ಚೆಲುವಿನ ಚಿತ್ತಾರ ಬೆಡಗಿ ಅಮೂಲ್ಯ ಖರೀದಿಸಿದ ದುಬಾರಿ ಮರ್ಸಿಡಿಸ್ ಬೆಂಝ್ ಕಾರಿನ ವಿಶೇಷತೆಗಳು

ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೀಶ್ ಆವರು ದುಬಾರಿ ಕಾರು ಖರೀದಿಸಿದ ಸುದ್ದಿಯಾಗಿದ್ದರು. ಇದಾದ ಕೆಲವೇ ದಿನಗಳ ನಂತರ ಗೋಲ್ಡನ್ ಕ್ವೀನ್ ಎಂದು ಖ್ಯಾತಿ ಗಳಿಸಿರುವ ನಟಿ ಅಮೂಲ್ಯ (Amulya) ಕೂಡ ಹೊಸ ಕಾರು ಖರೀದಿಸಿದ್ದಾರೆ. ಚೆಲುವಿನ ಚಿತ್ತಾರ ಬೆಡಗಿ ಅಮೂಲ್ಯ ಮದುವೆ ಬಳಿಕ ಬಣ್ಣದ ಲೋಕದಿಂದ ಕೆಲ ವರ್ಷಗಳಿಂದ ದೂರ ಸರಿದು ನಟಿ ಮಕ್ಕಳ ಲಾಲನೆ - ಪಾಲನೆಯಲ್ಲಿ ತೊಡಗಿದ್ದಾರೆ. 7 ವರ್ಷಗಳ ಹಿಂದೆ ಮುಗುಳು ನಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಸ್ಟೈಲಿಶ್ ಫೋಟೋಗಳನ್ನು ಇನ್​ಸ್ಟಾಗ್ರಾಂ್ ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

ಸ್ಯಾಂಡಲ್​ವುಡ್​ ನಟಿ ಅಮೂಲ್ಯ ತಮ್ಮ ಹೊಸ ದುಬಾರಿ ಕಾರನ್ನು ಶೋರೂಂನಲ್ಲಿ ವಿತರಣೆ ಪಡೆದುಕೊಳ್ಳುವ ವೀಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದೆ. ನಟಿ ಅಮೂಲ್ಯ ಮತ್ತು ಜಗದೀಶ್ ಚಂದ್ರ ದಂಪತಿಗಳು ಕುಟುಂಬ ಸಮೇತರಾಗಿ ತೆರಳಿ ತಮ್ಮ ಹೊಸ ಕಾರಿನ ವಿತರಣೆ ಪಡೆದುಕೊಂಡಿದ್ಡಾರೆ. ಇನ್ನು ನಟಿ ಖರೀದಿಸಿದ ಐಷಾರಾಮಿ ಕಾರಿನ ಬಗ್ಗೆ ಕೆಲವರು ಇಂಟರ್‌ನೆಟ್‌ನಲ್ಲಿ ಹುಡುಕಾಡುತ್ತಿದ್ದಾರೆ. ಇಲ್ಲಿದೆ ಈ ಕಾರಿನ ವಿಶೇಷತೆಗಳ ಮಾಹಿತಿ.

Amulya New Mercedes-Benz GLS

ಬೆಲೆ: ಗೋಲ್ಡನ್ ಕ್ವೀನ್ ಎಂದು ಖ್ಯಾತಿ ಗಳಿಸಿರುವ ನಟಿ ಅಮೂಲ್ಯ ಖರೀದಿಸಿದ ಕಾರು ಮರ್ಸಿಡಿಸ್ ಬೆಂಝ್ ಜಿ‍ಎಲ್‍‍ಎಸ್ (Mercedes-Benz GLS) ಆಗಿದೆ. ಈ ಮರ್ಸಿಡಿಸ್ ಬೆಂಝ್ ಜಿ‍ಎಲ್‍‍ಎಸ್ ಕಾರಿಗೆ ಬೆಂಗಳೂರಿನಲ್ಲಿ ಆನ್ ರೋಡ್ ಬೆಲೆಯು ರೂ.1.63 - 1.69 ಕೋಟಿಯಾಗಿದೆ. ಈ ಮರ್ಸಿಡಿಸ್ ಬೆಂಜ್ ಜಿ‍ಎಲ್‍‍ಎಸ್ ಮಾದರಿಯು ದೇಶೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ ಎಕ್ಸ್7, ಆಡಿ ಕ್ಯೂ8, ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಗಳುಗೆ ಪೈಪೋಟಿ ನೀಡುತ್ತದೆ.

ವಿನ್ಯಾಸ: ಈ ಲಕ್ಷುರಿ ಮರ್ಸಿಡಿಸ್ ಬೆಂಝ್ ಜಿ‍ಎಲ್‍‍ಎಸ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗ ಗ್ರೀಲ್ ಅತ್ಯಾಧುನಿಕವಾಗಿದ್ದು, ಹಾರಿಜಾಂಟಲ್ ಕ್ರೋಮ್ ಸ್ಟ್ರಿಪ್‌, ನವೀನವಾದ ಡೇಟೈಮ್ ರನ್ನಿಂಗ್ ಲ್ಯಾಂಪ್ (DRL) ಹೊಂದಿದೆ. ಹಿಂಭಾಗದ ವಿನ್ಯಾಸ ಕೂಡ ಹೆಚ್ಚು ಆಕರ್ಷಣೀಯವಾಗಿದ್ದು, 21 - ಇಂಚಿನ ಅಲಾಯ್ ವೀಲ್ ಅನ್ನು ಪಡೆದುಕೊಂಡಿದೆ.

Amulya New Mercedes-Benz GLS

ಫೀಚರ್ಸ್: ಈ ಲಕ್ಷುರಿ ಎಸ್‍ಯುವಿಯ ಒಳಭಾಗದಲ್ಲಿ ಹಲವು ಅತ್ಯಾಧುನಿಕ ಫೀಚರ್ಸ್ ಗಳನ್ನು ಪಡೆದುಕೊಂಡಿವೆ ಸೀಟುಗಳು ಹೆಚ್ಚು ಆರಾಮದಾಯಕವಾಗಿದ್ದು, ಹೊಸದಾದ ಸ್ಟೀರಿಂಗ್ ವೀಲ್‌ ಹಾಗೂ MBUX ಸಿಸ್ಟಮ್ (ಮಲ್ಟಿಮೀಡಿಯಾ ಡಿಜಿಟಲ್ ಕಾಕ್‌ಪಿಟ್) ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಜ್ ಜಿ‍ಎಲ್‍‍ಎಸ್ ಎಸ್‌ಯುವಿಯು ನವೀನವಾದ 360 - ಡಿಗ್ರಿ ಕ್ಯಾಮೆರಾ, ಅಡ್ಜಸ್ಟ್ಏಬಲ್ ಏರ್ ಸಸ್ಪೆನ್ಷನ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಒಳಗೊಂಡಿದೆ.

ಜೊತೆಯಲ್ಲಿ ವೈರ್‌ಲೆಸ್ ಚಾರ್ಜಿಂಗ್‌, ಎರಡು 11.6 - ಇಂಚಿನ ಎಂಟರ್ಟೈನ್ಮೆಂಟ್ ಸ್ಕ್ರೀನ್, ಸನ್‌ಬ್ಲೈಂಡ್ಸ್ ಸೇರಿದಂತೆ ಹಲವು ಐಷಾರಾಮಿ ಫೀಚರ್ಸ್ ಪಡೆದಿದೆ. ಇನ್ನು ಮರ್ಸಿಡಿಸ್ ಬೆಂಝ್ ಜಿ‍ಎಲ್‍‍ಎಸ್ ಹೈಟೆಕ್ ಸಿಲ್ವರ್, ಸೊಡಲೈಟ್ ಬ್ಲೂ, ಸೆಲೆನೈಟ್ ಗ್ರೇ ಸೇರಿದಂತೆ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ.

ಎಂಜಿನ್: ಈ ಮರ್ಸಿಡಿಸ್ ಬೆಂಜ್ ಜಿ‍ಎಲ್‍‍ಎಸ್ ಎಸ್‌ಯುವಿಯಲ್ಲಿ 2 ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಇದರಲ್ಲಿ ಮೊದಲಿಗೆ 3.0 - ಲೀಟರ್ ಇನ್-ಲೈನ್ 6 ಸಿಲಿಂಡರ್ ಡೀಸೆಲ್ ಎಂಜಿನ್ 362 bhp ಗರಿಷ್ಠ ಪವರ್ ಹಾಗೂ 750 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 3.0 - ಲೀಟರ್ ಇನ್-ಲೈನ್ 6 ಸಿಲಿಂಡರ್ ಪೆಟ್ರೋಲ್ ಎಂಜಿನ್, 375 bhp ಪವರ್, 500 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, October 27, 2024, 12:10 [IST]
English summary
Actress amulya new mercedes benz gls top things
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+