ತಮ್ಮ ಹೊಸ ಬಹುಕೋಟಿ ಬೆಲೆಯ ಕಾರಿನಲ್ಲಿ ಕಾಣಿಸಿಕೊಂಡ ಜನಪ್ರಿಯ ಬಾಲಿವುಡ್ ನಟಿ

ಬಾಲಿವುಡ್ ಎಂಬ ಕಲರ್ ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳನ್ನು ಹೊಂದಿದ್ದಾರೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದಂತೆ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತ್ಯಂತ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಸಿನಿಮಾ ರಂಗದ ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚು ಇರುತ್ತದೆ.

ಬಾಲಿವುಡ್ ನಟಿಯರು ಆಗ್ಗಾಗ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಜನಪ್ರಿಯ ಬಾಲಿವುಡ್ ನಟಿ ದಿಶಾ ಪಟಾನಿ ( Disha Patani) ಅವರು ತಮ್ಮ ಐಷಾರಾಮಿ ಬಿಎಂಡಬ್ಲ್ಯು 7-ಸಿರೀಸ್ (BMW 7-Series) ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಿಎಂಡಬ್ಲ್ಯು 7-ಸಿರೀಸ್ ಯಾವಾಗಲೂ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಜನಪ್ರಿಯ ಆಯ್ಕೆಯಾಗಿದೆ. ನಟಿ ದಿಶಾ ಪಟಾನಿ ಅವರು ತಮ್ಮ ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿಪ್ರಯಾಣಿಸುತ್ತಿರುವ ವೀಡಿಯೊ ವೈರಲ್ ಆಗಿದೆ.

Disha Patani

ವೀಡಿಯೊವನ್ನು Voompla ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ದಿಶಾ ಪಟಾನಿ ತನ್ನ ಹೊಸ ಸೆಡಾನ್ ಕಡೆಗೆ ನಡೆಯುವುದನ್ನು ನಾವು ನೋಡುತ್ತೇವೆ. ಚಾಲಕ ಡೋರ್ ತೆರೆದರು, ಮತ್ತು ನಟಿ ತಕ್ಷಣವೇ ಸಹ-ಪ್ರಯಾಣಿಕರ ಸೀಟಿನಲ್ಲಿ ಕುಳಿತರು. ಕಾರಿನ ಹಿಂದಿನ ಸೀಟಿನಲ್ಲಿ ಬೇರೆಯವರು ಕುಳಿತಿದ್ದರು. ಇದು ಹೊಚ್ಚಹೊಸ ಕಾರು, ಮತ್ತು ಇದು ವೀಡಿಯೊದಲ್ಲಿ ಸಾಕಷ್ಟು ಸ್ಪಷ್ಟವಾಗಿತ್ತು.

ಈ ಬಿಎಂಡಬ್ಲ್ಯು 7-ಸಿರೀಸ್ ಮಾದರಿಯು ದಿಶಾ ಪಟಾನಿ ಅವರ ಗ್ಯಾರೇಜ್‌ನಲ್ಲಿರುವ ಅತ್ಯಂತ ದುಬಾರಿ ಕಾರು. ಹೊಚ್ಚಹೊಸ ಬಿಎಂಡಬ್ಲ್ಯು 7-Series 740i M ಸ್ಪೋರ್ಟ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.78 ಕೋಟಿಯಾಗಿದೆ. ನಟಿ ಬ್ಲ್ಯಾಕ್ ಸಫೈರ್ ಮೆಟಾಲಿಕ್ ಶೇಡ್ ಬಣ್ಣದ ಬಿಎಂಡಬ್ಲ್ಯು ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Disha Patani

ಹೊಸ ಬಿಎಂಡಬ್ಲ್ಯು 7-ಸಿರೀಸ್ ಮಾದರಿಯು ಮುಂಭಾಗದಲ್ಲಿರುವ ಗ್ರಿಲ್ ಆಕರ್ಷಕ ಮತ್ತು ಪ್ರೀಮಿಯಂ ಲುಕ್ ಅನ್ನು ನೀಡುತ್ತಿದೆ. ಈ ಕಾರಿನ ಮುಂಭಾಗದ ಗ್ರಿಲ್ ಅನ್ನು ವಿವರಿಸುವ ಎಲ್ಇಡಿ ಲೈಟ್ ಬಾರ್ಗಳಿವೆ. ಮುಂಭಾಗದ ಗ್ರಿಲ್ ಆಕ್ಟಿವ್ ಪಡೆಯುತ್ತದೆ. ಕಾರು ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಸಹ ನೀಡುತ್ತದೆ.

ಬಿಎಂಡಬ್ಲ್ಯು 7-ಸಿರೀಸ್ ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ಎಲ್ಲಾ-LED ಲ್ಯಾಂಪ್ ಗಳು, 20-ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹೆಚ್ಚಿನವುಗಳೊಂದಿಗೆ ಬರುತ್ತದೆ. BMW ಈ ವರ್ಷದ ಆರಂಭದಲ್ಲಿ ಭಾರತದಲ್ಲಿ 7-ಸೀರಿಸ್ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು ಮತ್ತು ಇಲ್ಲಿ ನೋಡಿರುವುದು ಅದೇ 2023 ಆವೃತ್ತಿಯಾಗಿದೆ. ಇನ್ನು ಕಾರಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ, ಇದನ್ನು ನಾವು ಅನೇಕ ಆಧುನಿಕ BMW ಗಳಲ್ಲಿ ನೋಡಿದ್ದೇವೆ.

Disha Patani car

ಈ ಕಾರಿನ 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 14.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಒಳಗೊಂಡಿದೆ. ಬಿಎಂಡಬ್ಲ್ಯು i7 ನಂತೆಯೇ, BMW ಸಹ 740i ಜೊತೆಗೆ ರೂಫ್-ಮೌಂಟೆಡ್ 31.3-ಇಂಚಿನ 8K ಸಿನಿಮಾ ಡಿಸ್ ಪ್ಲೇಯನ್ನು ನೀಡುತ್ತದೆ. ಇತರ ಫೀಚರ್ಸ್ ಗಳು ಹಿಂಭಾಗದ ಡೋರುಗಳಲ್ಲಿ 5.5-ಇಂಚಿನ ಟಚ್‌ಸ್ಕ್ರೀನ್ ಯುನಿಟ್, ಪನೊರೊಮಿಕ್ ಸನ್‌ರೂಫ್, ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಲೆದರ್ ಲ್ಯಾಂಪ್ ಗಳು ಮತ್ತು ಹೆಚ್ಚಿನವು ಸೇರಿವೆ.

BMW 7-ಸರಣಿಯಲ್ಲಿನ ಎಲ್ಲಾ ನಾಲ್ಕು ಸೀಟಿಗಳು ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಮಾಡಬಹುದು. ಹಿಂದಿನ ಸೀಟಿನ ಪ್ರಯಾಣಿಕರು ಮಸಾಜ್ ಫಂಕ್ಷನ್ ಸಹ ಪಡೆಯುತ್ತಾರೆ. ಲೆದರ್ ಸೀಟ್ ಕವರ್‌ಗಳು, ಮಲ್ಟಿ-ಝೋನ್ ಕ್ಲೈಮೇಟ್ ಕಂಟ್ರೋಲ್ ಇತರ ಕೆಲವು ವೈಶಿಷ್ಟ್ಯಗಳಾಗಿವೆ. ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ಗೆ ಬರುವುದಾದರೆ, ದಿಶಾ ಪಟಾನಿ 740i M ಸ್ಪೋರ್ಟ್ ಅನ್ನು ಖರೀದಿಸಿದ್ದಾರೆ, ಇದು ಪೆಟ್ರೋಲ್ ರೂಪಾಂತರವಾಗಿದೆ.

ಈ ಮಾದರಿಯು 3.0-ಲೀಟರ್, ಇನ್-ಲೈನ್ ಆರು-ಸಿಲಿಂಡರ್, ಟರ್ಬೋಚಾರ್ಜ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 375 Bhp ಮತ್ತು 520 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ. ಈ ಕಾರು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಈ ಕಾರು ಕೇವಲ 5.4 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ತಲುಪುತ್ತದೆ.

More from DriveSpark

Article Published On: Tuesday, December 5, 2023, 16:59 [IST]
English summary
Actress disha patani spotted in her new bmw 7 series luxury sedan details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+