ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ಸಿನಿಮಾ ರಂಗದಲ್ಲಿ ನಟರು ಮಾತ್ರವಲ್ಲದೇ ನಟಿಯರೂ ಕೂಡ ಕಾರು ಕ್ರೇಜ್ ಹೆಚ್ಚು ಹೊಂದಿರುತ್ತಾರೆ. ಅದರಂತೆ ನಟಿ ಅಮೇಯಾ ಮ್ಯಾಥ್ಯೂ ಕೂಡ ಹೆಚ್ಚು ಕಾರು ಕ್ರೇಜ್ ಅನ್ನು ಹೊಂದಿದ್ದಾರೆ.

Recommended Video

ಪ್ರತಿ ಚಾರ್ಜ್‌ಗೆ 530 ಕಿ.ಮೀ ಮೈಲೇಜ್ ನೀಡುವ KIA EV6 ವಿಮರ್ಶೆ | RWD & AWD | 350KW DC Fast Charging & More

ನಟಿ ಅಮೇಯಾ ಮ್ಯಾಥ್ಯೂ ಅವರು ಹೊಸ ಕಿಯಾ ಸೊನೆಟ್ ಕಾರನ್ನು ಖರೀದಿಸಿದ್ದಾರೆ. ಈ ಹೊಸ ಕಾರಿನೊಂದಿಗೆ ಆಕರ್ಷಕ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.

ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ನಟಿ ಅಮೇಯಾ ಮ್ಯಾಥ್ಯೂ ಅವರು ಈ ಹಿಂದೆ, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮತ್ತು ಪೊಲೊ ಜಿಟಿ ಕಾರುಗಳನ್ನು ಖರೀದಿಸಿದ್ದರು. ಹೊಸ ಕಿಯಾ ಸೊನೆಟ್ ಕಾರಿನ ಚಿತ್ರದ ಪೋಸ್ಟ್ ಕೆಳಗಡೆ ಮುಂದಿನ ಕಾರು ಯಾವುದು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ಕೇಳಿದ್ದಾರೆ. ಹೊಸ ಕಾರಿನ ಜೊತೆ ಇರುವ ಚಿತ್ರದಲ್ಲಿ ನಟಿ ಅಮೇಯಾ ಮ್ಯಾಥ್ಯೂ ಸಖತ್ ಕ್ಯೂಟ್ ಲುಕ್‌ನಲ್ಲಿದ್ದಾರೆ. ಕಲರ್ ಫುಲ್ ಸೀರೆ ಮತ್ತು ಸೂಪರ್ ಹೇರ್ ಸ್ಟೈಲ್ ನಲ್ಲಿ ನಟಿ ಮಿಂಚುತ್ತಿದ್ದಾರೆ. ನಮ್ಮ ಅಮೇಯಾ ಹೊಸ ಕಾರಿಗಿಂತ ಸುಂದರಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ಕಾರಿನೊಂದಿಗೆ ಇರುವ ನಟಿಯ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಮಲಯಾಳಂ ಸಿನಿಮಾರಂಗದಲ್ಲಿ ನಟಿಯಾಗಿ, ಮಾಡೆಲ್ ಆಗಿ ಮಿಂಚುತ್ತಿದ್ದಾರೆ. ಕರಿಕ್ ಸರಣಿಯ ಮೂಲಕ ಮಲಯಾಳಿಗಳ ಮನಗೆದ್ದಿದ್ದರು.

ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ಅಮೇಯಾ ಮಾಡೆಲಿಂಗ್‌ನಿಂದ ನಟನೆಗೆ ಬಂದ ನಟಿ. ನಟಿ ಅನೇಕ ಮಾಡೆಲ್ ಶೂಟ್‌ಗಳನ್ನು ಮಾಡುತ್ತಾರೆ. ಡ್ಯಾನ್ಸ್‌ನಲ್ಲಿ ತುಂಬಾ ಆಸಕ್ತಿ ಹೊಂದಿರುವ ಈ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ಡ್ಯಾನ್ಸ್ ವಿಡಿಯೋಗಳನ್ನು ರೀಲ್‌ಗಳಾಗಿ ಪೋಸ್ಟ್ ಮಾಡುತ್ತಾರೆ.

ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ಈ ನಟಿ ಇಲ್ಲಿಯವರೆಗೆ ಯಾವುದೇ ಸಿನಿಮಾಗಳಲ್ಲಿ ದೊಡ್ಡ ಪಾತ್ರಗಳನ್ನು ಮಾಡಿಲ್ಲ. ಚಿಕ್ಕ ಪಾತ್ರಗಳನ್ನು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಅವರು ನಟಿಸಿದ ಕೊನೆಯ ಚಿತ್ರ ಮಮ್ಮುಟ್ಟಿ ಅಭಿನಯದ ದಿ ಪಾದ್ರಿ. ನಟಿ ಅಮೇಯಾ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದಾರೆ.

ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ನಟಿ ಅಮೇಯಾ ಮ್ಯಾಥ್ಯೂ ಅವರು ಖರೀದಿಸಿದ ಕಿಯಾ ಸೊನೆಟ್ ಕಾರಿನ ಬಗ್ಗೆ ಹೇಳುವುದಾದರೆ, ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಸೊನೆಟ್(Sonet) ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಸೆಲ್ಟೋಸ್, ಕಾರ್ನಿವಲ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು.

ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ಇತ್ತೀಚೆಗೆ ಕಿಯಾ ಸೊನೆಟ್ ಬಿಡುಗಡೆಯಾದ ಎರಡು ವರ್ಷದೊಳಗೆ ದೇಶೀಯ ಮಾರುಕಟ್ಟೆಯಲ್ಲಿ 1.5 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿತು. ಈ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಈ ಎಸ್‍ಯುವಿಯು ಅದರ ಬೆಲೆ ಮತ್ತು ವೈಶಿಷ್ಟ್ಯಗಳ ಕಾರಣದಿಂದಾಗಿ ಸಾಕಷ್ಟು ಗಮನ ಸೆಳೆಯಿತು .

ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ಹೆಚ್ಚು ಸ್ಥಳೀಯವಾಗಿರುವ ಈ ಎಸ್‍ಯುವಿ ಕಳೆದ 21 ತಿಂಗಳುಗಳಲ್ಲಿ ಕಂಪನಿಗೆ ಅಗ್ರ ಮಾರಾಟಗಾರ ಎಂದು ಸಾಬೀತಾಗಿದೆ. ಇದು ಸ್ಥಳೀಯವಾಗಿ ಒಟ್ಟು ಮಾರಾಟದ 32 ಪ್ರತಿಶತಕ್ಕೆ ಕೊಡುಗೆ ನೀಡಿದೆ. 26 ಪ್ರತಿಶತ ಗ್ರಾಹಕರು ಸೊನೆಟ್‌ನ ಟಾಪ್-ಸ್ಪೆಕ್ ಎಕ್ಸ್ ಪ್ಲಸ್ ರೂಪಾಂತರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯ ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ. ಇದರಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ 84 ಬಿಹೆಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ

ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ಈ ಎಸ್‍ಯುವಿಯ ಟಾಪ್ ಸ್ಪೆಕ್ ಮಾದರಿಯಲ್ಲಿರುವ 1.0-ಲೀಟರ್ ಪೆಟ್ರೋಲ್ ಎಂಜಿನ್ 119 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಅಥವಾ 6-ಸ್ಪೀಡ್ ಐಎಂಟಿ ಅನ್ನು ಕೂಡ ಜೋಡಿಸಲಾಗಿದೆ. ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ಸ್, ಎಲ್ಇಡಿ ಡಿಆರ್‌ಎಲ್ಎಸ್, ಫಾಗ್ ಲ್ಯಾಂಪ್ಸ್, ಸಿಗ್ನೆಚೆರ್ ಟೈಗರ್ ನೊಸ್ ಫ್ರಂಟ್ ಗ್ರಿಲ್, 16-ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವೀಲ್ಹ್, ರಿಪ್ಲೆಕ್ಟರ್ ಸ್ಟ್ರೀಪ್‌ಗೆ ಹೊಂದಿಕೊಂಡಂತಿರುವ ಹಾರ್ಟ್ ಬಿಟ್‌ ವಿನ್ಯಾಸದ ಎಲ್ಇಡಿ ಟೈಲ್ ಲೈಟ್ಸ್, ಫ್ಲಕ್ಸ್ ಡಿಫ್ಯೂಸರ್ ಮತ್ತು ರಿಯರ್ ಬಂಪರ್ ಹೊಂದಿದೆ.

ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ಈ ಕಿಯಾ ಸೊನೆಟ್ ಎಸ್‍ಯುವಿ ಒಳಭಾಗದಲ್ಲೂ ಕೂಡಾ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ನೀಡಲಾಗಿದೆ. ಇದರಲ್ಲಿ ಮುಂಭಾಗದಲ್ಲಿ ವೆಂಟಿಲೆಟೆಡ್ ಲೆದರ್ ಸೀಟುಗಳು, ತ್ರಿ ಸ್ಪೋಕ್ ಡಿ ಕಟ್ ಸ್ಟೀರಿಂಗ್ ವೀಲ್ಹ್ ಜೊತೆ ಮೌಂಟೆಡ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, 10.25-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಕನೆಕ್ಟಿಟಿಯನ್ನು ಒಳಗೊಂಡಿದೆ.

ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ಇದರೊಂದಿಗೆ ಕಿಯಾ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ವೈರ್‌ಲೆಸ್ ಚಾರ್ಜರ್, ಸೌಂಡ್ ಮೋಡ್ ಲೈಟಿಂಗ್ ಮತ್ತು ಬಾಷ್ ಸಿಸ್ಟಂ ಹೊಂದಿರುವ 7-ಸ್ಪೀಕರ್ಸ್ ಅನ್ನು ಒಳಗೊಂಡಿದೆ. ಇನ್ನು ಕಿಯಾ ಮೋಟಾರ್ಸ್‌ ಅಭಿವೃದ್ದಿಪಡಿಸಿರುವ ಯುವಿಒ ಕಾರ್ ಕನೆಕ್ಟ್ ಟೆಕ್ನಾಲಜಿ ಸೌಲಭ್ಯವು ಗರಿಷ್ಠ ಫೀಚರ್ಸ್ ಹೊಂದಿದ್ದು, ಸುಮಾರು 57 ಫೀಚರ್ಸ್‌ಗಳನ್ನು ಯುವಿಒ ಆ್ಯಪ್ ಮೂಲಕವೇ ಕಾರಿನ ಪ್ರಮುಖ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದು.

ಎಷ್ಟೇ ದುಬಾರಿ ಕಾರು ಖರೀದಿಸಿದರೂ ನಿನ್ನ ಕಾರಿಗಿಂತ ನೀನೇ ಚಂದ: ಅಭಿಮಾನಿಗಳ ಕಮೆಂಟ್ಸ್‌ಗೆ ನಟಿ ಫಿದಾ

ಇನ್ನು ಈ ಕಿಯಾ ಸೊನೆಟ್ ಎಸ್‍ಯುವಿಯಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ, ಇದರಲ್ಲಿ 6-ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಮ್ಯಾನೆಜ್‌ಮೆಂಟ್(ವಿಎಸ್ಎಂ), ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಬ್ರೇಕ್ ಅಸಿಸ್ಟ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಇಂಪ್ಯಾಕ್ಟ್ ಸೆನ್ಸಾರ್ ಆಟೋ ಡೋರ್ ಅನ್‌ಲಾಕ್, ಸ್ಪೀಡ್-ಸೆನ್ಸಿಂಗ್ ಆಟೋ ಡೋರ್ ಲಾಕ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೊಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಮತ್ತು ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಅನ್ನು ನೀಡಲಾಗಿದೆ.

Most Read Articles

Kannada
English summary
Actress ameya mathew buys new kia sonet compact suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X