ನಟಿ ತಮನ್ನಾ ಭಾರೀ ಬೆಲೆಯ ಆಡಿ ಕಾರಿನಲ್ಲಿ ಕಾಣಿಸಿಕೊಂಡರು: ಸ್ಟಾರ್ ಹೀರೋಗಳಿಗಿಂತ ನಾವೇನು ಕಮ್ಮಿಯೇ..!
ಇತ್ತೀಚೆಗೆ ತೆರೆಕಂಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ಜೈಲರ್ (jailer) ಸಿನಿಮಾದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ನಟಿ ತಮನ್ನಾ ಭಾಟಿಯಾ (Tamannaah Bhatia) ಎಲ್ಲರ ಮನಸ್ಸನ್ನು ಗೆದ್ದಿದ್ದರು. ತಮಿಳು ಮಾತ್ರವಲ್ಲದೆ ತೆಲುಗು, ಹಿಂದಿ ಚಿತ್ರರಂಗದಲ್ಲಿ ಅವರಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಅಷ್ಟರಮಟ್ಟಿಗೆ ಜನಪ್ರಿಯತೆ ಗಳಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ನಟಿ ತಮನ್ನಾ ಭಾಟಿಯಾ ಬಹುಶಃ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಳಿದು, ಐಷಾರಾಮಿ ಆಡಿ ಕ್ಯೂ7 (Audi Q7) ಕಾರಿನಲ್ಲಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ತಮನ್ನಾ ಕೂಡ ತಾನೇನು ಸ್ಟಾರ್ ಹೀರೋಗಳಿಗಿಂತ ಕಮ್ಮಿಯಿಲ್ಲ ಎನ್ನುವಂತೆ ದುಬಾರಿ ಬೆಲೆಯ ದೊಡ್ಡ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಆಡಿ ಕ್ಯೂ7 (Audi Q7) ಕಾರು, ರೂ.84.70 ಲಕ್ಷದಿಂದ ರೂ.92.30 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುವ ಈ ಕಾರು, 3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದ್ದು, 340 PS ಪವರ್, 500 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 8-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.
ಹೊಸ ಆಡಿ ಕ್ಯೂ7 ಕಾರು, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, 11.21 kmpl ಮೈಲೇಜ್ ನೀಡುತ್ತದೆ. ಇದು, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಸನ್‌ರೂಫ್ ಹಾಗೂ 4 ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತೆಯ ದೃಷ್ಟಿಯಿಂದ ಕೂಡ ಈ ಕಾರು ಅತ್ಯುತ್ತಮವಾಗಿದ್ದು, 8 ಏರ್‌ಬ್ಯಾಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೇನಾರ್ಸ್, ಪಾರ್ಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೈಬಿಲಿಟಿ ಕಂಟ್ರೋಲ್ ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಪಡೆದಿದೆ. ಆಡಿ ಕ್ಯೂ7 ಕಾರಿಗೆ ಮರ್ಸಿಡಿಸ್ ಬೆಂಜ್ ಜಿಎಲ್ಇ, ಬಿಎಂಡಬ್ಲ್ಯೂ ಎಕ್ಸ್5 ಹಾಗೂ ವೋಲೋ ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಆಡಿ ಕ್ಯೂ7 ಕಾರು ಹಲವು ಸಿನಿಮಾ ನಟ, ನಟಿಯರನ್ನು ಸೆಳೆದಿದ್ದು, ಹಲವು ಸೆಲೆಬ್ರಿಟಿಗಳು ಈ ಕಾರನ್ನು ಇಷ್ಟಪಟ್ಟು ಖರೀದಿಸಿದ್ದಾರೆ. ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಬಿಪಾಶಾ ಬಸು, ಇಮ್ರಾನ್ ಹಶ್ಮಿ, ಜಾನ್ ಅಬ್ರಹಾಂ, ಕಾಜೊಲ್, ಸಲ್ಮಾನ್ ಖಾನ್, ವರುಣ್ ಧವನ್ ಆಡಿ ಕ್ಯೂ7 ಮಾಲೀಕರಾಗಿದ್ದಾರೆ. ಒಂದಷ್ಟು ದಿನಗಳ ಹಿಂದೆ, ನಟಿ ಬಿಪಾಶಾ ಬಸು ಇದೇ ಕಾರಿನಲ್ಲಿ ತಿರುಗಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇನ್ನು, ನಟಿ ತಮನ್ನಾ ಭಾಟಿಯಾ ಮನೆಯ ಗ್ಯಾರೇಜ್ ನಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವೆ. ಅವುಗಳೆಂದರೆ, ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್, ಬಿಎಂಡಬ್ಲ್ಯೂ 320ಐ, ಮರ್ಸಿಡಿಸ್ ಬೆಂಜ್ ಜಿಎಲ್ಇ. ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ (Land Rover Discovery Sport) ರೂ.71.39 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.
ಭಾರತದಲ್ಲಿ ಬಿಎಂಡಬ್ಲ್ಯೂ 320ಐ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದು ರೂ. 37.59 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿತ್ತು. ಪೆಟ್ರೋಲ್ ಎಂಜಿನ್ ಪಡೆದಿದ್ದ ಈ ಕಾರು, 17.61 kmpl ಮೈಲೇಜ್ ನೀಡುತ್ತಿತ್ತು. ಮರ್ಸಿಡಿಸ್ ಬೆಂಜ್ ಜಿಎಲ್ಇ ರೂ.96.40 ಲಕ್ಷದಿಂದ ರೂ.1.15 ಕೋಟಿ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications