ಇದು ರಸ್ತೆ ಮೇಲಿನ ಅರಮನೆ! ಪ್ರೇಮ ಲೋಕ ನಟಿ ಜೂಹಿ ಚಾವ್ಲಾ ಖರೀದಿಸಿದ್ರು ದುಬಾರಿ ಮರ್ಸಿಡಿಸ್ ಕಾರು!

ಬಾಲಿವುಡ್ ನಟಿ ಜೂಹಿ ಚಾವ್ಲಾ (Juhi Chawla), ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡ ಸಿನಿ ರಂಗದಲ್ಲೂ ತಮ್ಮದೇಯಾದ ಛಾಪನ್ನು ಮೂಡಿಸಿದ್ದು, 1987ರಲ್ಲಿ ತೆರೆಕಂಡ ಎವರ್‌ಗ್ರೀನ್ ಹಿಟ್ ಸಿನಿಮಾ 'ಪ್ರೇಮ ಲೋಕ'ದಲ್ಲಿ ಕೂಡ ನಟಿಸಿದ್ದಾರೆ. ಆ ಬಳಿಕ, ರಣಧೀರ, ಕಿಂದರಿ ಜೋಗಿ ಹಾಗೂ ಶಾಂತಿ ಕ್ರಾಂತಿ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ನಟಿ ಜೂಹಿ ಚಾವ್ಲಾ ಯಶಸ್ವಿ ಉದ್ಯಮಿಯಾಗಿ ಸಹ ಖಾತಿ ಗಳಿಸಿದ್ದು, ಬರೋಬ್ಬರಿ ರೂ.4,600 ಕೋಟಿ ಮೂಲ್ಯದ ಸಂಪತ್ತನ್ನು ಹೊಂದಿದ್ದಾರೆ.

ನಟಿ ಜೂಹಿ ಚಾವ್ಲಾ ದುಬಾರಿ ಬೆಲೆಯ ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ (Mercedes Benz E-Class) ಸೆಡಾನ್‌ನ್ನು ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ, ನೂತನ ಕಾರಿನಲ್ಲಿ ನಟಿ ಜೂಹಿ ಚಾವ್ಲಾ ಕಾಣಿಸಿಕೊಂಡಿದ್ದರು. ಈ ಕುರಿತ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

Actress Juhi Chawla Buys New Mercedes Benz E-Class Car Details

ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ ವಿಶೇಷತೆಗಳೇನು: ಈ ಕಾರು, ಕನಿಷ್ಠ ರೂ.78.50 ಲಕ್ಷ ಹಾಗೂ ಗರಿಷ್ಠ ರೂ.92.50 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ಇ 200, ಇ 220ಡಿ ಮತ್ತು ಇ 450 ಎಂಬ ಮೂರು ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಕಾರು, 3 ವಿವಿಧ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. ಇದು 2-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 2-ಲೀಟರ್ 4-ಸಿಲಿಂಡರ್ ಮೈಲ್ಡ್ ಹೈಬ್ರಿಡ್ ಡೀಸೆಲ್ ಹಾಗೂ 3-ಲೀಟರ್ 6-ಸಿಲಿಂಡರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. ಜೊತೆಗೆ 9-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 15 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Actress Juhi Chawla Buys New Mercedes Benz E-Class Car Details

ನೂತನ ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ ಸೆಡಾನ್‌, 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 540 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಈ ಕಾರು ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಇದು ನೋಡುಗರ ಕಣ್ಣು ಕುಕ್ಕುವಂತಿದೆ. ಇದರೊಟ್ಟಿಗೆ ಹೈಟೆಕ್ ಸಿಲ್ವರ್, ಗ್ರ್ಯಾಫೈಟ್ ಗ್ರೇ, ಅಬ್ಸಿಡಿಯನ್ ಬ್ಲ್ಯಾಕ್, ಪೋಲಾರ್ ವೈಟ್ ಹಾಗೂ ನಾಟಿಕ್ ಬ್ಲೂ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. ಒಳಭಾಗದಲ್ಲಿ ಬ್ರೌನ್, ಬೀಜ್ ಮತ್ತು ಬ್ಲ್ಯಾಕ್ ಬಣ್ಣದ ಥೀಮ್‍ನ್ನು ಪಡೆದಿದೆ.

ನೂತನ ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 14.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 4-ಜೋನ್ ಆಟೋ ಎಸಿ, 17-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಹಾಗೂ ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ ಸೆಡಾನ್‌ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 8-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, February 7, 2025, 14:22 [IST]
English summary
Actress juhi chawla buys new mercedes benz e class car details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+