ಈ ಮಹೀಂದ್ರಾ ಕಾರು ತೆಗೆದುಕೊಂಡ ನಂತರ ಯಶ್ ಬಾಸ್‌ಗೆ ಅದೃಷ್ಟವೋ ಅದೃಷ್ಟ.. ಬದುಕೇ ಬದಲಾಯಿತು!
ರಾಕಿಂಗ್ ಸ್ಟಾರ್ ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಅವರಿಗೆ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದ ಕೆಜಿಎಫ್ (KGF) ಸಿನಿಮಾ ಹಿಟ್ ಆದ ಬಳಿಕ, ಯಶ್ ಅವರ ಅದೃಷ್ಟವೇ ಬದಲಾಗಿ ಹೋಯಿತು. ಸದ್ಯ, 'ಟಾಕ್ಸಿಕ್' ಚಿತ್ರದ ಚಿತ್ರದ ಶೂಟಿಂಗ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇಂದು ಅವರು 39ನೇ ವಸಂತಕ್ಕೂ ಕಾಲಿಟ್ಟಿದ್ದು, ಸೋಷಿಯಲ್ ಮಿಡಿಯಾದದಲ್ಲಿ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ನಟ ಯಶ್ ಅವರಿಗೆ ಬೈಕ್ ಹಾಗೂ ಕಾರುಗಳ ಮೇಲೆಯೂ ವಿಶೇಷವಾದ ಪ್ರೀತಿಯಿದೆ. ಅವರ ಮೊದಲ ಬೈಕ್ ಯಮಹಾ ಆರ್‌ಎಕ್ಸ್ 100 (Yamaha RX 100). ಈ ಮೋಟಾರ್‌ಸೈಕಲ್‌ನ್ನು ಯಶ್ ಕಾಲೇಜಿಗೆ ಸೇರಿದಾಗ ಅವರ ಅಪ್ಪ ಗಿಫ್ಟ್ ನೀಡಿದ್ದರಂತೆ.. ಆದರೆ, ಯಶ್‌ಗೆ ಓದುವ ಕಡೆ ಆಸಕ್ತಿ ಕಡಿಮೆಯಾದಾಗ ತಂದೆಯೇ ಮಾರಾಟ ಮಾಡಿದ್ದರಂತೆ.. ನಟನಾದ ಬಳಿಕ, ಯಶ್ ಮೊದಲ ಕಾರಾಗಿ ಮಹೀಂದ್ರಾ ಸ್ಕಾರ್ಪಿಯೋವನ್ನು ಖರೀದಿ ಮಾಡಿದ್ದರು.

ಈ ಬಗ್ಗೆ ಖಾಸಗಿ ಮಾಧ್ಯಮದೊಂದಿಗೆ ಸಂದರ್ಶನವೊದರಲ್ಲಿ ಮಾತನಾಡಿದ್ದ ಯಶ್ ಅವರು, 'ನನಗೆ ಡ್ರೈವಿಂಗ್ ಮಾಡುವುದು ಇಷ್ಟ. ಆದರೆ, ನಾನು ಮೊದಲ ಬಾರಿಗೆ ಕಾರನ್ನು ಖರೀದಿಸಿದಾಗ ಅದನ್ನು ಸರಿಯಾಗಿ ಓಡಿಸಲು ಬರುತ್ತಿರಲ್ಲ. ನನ್ನ ಸ್ನೇಹಿತನೊಬ್ಬ ಆ ಕಾರನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲು ಸಹಾಯ ಮಾಡಿದರು. ಪೂಜೆ ಮುಗಿಸಿ ಕೆಲಸವಿದ್ದ ಕಾರಣ, ಆತ ಹೊರಟು ಹೋದ.. ನಾನು ಕಾರನ್ನು ಮನೆಗೆ ತರಲು ಬಹಳ ಕಷ್ಟಪಟ್ಟೆ.. ಬೇಗನೆ ಡ್ರೈವಿಂಗ್ ಅನ್ನು ಕಲಿತುಕೊಂಡೆ' ಎಂದು ಹೇಳಿದ್ದರು.
'ಸ್ಕಾರ್ಪಿಯೋ (Scorpio) ಖರೀದಿಸುವುದು ನನ್ನ ಕನಸಾಗಿತ್ತು, ಆದ್ದರಿಂದ ಅದನ್ನು ಕೊಂಡುಕೊಂಡೆ' ಎಂದಿದ್ದಾರೆ. ಈ ಕಾರು ತೆಗೆದುಕೊಂಡ ನಂತರ ಯಶ್ ಅದೃಷ್ಟವು ಬದಲಾಯಿತು ಎಂಬುದು ಹಲವರ ಅಭಿಪ್ರಾಯವಾಗಿದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸ್ಕಾರ್ಪಿಯೋ ರೂ.13.62 ಲಕ್ಷದಿಂದ ರೂ.17.42 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಇದು ಮಾತ್ರವಲ್ಲದೆ, ಯಶ್ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರು ಆಗಿದ್ದಾರೆ. ಅವರು 2023ರಲ್ಲಿ ರೇಂಜ್ ರೋವರ್ (Range Rover) ಕಾರನ್ನು ಖರೀದಿ ಮಾಡಿದ್ದರು. ಇದು ರೂ.2.36 ಕೋಟಿಯಿಂದ ರೂ.4.98 ಕೋಟಿ ಎಕ್ಸ್ ಶೋರೂಂ ದರವನ್ನು ಹೊಂದಿದೆ. 2996 ಸಿಸಿ ಅಥವಾ 2998 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ.
ನಟ ಯಶ್ ಅವರು ಮರ್ಸಿಡಿಸ್ ಬೆಂಜ್ ಜಿಎಲ್ಎಸ್ 350 ಡಿ (Mercedes Benz GLS 350D) ಕಾರಿನ ಮಾಲೀಕರು ಆಗಿದ್ದಾರೆ. ಪ್ರಸ್ತುತ ಈ ಕಾರು, ರೂ.1.32 ಕೋಟಿಯಿಂದ ರೂ.1.37 ಕೋಟಿ (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ. 3-ಲೀಟರ್ 6-ಸಿಲಿಂಡರ್ ಟರ್ಬೊ ಪೆಟ್ರೋಲ್ ಮತ್ತು 3-ಲೀಟರ್ 6-ಸಿಲಿಂಡರ್ ಡಿಸೇಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ.

ಆಡಿ ಕ್ಯೂ7 (Audi Q7) ಕಾರು ಸಹ ಯಶ್ ಅವರ ಬಳಿಯಿದೆ. ಇದು ರೂ.88.66 ರಿಂದ ರೂ.97.81 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯುತ್ತದೆ. ಜೊತೆಗೆ ಬಿಎಂಡಬ್ಲ್ಯೂ 520ಡಿ, ಮರ್ಸಿಡಿಸ್ ಜಿಎಲ್‌ಸಿ 250ಡಿ ಕೂಪೆ ಹಾಗೂ ಪಜೆರೊ ಸ್ಪೋರ್ಟ್ ಕಾರಿಗೂ ಯಶ್ ಅವರು ಒಡೆಯರಾಗಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications