದಿಸಿದ್ದಾರೆ. ಕಳೆದ ವರ್ಷ ಮೋಹನ್ ಲಾಲ್ ಗಾಗಿ ಸ್ಟೈಲಿಶ್ ಕ್ಯಾರವಾನ್ ನಿರ್ಮಿಸಿದ್ದ ಕೇರಳದ ಕೋತಮಂಗಲಂನ ಓಜೆಸ್ ಆಟೋಮೊಬೈಲ್ಸ್ ಈಗ ಟೊವಿನೋ ಗಾಗಿ ಕಾರವಾನ್ ನಿರ್ಮಿಸಿದೆ. ನಟ ಟೊವಿನೋ ಅವರ ಪಿಯಾನೋ ಬ್ಲ್ಯಾಕ್ ಬಣ್ಣದ ಕ್ಯಾರವಾನ್‌ನ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ಟೊವಿನೋ ಥಾಮಸ್ ಮಲಯಾಳಂ ಚಿತ್ರರಂಗದ ಜನಪ್ರಿಯ ನಟ. ಇವರು ಹಲವಾರು ಮಲಯಾಳಂ ಚಿತ್ರಗಳ ಜೊತೆಗೆ ತಮಿಳು ಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ. ನಟ ಟೊವಿನೋ ಥಾಮಸ್ ಪ್ರಮುಖ ಪಾತ್ರದಲ್ಲಿ ನಟಿಸಿದ ಇತ್ತೀಚಿನ ಚಲನಚಿತ್ರಗಳಲ್ಲಿ ಒಂದಾದ 'ಮಿನ್ನಲ್ ಮುರಳಿ' ಯಲ್ಲಿ ಸೂಪರ್ ಹೀರೋ ಪಾತ್ರದಲ್ಲಿ ಮಿಂಚಿದ್ದಾರೆ. ನಟ ಟೊವಿನೋ ಥಾಮಸ್ ಗ್ಯಾರೇಜ್‌ನಲ್ಲಿ ಐಷಾರಾಮಿ ಕಾರುಗಳು ಮತ್ತು ಎಸ್‌ಯುವಿಗಳ ಉತ್ತಮ ಸಂಗ್ರಹವಿದೆ.
ಅವರ ಗ್ಯಾರೇಜ್‌ಗೆ ಇತ್ತೀಚಿನ ಸೇರ್ಪಡೆಗಳಲ್ಲಿ ಒಂದು 2023ರ ರೇಂಜ್ ರೋವರ್ ಸ್ಪೋರ್ಟ್ ಆಗಿದೆ. ಇದೀಗ ಅವರ ಗ್ಯಾರೇಜ್‌ಗೆ ಈ ಹೊಸ ಕ್ಯಾರವ್ಯಾನ್ ಕೂಡ ಸೇಪರ್ಡೆಯಾಗಿದೆ. ಕೇರಳದಲ್ಲಿ ಕ್ಯಾರವ್ಯಾನ್ ನಿರ್ಮಿಸುವುದರಲ್ಲಿ ಓಜೆಸ್ ಪ್ರಮುಖರಾಗಿದ್ದಾರೆ. ಕೇರಳದ ಓಜೆಸ್ ಆಟೋಮೊಬೈಲ್ಸ್ ಅನೇಕ ಚಲನಚಿತ್ರ ತಾರೆಯರಿಗೆ ವಾಹನಗಳನ್ನು ತಯಾರಿಸುವಲ್ಲಿ ಪ್ರಸಿದ್ಧರಾಗಿದ್ದಾರೆ. ಟೋವಿನೋ ಅವರ ಕ್ಯಾರವಾನ್ ಡಿಸೈನರ್ ಬಿಜು ಮಾರ್ಕೋಸ್ ಆಗಿದ್ದಾರೆ.

ಈ ಕ್ಯಾರವಾನ್ ಅನ್ನು ಡೈಮ್ಲರ್‌ನ 1017 BS-VI ಚಾಸಿಸ್‌ನಲ್ಲಿ ನಿರ್ಮಿಸಲಾಗಿದೆ. ಸ್ಟೇಟ್ಸ್ ಮನ್ ನಲ್ಲಿ ಟೊವಿನೋಗೆ ಇಷ್ಟವಾಗುವಂತೆ ಮಾರ್ಪಾಡು ಮಾಡಿರುವ ಕ್ಯಾರವಾನ್ ಹಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಕ್ಯಾರವಾನ್ ಬೃಹತ್ ಐಷಾರಾಮಿ ಗೆಟ್‌ಅಪ್‌ನಲ್ಲಿದೆ. ಟಾಯ್ಲೆಟ್, ಬೆಡ್ ರೂಮ್, ಮೇಕಪ್ ರೂಮ್, ತಿರುಗಬಹುದಾದ ಕ್ಯಾಪ್ಟನ್ ಸೀಟುಗಳು ಮತ್ತು ಎರಡು ರಿಕ್ಲೈನರ್ ಸೀಟುಗಳಿವೆ
ಇದರೊಂದಿಗೆ ರೋಲ್ಸ್ ರಾಯ್ಸ್ ಕಾರುಗಳ ರೂಫ್ ನಲ್ಲಿರುವ ಸ್ಟಾರ್‌ಲೈಟ್ ಮೂಡ್ ಲೈಟಿಂಗ್ ಎಲ್ಲವನ್ನೂ ಹೊಂದಿರುವ ಇದು ಚಲಿಸುವ ಅರಮೆನೆಯಂತಿದೆ, ಅಷ್ಟೇ ಅಲ್ಲ, ಓಜಸ್ ಮೋಟಾರ್ಸ್ ಕಾರವಾನ್ 55 ಇಂಚಿನ ಟಿವಿ ಮತ್ತು 2000 ವ್ಯಾಟ್ಸ್ ಸೋನಿ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಂ ಅನ್ನು ವಿರಾಮದ ಮನರಂಜನೆಗಾಗಿ ಹೊಂದಿದೆ. ಇದೆಲ್ಲದರ ಹೊರತಾಗಿ ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದ ರೂಫ್ ಮತ್ತು ಎಲೆಕ್ಟ್ರಿಕ್ ಕರ್ಟನ್ ಕೂಡ ವಾಹನದ ವಿಶೇಷತೆಗಳಾಗಿವೆ.
ಕ್ಯಾರವಾನ್ ಅನ್ನು ಸಂಪೂರ್ಣವಾಗಿ ಬ್ಲ್ಯಾಕ್ ಬಣ್ಣದಲ್ಲಿ ನಿರ್ಮಿಸಲಾಗಿದೆ. ಚಿತ್ರನಟ ಟೊವಿನೋ ಥಾಮಸ್ ಅವರ ಈ ವಾಹನ KL 45 W 7007 ನಂಬರಿನೊಂದಿಗೆ ನೋಂದಣಿಯಾಗಿದೆ. ನಟನ ಈ ಕ್ಯಾರವಾನ್ 3907cc, ನಾಲ್ಕು-ಸಿಲಿಂಡರ್ 4d34i CRDi ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 170 bhp ಪವರ್ ಮತ್ತು 520 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
ವಿಶೇಷತೆ ಏನೆಂದರೆ ಟೊವಿನೋ ಥಾಮಸ್ ಇತ್ತೀಚೆಗೆ ಖರೀದಿಸಿದ ರೇಂಜ್ ರೋವರ್ ಸ್ಪೋರ್ಟ್ ಮಾದರಿಯ ಭಾರತದಲ್ಲಿ ಮೊದಲ ಗ್ರಾಹಕರಾಗಿದ್ದಾರೆ. ನಟ ಟೊವಿನೋ ಥಾಮಸ್ ತಮ್ಮ ಫ್ಯಾಮಿಲಿ ಜೊತೆಗೆ ತೆರಳಿ ಈ ಐಷಾರಾಮಿ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯ ವಿತರಣೆಯನ್ನು ಪಡೆದುಕೊಂಡಿದ್ದರು. ಈ ಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ಎಸ್, ಎಸ್ಇ, ಹೆಚ್‌ಎಸ್ಇ ಮತ್ತು ಆಟೋಬಯೋಗ್ರಫಿ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.


Click it and Unblock the Notifications








