ದುಬಾರಿ ವಿಮಾನ ಖರೀದಿಸಿ ಬಾಲಿವುಡ್‌ಗೆ ತಮ್ಮ ಖದರ್ ತೋರಿದ ದಕ್ಷಿಣದ ನಟಿ

ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ನಯನತಾರಾ ಕೂಡಾ ಒಬ್ಬರು. ಇವರನ್ನು ಅಭಿಮಾನಿಗಳು ಲೇಡಿ ಸೂಪರ್‌ ಸ್ಟಾರ್ ಅಂತಲೂ ಕರೆಯುತ್ತಾರೆ. ಇತ್ತೀಚೆಗೆ ಇವರು ಪ್ರೈವೇಟ್ ಜೆಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಬಾಲುವುಡ್‌ನಲ್ಲಿಯೇ ಕಲವೇ ಮಂದಿ ಮಾತ್ರ ಪ್ರೈವೇಟ್ ಜೆಟ್ ಹೊಂದಿದ್ದಾರೆ. ಇದೀಗ ದಕ್ಷಿಣ ಭಾರತದಲ್ಲಿ ಪ್ರೈವೇಟ್ ಜೆಟ್ ಖರೀದಿಸಿ ನಯನ್ ಸುದ್ದಿಯಾಗಿದ್ದಾರೆ.

ಇತ್ತೀಚೆಗೆ ಅವರು ಬಾಲಿವುಡ್ ನಟ ಶಾರುಖ್ ಖಾನ್ ಅವರ ಜವಾನ್ ಚಿತ್ರದಲ್ಲಿ ನಟಿಸಿ ಮಿಂಚಿದ್ದರು. ಈ ಸಿನಿಮಾ ಅದ್ದೂರಿ ಯಶಸ್ಸನ್ನು ಕಂಡಿದೆ. ಈಗ ಬಾಲಿವುಡ್‌ನಲ್ಲೂ ಸಖತ್ ಸದ್ದು ಮಾಡುತ್ತಿರುವ ಅವರು, ದಕ್ಷಿಣದಲ್ಲಿ ದುಬಾರಿ ನಟಿಯೂ ಹೌದು. ಹಾಗಾಗಿ ತಮ್ಮ ಸ್ಟಾರ್‌ಡಂಗೆ ತಕ್ಕಂತೆ ಪ್ರೈವೇಟ್ ಜೆಟ್ ಖರೀದಿಸಿದ್ದಾರೆ ಎಂದು ಚರ್ಚಿಸಲಾಗುತ್ತಿದೆ. ಸದ್ಯ ಖರೀದಿಸಿರುವ ಖಾಸಗಿ ಜೆಟ್‌ನ ಮೌಲ್ಯ 50 ಕೋಟಿ ರೂ. ಎಂದು ತಿಳಿದುಬಂದಿದೆ.

actress-nayanthara-50-crore-worth-private-jet

ನಮಗಿರುವ ಮಾಹಿತಿಯ ಪ್ರಕಾರ ಬಾಲಿವುಡ್ ನಟಿಯರಾದ ಶಿಲ್ಪಾ ಶೆಟ್ಟಿ, ಪ್ರಿಯಾಂಕಾ ಚೋಪ್ರಾ ಮತ್ತು ಮಾಧುರಿ ದೀಕ್ಷಿತ್ ಸೇರಿದಂತೆ ಇತರ ಕೆಲವೇ ನಟಿಯರು ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ. ಈಗ ಆ ಬಾಲಿವುಡ್ ನಟಿಯರ ಸಾಲಿಗೆ ನಯನತಾರಾ ಅವರು ಸೇರಿಕೊಂಡಿದ್ದಾರೆ. ಜೊತೆಗೆ ನಯನತಾರಾ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಖಾಸಗಿ ಜೆಟ್ ಅನ್ನು ಹೊಂದಿರುವ ಏಕೈಕ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಈ ಪ್ರೈವೇಟ್ ಜೆಟ್‌ ಅನ್ನು ನಯನತಾರಾ-ವಿಘ್ನೇಶ್ ಶಿವನ್ ದಂಪತಿ ಖರೀದಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ, ವಿಘ್ನೇಶ್ ಶಿವನ್ ಮತ್ತು ನಯನತಾರಾ ಬಿಳಿ-ನೀಲಿ ಜೆಟ್‌ನಿಂದ ಹೊರಬರುವ ಚಿತ್ರಗಳು ಮತ್ತು ವೀಡಿಯೊ ವೈರಲ್ ಆಗಿವೆ. ಜೆಟ್‌ ಒಳಭಾಗವು ಸಂಪೂರ್ಣವಾಗಿ ಐಷಾರಾಮಿಯಾಗಿ ಕಾಣುತ್ತಿದ್ದು, ಕ್ಯಾಬಿನ್ ಒಳಗೆ ಒರಗಿಕೊಳ್ಳುವ ಮತ್ತು ಮಸಾಜ್ ಸೌಲಭ್ಯಗಳೊಂದಿಗೆ ಐಷಾರಾಮಿ ಆಸನಗಳಿವೆ.

actress-nayanthara-50-crore-worth-private-jet

ಇವುಗಳ ಹೊರತಾಗಿ ಹೆಚ್ಚುವರಿ ಪ್ರಯಾಣಿಕರು ಬಂದರೆ ಅವರಿಗೂ ಆಸನದ ವ್ಯವಸ್ಥೆ ಮಾಡಬಹುದು. ಶೌಚಾಲಯ ಮತ್ತು ಕೈ ತೊಳೆಯುವ ಬೇಸಿನ್‌ಗಳನ್ನು ಪ್ರತ್ಯೇಕವಾಗಿ ಒದಗಿಸಲಾಗಿದೆ. ವಿಶ್ರಾಂತಿಗಾಗಿ ಮಲಗುವ ಕೋಣೆ ಕೂಡ ಇದೆ. ಇವಿಷ್ಟೆ ಅಲ್ಲದೇ ಪ್ರಯಾಣದ ವೇಳೆ ವಿಮಾನದಲ್ಲಿ ಅವರಿಗೆ ಸೇವೆ ಒದಗಿಸಲು ಗಗನ ಸಖಿಯರನ್ನು ಕೂಡ ನೇಮಿಸಿಕೊಳ್ಳಬಹುದಂತೆ.

ಜವಾನ್ ಯಶಸ್ಸಿನ ಖುಷಿಯಲ್ಲಿ ನಯನತಾರಾ: ಸದ್ಯ ನಟಿ ನಯನತಾರಾ ಜವಾನ್ ಹಿಟ್ ಖುಷಿಯಲ್ಲಿದ್ದಾರೆ. ಬಾಲಿವುಡ್‌ನ ಪ್ರಮುಖ ನಟ ಶಾರುಖ್ ಖಾನ್ ಅವರೊಂದಿಗೆ ಜವಾನ್ ಚಿತ್ರದಲ್ಲಿ ನಟಿಸುವ ಮೂಲಕ ಹಿಂದಿ ಚಿತ್ರರಂಗದಲ್ಲೂ ಕಮಾಲ್ ಮಾಡಿದ್ದಾರೆ. ಜವಾನ್ ಸಿನಿಮಾ ಇದುವರೆಗೆ ರೂ. 1000 ಕೋಟಿ ಗಳಿಸಿದೆ ಎನ್ನಲಾಗಿದೆ.

actress-nayanthara-50-crore-worth-private-jet

ನಟಿ ನಯನತಾರಾ ಹುಟ್ಟಿದ್ದು ಕೇರಳದಲ್ಲಾದರೂ ಅವರನ್ನು ಚಿತ್ರರಂಗದಲ್ಲಿ ಉತ್ತುಂಗಕ್ಕೇರಿಸಿದವರು ತಮಿಳು ಅಭಿಮಾನಿಗಳು. ಅದರ ನಂತರ, ಅವರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಟಿಸಿ ಮಿಂಚಿದ್ದಾರೆ. ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ಸೂಪರ್ ಸಿನಿಮಾ ಮಾಡಿ ಸ್ಯಾಂಡಲ್‌ವುಡ್‌ನಲ್ಲೂ ಗುರ್ತಿಸಿಕೊಂಡಿರುವ ಅವರು, ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾಗಳನ್ನು ಕಡಿಮೆ ಮಾಡಿದ್ದಾರೆ.

ಐಷಾರಾಮಿ ಕಾರುಗಳ ಒಡತಿ: ನಟಿ ನಯನತಾರಾ 1.76 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು 7 ಸಿರೀಸ್ ಕಾರು ಹೊಂದಿದ್ದಾರೆ. ಹಾಗೆಯೇ 1 ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಜಿಎಲ್‌ಎಸ್ 350 ಟಿ ಮತ್ತು ಬಿಎಂಡಬ್ಲ್ಯು 5 ಸಿರೀಸ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಸದ್ಯ, ನಟಿ ನಯನತಾರಾ ತಮ್ಮ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ 50 ಕೋಟಿ ರೂ. ಮೌಲ್ಯದ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ.

actress-nayanthara-50-crore-worth-private-jet

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Friday, September 29, 2023, 15:44 [IST]
English summary
Actress nayanthara 50 crore worth private jet
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+