ಅಪಘಾತದಲ್ಲಿ ಕನ್ನಡದ ಖ್ಯಾತ ಸೀರಿಯಲ್ ನಟಿ ರಚನಾ ಮತ್ತು ಸಹನಟ ಜೀವನ್ ಸಾವು

Written By:

ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ನೆಲಮಂಗಲ ಸಮೀಪದ ಸೋಲೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಧಾರವಾಹಿಯ ನಟ, ನಟಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಅಪಘಾತದಲ್ಲಿ ಕನ್ನಡದ ಖ್ಯಾತ ಸೀರಿಯಲ್ ನಟಿ ರಚನಾ ಮತ್ತು ಸಹನಟ ಜೀವನ್ ಸಾವು

ಈ ಘಟನೆಯಲ್ಲಿ ಖ್ಯಾತ ಕಿರುತೆರೆ ನಟಿ ರಚನಾ(23) ಹಾಗೂ ಸಹನಟ ಜೀವನ್(25) ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸ್ನೇಹಿತರ ಜತೆ ರಚನಾ ಮತ್ತು ಜೀವನ್‌ ಸಫಾರಿ ಕಾರ್‌ನಲ್ಲಿ ಕುಕ್ಕೆ ಸುಬ್ರಮಣ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂಬ ಮಾಹಿತಿ ಬಂದಿದೆ.

ಅಪಘಾತದಲ್ಲಿ ಕನ್ನಡದ ಖ್ಯಾತ ಸೀರಿಯಲ್ ನಟಿ ರಚನಾ ಮತ್ತು ಸಹನಟ ಜೀವನ್ ಸಾವು

ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ನಟ ಕಾರ್ತಿಕ್ ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆ ಮುಗಿಸಿ ಕುಕ್ಕೆ ಸುಬ್ರಮಣ್ಯ ದೇವರ ದರ್ಶನಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಪಘಾತದಲ್ಲಿ ಕನ್ನಡದ ಖ್ಯಾತ ಸೀರಿಯಲ್ ನಟಿ ರಚನಾ ಮತ್ತು ಸಹನಟ ಜೀವನ್ ಸಾವು

ಮಾಗಡಿ ತಾಲೂಕು ಸೋಲೂರು ಬಳಿ ರಚನಾ ಹಾಗೂ ಜೀವನ್ ಅವರಿದ್ದ ಸಫಾರಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಿಂತಿದ್ದ ಕ್ಯಾಂಟರ್‌‌ಗೆ ಕಾರು ಡಿಕ್ಕಿಯಾದ ಪರಿಣಾಮ ಘಟನೆಯ ತೀವ್ರತೆ ಹೆಚ್ಚಿಗೆ ಎನ್ನಬಹುದು.

Recommended Video - Watch Now!
Tata Tiago XTA AMT Launched In India | In Kannada - DriveSpark ಕನ್ನಡ
ಅಪಘಾತದಲ್ಲಿ ಕನ್ನಡದ ಖ್ಯಾತ ಸೀರಿಯಲ್ ನಟಿ ರಚನಾ ಮತ್ತು ಸಹನಟ ಜೀವನ್ ಸಾವು

ಮೃತ ಕಿರುತೆರೆ ನಟಿ ರಚನಾ ತ್ರಿವೇಣಿ ಸಂಗಮ, ಮಧುಬಾಲ, ಮಹಾನದಿ ಧಾರವಾಹಿಯಲ್ಲಿ ನಟಿಸಿದ್ದು, ಮಹಾನದಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿ ಹೆಚ್ಚು ಖ್ಯಾತಿಗಳಿಸಿದ್ದರು.

ಅಪಘಾತದಲ್ಲಿ ಕನ್ನಡದ ಖ್ಯಾತ ಸೀರಿಯಲ್ ನಟಿ ರಚನಾ ಮತ್ತು ಸಹನಟ ಜೀವನ್ ಸಾವು

ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನೆಡೆದಿದ್ದು, ಸಫಾರಿ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಸಹ ನಟರಾದ ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್ ಮಾತು ಎರಿಕ್ ಅವರಿಗೆ ಗಾಯಗಳಾಗಿದ್ದು, ಎಲ್ಲರೂ ಸಹ ನೆಲಮಂಗಲದ ಹರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂಬ ಮಾಹಿತಿ ಇದೆ.

ಅಪಘಾತದಲ್ಲಿ ಕನ್ನಡದ ಖ್ಯಾತ ಸೀರಿಯಲ್ ನಟಿ ರಚನಾ ಮತ್ತು ಸಹನಟ ಜೀವನ್ ಸಾವು

ಮಧ್ಯರಾತ್ರಿಯಾದ ಕಾರಣ, ನಿದ್ದೆ ಮಂಪರಿನಲ್ಲಿ ಅತಿ ವೇಗವಾಗಿ ಚಲಿಸಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ಸಿಗೆ ಗುದ್ದುವುದನ್ನು ತಪ್ಪಿಸಲು ಎಡಭಾಗಕ್ಕೆ ಕಾರನ್ನು ಚಲಾಯಿಸಿದರ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಗಾಯಾಳುಗಳು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.

Read more on ಅಪಘಾತ accident
English summary
Read in Kannada about TV Actress-Rachana and Jeevan died in Road Accident at Nelamangala. Know more about this accident
Story first published: Thursday, August 24, 2017, 11:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark