90ರ ದಶಕದ ನಟಿಗೆ 7 ಕೋಟಿ ಸಂಭಾವನೆ! 57ರ ಬ್ಯೂಟಿಗೆ 6 ಕೋಟಿ ಕಾರು... ಸ್ಟಾರ್ ನಟರಿಗೆ ಸೆಡ್ಡು!

ದಕ್ಷಿಣ ಭಾರತದ ಸಿನಿಮಾಗಳ ಅಬ್ಬರದಿಂದ ಬಾಲಿವುಡ್ (Bollywood) ಈಗ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆಯಾದರೂ, 90ರ ದಶಕದಲ್ಲಿ ಭಾರತೀಯ ಸಿನಿಮಾ ಎಂದರೆ ಹೊರಗಿನವರಿಗೆ ಕೇವಲ ಬಾಲಿವುಡ್‌ ಮಾತ್ರ ಎನ್ನುವ ಮಟ್ಟಿಗೆ ಇತ್ತು. ಅಂದಿನ ಸಿನಿಮಾ ಜಗತ್ತಿಗೆ ಹೊಸ ಅಂದವನ್ನು ಪರಿಚಯಿಸಿದ್ದ ಅದೆಷ್ಟೋ ನಟಿಯರಲ್ಲಿ ಕೆಲವರು ಮಾತ್ರ ಇಂದಿಗೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಇಂದಿಗೂ ಸ್ಟಾರ್‌ ನಟರಂತೆ ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ ಎಂದರೆ ಅವರ ಕ್ರೇಜ್ ಅರ್ಥ ಮಾಡಿಕೊಳ್ಳಬಹುದು. ಇತ್ತೀಚೆಗೆ 57ರ ವಯಸ್ಸಿನ 90ರ ದಶಕದ ನಟಿ 6.25 ಕೋಟಿ ರೂ.ಗಳ ಕಾರಿನಲ್ಲಿ ಕಾಣಿಸಿಕೊಂಡು ಅಚ್ಚರಿಗೊಳಿಸಿದ್ದಾರೆ.

ಅವರು ಮತ್ಯಾರು ಅಲ್ಲ, ಬಾಲಿವುಡ್‌ನ ಜನಪ್ರಿಯ ನಟಿ 'ಮಾಧುರಿ ದೀಕ್ಷಿತ್' (Madhuri Dixit), ಇವರು ಬಾಲಿವುಡ್ ಹೀರೋಯಿನ್‌ಗಳ ಸಾಲಿನಲ್ಲಿ ಮೊದಲ ಫೆರಾರಿ ಕಾರಿನ ಮಾಲೀಕರಾಗಿದ್ದಾರೆ. ಇತ್ತೀಚೆಗೆ ಪತಿ ಡಾ.ಶ್ರೀರಾಮ್ ನೇನೆ ಅವರೊಂದಿಗೆ ಹೊಚ್ಚ ಹೊಸ ಫೆರಾರಿ 296 ಜಿಟಿಎಸ್ ಕಾರಿನಲ್ಲಿ ಕಾಣಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ.

actress-madhuri-dixit-bought-6cr-worth-ferrari-296-gts

ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಿಂದ ನಿರ್ಗಮಿಸುವಾಗ ಹೊಸ ಫೆರಾರಿ 296 ಜಿಟಿಎಸ್ ಹಾರ್ಡ್ ಟಾಪ್ ಕನ್ವರ್ಟಿಬಲ್ ಸೂಪರ್ ಕಾರ್‌ನಲ್ಲಿ ಮಾಧುರಿ ದೀಕ್ಷಿತ್ ಕಾಣಿಸಿಕೊಂಡಿದ್ದಾರೆ. ಈ ಕಾರಿನ ಬೆಲೆಯು ಬರೋಬ್ಬರಿ 6.25 ಕೋಟಿ ರೂ. ಇದೆ. ಈ ಫೆರಾರಿ 296 ಜಿಟಿಎಸ್ 296 ಜಿಟಿಬಿಯ ಹಾರ್ಡ್ ಟಾಪ್ ಕನ್ವರ್ಟಿಬಲ್ ಆವೃತ್ತಿಯಾಗಿದ್ದು, ಟಾಪ್‌ ನಟರ ಕಾರಿಗೆ ಸೆಡ್ಡು ಹೊಡೆಯುವಂತಿದೆ.

ಈ ಕಾರು 3.0-ಲೀಟರ್ ಟ್ವಿನ್-ಟರ್ಬೊ ವಿ6 ಎಂಜಿನ್ ಹಾಗೂ ಹಿಂಭಾಗದಲ್ಲಿ ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ಎಂಜಿನ್ 664 ಬಿಹೆಚ್ ಪವರ್ ಮತ್ತು ಎಲೆಕ್ಟ್ರಿಕ್ ಮೋಟರ್ 166 ಬಿಹೆಚ್ ಪವರ್ ಉತ್ಪಾದಿಸುತ್ತದೆ. ಒಟ್ಟಾರೆ 830 ಬಿಹೆಚ್ ಪವರ್ ಮತ್ತು 740 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 2.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪಬಲ್ಲದು ಹಾಗೆಯೇ 330 ಕಿ.ಮೀ. ಟಾಪ್ ಸ್ಪೀಡ್ ಹೊಂದಿದೆ.

actress-madhuri-dixit-bought-6cr-worth-ferrari-296-gts

7 ಕೋಟಿ ಸಂಭಾವನೆ?: ವರದಿಗಳ ಪ್ರಕಾರ, ಮಾಧುರಿ ದೀಕ್ಷಿತ್ ಕಳೆದ ವರ್ಷದ ಕೊನೆಯಲ್ಲಿ ಬಂದಿದ್ದ 'ಭೂಲ್ ಭುಲೈಯಾ 3' ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಮಂಜುಲಿಕಾ ಪಾತ್ರದಲ್ಲಿ ನಟಿಸಲು ಬರೋಬ್ಬರಿ 5 ರಿಂದ 8 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸ್ಟಾರ್‌ ನಟರ ಸಂಭಾವನೆಗೆ ಸಮನಾಗಿ ಇವರು ಸಂಭಾವನೆ ಪಡೆದಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ.

ದುಬಾರಿ ಕಾರುಗಳ ಒಡತಿ: ಮಾಧುರಿ ದೀಕ್ಷಿತ್ ತಮ್ಮ ಫೆರಾರಿ ಖರೀದಿಸುವ ಮೊದಲು, ಅವರ ಪತಿ ಡಾ.ಶ್ರೀರಾಮ್ ನೇನೆ ಅವರು 5.9 ಕೋಟಿ ರೂ.ಗಳ ಮೌಲ್ಯದ ಮೆಕ್ ಲಾರೆನ್ 750 ಎಸ್‌ ಸೂಪರ್ ಕಾರ್ ಖರೀದಿಸಿದ್ದರು. ಇದು 4.0 ಲೀಟರ್ ಟ್ವಿನ್ ಟರ್ಬೊ, ಫ್ಲಾಟ್-ಪ್ಲೇನ್ ವಿ8 ಎಂಜಿನ್ ಹೊಂದಿದ್ದು, 750 ಬಿಹೆಚ್ ಪವರ್ ಹಾಗೂ 800 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

actress-madhuri-dixit-bought-6cr-worth-ferrari-296-gts

ರೇಂಜ್ ರೋವರ್: ಇದಲ್ಲದೆ, ಮಾಧುರಿ ದೀಕ್ಷಿತ್ ಇತ್ತೀಚೆಗೆ ಹೊಚ್ಚ ಹೊಸ ರೇಂಜ್ ರೋವರ್ ಆಟೋಬಯೋಗ್ರಫಿ ಎಲ್‌ಡಿಡಬ್ಲ್ಯೂಬಿ 3.0 ಡೀಸೆಲ್ ಸಹ ಖರೀದಿಸಿದ್ದಾರೆ. ಇದರ ಬೆಲೆಯು ಬರೋಬ್ಬರಿ 4 ಕೋಟಿ ರೂ. ಇದೆ. ಇದು 3.0 ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದ್ದು, ಆಲ್-ವ್ಹೀಲ್ ಡ್ರೈವ್ ಸಿಸ್ಟಮ್ ಜೊತೆಗೆ ಬರುತ್ತದೆ. ವಿಶೇಷವೆಂದರೆ ಅವರ ಎಲ್ಲಾ ಕಾರುಗಳು ವಿಐಪಿ ನಂಬರ್‌ಗಳನ್ನು ಹೊಂದಿವೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 15, 2025, 14:59 [IST]
English summary
Actress madhuri dixit bought rs 6cr worth ferrari 296 gts
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+