ಐಷಾರಾಮಿ ಕಾರು ಬಿಟ್ಟು ಆಟೋ ಸವಾರಿ... ಗುರ್ತಿಸದ ಆಟೋ ಚಾಲಕ... ಹಣ ಕೊಟ್ಟು ಓಡಿದ ನಟಿ
ನಟ-ನಟಿಯರು, ಉದ್ಯಮಿಗಳಷ್ಟೇ ಐಷಾರಾಮಿ ಜೀವನ ನಡೆಸುತ್ತಾರೆ. ಆದ್ರೆ ಕೆಲವೊಮ್ಮೆ ಸೆಲೆಬ್ರಿಟಿಗಳಿಗೆ ಸರಿಯಾದ ಸಮಯಕ್ಕೆ ನಿರ್ದಿಷ್ಟ ಸ್ಥಳವನ್ನು ತಲುಪುವ ಅನಿವಾರ್ಯತೆ ಇರುತ್ತದೆ. ನಗರಗಳಲ್ಲಿನ ಟ್ರಾಫಿಕ್‌ನಿಂದಾಗಿ ಅವರಿಗೆ ತೊಂದರೆಯಾಗುತ್ತಿರುತ್ತದೆ. ಇದೀಗ ಬಹುಭಾಷಾ ನಟಿಯೊಬ್ಬರಿಗೆ ಇಂತಹದ್ದೇ ಸನ್ನಿವೇಶ ಎದುರಾದಂತಿದೆ. ತಮ್ಮ ಐಷಾರಾಮಿ ಕಾರು ಬಿಟ್ಟು ಆಟೋದಲ್ಲಿ ಕಾಣಿಸಿಕೊಂಡಿದ್ದಾರೆ.
ಅವರು ಆಟೋದಲ್ಲಿ ಕಾಣಿಸಿಕೊಂಡ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಅಷ್ಟಕ್ಕು ಈ ನಟಿ ಯಾರೆಂದರೆ.. ರಾಕುಲ್ ಪ್ರೀತ್ ಸಿಂಗ್, ಇವರು ತಮ್ಮ ಸಿನಿಮಾ ಜೀವನ ಆರಂಭಿಸಿದ್ದು ಕೂಡ ನಮ್ಮ ಕನ್ನಡದಲ್ಲೇ, ಗಿಲ್ಲಿ ಸಿನಿಮಾ ಮೂಲಕ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇಂದು ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

ವಿಷಯಕ್ಕೆ ಬಂದರೆ ಮುಂಬೈನಲ್ಲಿ ಆಟೋ ಸವಾರಿ ಮಾಡುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಸಣ್ಣ ಹ್ಯಾಂಡ್‌ಬ್ಯಾಗ್ ಹಿಡಿದು ಮಾಸ್ಕ್ ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಟೋ ಡ್ರೈವರ್‌ಗೆ ಹಣ ಪಾವತಿಸಿ ಕಟ್ಟಡವೊಂದರ ಗೇಟ್ ಒಳಗೆ ರಕುಲ್ ಪ್ರೀತ್ ಸಿಂಗ್ ಆತುರವಾಗಿ ಒಳಗೆ ಹೋಗುತ್ತಿರುವುದನ್ನು ಕಾಣಬಹುದು.
ಬಳಿಕ ಅದೇ ದಿನ ಅದೇ ವಸ್ತ್ರಗಳನ್ನು ಧರಿಸಿ ಈವೆಂಟ್‌ವೊಂದರಲ್ಲಿ ರಕುಲ್ ಪ್ರೀತ್ ಸಿಂಗ್ ಮತ್ತು ಅವರ ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ ಅವರೊಂದಿಗೆ 'ತೇರಿ ಬಾಟನ್ ಮೈನ್ ಐಸಾ ಉಲ್ಜಾ ಜಿಯಾ' ಸಿನಿಮಾದ ಸ್ಪೆಷಲ್ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಕುಲ್ ಪ್ರೀತ್ ಸಿಂಗ್ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ವರದಿಯ ಪ್ರಕಾರ, ನಟ ಜಾಕಿ ಭಗ್ನಾನಿ ಅವರನ್ನು ಫೆಬ್ರವರಿ 22 ರಂದು ಮದುವೆಯಾಗಲಿದ್ದಾರೆ.

ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಜೋಡಿಯು ಗೋವಾದಲ್ಲಿ ಮದುವೆಯಾಗುವ ಸಾಧ್ಯತೆಯಿದೆ. ಇದರ ಮಧ್ಯೆಯೇ, ರಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ಮುಂಬೈನ ಅಜ್ಞಾತ ತಾಣವೊಂದಕ್ಕೆ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ವೈಯಕ್ತಿಕ ವಾಹನಕ್ಕಿಂತ ಸಾರ್ವಜನಿಕ ಸಾರಿಗೆಯನ್ನು ಆಯ್ಕೆ ಮಾಡುವ ನಟಿಯ ವೀಡಿಯೊವನ್ನು ಇದೀಗ Instagram ನಲ್ಲಿ ಹಂಚಿಕೊಳ್ಳಲಾಗಿದೆ.
ಆದರೆ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಐಷಾರಾಮಿ ಕಾರನ್ನು ಬಿಟ್ಟು ಆಟೋದಲ್ಲಿ ಓಡಾಡಲು ಕಾರಣ ತಿಳಿದುಬಂದಿಲ್ಲ. ಏನೋ ಆತುರದಲ್ಲಿದ್ದ ಕಾರಣ ಕ್ಯಾಬ್ ಬುಕ್ ಮಾಡುವ ತಾಳ್ಮೆ ಅವರಲ್ಲಿ ಇಲ್ಲದಂತಿದೆ. ಹಾಗಾಗಿ ಮಾಸ್ಕ್ ಧರಿಸಿ ರಸ್ತೆಗೆ ಬಂದು ಆಟೋ ಹಿಡಿದಿದ್ದಾರೆ. ಆಟೋ ಇಳಿದ ಕೂಡಲೇ ಚಾಲಕನಿಗೆ ಹಣ ಪಾವತಿಸಿ ಅಲ್ಲಿಂದ ಆತುರಾತುರವಾಗಿ ಒಳೆಗೆ ಹೋಗಿದ್ದಾರೆ.

ಈ ಹಿಂದೆ ಮುಂಬೈನ ಟ್ರಾಫಿಕ್‌ಗೆ ಬಳಲಿ ಬೆಂಡಾದ ಪ್ರಸಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಕೂಡ ತಮ್ಮ ಐಷಾರಾಮಿ ಕಾರುಗಳನ್ನು ತೊರೆದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಮೆಟ್ರೋದಲ್ಲಿ ಅಕ್ಷಯ್ ಕುಮಾರ್ ಪ್ರಯಾಣ ಮಾಡುವಾಗ ಅಲ್ಲಿದ್ದ ಇತರ ಪ್ರಯಾಣಿಕರು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
ಹೀಗೆ ಸೆಲೆಬ್ರಿಟಿಗಳು ಕೂಡ ಕೆಲವು ಅನಿವಾರ್ಯ ಪರಿಸ್ಥಿತಿಗಳಲ್ಲಿ ಸಾಮಾನ್ಯರಂತೆ ಓಡಾಡುವ ಪರಿಸ್ಥಿತಿಯಿದೆ. ಮುಖ್ಯ ಕಾರಣ ಟ್ರಾಫಿಕ್ ಜಾಮ್ ಆಗಿದ್ದು, ಅದರಲ್ಲೂ ಮುಂಬೈ ಟ್ರಾಫಿಕ್‌ನಿಂದ ಈ ಹಿಂದೆ ಅಮಿತಾಬ್ ಬಚ್ಚನ್ ಅವರು ಕೂಡ ಬೈಕ್ ಸವಾರನಿಂದ ಲಿಫ್ಟ್ ಪಡೆದ ಉದಾಹರಣೆ ಕೂಡ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications