ದುಬಾರಿ ಮರ್ಸಿಡಿಸ್ ಬೆಂಝ್ ಖರೀದಿಸಿದ ನಟಿ ಗೌಹರ್ ಖಾನ್: ಮಗಳಿಗೆ ಆಟಿಕೆ ಕಾರು ಗಿಫ್ಟ್

ಬಾಲಿವುಡ್ ನಟ, ನಟಿಯರ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವುದು ಹೊಸದೇನಲ್ಲ. ಬಾಲಿವುಡ್ ಸೆಲಬ್ರಿಟಿಗಳು ಆಗಾಗ ತಮ್ಮ ದುಬಾರಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಜನಪ್ರಿಯ ನಟಿ ಗೌಹರ್ ಖಾನ್ (Gauahar Khan) ಅವರು ರೂ. 1 ಕೋಟಿ ಮೌಲ್ಯದ ಹೊಚ್ಚಹೊಸ ಮರ್ಸಿಡಿಸ್ ಬೆಂಝ್ GLE (Mercedes-Benz GLE) ಎಸ್‍ಯುವಿಯನ್ನು ಖರೀದಿಸಿದ್ದಾರೆ.

ನಟಿ ಗೌಹರ್ ಖಾನ್ ಅವರು ಹೊಸ ಮರ್ಸಿಡಿಸ್ ಬೆಂಝ್ GLE ಎಸ್‍ಯುವಿಯನ್ನು ವಿತರಣೆ ಪಡೆದುಕೊಳ್ಳುವ ವೀಡಿಯೊವನ್ನು ಮುಂಬೈನ ಅಧಿಕೃತ ಮರ್ಸಿಡಿಸ್-ಬೆನ್ಝ್ ಡೀಲರ್ ಆಟೋಹ್ಯಾಂಗರ್ ಮತ್ತು ಗ್ಲಾಮರ್ ಡೈರೀಸ್ ಯೂಟ್ಯೂಬ್ ಚಾನೆಲ್ ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ಗೌಹರ್ ಖಾನ್ ತನ್ನ ಪತಿ ಜೈದ್ ದರ್ಬಾರ್ ಅವರೊಂದಿಗೆ ಮುಂಬೈನಲ್ಲಿರುವ ಮರ್ಸಿಡಿಸ್ ಬೆಂಝ್ ಡೀಲರ್‌ಶಿಪ್‌ಗೆ ಹೋಗುತ್ತಿರುವುದನ್ನು ಕಾಣಬಹುದು.

Gauahar Khan Buys New Mercedes-Benz GLE

ಅವರಿಬ್ಬರೂ ಡೀಲರ್‌ಶಿಪ್‌ನ ಒಳಗೆ ಪ್ರವೇಶಿಸುವ ಮೊದಲು ಕೆಲವು ಸೆಕೆಂಡುಗಳ ಕಾಲ ಚಿತ್ರಗಳಿಗೆ ಪೋಸ್ ನೀಡುತ್ತಾರೆ. ಝೈದ್ ದರ್ಬಾರ್ ಅವರ ಹೊಸ ಕಾರಿನ ಮುಂದೆ ನಿಂತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರ GLE ಮುಂದೆ ಒಂದು ಸಣ್ಣ ಆಟಿಕೆ ಕಾರ್ ಕೂಡ ಇದೆ, ಬಹುಶಃ ಅವರ ಮಗುವಿಗಾಗಿ. ಜೈದ್ ಮೊದಲು ಆಟಿಕೆ ಕಾರನ್ನು ಅನಾವರಣಗೊಳಿಸುತ್ತಾರೆ. ಇದು ರಿಮೋಟ್ ಕಂಟ್ರೋಲ್ ಬಳಸಿ ನಿಯಂತ್ರಿಸುವ ಆಟಿಕೆ ಕಾರ್ ಆಗಿದೆ.

ಆಟಿಕೆ ಕಾರನ್ನು ಅನಾವರಣಗೊಳಿಸಿದ ನಂತರ, ನಟಿ ತನ್ನ ಪತಿಯೊಂದಿಗೆ ಕೆಲವು ಚಿತ್ರಗಳಿಗೆ ಪೋಸ್ ನೀಡಿದರು ಮತ್ತು ನಂತರ ತಮ್ಮ ಹೊಸ ಕಾರನ್ನು ಅನಾವರಣಗೊಳಿಸಿದರು. ನಟಿ ಗೌಹರ್ ಖಾನ್ ಅವರು ಖರೀದಿಸಿದಿರುವುದು ಹೊಸ ಮರ್ಸಿಡಿಸ್ ಬೆಂಝ್ GLE ಎಸ್‍ಯುವಿಯ GLE300d LWB ಆವೃತ್ತಿಯಾಗಿದೆ. ಗೌಹರ್ ಖಾನ್‌ ತುಂಬಾನೇ ಬೋಲ್ಡ್‌ ಬೆಡಗಿ. ಹಿಂದಿ ಬಿಗ್ ಬಾಸ್‌ 7ರಲ್ಲಿ ಸೀಸನ್ ನಲ್ಲಿ ಭಾಗವಹಿಸಿ ಮಿಂಚಿದರು.

Gauahar Khan Buys New Mercedes-Benz GLE

ಯಶ್ ರಾಜ್ ನಿರ್ದೆಶಕ ಮಾಡಿರುವ ರಾಕೇಟ್‌ ಸಿಂಗ್ ಚಿತ್ರದ ಮೂಲಕ ಬಾಲಿವುಡ್‌ ನಾಯಕಿಯಾಗಿ ಜರ್ನಿ ಅರಂಭಿಸಿದ್ದರು. ಇದಾದ ನಂತರ ಗೇಮ್, ಫೀವರ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ನಟಿ ಗೌಹರ್ ಖಾನ್ ಖರೀದಿಸಿದ ಮರ್ಸಿಡಿಸ್ ಬೆಂಝ್ GLE ಎಸ್‍ಯುವಿಯ ಬಗ್ಗೆ ಹೇಳುವುದಾದ, GLC ಕ್ಲಾಸ್ ಮತ್ತು GLS ಕ್ಲಾಸ್ ಎಸ್‍ಯುವಿಗಳ ನಡುವೆ ಈ GLE ಎಸ್‍ಯುವಿಯು ಸ್ಥಾನವನ್ನು ಪಡೆದಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ GLE ಎಸ್‍ಯುವಿಯು GLE 300d, GLE 400d ಮತ್ತು GLE 450 ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಪ್ರೀಮಿಯಂ ಮಿಡ್ ಸೈಜ್ ಐಷಾರಾಮಿ ಎಸ್‍ಯುವಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಐದು-ಸೀಟುಗಳ ಸಂರಚನೆಯೊಂದಿಗೆ ಲಭ್ಯವಿದೆ. ರೂಪಾಂತರಗಳಿಗೆ ಸಂಬಂಧಿಸಿದಂತೆ, ಎಂಟ್ರಿ ಲೆವೆಲ್ GLE 300d 2.0-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ.

Gauahar Khan Buys New Mercedes-Benz GLE

ಈ ಎಂಜಿನ್ 241 bhp ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ GLE 400d ರೂಪಾಂತರದಲ್ಲಿ 3.0 ಲೀಟರ್ ಇನ್‌ಲೈನ್-ಆರು ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 326 bhp ಮತ್ತು 700 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮರ್ಸಿಡಿಸ್ ಬೆಂಜ್ GLE ಏಕೈಕ ಪೆಟ್ರೋಲ್-ಚಾಲಿತ ಆವೃತ್ತಿಯು GLE 450 ಆಗಿದೆ, ಇದು 3.0-ಲೀಟರ್ ಇನ್‌ಲೈನ್-ಆರು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 362 bhp ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿಯ ಮೂರು ಆವೃತ್ತಿಗಳು ಲಾಂಗ್-ವೀಲ್‌ಬೇಸ್ ಮಾಡೆಲ್‌ಗಳಾಗಿವೆ. ಈ ಎಸ್‍ಯುವಿಯು ಆಲ್-ವೀಲ್ ಡ್ರೈವ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಜೋಡೀಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

More from DriveSpark

Article Published On: Monday, December 4, 2023, 14:55 [IST]
English summary
Actress gauahar khan buys a new mercedes benz gle suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+