ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
ತಮಿಳು ನಟ ದಳಪತಿ ವಿಜಯ್ (Thalapathy Vijay) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ನಟ ವಿಜಯ್ ಸಿನಿಮಾಗಳಿಗೆ ಗ್ರ್ಯಾಂಡ್ ಓಪನಿಂಗ್ ಸಿಗುತ್ತದೆ. ಸದ್ಯ ವಿಜಯ್ ಮನಸ್ಸು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳಗ ವೆಟ್ರಿ ಕಳಗಂ ಎಂದು ಪಕ್ಷಕ್ಕೆ ನಾಮಕರಣ ಮಾಡಿದ್ದಾರೆ. ತಮಿಳುನಾಡಿನ ಸಿನಿಮಾ ಹಾಗೂ ರಾಜಕೀಯದಲ್ಲಿ ಹೊಸ ತಿರುವು ನೀಡಬಹುದು.
ನಟ ವಿಜಯ್ ಅವರು ಸಿನಿಮಾ ಶೂಟಿಂಗ್‌ಗಾಗಿ ಕೇರಳಕ್ಕೆ ತೆರಳಿದ್ದಾಗ ಅಭಿಮಾನಿಗಳು ಜಮಾಯಿಸಿ ನೂಕು ನೂಗ್ಗಲು ಊಂಟಾಗಿ ಅವರ ಕಾರಿಗೆ ತೀವ್ರ ಹಾನಿಯಾಗಿದೆ. ಇದರ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ನಟ ವಿಜಯ್ ತಮಿಳು ಚಿತ್ರರಂಗದ ಟಾಪ್ ಸ್ಟಾರ್. ಸದ್ಯ ವೆಂಕಟ್ ಪ್ರಭು ನಿರ್ದೇಶನದ GOAT ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಮಾತ್ರವಲ್ಲದೆ ಕೇರಳದಲ್ಲೂ ದೊಡ್ಡ ಅಭಿಮಾನಿ ಬಳಗ ವಿದೆ.

ನಟ ವಿಜಯ್ ನಟಿಸುತ್ತಿರುವ ಕೋಡ್ ಚಿತ್ರದ ಶೂಟಿಂಗ್ ಗಾಗಿ ನಿನ್ನೆ ಕೇರಳ ರಾಜ್ಯಕ್ಕೆ ತೆರಳಿದ್ದರು. ಚೆನ್ನೈನಿಂದ ಹೊರಟು ತಿರುವನಂತಪುರಕ್ಕೆ ಫ್ಲೈಟ್ ಹತ್ತಿ ಅಲ್ಲಿಂದ ಕಾರಿನಲ್ಲಿ ಶೂಟಿಂಗ್ ಲೊಕೇಶನ್ ಹೋದರು. ಅವರ ಆಗಮನದ ಬಗ್ಗೆ ತಿಳಿದ ಕೇರಳದ ಅಭಿಮಾನಿಗಳು ಅವರನ್ನು ನೋಡಲು ಅವರ ಮಾರ್ಗ ಮತ್ತು ವಿಮಾನ ನಿಲ್ದಾಣಗಳಲ್ಲಿ ನೆರೆದಿದ್ದರು. ಇದರಿಂದಾಗಿ ಆ ಪ್ರದೇಶದಲ್ಲಿ ಜನಸಾಗರವೇ ನೆರೆದಿತ್ತು.
ನಿರೀಕ್ಷೆಗೂ ಮೀರಿದ ಜನಸಂದಣಿಯನ್ನು ನಿಭಾಯಿಸಲು ಕೇರಳ ರಾಜ್ಯ ಪೊಲೀಸರಿಗೆ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ನಟ ವಿಜಯ್ ಪ್ರಯಾಣಿಸುತ್ತಿದ್ದ ಕಾರು ಜನಸಂದಣಿಯ ಮಧ್ಯೆ ಚಲಿಸುತ್ತಿತ್ತು. ಆಗ ಅಲ್ಲಿ ನೆರೆದಿದ್ದ ಅನೇಕ ಅಭಿಮಾನಿಗಳು ಅವರ ಕಾರನ್ನು ಹಿಂಬಾಲಿಸಿದರು. ಈ ವೇಳೆ ನೂಕು ನೂಗ್ಗಲು ಊಂಟಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಈ ದೃಶ್ಯಗಳನ್ನು ನೀವು ನೋಡಬಹುದು.

ಈ ರೀತಿ ರಿಲೀಸ್ ಆದ ವಿಡಿಯೋ ಒಂದರಲ್ಲಿ ನಟ ವಿಜಯ್ ಅಭಿಮಾನಿಯೊಬ್ಬ ಬೈಕ್ ನಲ್ಲಿ ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ನೋಡಿ ಸೆಲ್ ಫೋನ್ ನಲ್ಲಿ ವಿಡಿಯೋ ಮಾಡುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿದೆ. ಈ ರೀತಿ ವೈರಲ್ ಆದ ಅವರು ಪ್ರಯಾಣಿಸುತ್ತಿದ್ದ ಟೊಯೊಟಾ ಇನ್ನೋವಾ ಹೈಕ್ಲಾಸ್ ಕಾರು ಅಭಿಮಾನಿಗಳ ನಡುವೆ ಸಿಲುಕಿಕೊಂಡಿದ್ದು, ಅಭಿಮಾನಿಗಳು ಕಾರನ್ನು ಸುತ್ತುವರಿದಿದ್ದಾರೆ. ಅವರ ಇನೋವಾ ಕಾರಿಗೆ ಹಾನಿಯಾಗಿದೆ.
ಇನ್ನು ನಟ ವಿಜಯ್ ಪ್ರಯಾಣಿಸುತ್ತಿದ್ದ ಕಾರಿನ ಬಗ್ಗೆ ಹೇಳುವುದಾದರೆ, ಇದು ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova hycross) ಎಂಪಿವಿ ಆಗಿದೆ. ಎರಡು ವಿಧದ ಪೆಟ್ರೋಲ್ ಎಂಜಿನ್ ಹೊಂದಿದೆ. ಮೊದಲ 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 172 bhp ಪವರ್ ಮತ್ತು 205 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ CVT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೇಶೀಯ ಗ್ರಾಹಕರಿಗೆ ಖರೀದಿಗೆ ಸಿಗುತ್ತದೆ.
ಮತ್ತೊಂದು, 2.0 ಲೀಟರ್, 4 ಸಿಲಿಂಡರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇದು 184.8 bhp ಗರಿಷ್ಠ ಪವರ್ ಹಾಗೂ 206 Nm ಪೀಕ್ ಟಾರ್ಕ್ ಹೊರ ಹಾಕುವ ಸಾಮರ್ಥ್ಯ ಒಳಗೊಂಡಿದ್ದು, 21 ಕಿ.ಮೀ ಮೈಲೇಜ್ ನೀಡುತ್ತದೆ. ಇದಿಷ್ಟೇ ಅಲ್ಲದೆ, ರೂಪಾಂತರಗಳಿಗೆ ಅನುಗುಣವಾಗಿ 7- 8 ಆಸನ ಆಯ್ಕೆಯಲ್ಲಿ ಲಭ್ಯವಿದೆ.
ಈ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ, ಗ್ಲಾಸ್ ಫ್ಲೇಕ್, ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ ಸೇರಿದಂತೆ ಏಳು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಒಳಗೊಂಡಿದೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಸುರಕ್ಷತೆಯ ಸಲುವಾಗಿ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ, 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಹೊಂದಿದೆ. ಈ ಕಾರಿಗೆ, ಮಾರುತಿ ಇನ್ವಿಕ್ಟೊ, ಕಿಯಾ ಕ್ಯಾರೆನ್ಸ್ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications