ಸ್ಟಾರ್ ನಟಿಗೆ 3.5 ಕೋಟಿಯ ಕಾರು ಡೆಲಿವರಿ: ಅಂದಿನ ಸ್ಯಾಂಡಲ್‌ವುಡ್ ಹುಡುಗಿ, ಇಂದು ಬಾಲಿವುಡ್ ಬೆಡಗಿ
ಸಾಮಾನ್ಯವಾಗಿ ನಾವೆಲ್ಲಾ ಕಾರು ಖರೀದಿಸಬೇಕಾದ್ರೆ ಆ ನಿರ್ದಿಷ್ಟ ಕಾರಿನ ಬಗ್ಗೆ ತಿಳಿಯಲು ಶೋರೂಂಗೆ ಭೇಟಿ ನೀಡಿ ಅದರ ಬಗ್ಗೆ ಮಾಹಿತಿ ಪಡೆಯುತ್ತೇವೆ. ಹಾಗೆಯೇ ಟೆಸ್ಟ್ ಡ್ರೈವ್ ಮಾಡಿ, ಇಷ್ಟವಾದ್ರೆ ಕಾರನ್ನು ಬುಕ್ ಮಾಡುತ್ತೇವೆ. ನಂತರ ಡೆಲಿವರಿ ಪಡೆಯುತ್ತೇವೆ. ಆದ್ರೆ ಐಷಾರಾಮಿ ಕಾರುಗಳ ಡೆಲಿವರಿ ಹಾಗಲ್ಲ.
ನೀವು ಕೋಟಿಗಟ್ಟಲೆ ಬೆಲೆಬಾಳುವ ದುಬಾರಿ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ವಿತರಣೆಗೆ ಬಂದಾಗ ನಿಮಗೆ ಹಲವಾರು ಆಯ್ಕೆಗಳಿವೆ. ಎಲ್ಲಾ ದಾಖಲೆಗಳನ್ನು ಪೂರ್ಣಗೊಳಿಸಲು ನೀವು ಡೀಲರ್‌ಶಿಪ್‌ಗೆ ಭೇಟಿ ನೀಡಬೇಕಾಗಿಲ್ಲ. ಇತ್ತೀಚೆಗೆ ದುಬಾರಿ ಕಾರನ್ನು ಡೆಲಿವರಿ ಪಡೆದ ಸ್ಟಾರ್ ನಟಿಯ ವಿಡಿಯೋ ಇದನ್ನು ತೋರಿಸಿಕೊಟ್ಟಿದೆ. ಈ ನಟಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದು, ನಮ್ಮ ಸ್ಯಾಂಡಲ್‌ವುಡ್‌ನಲ್ಲಿ.

ಈಕೆ ಮತ್ಯಾರು ಅಲ್ಲ ರಕುಲ್ ಪ್ರೀತ್ ಸಿಂಗ್, ಇವರು 2009 ರಲ್ಲಿ ತೆರೆಕಂಡ 'ಗಿಲ್ಲಿ' ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು. ಬಹುಭಾಷಾ ನಟಿಯಾಗಿ ಗುರ್ತಿಸಿಕೊಂಡು ಬಾಲಿವುಡ್‌ನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ರಕುಲ್ ಪ್ರೀತ್ ಇತ್ತೀಚೆಗೆ ಭಾರತದಲ್ಲಿನ ಸೆಲೆಬ್ರಿಟಿಗಳಲ್ಲಿ ಹೆಚ್ಚು ಜನಪ್ರಿಯವಾದ Mercedes-Maybach GLS600 SUV ಯನ್ನು ಡೆಲಿವರಿ ಪಡೆದು ಸದ್ದು ಮಾಡಿದ್ದಾರೆ.
ಸೆಲೆಬ್ರಿಟಿಗಳಿಗೆ ಇಂತಹ ದುಬಾರಿ ಕಾರುಗಳನ್ನು ಹೇಗೆ ಡೆಲಿವರಿ ನೀಡಲಾಗುತ್ತದೆ ಎಂಬುದರ ಕುರಿತ ವಿಡಿಯೋ ಈಗ ವೈರಲ್ ಆಗಿದೆ. ನಟಿ ರಾಕುಲ್ ಪ್ರೀತ್ ಸಿಂಗ್ ನಿವಾಸದ ಮುಂದೆ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಬಹುಕೋಟಿ ವೆಚ್ಚದ ಈ ಸೂಪರ್ ಐಷಾರಾಮಿ ಎಸ್‌ಯುವಿ ಖರೀದಿಸಿದ ಬಿ-ಟೌನ್‌ನ ಇತ್ತೀಚಿನ ಸೆಲೆಬ್ರಿಟಿಯಾಗಿದ್ದಾರೆ. ಈ ವೀಡಿಯೊವನ್ನು ಕಾರ್ಸ್ ಫಾರ್ ಯೂ ತಮ್ಮ YouTube ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಹಲವಾರು ಐಷಾರಾಮಿ ಕಾರ್ ಬ್ರಾಂಡ್‌ಗಳು ತಮ್ಮ ಗ್ರಾಹಕರಿಗೆ ತುಂಬಾ ಕಾಳಜಿ ವಹಿಸಿ ಡೆಲಿವರಿಯನ್ನು ನೀಡುತ್ತವೆ. ಇದು ಕೇವಲ ಸೆಲೆಬ್ರಿಟಿಗಳಿಗೆ ಸೀಮಿತವಾಗಿಲ್ಲ, ವಾಹನವನ್ನು ಸ್ವೀಕರಿಸುವ ಯಾವುದೇ ವ್ಯಕ್ತಿಗಾಗಲಿ ಹೀಗೆಯೇ ಡೆಲಿವರಿ ನೀಡಲಾಗುತ್ತದೆ. ಡೆಲಿವರಿ ನೀಡುವ ಮುನ್ನದವರೆಗೂ ಎಲ್ಲಾ ಜಾಬ್ದಾರಿಯನ್ನು ಕಂಪನಿಯೇ ಹೊತ್ತಿರುವುದರಿಂದ ನಿವಾಸದ ಮುಂದೆ ತಂದು ನಿಲ್ಲಿಸುವರೆಗೆ ತುಂಬಾ ಎಚ್ಚರ ವಹಿಸಲಾಗುತ್ತದೆ.
ಮನೆಗೆ ಫ್ರೀ ಹಾಗೂ ಸೇಫ್ ಡೆಲಿವರಿ ನೀಡುವುದರಿಂದ ಬಹುತೇಕ ಸ್ಟಾರ್ ಸೆಲೆಬ್ರಿಟಿಗಳು ಡೀಲರ್‌ಶಿಪ್‌ಗೆ ಭೇಟಿ ನೀಡುವ ಬದಲು SUV ಅನ್ನು ತಮ್ಮ ಮನೆಗೆ ತರಿಸಿಕೊಳ್ಳುತ್ತಾರೆ. ಇನ್ನು ರಕುಲ್ ಪ್ರೀತ್ ಅವರ SUV ಕುರಿತು ಹೇಳುವುದಾದರೆ ಆಕರ್ಷಕ ಕಪ್ಪು ಬಣ್ಣದ ಮರ್ಸಿಡಿಸ್-ಮೇಬ್ಯಾಕ್ ಖರೀದಿಸಿದ್ದಾರೆ. ಈ ಕಾರು ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.

ದೀಪಿಕಾ ಪಡುಕೋಣೆ, ಅಜಯ್ ದೇವಗನ್, ಆಯುಷ್ಮಾನ್ ಖುರಾನಾ, ಆದಿತ್ಯ ರಾಯ್ ಕಪೂರ್, ಅರ್ಜುನ್ ಕಪೂರ್, ಕೃತಿ ಸನನ್, ರಣವೀರ್ ಸಿಂಗ್, ಶಿಲ್ಪಾ ಶೆಟ್ಟಿ, ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಮತ್ತು ತೆಲುಗು ಚಲನಚಿತ್ರ ನಟ ರಾಮ್ ಚರಣ್ ಅವರಂತಹ ನಟರೆಲ್ಲರೂ ತಮ್ಮ ಗ್ಯಾರೇಜ್‌ನಲ್ಲಿ GLS 600 ಅನ್ನು ಹೊಂದಿದ್ದಾರೆ.
Mercedes- Maybach GLS600 4.0-ಲೀಟರ್ V8 ಎಂಜಿನ್‌ನಿಂದ ಚಾಲಿತವಾಗಿದೆ, ಜೊತೆಗೆ 48V ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಹೊಂದಿದೆ. ಎಂಜಿನ್ 557 ಪಿಎಸ್ ಪವರ್ ಮತ್ತು 730 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೈಬ್ರಿಡ್ ವ್ಯವಸ್ಥೆಯು ಬೇಡಿಕೆಯ ಮೇಲೆ ಹೆಚ್ಚುವರಿ 22 PS ಪವರ್ ಮತ್ತು 250 Nm ಟಾರ್ಕ್ ಅನ್ನು ಒದಗಿಸುತ್ತದೆ.
ಈ Mercedes- Maybach GLS600 ಎಸ್‌ಯುವಿಯ 9- ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ನೀಡುತ್ತದೆ. ಹೊಚ್ಚಹೊಸ Maybach GLS600 SUV ಬೆಲೆ ಸುಮಾರು 2.92 ಕೋಟಿ ರೂ. ಇದ್ದು, ಇದು ಎಕ್ಸ್ ಶೋರೂಂ ಬೆಲೆಯಾಗಿದ್ದರೆ, ಆನ್ ರೋಡ್ ಬೆಲೆಯು ನಮ್ಮ ಪ್ರಕಾರ ಸುಮಾರು 3.5 ಕೋಟಿ ರೂ. ಇರಬಹುದಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications