Isha Talwar: ಯಾವ ಸ್ಟಾರ್‌ಗಳಿಗೂ ಕಡಿಮೆಯಿಲ್ಲ.. ನಟಿ ಇಶಾರಿಂದ ಲಕ್ಷ-ಲಕ್ಷ ಕೊಟ್ಟು ಮರ್ಸಿಡಿಸ್ ಬೆಂಜ್ ಕಾರು ಖರೀದಿ
ನಟಿ ಇಶಾ ತಲ್ವಾರ್ (Isha Talwar) ಮಲಯಾಳಂ, ಹಿಂದಿ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುವ ಮೂಲಕ ದೊಡ್ಡಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 2012ರಲ್ಲಿ ಮಲಯಾಳಂ ಚಿತ್ರ 'ತಟ್ಟತಿನ್ ಮರಯತು' ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದ ಇಶಾ, ಈವರೆಗೆ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ನಟಿ ಇಶಾ ತಲ್ವಾರ್ ಮುಂಬೈನ ಮರ್ಸಿಡಿಸ್ ಶೋರೂಂನಲ್ಲಿ ಹೊಚ್ಚ ಹೊಸ ಕಾರನ್ನು ವಿತರಣೆ ಪಡೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ನಟಿ ಇಶಾ, ಮರ್ಸಿಡಿಸ್ ಬೆಂಜ್ ಜಿಎಲ್‍ಸಿ (Mercedes - Benz GLC) ಎಸ್‌ಯುವಿಯನ್ನು ಖರೀದಿಸಿದ್ದಾರೆ. ಆದರೆ, ಯಾವ ರೂಪಾಂತರವನ್ನು ಕೊಂಡುಕೊಂಡಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿಯಿಲ್ಲ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮರ್ಸಿಡಿಸ್ ಬೆಂಜ್ ಜಿಎಲ್‍ಸಿ (Mercedes - Benz GLC) ರೂ.73.50 ಲಕ್ಷದಿಂದ ರೂ.74.50 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಜಿಎಲ್‍ಸಿ 300 4ಮ್ಯಾಟಿಕ್, ಜಿಎಲ್‍ಸಿ 220ಡಿ 4ಮ್ಯಾಟಿಕ್ ರೂಪಾಂತರ ಆಯ್ಕೆಯಲ್ಲಿ ದೊರೆಯುವ ಈ ಎಸ್‌ಯುವಿ, 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ.
ನೂತನ ಮರ್ಸಿಡಿಸ್ ಬೆಂಜ್ ಜಿಎಲ್‍ಸಿ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, 2 - ಲೀಟರ್ ಪೆಟ್ರೋಲ್ ಎಂಜಿನ್ 258 PS ಗರಿಷ್ಠ ಪವರ್, 400 Nm ಪೀಕ್ ಟಾರ್ಕ್, 2 - ಲೀಟರ್ ಡೀಸೆಲ್ ಎಂಜಿನ್ 197 PS ಪವರ್, 440 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

9 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿರುವ ಈ ಕಾರು, 2WD (ಟೂ ವೀಲ್ ಡ್ರೈವ್), AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 14.7kmpl ರಿಂದ 19.4kmpl ಮೈಲೇಜ್ ನೀಡುತ್ತದೆ. ಜೊತೆಗೆ 240 kmph ಟಾಪ್ ಸ್ವೀಡ್ ಒಳಗೊಂಡಿದೆ.
ಹೊಸ ಮರ್ಸಿಡಿಸ್ ಬೆಂಜ್ ಜಿಎಲ್‍ಸಿ ಎಸ್‌ಯುವಿ, ಯುವ ಗ್ರಾಹಕರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ 11.9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಕರ್ಷಕ ಸನ್‌ರೂಫ್, ಡುಯಲ್-ಜೋನ್ ಎಸಿ ಹಾಗೂ 64 - ಕಲರ್ ಆಂಬಿಯೆಂಟ್ ಲೈಟಿಂಗ್ ಅನ್ನು ಪಡೆದಿದೆ.
ಸುರಕ್ಷತೆಯ ವಿಚಾರದಲ್ಲೂ ಈ ಕಾರು ಅತ್ಯುತ್ತಮವಾಗಿದ್ದು, 7 ಏರ್‌ಬ್ಯಾಗ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಹೊಂದಿದೆ. ಇದು ಆಕ್ಟಿವ್ ಬ್ರೇಕ್ ಅಸಿಸ್ಟ್, ಆಕ್ಟಿವ್ ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಅಸಿಸ್ಟ್ ಮತ್ತು ಆಕ್ಟಿವ್ ಪಾರ್ಕಿಂಗ್ ಅಸಿಸ್ಟೆಂಟ್ ಅಂಶಗಳನ್ನು ಒಳಗೊಂಡಿದೆ.
ಮರ್ಸಿಡಿಸ್ ಬೆಂಜ್ ಜಿಎಲ್‍ಸಿ ಎಸ್‌ಯುವಿಗೆ ಆಡಿ ಕ್ಯೂ5, ಬಿಎಂಡಬ್ಲ್ಯೂ ಎಕ್ಸ್3 ಮತ್ತು ವೋಲ್ವೋ ಕಾರುಗಳು ಎದುರಾಳಿಗಳಾಗಿವೆ. ಇನ್ನು, ನಟಿ ಇಶಾ ತಲ್ವಾರ್ ರೂ.80 ಲಕ್ಷ ಬೆಲೆಯ ಮರ್ಸಿಡಿಸ್ ಇ - ಕ್ಲಾಸ್ (Mercedes E-class) ಹಾಗೂ ರೂ.17 ಲಕ್ಷ ಮೌಲ್ಯದ ಟೊಯೊಟಾ ಇನ್ನೋವಾ (Toyota Innova) ಕಾರುಗಳ ಒಡತಿಯೂ ಆಗಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








