ಕೋಟಿ ಬೆಲೆಯ ಹೊಸ Mercedes-Benz GLC ಐಷಾರಾಮಿ ಎಸ್‌ಯುವಿ ಮನೆಗೆ ತಂದ ನಟಿ!

ಬಾಲಿವುಡ್ ಸಿನಿಮಾಗಳಲ್ಲಿ ತಮ್ಮ ವಿಭಿನ್ನ ಪಾತ್ರಗಳಿಂದ ಜನಪ್ರಿಯತೆ ಪಡೆದಿರುವ ನಟಿ ನಿಕಿತಾ ದತ್ತಾ, ಹೊಸ ಜೆನ್ Mercedes-Benz GLC ಐಷಾರಾಮಿ SUV ಅನ್ನು ಖರೀದಿಸಿದ್ದಾರೆ. ಮುಂಬೈನ ಡೀಲರ್‌ಶಿಪ್‌ವೊಂದರಲ್ಲಿ ನಟಿ ತಮ್ಮ ಹೊಸ ದುಬಾರಿ ಕಾರನ್ನು ಕುಟುಂಬದೊಂದಿಗೆ ಡೆಲಿವರಿ ಪಡೆದುಕೊಂಡಿದ್ದು, ಅದರ ಚಿತ್ರಗಳನ್ನು ಡೀಲರ್‌ಶಿಪ್‌ನವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ನಟಿ ನಿಕಿತಾ ದತ್ತಾ ಬಹುಭಾಷಾ ನಟಿಯಾಗಿದ್ದು, ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಡಾಂಗೆ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವರು 2022 ರಲ್ಲಿ ಬಿಡುಗಡೆಯಾದ 'ರಾಕೆಟ್ ಗ್ಯಾಂಗ್' ನಲ್ಲಿ ನಟಿಸಿ ಮಿಂಚಿದ್ದರು. ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಮರಾಠಿ ಚಲನಚಿತ್ರ ಘರತ್ ಗಣಪತಿ, ಜ್ಯುವೆಲ್ ಥೀಫ್ ಮತ್ತು ಗುಳೆ ಬಕಾವಲಿ ಸಿನಿಮಾದಲ್ಲಿ ಸದ್ಯ ಬಿಸಿಯಾಗಿದ್ದಾರೆ. ಇನ್ನು ಅವರು ಇತ್ತೀಚೆಗೆ ಖರೀದಿಸಿದ ಹೊಸ ಕಾರಿನ ವಿಷಯಕ್ಕೆ ಬಂದರೆ, ಇದು ಇತ್ತೀಚಿನ ಪೀಳಿಗೆಯ Mercedes - Benz GLC ಆಗಿದ್ದು, ಕಳೆದ ವರ್ಷ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

actress-nikita-dutta-takes-delivery-of-mercedes-benz-glc-luxury-suv

ನಟಿ ನಿಕಿತಾ ದತ್ತಾ GLC ಯಲ್ಲಿ ಸಂಪೂರ್ಣ ಕಪ್ಪು ಬಣ್ಣದ ಕಾರನ್ನು ಆಯ್ಕೆ ಮಾಡಿದ್ದಾರೆ. Mercedes-Benz GLC ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಆದರೆ ನಿಕಿತಾ ದತ್ತಾ ಯಾವ ಆವೃತ್ತಿಯನ್ನು ಆಯ್ಕೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ಐಷಾರಾಮಿ ಎಸ್‌ಯುವಿ ಬೆಲೆಗಳು ರೂ. 74.45 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.

ಇದರ ಆನ್‌ರೋಡ್ ಬೆಲೆಯು ರಾಜ್ಯಗಳನ್ನು ಆಧರಿಸಿ ಅಂದಾಜು ಒಂದು ಕೋಟಿ ರೂ. ಮೀರಬಹುದು. ಐಷಾರಾಮಿ GLC 300 ವೇರಿಯೆಂಟ್ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 254 bhp ಪವರ್ ಮತ್ತು 400 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಆದರೆ ಇದರಲ್ಲಿ ಹೆಚ್ಚು ಜನಪ್ರಿಯತೆ ಪಡೆದ GLC 220d 2.0-ಲೀಟರ್ ಡೀಸೆಲ್‌ನೊಂದಿಗೆ 194 bhp ಪವರ್ ಹಾಗೂ 440 ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.

actress-nikita-dutta-takes-delivery-of-mercedes-benz-glc-luxury-suv

ಮೇಲಿನ ಎರಡೂ ಎಂಜಿನ್‌ಗಳು 48 - ವೋಲ್ಟ್ ಮೈಲ್ಡ್ - ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಸಲ್ಪಟ್ಟಿವೆ, ಇದು ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಅನ್ನು ಹೊಂದಿದೆ. ಹಾಗಾಗಿ ಹೆಚ್ಚುವರಿ 22.6 bhp ಪವರ್ ಮತ್ತು 200 Nm ಪೀಕ್ ಟಾರ್ಕ್ ಅನ್ನು ಪುಷ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 4MATIC ಆಲ್ ವೀಲ್ ಡ್ರೈವ್ ಘಟಕದ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಕಳುಹಿಸುವ 9 - ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎಂಜಿನ್‌ಗೆ ಜೋಡಿಸಲಾಗಿದೆ. ಈ ಎಲ್ಲಾ ವಿಶೇಷತೆಗಳಿಂದ Mercedes Benz ಇಂಡಿಯಾದ ಸ್ಥಿರತೆಯಲ್ಲಿ ಹೆಚ್ಚು ಆದ್ಯತೆಯ SUV ಆಗಿದೆ.

ಹೆಚ್ಚುವರಿ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದ್ರೆ ವಿಶಾಲವಾದ ಕ್ಯಾಬಿನ್‌ನೊಂದಿಗೆ ಎಲ್‌ಇಡಿ ಲೈಟಿಂಗ್, ಹೊಸ ಸ್ಲಿಮ್ಮರ್ ಎಲ್‌ಇಡಿ ಟೈಲ್‌ಲೈಟ್‌ಗಳು, 11.9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, MBUX UI, ಏರ್‌ಕ್ರಾಫ್ಟ್ - ಸ್ಟೈಲ್ ಏರ್ ವೆಂಟ್‌ಗಳಂತಹ ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ.

ವೈರ್‌ಲೆಸ್ Apple CarPlay ಮತ್ತು Android Auto, 360-ಡಿಗ್ರಿ ಕ್ಯಾಮೆರಾಗಳು, ಏರ್ ಪ್ಯೂರಿಫೈಯರ್, ಪನಾರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್ ಮತ್ತು ಇನ್ನೂ ಹೆಚ್ಚಿನವುಗಳನ್ನು ಇಂಟೀರಿಯರ್‌ನಲ್ಲಿ ನೋಡಬಹುದು. ಸುರಕ್ಷತೆಗಾಗಿ, ಹೊಸ ಜಿಎಲ್‌ಸಿಯು ವರ್ಚುವಲ್ ಟ್ರಾನ್ಸ್‌ಪರೆಂಟ್ ಬಾನೆಟ್, ಏಳು ಏರ್‌ಬ್ಯಾಗ್‌ಗಳು, ಸುರಕ್ಷಿತ ADAS ಮತ್ತು 20 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಸೇರಿದಂತೆ ಸಕ್ರಿಯ ಮತ್ತು ನಿಷ್ಕ್ರಿಯ ವೈಶಿಷ್ಟ್ಯಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, May 15, 2024, 17:59 [IST]
English summary
Actress nikita dutta takes delivery of mercedes benz glc luxury suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+