Just In
- 10 hrs ago
ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...
- 13 hrs ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 15 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 1 day ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
Don't Miss!
- Movies
ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಬಹುಭಾಷಾ ನಟ ನಾಸಿರ್! ಕಾರಣವೇನು?
- Sports
ಐರ್ಲೆಂಡ್-ಭಾರತ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ: ಟಾಸ್ ಗೆದ್ದಿರುವ ಟೀಂ ಇಂಡಿಯಾ
- News
ಮಹಾ ಬಂಡಾಯ: ಸುಪ್ರೀಂಕೋರ್ಟ್ ಅಂಗಳಕ್ಕೆ 16 ಶಾಸಕರ ಅನರ್ಹತೆ ಚೆಂಡು!
- Finance
Gold Rate Today: ನಿಮ್ಮ ನಗರದಲ್ಲಿ ಜೂ.26ರಂದು ಚಿನ್ನದ ಬೆಲೆ ಎಷ್ಟಿದೆ ನೋಡಿ
- Technology
ಬೇರೆಯವರು ನಿಮ್ಮ ನೆಟ್ಫ್ಲಿಕ್ಸ್ ಖಾತೆ ಬಳಸುತ್ತಿದ್ದರೆ ತಿಳಿಯಲು ಹೀಗೆ ಮಾಡಿ?
- Education
PGCIL Recruitment 2022 : 32 ಡೆಪ್ಯುಟಿ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ದುಬಾರಿ ಸ್ಪೋರ್ಟ್ಸ್ ಕಾರಿನಲ್ಲಿ ಮಹಿಳಾ ಅಭಿಮಾನಿಯನ್ನು ರೈಡ್‌ಗೆ ಕರೆದೊಯ್ದ ಬಾಲಿವುಡ್ ನಟ
ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಅವರ ಮುಂಬರುವ ಚಿತ್ರ ಹಾಫಿಜ್ 2 ಗಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ಆಸ್ಟನ್ ಮಾರ್ಟಿನ್ ಡಿಬಿ 9 ಕಾರಿನಲ್ಲಿ ಖುದಾ ಹಾಫಿಜ್ 2 ಚಿತ್ರ ಪ್ರಚಾರಕ್ಕೆ ಆಗಮಿಸಿದರು. ಈ ವೇಳೆ ಅವರು ದುಬಾರಿ ಸ್ಪೋರ್ಟ್ಸ್ ಕಾರಿನಲ್ಲಿ ರೈಡ್‌ಗೆ ಅಭಿಮಾನಿಯನ್ನು ಕರೆದೊಯ್ದಿದ್ದಾರೆ.

ಬಾಲಿವುಡ್ ಎಂಬ ಕಲರ್‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍ಗಳಿವೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ. ಅದೇ ರೀತಿ ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಅವರಿಗೆ ಕಾರು ಮತ್ತು ಬೈಕ್ ಕ್ರೇಜ್ ಅನ್ನು ಹೊಂದಿದ್ದಾರೆ. ವಿದ್ಯುತ್ ಜಮ್ವಾಲ್ ಅವರು ಕಮಾಂಡೋ ಸರಣಿಯ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಪ್ರಸಿದ್ಧರಾಗಿದ್ದಾರೆ.

ಇತ್ತೀಚೆಗೆ ನಟ ವಿದ್ಯುತ್ ಜಮ್ವಾಲ್ ಅವರು ಹಾಫಿಜ್ 2 ಚಿತ್ರ ಪ್ರಚಾರಕ್ಕೆ ಆಗಮಿಸಿದ ವೇಳೆ ಛಾಯಾಗ್ರಾಹಕರಿಗೆ ಮತ್ತು ಪಾಪರಾಜಿಗಗಳಿಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ನಟನ ಬಳಿಗೆ ಧಾವಿಸಿದರು.ಅಭಿಮಾನಿ ಅವರನ್ನು ಭೇಟಿಯಾಗಿರುವುದು ಎಷ್ಟು ಸಂತೋಷವಾಗಿದೆ ಎಂದು ವ್ಯಕ್ತಪಡಿಸಲು ಪ್ರಾರಂಭಿಸುತ್ತಾಳೆ.

ಮಹಿಳಾ ಅಭಿಮಾನಿಯ ಖಷಿ ನೋಡಿ ಅವಳನ್ನು ಅಪ್ಪಿಕೊಳ್ಳುತ್ತಾರೆ. ಸ್ವಲ್ಪ ಸಮಯದ ನಂತರ, ಅವಳನ್ನು ತನ್ನ ಕಾರಿನ ಬಳಿಗೆ ಕರೆದೊಯ್ದರು, ನಂತರ ಡೋರ್ ಓಪನ್ ಮಾಡಿ ಮಹಿಳಾ ಅಭಿಮಾನಿಯನ್ನು ಕಾರಿನಲ್ಲಿ ಕೂರಿಸುತ್ತಾರೆ. ನಂತರ ಮಹಿಳಾ ಅಭಿಮಾನಿಯನ್ನು ರೈಡ್‌ಗೆ ಕರೆದೊಯ್ದರು. ನಟ ವಿದ್ಯುತ್ ಜಮ್ವಾಲ್ ಅವರು ಕಾರು ಡ್ರೈವ್ ಮಾಡುವಾಗ ಅಭಿಮಾನಿಯು ಅಚ್ಚರಿ ಮತು ಸಂತಸದಿಂದ ಅವರನ್ನು ಮಾತನಾಡಿಸುತ್ತಾರೆ, ಇದೆಲ್ಲದರ ವಿಡಿಯೋ ವೈರಲ್ ಆಗಿದೆ.

ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ವೀಡಿಯೊವನ್ನು ನೋಡಿದ ನಂತರ, ಅನೇಕ ಅಭಿಮಾನಿಗಳು ನಟನೊಂದಿಗೆ ಸವಾರಿ ಮಾಡಲು ಬಯಸುತಿದ್ದಾರೆ. ಶುಕ್ರವಾರ ಶೇರ್ ಮಾಡಿರುವ ವಿಡಿಯೋಗೆ ಇದುವರೆಗೆ ಸಾವಿರಾರು ಲೈಕ್‌ಗಳು ಬಂದಿವೆ. ಕಾಮೆಂಟ್‌ಗಳ ಪ್ರತಿಕ್ರಿಯೆಗಳಿಂದ ತುಂಬಿದೆ.

ಒಬ್ಬರು ಹೀಗೆ ಬರೆದಿದ್ದಾರೆ, "ಒಬ್ಬ ವ್ಯಕ್ತಿಯನ್ನು ಸಂತೋಷಪಡಿಸುವುದು ಎಷ್ಟು ಸುಲಭ." "ಡೌನ್ ಟು ಅರ್ಥ್, ವಿದ್ಯುತ್," ಇನ್ನೊಬ್ಬ ವ್ಯಕ್ತಿ ಬರೆದು ನಟನನ್ನು ಸಂಭಾವಿತ ಎಂದು ಸಂಬೋಧಿಸಿದರು. "ಒಬ್ಬ ವ್ಯಕ್ತಿಯ ರತ್ನ" ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಖುದಾ ಹಫೀಜ್ ಅಧ್ಯಾಯ 2: ಚಿತ್ರದ ಮೂಲಕ ವಿದ್ಯುತ್ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದೆ. ಅವರಲ್ಲದೆ, ಚಿತ್ರದಲ್ಲಿ ಶಿವಲೀಕಾ ಒಬೆರಾಯ್ ಮತ್ತು ಡ್ಯಾನಿಶ್ ಹುಸೇನ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಖುದಾ ಹಫೀಜ್ 2 ಜುಲೈ 8 ರಂದು ಬಿಡುಗಡೆಗೆ ಸಿದ್ಧವಾಗಿದೆ.

ಇನ್ನು ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಅವರು ಮಾರ್ಷಲ್ ಆರ್ಟ್ಸ್ ಕಲಿತಿದ್ದಾರೆ. ಪ್ರಪಂಚದಲ್ಲಿರುವ ಟಾಪ್ ಮಾರ್ಷಲ್ ಆರ್ಟ್ಸ್ ಕಲಾವಿದರ ಲಿಸ್ಟ್‌ನಲ್ಲಿ ವಿದ್ಯುತ್ ಹೆಸರು ಇರುವುದು ಭಾರತೀಯರಿಗೆ ಹೆಮ್ಮೆಯಾಗಿದೆ. ಜಾಕಿ ಚಾನ್, ಜೆಟ್ ಲಿ, ಬ್ರೂಸ್ ಲೀ ಮುಂತಾದವರ ಹೆಸರಿನ ಜೊತೆ ವಿದ್ಯುತ್ ಹೆಸರು ಕೂಡ ಇದೆ. ನೀವು ಗೂಗಲ್ ಮಾಡಿದರೆ ಟಾಪ್ ಪ್ರಪಂಚದಲ್ಲಿರುವ ಟಾಪ್ ಮಾರ್ಷಲ್ ಆರ್ಟ್ಸ್ ಕಲಾವಿದರ ಲಿಸ್ಟ್‌ನಲ್ಲಿ ವಿದ್ಯುತ್ ಜಮ್ವಾಲ್ ಹೆಸರು ಕೂಡ ಬರುತ್ತದೆ. ಭಾರತೀಯ ಸಮರ ಕಲೆಗಳಲ್ಲಿ ಒಂದಾದ ಕಳರಿಪಯಟ್ಟನ್ನು ವಿದ್ಯುತ್ ಕೇರಳದಲ್ಲಿ ಅಭ್ಯಾಸ ಮಾಡಿದ್ದಾರೆ.

ಮಾಡೆಲ್ ಆಗಿದ್ದ ವಿದ್ಯುತ್ ಅವರು ತೆಲುಗು ಸಿನಿಮಾ 'ಶಕ್ತಿ' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 'ಕಮಾಂಡೋ', 'ಜಂಗ್ಲಿ' ಸಿನಿಮಾದಲ್ಲಿಯೂ ವಿದ್ಯುತ್ ನಟಿಸಿದ್ದಾರೆ. ಆಸ್ಟನ್ ಮಾರ್ಟಿನ್ ಡಿಬಿ9 ಬ್ರಿಟೀಷ್ ಗ್ರ್ಯಾಂಡ್ ಟೂರರ್ ಆಗಿದ್ದು 6.0-ಲೀಟರ್ ವಿ12 ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 510 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದು 4.6 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಸ್ಪೋರ್ಟ್ಸ್ ಕಾರಿನ ಟಾಪ್ ಸ್ಪೀಡ್ 295 ಕಿ.ಮೀ ಆಗಿದೆ. ಆಸ್ಟನ್ ಮಾರ್ಟಿನ್ ಕಂಪನಿಯ ಡಿಬಿ9 ಕಾರ್ ಅನ್ನು ಹಲವಾರು ಜೇಮ್ಸ್ ಬಾಂಡ್ ಚಲನಚಿತ್ರಗಳಲ್ಲಿಯೂ ಬಳಸಲಾಗಿದೆ.
2020 ರಲ್ಲಿ, ವಿದ್ಯುತ್ ಜಮ್ವಾಲ್ ಹೊಸ ಟ್ರಯಂಫ್ ರಾಕೆಟ್ 3ಆರ್ ಬೈಕ್ ಅನ್ನು ಖರೀದಿಸಿದರು. ದು ಪವರ್ ಕ್ರೂಸರ್ ಮೋಟಾರ್‌ಸೈಕಲ್ ಆಗಿದ್ದು, ದೊಡ್ಡ ಡಿಸ್ಪ್ಲೇಸ್‌ಮೆಂಟ್ ಹೊಂದಿರುವ ಎಂಜಿನ್‌ಗೆ ಹೆಸರುವಾಸಿಯಾಗಿದೆ. ಇದು 2.5-ಲೀಟರ್, ಇನ್-ಲೈನ್ 3-ಸಿಲಿಂಡರ್ ಎಂಜಿನ್ ಆಗಿದ್ದು ಅದು ಲಿಕ್ವಿಡ್-ಕೂಲ್ಡ್ ಆಗಿದೆ. ಈ ಎಂಜಿನ್ 167 ಬಿಹೆಚ್‍ಪಿ ಪವರ್ ಮತ್ತು 221 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ . ಎಂಜಿನ್ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಮತ್ತು ಚೈನ್ ಅಥವಾ ಬೆಲ್ಟ್ ಡ್ರೈವ್ ಬದಲಿಗೆ ಶಾಫ್ಟ್ ಡ್ರೈವ್ ಅನ್ನು ಬಳಸಿಕೊಂಡು ಹಿಂದಿನ ಚಕ್ರಕ್ಕೆ ಪವರ್ ಅನ್ನು ವರ್ಗಾಯಿಸುತ್ತದೆ.

ರಾಕೆಟ್ 3 ಅನ್ನು ಬಿಡುಗಡೆ ಮಾಡುವ ಮೊದಲು ಟ್ರಯಂಫ್ ಬಹಳಷ್ಟು ಪರಿಷ್ಕರಣೆಗಳನ್ನು ಮಾಡಿದೆ. ಅವರು ಎಂಜಿನ್ ಸಾಮರ್ಥ್ಯವನ್ನು 2300 ಸಿಸಿಯಿಂದ 2500 ಸಿಸಿಗೆ ಹೆಚ್ಚಿಸಿದರು. ಅವರು ಮೋಟಾರ್‌ಸೈಕಲ್‌ನ ತೂಕವನ್ನು ಸುಮಾರು 40 ಕೆಜಿಯಷ್ಟು ಕಡಿಮೆ ಮಾಡುವಲ್ಲಿ ಯಶಸ್ವಿಯಾದರು. ಆದಾಗ್ಯೂ, ರಾಕೆಟ್ 3 ಇನ್ನೂ ಸುಮಾರು 300 ಕೆಜಿಯಷ್ಟು ತೂಕವಿದೆ. ಫ್ರೇಮ್ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ, ಬ್ರೇಕ್‌ಗಳನ್ನು ಸಹ ನವೀಕರಿಸಲಾಗಿದೆ, ಅವು ಸ್ಟೈಲ್ಮಾ ಮೊನೊಬ್ಲಾಕ್ ಕ್ಯಾಲಿಪರ್‌ಗಳಾಗಿವೆ. ಇದಲ್ಲದೆ, ರಾಕೆಟ್ 3 ಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಲಾದ ಏವನ್ ಕೋಬ್ರಾ ಕ್ರೋಮ್ ಟೈರ್‌ಗಳಲ್ಲಿ ಮೋಟಾರ್‌ಸೈಕಲ್ ಚಲಿಸುತ್ತದೆ.