ನಟಿ ದಿಶಾ ಪಟಾನಿ ಕಾರ್ ಕಲೆಕ್ಷನ್... ಗ್ಯಾರೇಜ್‌ನಲ್ಲಿವೆ ದುಬಾರಿ ಎಸ್‌ಯುವಿ, ಸೆಡಾನ್‌ಗಳು...

ಎಲ್ಲಾ ನಟ, ನಟಿಯರಂತೆ ಬಾಲಿವುಡ್ ಬೆಡಗಿ ದಿಶಾ ಪಟಾಣಿ ಅವರಿಗೂ ಕಾರುಗಳೆಂದರೆ ಸಖತ್ ಕ್ರೇಜ್ ಇದೆ. ವಾಸ್ತವವಾಗಿ, ದಿಶಾ ಅವರೇ ಡ್ರೈವಿಂಗ್ ಮಾಡಲು ಇಷ್ಟಪಡುತ್ತಾರೆ ಎಂದು ಬಾಲಿವುಡ್ ಮೂಲಗಳು ಹೇಳುತ್ತವೆ. ಅನೇಕ ಸಂದರ್ಭಗಳಲ್ಲಿ ಸ್ವತಃ ಅವರೇ ಡ್ರೈವಿಂಗ್ ಮಾಡುತ್ತಾ ಮುಂಬೈ ರಸ್ತೆಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದರು.

ಸದ್ಯ ಬಾಲಿವುಡ್‌ನಲ್ಲಿ ಉದಯೋನ್ಮುಖ ನಟಿಯಾಗಿ ಬೆಳೆಯುತ್ತಿದ್ದಾರೆ. ಸಿನಿಮಾಗಳು ಕಡಿಮೆಯಿದ್ದರೂ ಕೈತುಂಬಾ ಜಾಹಿರಾತುಗಳಿವೆ. ಸಿನಿಮಾ ರಂಗಕ್ಕೆ ಕಾಲಿಟ್ಟ ದಿನಗಳಲ್ಲಿ ಸಣ್ಣ ಕಾರುಗಳಲ್ಲಿ ಓಡಾಡುತ್ತಿದ್ದ ಅವರು, ಇದೀಗ ಐಷಾರಾಮಿ ದುಬಾರಿ ಕಾರುಗಳ ಒಡತಿಯಾಗಿದ್ದಾರೆ. ದಿಶಾ ಪಟಾಣಿ ಇತ್ತೀಚಿನ ವರ್ಷಗಳಲ್ಲಿ ತಮ್ಮ ಗ್ಯಾರೇಜ್ ಅನ್ನು ನವೀಕರಿಸಿದ್ದಾರೆ. ಇದರಲ್ಲಿ ಸಣ್ಣ ಕಾರುಗಳಿಂದ ಹಿಡಿದು ಟಾಪ್ ಕಾರುಗಳನ್ನು ಶೇಕರಿಸಿ ಇಟ್ಟಿದ್ದಾರೆ. ಪ್ರಸ್ತುತ ದಿಶಾ ಹೊಂದಿರುವ ಕಾರುಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ನಟಿ ದಿಶಾ ಪಟಾನಿ ಕಾರ್ ಕಲೆಕ್ಷನ್... ಗ್ಯಾರೇಜ್‌ನಲ್ಲಿವೆ ದುಬಾರಿ ಎಸ್‌ಯುವಿ, ಸೆಡಾನ್‌ಗಳು...

Mercedes-Benz S-ಕ್ಲಾಸ್:
ದಿಶಾ ಪಟಾನಿ ಅವರು Mercedes-Benz S450 ಐಷಾರಾಮಿ ಸೆಡಾನ್ ಅನ್ನು ಹೊಂದಿದ್ದಾರೆ. ದಿಶಾ ಈ ಕಾರನ್ನು ಮ್ಯಾಟ್ ಬ್ಲ್ಯಾಕ್ ಫಿನಿಶ್‌ನೊಂದಿಗೆ ಡಿ-ಕ್ರೋಮ್ ಮಾಡಿಸಿದ್ದಾರೆ. ಇದು ಖಂಡಿತವಾಗಿಯೂ ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ. ಇದು ಕೊನೆಯ ತಲೆಮಾರಿನ S-ಕ್ಲಾಸ್ ಆಗಿದ್ದರೂ, ಯಾವುದೇ ಐಷಾರಾಮಿ ಕಾರಿಗೂ ಕಮ್ಮಿಯಿಲ್ಲ. ಇದು 2018 ರ ಮಾದರಿಯಾಗಿರುವುದರಿಂದ ತುಸು ಹಳೆಯ ಕ್ಲಾಸಿಕ್ ಲುಕ್ ನೀಡುವುದರಿಂದ ಎಂಥವರಿಗೂ ಇಷ್ಟವಾಗುತ್ತದೆ.

Mercedes-Benz ನ ಪ್ರಮುಖ ಸೆಡಾನ್ ಆಗಿರುವ S ಕ್ಲಾಸ್, ಎಲ್ಲಾ ಸಂಭಾವ್ಯ ಆಕಾಂಕ್ಷೆಗಳನ್ನು ಪೂರೈಸುವ ಐಷಾರಾಮಿ ವೈಶಿಷ್ಟ್ಯಗಳ ಒಂದು ಶ್ರೇಣಿಯನ್ನು ಹೊಂದಿದೆ. ಇದು LED ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು, ತಡೆರಹಿತ ಫ್ಲಶ್ ಡೋರ್ ಹ್ಯಾಂಡಲ್‌ಗಳು, ಸನ್‌ರೂಫ್, ಕೀಲೆಸ್ ಗೋ, ಹಗುರವಾದ ಅಲಾಯ್ ವೀಲ್‌ಗಳು ಮತ್ತು ಸ್ಪ್ಲಿಟ್ LED ಟೈಲ್ ಲ್ಯಾಂಪ್‌ಗಳೊಂದಿಗೆ LED ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಹಾಗೆಯೇ ಈ ಮಾದರಿಯು ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಹಲವರು ನಟರ ಬಳಿಯು ಇದೆ.

ನಟಿ ದಿಶಾ ಪಟಾನಿ ಕಾರ್ ಕಲೆಕ್ಷನ್... ಗ್ಯಾರೇಜ್‌ನಲ್ಲಿವೆ ದುಬಾರಿ ಎಸ್‌ಯುವಿ, ಸೆಡಾನ್‌ಗಳು...

ಲ್ಯಾಂಡ್ ರೋವರ್ ರೇಂಜ್ ರೋವರ್ HSE ಸ್ಪೋರ್ಟ್:
ಲ್ಯಾಂಡ್ ರೋವರ್ ರೇಂಜ್ ರೋವರ್ ದಿಶಾ ಬಳಿಯಿರುವ ಏಕೈಕ SUV ಆಗಿದೆ. ಇದು ರೇಂಜ್ ರೋವರ್ HSE ಸ್ಪೋರ್ಟ್ ರೂಪಾಂತರವಾಗಿದ್ದು, ಇದು ಇತ್ತೀಚಿನ ಮಾದರಿಯಲ್ಲ. ಇದು ಸುಮಾರು 1.8 ಕೋಟಿ ರೂ.ಗಳ ಆನ್ ರೋಡ್ ಬೆಲೆ ಹೊಂದಿದೆ. ಈ SUV 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಗರಿಷ್ಠ 296 Bhp ಪವರ್ ಮತ್ತು 400 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೋಂಡಾ ಸಿವಿಕ್:
ಕೆಲ ವರ್ಷಗಳ ಹಿಂದೆ ಭಾರತೀಯ ಮಾರುಕಟ್ಟೆಗೆ ಬಂದ ಮೊದಲ ತಲೆಮಾರಿನ ಹೋಂಡಾ ಸಿವಿಕ್ ಅನ್ನು ದಿಶಾ ಪಟಾನಿ ಖರೀದಿಸಿದ್ದಾರೆ. ತನ್ನ ಆರಂಭಿಕ ದಿನಗಳಲ್ಲಿ, ದಿಶಾ ಪಟಾನಿ ಎಲ್ಲಾ ಈವೆಂಟ್‌ಗಳಿಗೆ ಹೋಂಡಾ ಸಿವಿಕ್‌ನಲ್ಲಿ ಓಡಾಡುತ್ತಿದ್ದರು. ಈ ಕಾರು 1.8-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಹಾಗೆಯೇ ಇದನ್ನು ಐಷಾರಾಮಿ ಡಿ-ಸೆಗ್ಮೆಂಟ್ ಕಾರು ಎಂದು ಪರಿಗಣಿಸಲಾಗಿದ್ದು, ಇಂದಿಗೂ ಈ ಕಾರುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ.

ನಟಿ ದಿಶಾ ಪಟಾನಿ ಕಾರ್ ಕಲೆಕ್ಷನ್... ಗ್ಯಾರೇಜ್‌ನಲ್ಲಿವೆ ದುಬಾರಿ ಎಸ್‌ಯುವಿ, ಸೆಡಾನ್‌ಗಳು...
ಷೆವರ್ಲೆ ಕ್ರೂಜ್:
ಷೆವರ್ಲೆ ಕ್ರೂಜ್ ಮತ್ತೊಂದು ಡಿ-ಸೆಗ್ಮೆಂಟ್ ಕಾರ್ ಆಗಿದ್ದು, ಇದು ದಿಶಾ ಅವರ ಒಡೆತನದಲ್ಲಿದೆ. ದಿಶಾ ಷೆವರ್ಲೆ ಕ್ರೂಜ್ ಅನ್ನು ನಿಯಮಿತವಾಗಿ ಬಳಸುತ್ತಿದ್ದರು. ಈ ಸೆಡಾನ್‌ನಲ್ಲಿ ಬಹುತೇಕ ಎಲ್ಲಾ ಕಾರ್ಯಕ್ರಮಗಳನ್ನು ಅಟಂಡ್ ಮಾಡಿದ್ದಾರೆ. ಡೀಸೆಲ್ ರಾಕೆಟ್ ಎಂದು ಕರೆಯಲ್ಪಡುವ ಈ ಕ್ರೂಜ್ ಅನ್ನು, ಅಮೆರಿಕದ ಕಾರು ತಯಾರಕರು ಭಾರತದಲ್ಲಿ ತಮ್ಮ ವ್ಯವಹಾರವನ್ನು ಪೂರ್ಣಗೊಳಿಸಲು ನಿರ್ಧರಿಸಿದ ನಂತರ ಭಾರತೀಯ ಮಾರುಕಟ್ಟೆಯಿಂದ ಸ್ಥಗಿತಗೊಂಡು ನಿರ್ಗಮಿಸಿತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Thursday, March 23, 2023, 19:46 [IST]
English summary
Actress dishapatani car collection details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+