ಕ್ಯಾನ್ಸರ್ ಗೆದ್ದ ನಟಿಯ ಬದುಕಿನಲ್ಲಿ ಹೊಸ ಸಂತಸ: ಐಷಾರಾಮಿ ಕಾರು ಖರೀದಿಸಿದ 'ಗೂಳಿ' ಚಿತ್ರದ ನಟಿ
ಸಿನಿಮಾ ನಟರು ಮಾತ್ರವಲ್ಲದೇ ನಟಿಯರು ಕೂಡ ಕಾರುಗಳ ಮೇಲೆ ಕ್ರೇಜ್ ಹೊಂದಿದ್ದಾರೆ. ಸಿನಿಮಾ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಆವರು ತಮ್ಮ ಮೆಚ್ಚಿನ ಬ್ರ್ಯಾಂಡ್‌ನ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಇತ್ತೀಚೆಗೆ ನಟಿ ಮಮತಾ ಮೋಹನ್‌ದಾಸ್ (Mamta Mohandas) ಹೊಚ್ಚ ಹೊಸ ಬಿಎಂಡಬ್ಲ್ಯು Z4 M40i ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.
ನಟಿ ಮಮತಾ ಮೋಹನ್‌ದಾಸ್ ಖರೀದಿಸಿದ ಬಿಎಂಡಬ್ಲ್ಯು Z4 M40 ಕಾರು ಭಾರತೀಯ ಸೆಲೆಬ್ರಿಟಿಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಮಮತಾ ಮೋಹನ್ ದಾಸ್ ಮಲಯಾಳಂ ಚಿತ್ರರಂಗದ ಖ್ಯಾತ ನಟಿ. ಹಲವಾರು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೇ ನಟಿ ಮಮತಾ ಮೋಹನ್‌ದಾಸ್ ಅವರು ಗಾಯಕಿ ಮತ್ತು ನಿರ್ಮಾಪಕಿಯೂ ಕೂಡ ಹೌದು. ಇವರು ಕನ್ನಡದ 'ಗೂಳಿ' ಚಿತ್ರದಲ್ಲಿ ಅಭಿನಯಿಸಿದ್ದರು.

ನಟಿ ಮಮತಾ ಮೋಹನ್‌ದಾಸ್ ಹೊಚ್ಚ ಹೊಸ ಕಾರಿನ ವಿತರಣೆಯನ್ನು ತೆಗೆದುಕೊಳ್ಳುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಚಿತ್ರಗಳಲ್ಲಿ ನಟಿ ತಮ್ಮ ಹೊಚ್ಚ ಹೊಸ ಬಿಎಂಡಬ್ಲ್ಯು Z4 M40i ಐಷಾರಾಮಿ ಕಾರನ್ನು ವಿತರಣೆಯನ್ನು ತೆಗೆದುಕೊಳ್ಳುವುದನ್ನು ಕಾಣಬಹುದು. ಮಮತಾ ಮೋಹನ್ ದಾಸ್ ಕೂಡ ಕ್ಯಾನ್ಸರ್ ನಿಂದ ಮತ್ತೆ ಬದುಕಿಗೆ ಬಂದ ನಟಿ. ಇಂತಹ ಸವಾಲುಗಳನ್ನು ಧೈರ್ಯದಿಂದ ಎದುರಿಸಿದ ಆ ಹೋರಾಟಗಾರ್ತಿಗೆ ಬದುಕಿಗೆ ಈಗ ಮತ್ತೊಂದು ಸಂತಸ ಮೂಡಿದೆ.
ನಟಿ ಮಮತಾ ಮೋಹನ್‌ದಾಸ್ ಖರೀದಿಸಿದ ಕಾರಿನ ಬಗ್ಗೆ ಹೇಳುವುದಾದರೆ, ಈ ಬಹುನಿರೀಕ್ಷಿತ ಇತ್ತೀಚಿನ ಬಿಎಂಡಬ್ಲ್ಯು Z4 M40i ಕಾರು ಕಳೆದ ವರ್ಷ ಮೇ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತು. ಈ ಕಾರಿನ ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.89.30 ಲಕ್ಷವಾಗಿದೆ. ಇನ್ನು ಕೊಚ್ಚಿಯಲ್ಲಿ ಈ ಬಿಎಂಡಬ್ಲ್ಯು Z4 M40 ಕಾರಿನ ಆನ್ ರೋಡ್ ಬೆಲೆಯು ರೂ.1.16 ಕೋಟಿಯಾಗಿದೆ.

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯು ಈ ಕಾರನ್ನು ಸಂಪೂರ್ಣವಾಗಿ ಅಂತರ್ನಿರ್ಮಿತ ಘಟಕವಾಗಿ (CBU) ಅಂದರೆ ಸಂಪೂರ್ಣವಾಗಿ ಆಮದು ಮಾಡಿಕೊಂಡ ವಾಹನವಾಗಿ ಭಾರತಕ್ಕೆ ತರುತ್ತಿದೆ. ಈ ಮಾದರಿಯು ಸ್ಕೈಸ್ಕ್ರೇಪರ್ ಗ್ರೇ ಮತ್ತು ಪೋರ್ಟಿಮಾವೊ ಬ್ಲೂ ಆಯ್ಕೆಗಳನ್ನು ಒಳಗೊಂಡಂತೆ 7 ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಬಿಎಂಡಬ್ಲ್ಯು Z4 M40i ಸಮಕಾಲೀನ BMW ವಿನ್ಯಾಸ ಶೈಲಿಯೊಂದಿಗೆ ಸ್ಪೋರ್ಟಿ ಮತ್ತು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.
ಐಷಾರಾಮಿ ಕಾರಿನ ಪ್ರಮುಖ ವಿನ್ಯಾಸದ ಮುಖ್ಯಾಂಶಗಳು ಹೊಸ ಕಿಡ್ನಿ ಗ್ರಿಲ್, ಏರ್ ಇನ್ ಟೆಕ್, ಲಂಬವಾಗಿ ಜೋಡಿಸಲಾದ ಎಲ್ಇಡಿ ಹೆಡ್ಲೈಟ್ಗಳು ಮತ್ತು ವ್ಹೀಲ್ ಅರ್ಚಾರ್ ಮೇಲೆ ವಿಸ್ತರಿಸಿರುವ ಉದ್ದವಾದ ಬಾನೆಟ್ ಅನ್ನು ಒಳಗೊಂಡಿದೆ. ಕಂಪನಿಯು M40i ರೂಪಾಂತರವನ್ನು ಸಿರಿಯಮ್ ಗ್ರೇ ಪೇಂಟೆಡ್ ಗ್ರಿಲ್, ಮಿರರ್ ಕ್ಯಾಪ್ಸ್ ಮತ್ತು ಟ್ರೆಪೆಜಾಯ್ಡಲ್ ಎಕ್ಸಾಸ್ಟ್ ಸಿಸ್ಟಮ್‌ನೊಂದಿಗೆ ಉಡುಗೊರೆಯಾಗಿ ನೀಡಿದೆ. ಈ ಓಪನ್-ಟಾಪ್ ಸ್ಪೋರ್ಟ್ಸ್ ಕಾರ್ 19-ಇಂಚಿನ M ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ.

ಈ ಹೊಸ BMW Z4 ರೋಡ್‌ಸ್ಟರ್‌ನ ಒಳಭಾಗವು ತುಂಬಾ ವಿಭಿನ್ನವಾಗಿದೆ. ಈ ಬಿಎಡಬ್ಲ್ಯು 10.25-ಇಂಚಿನ ಹೈ-ರೆಸಲ್ಯೂಶನ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡ್ರೈವರ್ ಡಿಸ್‌ಪ್ಲೇಯೊಂದಿಗೆ BMW ಲೈವ್ ಕಾಕ್‌ಪಿಟ್, 3D ಮ್ಪ್ಯಾಪ್ ಗಳೊಂದಿಗೆ GPS ಸಿಸ್ಟಮ್, ಟಚ್ ಕಂಟ್ರೋಲರ್, ಆಪಲ್ ಕಾರ್‌ಪ್ಲೇ, ಪಾರ್ಕಿಂಗ್ ಮತ್ತು ಡ್ರೈವಿಂಗ್ ಅಸಿಸ್ಟೆಂಟ್ ಕಾರ್ಯಗಳನ್ನು ಈ ಕಾರು ಒಳಗೊಂಡಿದೆ.
ಹೊಸ BMW Z4 M40i ಓಪನ್-ಟಾಪ್ ಸ್ಪೋರ್ಟ್ಸ್ ಕಾರು 3.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಈ ಎಂಜಿನ್ 340 bhp ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈ ಐಷಾರಾಮಿ ಕಾರು 4.5 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications








