ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

ಸಿನಿಮಾ ರಂಗದಲ್ಲಿ ನಟರು ಮಾತ್ರವಲ್ಲದೇ ನಟಿಯರೂ ಕೂಡ ಕಾರು ಕ್ರೇಜ್ ಹೊಂದಿರುತ್ತಾರೆ. ಅದರಂತೆ ಫ್ಯಾನ್‌ ಸಿನಿಮಾದ ಮೂಲಕ ಗಮನ ಸೆಳೆದ ನಟಿ ಅದ್ವಿತಿ ಶೆಟ್ಟಿ ಇತ್ತೀಚೆಗೆ ಹೊಸ ಕಾರನ್ನು ಖರೀದಿಸಿದ್ದಾರೆ. ಇವರು ಖರೀದಿಸಿದ ಕಾರು ಕಿಯಾ ಸೆಲ್ಟೋಸ್ ಮಾದರಿಯಾಗಿದೆ.

ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎರಡು ಕನಸು ಧಾರಾವಾಹಿಯಲ್ಲಿ ನಾಯಕಿ ಸಹನಾ ಆಗಿ ನಟಿಸಿ ಕಿರುತೆರೆಯಲ್ಲಿ ಕರಾವಳಿ ಕುವರಿ ಅದ್ವಿತಿ ಶೆಟ್ಟಿ ಮಿಂಚಿದ್ದರು. ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ ಸಿನಿಮಾದಲ್ಲಿ ತನ್ನ ಅವಳಿ ತಂಗಿ ಅಶ್ವಿತಿ ಶೆಟ್ಟಿ ಜೊತೆಗೆ ಅಭಿನಯಿಸಿದ್ದ ಅದ್ವಿತಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ ಸಿನಿಮಾದ ನಂತರ 'ಸುಳಿ' ಸಿನಿಮಾದಲ್ಲಿ ಅಭಿನಯಿಸಿದ್ದರು. ಕಾರ್ಮೋಡ ಸರಿದು, ಫ್ಯಾನ್, ಓ ಪ್ರೇಮವೇ, ದೊಡ್ಮನೆ ಹುಡುಗ, ಐರಾವನ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

ಅದ್ವಿತಿ ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಶಿವ ತಾಂಡವ, ಕೃಷ್ಣನ ಕಥೆ, ರಾಮಾಯಣ ಮೊದಲಾದ ಪೌರಾಣಿಕ ಕಥಾನಕ ಹೊಂದಿದ ನೃತ್ಯ ಪ್ರಕಾರಗಳನ್ನು ಮಾಡಿರುವ ನಟಿ, ಇಂಡಿಯಾ ಗಾಟ್ ಟ್ಯಾಲೆಂಟ್, ಈಟಿವಿ ಕನ್ನಡದ ಸೂಪರ್ ಡ್ಯಾನ್ಸ್, ತೆಲುಗು ಈ ಟಿವಿಯಲ್ಲಿ ಅಧುರ್ಸ್ ಡ್ಯಾನ್ಸ್ ಶೋ ವಿನಲ್ಲೂ ಭಾಗವಹಿಸಿದ್ದರು.

ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

ನಟಿ ಅದ್ವಿತಿ ಶೆಟ್ಟಿ ಖರೀದಿಸಿದ ಕಿಯಾ ಸೆಲ್ಟೊಸ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಮೂರು ಎಂಜಿನ್ ಆಯ್ಕೆಯೊಂದಿಗೆ ಒಟ್ಟು 17 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯಲ್ಲೂ ಕಂಪನಿಯು ಇದೀಗ ನಾಲ್ಕು ಏರ್‌ಬ್ಯಾಗ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೊಲ್ ಸೌಲಭ್ಯಗಳಿವೆ.

ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

2022ರ ಸೆಲ್ಟೊಸ್ ಮಾದರಿಯ ಆಟೋಮ್ಯಾಟಿಕ್ ಮಾದರಿಗಳಲ್ಲೂ ಕಂಪನಿಯು ಪ್ಯಾಡಲ್ ಶಿಫ್ಟರ್ ಜೋಡಣೆ ಮಾಡಿದೆ. ಇದರ ಜೊತೆ ಹೆಚ್‌ಟಿಎಕ್ಸ್ ಡೀಸೆಲ್ ಮಾದರಿಯಲ್ಲೂ ಈ ಬಾರಿ ಆಟೋಮ್ಯಾಟಿಕ್ ಪರಿಚಯಿಸಲಾಗಿದೆ.

ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

ಹಾಗೆಯೇ ಈ ಎಸ್‍ಯುವಿ ಬೆಸ್ ವೆರಿಯೆಂಟ್‌ನಲ್ಲಿ ಕಂಪನಿಯು ಹೊಸದಾಗಿ ವಿನ್ಯಾಸಗೊಳಿಸಲಾದ ಕಿಯಾ ಲೊಗೊ ಹೊಂದಿರುವ ವ್ಹೀಲ್ ಕವರ್, ಎಕ್ಸ್ ಲೈನ್ ಮಾದರಿಗಳಲ್ಲಿ ಕಂಪನಿಯು ಕಿಯಾ ಲೊಗೊ ಹೊಂದಿರುವ ಹೆಡ್‌ರೆಸ್ಟ್ ಸೇರಿದಂತೆ ಟಾಪ್ ಲೈನ್‌ಗಳಲ್ಲಿ ಆರು ಏರ್‌ಬ್ಯಾಗ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

ಟಾಪ್ ಎಂಡ್ ಮಾದರಿಯಲ್ಲಿರುವ ಹೆಚ್‌ಟಿಎಕ್ಸ್ ಪ್ಲಸ್, ಜಿಟಿಎಕ್ಸ್‌(ಒ), ಜಿಟಿಎಕ್ಸ್ ಪ್ಲಸ್ ಮತ್ತು ಎಕ್ಸ್-ಲೈನ್ ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳಿದೆ. ಹೆಚ್‌ಟಿಎಕ್ಸ್ ಪ್ಲಸ್ ಡಿಸೇಲ್ ಮಾದರಿಗಳಲ್ಲಿ ಐಎಂಟಿ ಕ್ಲಚ್‌ಲೆಸ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಈ ಹೊಸ ಮಾದರಿಯು ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳು ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

ಈ 2022ರ ಸೆಲ್ಟೋಸ್ ಎಸ್‍ಯುವಿಯಲ್ಲಿ ಹಿಂದಿನಂತೆಯೇ ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ನೀಡಲಾಗಿದೆ.

ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

ಇದರೊಂದಿಗೆ ಹೊಸ ಕಾರಿನಲ್ಲಿ ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದೆ.

ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯವನ್ನು ಹೊಂದಿದೆ.

ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

ಈ ಮೂಲಕ ಅತ್ಯುತ್ತಮ ಸ್ಟೀಲ್ ಬಳಕೆಯೊಂದಿಗೆ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಮತ್ತು ಸುರಕ್ಷಾ ಫೀಚರ್ಸ್‌‌ಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಎಸ್‍ಯುವಿಯಲ್ಲಿ 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನನ್ನು ನೀಡಲಾಗಿದೆ.

ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು,ರೂಫ್ ರೈಲ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಸೌಲಭ್ಯವನ್ನು ಈ ಕಿಯಾ ಸೆಲ್ಟೋಸ್ ಎಸ್‍ಯುವಿಯಲ್ಲಿ ಪಡೆಯಬಹುದು.

ಜನಪ್ರಿಯ ಕಿಯಾ ಸೆಲ್ಟೊಸ್ ಎಸ್‍ಯುವಿ ಖರೀದಿಸಿದ ನಟಿ ಅದ್ವಿತಿ ಶೆಟ್ಟಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ನಟಿ ಅದ್ವಿತಿ ಶೆಟ್ಟಿ ಅವರು ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಿಯಾ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಫೋಕ್ಸ್‌ವ್ಯಾಗನ್ ಟೈಗುನ್ ಮಾದರಿಗಳಿಗೆ ಪೈಪೋಟಿ ನೀಡುತ್ತಿದೆ.

Article Published On: Tuesday, July 26, 2022, 18:09 [IST]
English summary
Actress advithi shetty buys new kia seltos suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+