ಹೊಸ ರೇಂಜ್ ರೋವರ್ ಎಸ್‍ಯುವಿ ಖರೀದಿಸಿದ ಜನಪ್ರಿಯ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಸಿನಿಮಾ ನಟರು ಮಾತ್ರವಲ್ಲದೇ ನಟಿಯರು ಕೂಡ ಕಾರುಗಳ ಮೇಲೆ ಕ್ರೇಜ್ ಹೊಂದಿದ್ದಾರೆ. ಸಿನಿಮಾ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಆವರು ತಮ್ಮ ಮೆಚ್ಚಿನ ಬ್ರ್ಯಾಂಡ್‌ನ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಇತ್ತೀಚೆಗೆ ನಟಿ ಐಶ್ವರ್ಯ ಲಕ್ಷ್ಮಿ (Aishwarya Lekshmi) ಅವರು ಹೊಸ ರೇಂಜ್ ರೋವರ್ ಇವೊಕ್ ಐಷಾರಾಮಿ ಎಸ್‌ಯುವಿಯನ್ನು ಖರೀದಿಸಿದ್ದಾರೆ.

ನಿವೀನ್ ಪೌಲಿ ಅಭಿನಯದ ನಂದವಲ ನಾಡ ಚಿತ್ರದ ಮೂಲಕನಟಿ ಐಶ್ವರ್ಯ ಲಕ್ಷ್ಮಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಟೊವಿನೋ ಥಾಮಸ್ ಜೊತೆ ಭರ್ಜರಿ ಪಾತ್ರ ನಿರ್ವಹಿಸಿ ಮಾಯಾನದಿ ಚಿತ್ರದ ಮೂಲಕ ಈ ನಟಿಯು ಸಿನಿ ರಸಿಕರ ಮನಸ್ಸಿಗೆ ಹತ್ತಿರವಾದರು. ನಂತರ ನಟಿ ಐಶ್ವರ್ಯಾ ಮಲಯಾಳಂ ಚಿತ್ರರಂಗ ಗಡಿ ದಾಟಿ ಇಂದು ತೆಲುಗು, ತಮಿಳಿನಲ್ಲಿ ತನ್ನದೇ ಆದ ನೆಲೆ ಕಂಡುಕೊಂಡಿದ್ದಾಳೆ. ಮಾಯಾನದಿ ನಂತರ ವರತನ ಮತ್ತು ಕುಮಾರಿಯಂತಹ ಹಲವಾರು ಹಿಟ್ ಚಿತ್ರಗಳ ನಟಿಸಿದರು.

Range Rover Evoque

ತಮಿಳಿನಲ್ಲಿ ಕಟ್ಟಾ ಗುಸ್ತಿ ಮತ್ತು ಪೊನ್ನಿಯನ್ ಸೆಲ್ವನ್ ಭಾಗ್ಯನಾಯಕನ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೆ, ಫೋಟೋಶೂಟ್ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿರುವ ತಾರೆಯ ಹಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೀಗ ಐಶ್ವರ್ಯ ಲಕ್ಷ್ಮಿ ಅವರು ಐಷಾರಾಮಿ ಎಸ್‍ಯುವಿಯನ್ನು ಖರೀದಿಸಿ ಸುದ್ದಿಯಾಗಿದ್ದಾರೆ. ಈ ಐಷಾರಾಮಿ ಎಸ್‍ಯುವಿಯ ಬೆಲೆ ರೂ 86.64 ಲಕ್ಷವಾಗಿದೆ.

ನಟಿ ಐಶ್ವರ್ಯಾ ತಮ್ಮ ಹೊಸ ರೇಂಜ್ ರೋವರ್ ಇವೊಕ್ ಐಷಾರಾಮಿ ಎಸ್‌ಯುವಿಯನ್ನು ವಿತರಣೆ ಪಡೆದುಕೊಳ್ಳುವ ಚಿತ್ರಗಳು ಸೋಷಿಯಲ್ ಮೀಡೀಯಾಗಳಲ್ಲಿ ವೈರಲ್ ಆಗಿದೆ. ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಲ್ಯಾಂಡ್ ರೋವರ್ ಇತ್ತೀಚೆಗೆ ಭಾರತದಲ್ಲಿ 2024ರ ರೇಂಜ್ ರೋವರ್ ಇವೊಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಈ ಐಷಾರಾಮಿ ಎಸ್‍ಯುವಿ ಫುಲ್ಲಿ - ಲೋಡ್ ಡೈನಾಮಿಕ್ SE ಟ್ರಿಮ್‌ನಲ್ಲಿ ಮಾತ್ರ ಲಭ್ಯವಿದೆ.

Range Rover Evoque

2024ರ ರೇಂಜ್ ರೋವರ್ ಇವೊಕ್ ಎಸ್‍ಯುವಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಘಟಕವು 247hp ಪವರ್ ಮತ್ತು 365Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೊಂದು ಆಯ್ಕೆಯಲ್ಲಿ 2.0 - ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 201hp ಪವರ್ ಮತ್ತು 430Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಎರಡೂ ಎಂಜಿನ್‌ಗಳು 48V ಮೈಲ್ಡ್ - ಹೈಬ್ರಿಡ್ ವ್ಯವಸ್ಥೆಯನ್ನು ಬೆಲ್ಟ್ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್‌ನೊಂದಿಗೆ ಪಡೆಯುತ್ತವೆ. ಇದು ಬ್ರೇಕಿಂಗ್‌ನಿಂದ ಶಕ್ತಿಯನ್ನು ಚೇತರಿಸಿಕೊಂಡು ವೇಗವರ್ಧನೆಗೆ ಸಹಾಯ ಮಾಡುತ್ತದೆ. ಇದನ್ನು 9 - ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. JLR ನ ಟೆರೈನ್ ರೆಸ್ಪಾನ್ಸ್ ಸಿಸ್ಟಂನೊಂದಿಗೆ ಆಲ್ - ವೀಲ್ ಡ್ರೈವ್ ಸ್ಟ್ಯಾಂಡರ್ಡ್ ಆಗಿದೆ.

Range Rover Evoque

ಬಾಹ್ಯ ನವೀಕರಣಗಳು ತೀರಾ ಕಡಿಮೆಯಿದ್ದು - ದೊಡ್ಡ ರೇಂಜ್ ರೋವರ್‌ಗಳಂತೆಯೇ ವಿವರವಾಗಿ ಮರುವಿನ್ಯಾಸಗೊಳಿಸಲಾದ ಗ್ರಿಲ್, ಮರುವಿನ್ಯಾಸಗೊಳಿಸಲಾದ LED ರನ್ನಿಂಗ್ ಲ್ಯಾಂಪ್ ಸಿಗ್ನೇಚರ್‌ಗಳೊಂದಿಗೆ ಹೊಸ ಸೂಪರ್ - ಸ್ಲಿಮ್ LED ಹೆಡ್‌ಲ್ಯಾಂಪ್‌ಗಳು, ಹೊಸ ರೆಡ್ ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಅಲಾಯ್ ವೀಲ್‌ಗಳಿಗೆ ಹೊಸ ಟ್ವಿನ್ 10 ಸ್ಪೋಕ್ ವಿನ್ಯಾಸವಿದೆ. ಆಯ್ಕೆ ಮಾಡಲು ಕೊರಿಂಥಿಯನ್ ಬ್ರಾಂಜ್ ಮತ್ತು ಟ್ರಿಬೆಕಾ ಬ್ಲೂ ಎಂಬ ಎರಡು ಹೊಸ ಬಣ್ಣಗಳಲ್ಲಿ ಲಭ್ಯವಿದೆ.

ಇನ್ನುಇಂಟೀರಿಯರ್‌ನಲ್ಲಿ ವಿಂಡ್ಸರ್ ಲೆದರ್ ಸೀಟುಗಳು, ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್, ಹೀಟೆಡ್ ಮತ್ತು ಕೂಲ್ಡ್ ಫ್ರಂಟ್ ಸೀಟ್‌ಗಳು, ಕಸ್ಟಮೈಸ್ ಕ್ಯಾಬಿನ್ ಲೈಟಿಂಗ್ ಮತ್ತು ವಿಸ್ತರಿತ ಆಂತರಿಕ ಸ್ಥಳವನ್ನು ಹೊಂದಿದೆ. ಐದು ಆಸನಗಳ ಎಸ್‌ಯುವಿಯು ಹೊಸ ಫ್ಲೋಟಿಂಗ್ 11.4 - ಇಂಚಿನ ಕರ್ವ್ಡ್ ಗ್ಲಾಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಇತ್ತೀಚಿನ ಪಿವಿ ಪ್ರೊ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ.

ಇದರಲ್ಲಿ ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, ಪನಾರಮಿಕ್ ಸನ್‌ರೂಫ್, 360 - ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ, ವೈರ್‌ಲೆಸ್ Apple CarPlay ಮತ್ತು Android Auto, OTA ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಮತ್ತು ಹೊಸ PM2.5 ಏರ್ ಪ್ಯೂರಿಫಿಕೇಶನ್ ಸಿಸ್ಟಮ್, ಸುಧಾರಿತ ಸುರಕ್ಷತೆಗಾಗಿ ಕ್ಲಿಯರ್‌ಸೈಟ್ ಗ್ರೌಂಡ್ ವ್ಯೂ ತಂತ್ರಜ್ಞಾನವನ್ನು ಸಹ ಅನ್ನು ಒಳಗೊಂಡಿದೆ.

More from DriveSpark

Article Published On: Thursday, February 15, 2024, 11:49 [IST]
English summary
Actress aishwarya lekshmi buys new range rover evoque suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+