ಆಡಿ, ಬೆಂಝ್ ಬದಲು ಸಾಮಾನ್ಯ ಮಾರುತಿ ಕಾರು ಖರೀದಿ... ಸೆಲೆಬ್ರಿಟಿಗಳಲ್ಲಿ ಅಪರೂಪದ ನಟಿ!
ಸಾಮಾನ್ಯವಾಗಿ ಭಾರತೀಯ ಚಿತ್ರರಂಗದಲ್ಲಿ ಸಿನಿಮಾ ನಟ-ನಟಿಯರು ದುಬಾರಿ ಕಾರುಗಳನ್ನು ಖರೀದಿಸುತ್ತಾರೆ. ಆಡಿ, ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್‌ನಂತಹ ಕಾರುಗಳು ಅವರ ಶ್ರೀಮಂತಿಕೆಯನ್ನು ತೋರುವುದರಿಂದ ಸಿನಿಮಾ ರಂಗದ ಬಹುತೇಕರು ಐಷಾರಾಮಿ ಕಾರುಗಳನ್ನೇ ಖರೀದಿಸುತ್ತಾರೆ. ಚಿತ್ರೋದ್ಯಮದ ಪ್ರಮುಖರು ಮಾರುತಿ ಸುಜುಕಿ ಕಂಪನಿಯ ಕಾರುಗಳನ್ನು ಖರೀದಿಸುವುದು ತುಂಬಾ ವಿರಳ ಎಂದು ಹೇಳಬಹುದು. ಏಕೆಂದರೆ ಮಾರುತಿ ಕಂಪನಿಯು ಭಾರತದಲ್ಲಿ ಮಧ್ಯಮ ಹಾಗೂ ಬಡ ವರ್ಗಕ್ಕಾಗಿ ಅಗ್ಗದ ಕಾರುಗಳನ್ನು ನೀಡುತ್ತದೆ. ಬೆಲೆ ತುಂಬಾ ಕಡಿಮೆ ಹಾಗೂ ತಮ್ಮ ಸ್ಥಾನಮಾನಕ್ಕೆ ಸರಿದೂಗುವುದಿಲ್ಲ ಎಂಬ ಕಾರಣಕ್ಕೆ ಶ್ರೀಮಂತರು ಮಾರುತಿ ಕಾರುಗಳನ್ನು ಖರೀದಿಸುವುದಿಲ್ಲ.
ಆದರೆ ಇತ್ತೀಚೆಗೆ ಅದಕ್ಕೆ ವಿರುದ್ಧವಾಗಿ ಚಲನಚಿತ್ರೋದ್ಯಮದ ವ್ಯಕ್ತಿಯೊಬ್ಬರು ಮಾರುತಿ ಸುಜುಕಿ ಕಾರನ್ನು ಖರೀದಿಸಿದ್ದಾರೆ. ಹೌದು, ಮಲಯಾಳಂ ಚಿತ್ರರಂಗದ ಪ್ರಮುಖ ನಟಿ ಹಾಗೂ ಗಾಯಕಿ ಅಭಿರಾಮಿ ಸುರೇಶ್ ಮಾರುತಿ ಸುಜುಕಿ ಜಿಮ್ನಿಯನ್ನು ಖರೀದಿಸಿದ್ದಾರೆ. ಇದು ಚಿತ್ರರಂಗದ ಹಲವರನ್ನು ಅಚ್ಚರಿಗೊಳಿಸಿದ್ದು, ಅದೇ ಸಮಯದಲ್ಲಿ ಅವರ ಸರಳತೆಯನ್ನು ಎತ್ತಿತೋರಿದೆ.

ಮಾರುತಿ ಸುಜುಕಿ ಜಿಮ್ನಿ ಭಾರತದಲ್ಲಿ ಪ್ರಮುಖ ಆಫ್‌ರೋಡ್ ಎಸ್‌ಯುವಿಯಾದ ಮಹೀಂದ್ರಾ ಥಾರ್‌ಗೆ ಪ್ರತಿಸ್ಪರ್ಧಿಯಾಗಿದೆ. ಜಿಮ್ನಿ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.12.74 ಲಕ್ಷಗಳಾಗಿದೆ. ಇದರ ಟಾಪ್ ವೇರಿಯೆಂಟ್ ಬೆಲೆ 14.79 ಲಕ್ಷ ರೂ.ವರೆಗೆ ಇದೆ. ಈ ಕಾರು ಸದ್ಯ ದೇಶದಲ್ಲಿ ಅಷ್ಟೇನು ಉತ್ತಮ ಮಾರಾಟ ಕಾಣುತ್ತಿಲ್ಲ. ಆದ್ರೂ ಖರೀದಿಸಿರುವುದು ಹಲವರನ್ನು ಅಚ್ಚರಿಗೊಳಿಸಿದೆ.
ಮಾರುತಿ ಜಿಮ್ನಿ ವಿಶೇಷತೆಗಳು: ಮಾರುತಿ ಸುಜುಕಿ ಜಿಮ್ನಿಯನ್ನು ಪ್ರತಿಸ್ಪರ್ಧಿಗಳಾದ ಥಾರ್ ಮತ್ತು ಫೋರ್ಸ್ ಗೂರ್ಖಾಗೆ ಹೋಲಿಸಿದರೆ ಡ್ರೈವ್ ಮಾಡಲು ತುಂಬಾ ಸುಲಭವಾಗಿದೆ. ಇದರ ಸಣ್ಣ ದೇಹವು ರಸ್ತೆಯಲ್ಲಿ ಕಡಿಮೆ ಜಾಗ ಇದ್ದರೂ ಸಲೀಸಾಗಿ ಮುನ್ನುಗ್ಗುತ್ತದೆ. ಹಾಗೆಯೇ ಇದು ತೂಕದಲ್ಲಿ ಹೆಚ್ಚು ಹಗುರವಾಗಿರುತ್ತದೆ.

ಮಾರುತಿ ಜಿಮ್ನಿ 5 ಡೋರ್ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಹೊಂದಿದೆ. ಇದರೊಂದಿಗೆ ಆಟೋಮ್ಯಾಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಹಾಗೂ ಉತ್ತಮ ಸೌಂಡ್ ಸಿಸ್ಟಮ್ ಹೊಂದಿದೆ. 4WD (ಫೋರ್ ವೀಲ್ಸ್ ಡ್ರೈವ್) ಸಹ ಒಳಗೊಂಡಿದೆ.
ಇವುಗಳ ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಸಹ ಹೊಂದಿದೆ. ಪರ್ಫಾಮೆನ್ಸ್ ಬಗ್ಗೆ ಹೇಳುವುದಾದ್ರೆ, ಇದನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ನೀಡಲಾಗುತ್ತದೆ. ಈ ಎಂಜಿನ್ ನೊಂದಿಗೆ 2 ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗುತ್ತದೆ.
ಟ್ರಾನ್ಸ್ ಮಿಷನ್ ಆಯ್ಕೆಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಸೇರಿವೆ. ಈ ಎಂಜಿನ್ 105 ಬಿಹೆಚ್‌ಪಿ ಪವರ್ ಮತ್ತು 134 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಮಾರುತಿ ಸುಜುಕಿ ಜಿಮ್ನಿ ನಾವು ಈ ಹಿಂದೆ ಉಲ್ಲೇಖಿಸಿದ ಮಹೀಂದ್ರಾ ಥಾರ್ ನೊಂದಿಗೆ ಮಾತ್ರವಲ್ಲದೆ, ಮಾರಾಟದ ವಿಷಯದಲ್ಲಿ ಫೋರ್ಸ್ ಗೂರ್ಖಾದೊಂದಿಗೆ ಸ್ಪರ್ಧಿಸುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








