ಹೊಸ ಬೈಕ್ ಖರೀದಿಸಿ ಜಾಲಿ ರೈಡ್ ಮಾಡಿ ಖುಷಿ ಪಟ್ಟ ಜನಪ್ರಿಯ ಕಿರುತೆರೆ ನಟಿ

ದಿವ್ಯಾಂಕ ತ್ರಿಪಾಟಿ (Divyanka Tripathi) ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಹಿಂದಿ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಮುಗ್ಧ ನಗುವಿನ ಒಡತಿ ದಿವ್ಯಾಂಕ ತ್ರಿಪಾಟಿ ಅವರು ಬೈಕ್‌ಗಳ ಬಗ್ಗೆ ಹೆಚ್ಚು ಕ್ರೇಜ್ ಅನ್ನು ಹೊಂದಿದ್ದಾರೆ. ನಟಿ ದಿವ್ಯಾಂಕ ಅವರು ಬೈಕ್ ರೈಡಿಂಗ್ ಮಾಡಲು ತುಂಬಾ ಇಷ್ಟಪಡುತ್ತಾರೆ.

ಅದ್ಭುತ ನಟನೆ ಮತ್ತು ಸುಂದರ ನಗುವಿನ ಮೂಲಕ ಸೀರಿಯಲ್ ವೀಕ್ಷಕರ ಮೆಚ್ಚಿನ ನಟಿ ದಿವ್ಯಾಂಕ ತ್ರಿಪಾಟಿ ಅವರು ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಮೆಟಿಯೊರ್ 350 ಬೈಕ್ ಅನ್ನು ಖರೀದಿಸಿದ್ದಾರೆ. ಬೈಕ್ ಓಡಿಸಲು ಕಲಿತಾಗಿನಿಂದ ನಟಿಗೆ ಬೈಕ್‌ಗಳ ಮೇಲೆ ಇರುವ ಕ್ರೇಜ್ ಹೆಚ್ಚಾಗಿದೆ. ನಟಿ ದಿವ್ಯಾಂಕ ಅವರು ತನ್ನ Instagram ಪ್ರೊಫೈಲ್‌ನಲ್ಲಿ ಇತ್ತಿಚೆಗೆ ವೀಡಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಆ ವೀಡಿಯೊದಲ್ಲಿ ನಟಿ ಹೊಸ ರಾಯಲ್ ಎನ್‌ಫೀಲ್ಡ್ ಮೆಟಿಯೊರ್ 350 ಬೈಕ್ ಅನ್ನು ರೈಡಿಂಗ್ ಮಾಡಿ ಆನಂದಿಸುತ್ತಿದ್ದಾರೆ.

ಹೊಸ ಬೈಕ್ ಖರೀದಿಸಿ ಜಾಲಿ ರೈಡ್ ಮಾಡಿ ಖುಷಿ ಪಟ್ಟ ಕಿರುತೆರೆ ನಟಿ

ನಟಿ ದಿವ್ಯಾಂಕ ಅವರು ಹಲವಾರು ನಟಿಯರಂತೆ ವೃತ್ತಿ ಜೀವನದ ಆರಂಭದಲ್ಲಿ ಏಳು ಬೀಳುಗಳನ್ನು ಮತ್ತು ಸವಾಲುಗಳನ್ನು ಎದುರಿಸಿದ್ದಾರೆ. ನಟಿ ದಿವ್ಯಾಂಕಾ ತ್ರಿಪಾಠಿ ಅವರು ಯೇ ಹೈ ಮೊಹಬ್ಬತೇನ್ ಧಾರಾವಾಹಿಯಲ್ಲಿನ ಪಾತ್ರಕ್ಕೆ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದಾರೆ. ಇನ್ನು ನಟಿ ಬ್ಲ್ಯಾಕ್ ಬಣ್ಣದ ರಾಯಲ್ ಎನ್‌ಫೀಲ್ಡ್ ಮೆಟಿಯೊರ್ 350 ಬೈಕ್ ಅನ್ನು ಖರೀದಿಸಿದ್ದಾರೆ. ಇನ್ನು ಈ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕ್ಮ್ಯಾಟ್ ಗ್ರೀನ್ ಬಣ್ಣದ ಆಯ್ಕೆಯು ಫೈರ್‌ಬಾಲ್ ಯೆಲ್ಲೋ ಮತ್ತು ಫೈರ್‌ಬಾಲ್ ರೆಡ್‌ಗೆ ಹೋಲುವ ಬ್ಲ್ಯಾಕ್ಡ್-ಔಟ್ ಥೀಮ್‌ನೊಂದಿಗೆ ಬರುತ್ತಿದೆ. ಇದಲ್ಲದೆ ವ್ಹೀಲ್ ಗಳ ಮೇಲೆ ಗ್ರೀ ಸ್ಟ್ರೀಪ್ ಉಪಸ್ಥಿತಿಯು ಆಸಕ್ತಿದಾಯಕ ವಿವರವಾಗಿದೆ. ಮತ್ತೊಂದೆಡೆ,ಗ್ರೀನ್ ಬಣ್ಣದ ಆಯ್ಕೆಯು ಬ್ಲ್ಯಾಕ್ಡ್-ಔಟ್ ಥೀಮ್ ಅನ್ನು ಸಹ ಹೊಂದಿದೆ. ಆದರೆ ವ್ಹೀಲ್ ಗಳ ಮೇಲಿನ ಬ್ಯಾಡ್ಜಿಂಗ್ ಮತ್ತು ಸ್ಟ್ರೀಪ್ ಯೆಲ್ಲೋ ಬಣ್ಣವನ್ನು ಹೊಂದಿರುತ್ತದೆ. ಅದರ ಜೊತೆಗೆ, ರಾಯಲ್ ಎನ್‌ಫೀಲ್ಡ್ ಸೂಪರ್‌ನೋವಾ ರೆಡ್ ಬಣ್ಣದ ಆಯ್ಕೆಯಲ್ಲಿಯು ಲಭ್ಯವಿದೆ.

ಹೊಸ ಬೈಕ್ ಖರೀದಿಸಿ ಜಾಲಿ ರೈಡ್ ಮಾಡಿ ಖುಷಿ ಪಟ್ಟ ಕಿರುತೆರೆ ನಟಿ

ಕಳೆದ ವರ್ಷ ಬಿಡುಗಡೆಗೊಂಡ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಹೊರತಾಗಿ ಕ್ರೂಸರ್‌ನಲ್ಲಿ ಯಾವುದೇ ಇತರ ಪ್ರಮುಖ ನವೀಕರಣಗಳನ್ನು ಹೊಂದಿಲ್ಲ. ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕನ್ನು ತಮಿಳುನಾಡು ಮತ್ತು ಯುಕೆ ಮೂಲದ ಆರ್‌ಇ ತಂಡವು ವಿನ್ಯಾಸಗೊಳಿಸಲಾಗಿದೆ. ಹಿಂದಿನ ಥಂಡರ್‌ಬರ್ಡ್ ಎಕ್ಸ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿರುವ ಮಿಟಿಯೊರ್ 350 ಬೈಕ್ ಮಾದರಿಯು ಥಂಡರ್‌ಬರ್ಡ್ ಬೈಕಿಗಿಂತಲೂ ಸಾಕಷ್ಟು ವಿಭಿನ್ನವಾಗಿ ಮತ್ತು ಆಕರ್ಷಕವಾಗಿದೆ.

ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ 349 ಸಿಸಿ, ಏರ್/ಆಯಿಲ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಕೂಡ ಪಡೆಯುತ್ತದೆ. ಈ ಎಂಜಿನ್ 20.2 ಬಿಹೆಚ್‍ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕನ್ನು ಜೆ ಪ್ಲಾಟ್‌ಫಾರ್ಮ್‌ ಅಡಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಹೊಸ ಬೈಕ್ ಖರೀದಿಸಿ ಜಾಲಿ ರೈಡ್ ಮಾಡಿ ಖುಷಿ ಪಟ್ಟ ಕಿರುತೆರೆ ನಟಿ

ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಈ ಮಿಟಿಯೊರ್ 350 ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಅನುಭವ ನೀಡುತ್ತದೆ. ಈ ರೆಟ್ರೊ ಕ್ರೂಸರ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್‌ ಅಬ್ಸಾರ್ಬರ್‌ ಅನ್ನು ಒಳಗೊಂಡಿದೆ. ಇನ್ನು ಈ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನ ಮುಂಭಾಗ 19-ಇಂಚಿನ ಮತ್ತು ಹಿಂಭಾಗದಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಜೋಡಿಸಲಾಗಿದೆ.

ಈ ಬೈಕಿನಲ್ಲಿ ಕ್ರಮವಾಗಿ 100 / 90-19 57 ಪಿ ಮತ್ತು 140 / 70-17 66 ಪಿ ಸಿಯೆಟ್ ಟ್ಯೂಬ್‌ಲೆಸ್ ಟೈರ್ ಅನ್ನು ಹೊಂದಿದೆ. ಇದರೊಂದಿಗೆ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ ಟಿಪ್ಪರ್ ಪಾಡ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇನ್ನು ಇದರೊಂದಿಗೆ ಹಲವಾರು ಫೀಚರ್ ಗಳನ್ನು ಒಳಗೊಂಡಿವೆ.

More from DriveSpark

Article Published On: Tuesday, January 31, 2023, 15:57 [IST]
English summary
Actress divyanka tripathi buys new royal enfield meteor 350 details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+