ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ಬಹುಭಾಷಾ ನಟಿ ರಂಭಾ ಹಾಗೂ ಅವರ ಮಕ್ಕಳು ಅಪಘಾತಕ್ಕೀಡಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗದಿದ್ದರೂ ರಂಭಾ ಅವರ ಕಿರಿಯ ಮಗಳು ಸಶಾ ಸಣ್ಣಪುಟ್ಟ ಗಾಯಗಳಿಂದಾಗಿ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ಸದ್ಯ ಕೆನಡಾ ನಿವಾಸಿಯಾಗಿರುವ ನಟಿ ಅಪಘಾತದ ವಿವರಗಳನ್ನು ಸ್ವತಃ ಹಂಚಿಕೊಂಡಿದ್ದಾರೆ. ಅವರು ತಮ್ಮ ಟೆಸ್ಲಾ ಮಾಡೆಲ್ X ನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ಸಂಭವಿಸಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ಟೆಸ್ಲಾ ಕಾರುಗಳನ್ನು ಸುರಕ್ಷಿತ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ರಂಭಾ ಅವರು ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ವಿವರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಟೆಸ್ಲಾ ಮಾಡೆಲ್ X ನಲ್ಲಿ ತನ್ನ ಇಬ್ಬರು ಮಕ್ಕಳು ಮತ್ತು ಅವರ ದಾದಿಯೊಂದಿಗೆ ಪ್ರಯಾಣಿಸುತ್ತಿದ್ದರು. ತಮ್ಮ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆತರುವಾಗ ಅಪರಿಚಿತ ವಾಹನವು ರಂಭಾ ಅವರ ಟೆಸ್ಲಾ ಮಾಡೆಲ್ ಎಕ್ಸ್ ಅನ್ನು ಜಂಕ್ಷನ್‌ನಲ್ಲಿ ಡಿಕ್ಕಿ ಹೊಡೆದಿದೆ.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ಈ ವೇಳೆ ಕಾರಿನಲ್ಲಿದ್ದ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ಆದರೆ ಅವರ ಕಿರಿಯ ಮಗಳು ಸಶಾಗೆ ಗಂಭೀರ ಗಾಯಗಳಾದ್ದರಿಂದ ಪ್ರಸ್ತುತ ಆಸ್ಪತ್ರೆಯಲ್ಲಿದ್ದಾರೆ. ಈ ಕುರಿತ ಫೋಟಗಳನ್ನು ಹಂಚಿಕೊಂಡಿರುವ ಅವರು ತಮ್ಮ ಮಗಳು ಚೇತರಿಸಿಕೊಳ್ಳಲು ಎಲ್ಲರೂ ಪ್ರಾರ್ಥಿಸುವಂತೆ ಕೋರಿದ್ದಾರೆ.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

"ನಾನು ಮಕ್ಕಳೊಂದಿಗೆ ಮತ್ತು ನನ್ನ ದಾದಿಯೊಂದಿಗೆ" ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತವಾಗಿದ್ದೇವೆ. ನನ್ನ ಪುಟ್ಟ ಸಾಶಾ ಇನ್ನೂ ಆಸ್ಪತ್ರೆಯಲ್ಲಿದ್ದಾಳೆ, ಕೆಟ್ಟ ದಿನ ಕೆಟ್ಟ ಸಮಯ... ದಯವಿಟ್ಟು ನಮಗಾಗಿ ಪ್ರಾರ್ಥಿಸಿ, ನಿಮ್ಮ ಪ್ರಾರ್ಥನೆಗಳು ಬಹಳಷ್ಟು ಅರ್ಥವನ್ನು ನೀಡುತ್ತವೆ" ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ರಂಭಾ ಅವರು ಹಂಚಿಕೊಂಡ ಚಿತ್ರಗಳು ಟೆಸ್ಲಾದ ಹಾನಿಗೊಳಗಾದ ಬಾಗಿಲನ್ನು ತೋರಿಸುತ್ತವೆ. ಟೆಸ್ಲಾ ಮಾಡೆಲ್ ಎಕ್ಸ್‌ನ ಕರ್ಟನ್ ಮತ್ತು ಸೈಡ್ ಏರ್‌ಬ್ಯಾಗ್‌ಗಳು ಪ್ರಯಾಣಿಕರನ್ನು ಅಪಘಾತದಿಂದ ರಕ್ಷಿಸಲು ಸಂಪೂರ್ಣವಾಗಿ ಕೆಲಸ ಮಾಡಿರುವುದನ್ನು ನಾವು ನೋಡಬಹುದು.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ಟೆಸ್ಲಾ ಮಾಡೆಲ್ X 5 ಸ್ಟಾರ್ ರೇಟಿಂಗ್

ಟೆಸ್ಲಾ ಮಾಡೆಲ್ ಎಕ್ಸ್ ಪ್ರಪಂಚದಾದ್ಯಂತ ವಿವಿಧ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಭಾರೀ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಇದು ಯುಎಸ್‌ಎ ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತೆ ಆಡಳಿತ (NHTSA) ಮತ್ತು ಯುರೋ N-CAP ನಿಂದ ಪರಿಪೂರ್ಣ 5-ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ಈ ಎರಡೂ ಕ್ರ್ಯಾಶ್ ಟೆಸ್ಟ್ ಏಜೆನ್ಸಿಗಳು ಅತ್ಯಂತ ಕಷ್ಟಕರವಾದ ರೇಟಿಂಗ್ ಕಾರ್ಯವಿಧಾನಗಳನ್ನು ಹೊಂದಿವೆ, ಇದು ಗ್ಲೋಬಲ್ N-CAP ನಂತಹ ಏಜೆನ್ಸಿಗಳ ಮಾನದಂಡಗಳಿಗಿಂತ ಹೆಚ್ಚಿನದಾಗಿದೆ. ಅಪಘಾತಗಳ ಸಂದರ್ಭಗಳಲ್ಲಿ ಕಾರಿನಲ್ಲಿನಲ್ಲಿರುವ ಏರ್‌ಬ್ಯಾಗ್ ಸೌಲಭ್ಯವು ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಎಂಬುವುದನ್ನು ಕ್ರ್ಯಾಶ್ ಟೆಸ್ಟ್‌ನಲ್ಲಿ ಅಳೆಯಲಾಗುತ್ತದೆ.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ಇದರಲ್ಲಿ ಟೆಸ್ಲಾ ಮಾಡೆಲ್ ಎಕ್ಸ್ ಸಂಪೂರ್ಣ ಸುರಕ್ಷೆತೆ ನೀಡುವ ಸಾಮರ್ಥ್ಯವನ್ನು ತೋರಿದೆ. ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ಈ ಮೂಲಕ ಖರೀದಿಗೆ ಉತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿರುವ ಟೆಸ್ಲಾ ಮಾಡೆಲ್ ಎಕ್ಸ್, ಸುರಕ್ಷೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬುವುದು ಖಾತ್ರಿಯಾಗಿದೆ.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ಟೆಸ್ಲಾ ವಿರುದ್ಧ ಭಾರತೀಯ ಗ್ರಾಹಕರ ಅಸಮಾಧಾನ

2016 ರಲ್ಲಿ ಟೆಸ್ಲಾ ತನ್ನ ಅಗ್ಗದ ಎಲೆಕ್ಟ್ರಿಕ್ ಕಾರ್ ಟೆಸ್ಲಾ ಮಾಡೆಲ್ 3 ಗಾಗಿ ಭಾರತದಿಂದ ಮತ್ತು ಪ್ರಪಂಚದ ಇತರ ಭಾಗಗಳಿಂದ ಬುಕಿಂಗ್‌ಗಳನ್ನು ಪಡೆದುಕೊಂಡಿತ್ತು. ಆ ಸಮಯದಲ್ಲಿ ಟೆಸ್ಲಾ ಮಾಡೆಲ್ 3 ಗಾಗಿ ಕೇವಲ $ 1000 (ಅಂದಾಜು ರೂ. 60-65 ಸಾವಿರ) ಗೆ ಬುಕಿಂಗ್ ತೆರೆಯಿತು. ಭಾರತದ ಕೆಲವು ಉತ್ಸಾಹಿಗಳು ಟೆಸ್ಲಾ ಮಾಡೆಲ್ 3 ಕಾರನ್ನು ಬುಕ್ ಮಾಡಿದ್ದರು.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ಆದರೆ, ಅಮೆರಿಕದ ಈ ಕಂಪನಿ ಭಾರತೀಯ ಗ್ರಾಹಕರಲ್ಲಿ ನಿರಾಸೆ ಮೂಡಿಸಿದೆ. ಭಾರತದಲ್ಲಿ ಟೆಸ್ಲಾ ಕಾರುಗಳ ಬಿಡುಗಡೆ ಅಥವಾ ವಿತರಣೆಯ ಬಗ್ಗೆ ಕಂಪನಿಯು ಇದುವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದರ ಹಿನ್ನೆಲೆಯಲ್ಲಿ ಗ್ರಾಹಕರು ಕಳೆದ ಆರು ವರ್ಷಗಳಿಂದ ಟೆಸ್ಲಾಗೆ ಮರುಪಾವತಿಗಾಗಿ ಪದೇ ಪದೇ ಕೇಳುತ್ತಿದ್ದರೂ ಕಂಪನಿಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ ನಿರಾಸೆಗೊಂಡಿದ್ದಾರೆ.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ಪ್ರಸ್ತುತ ಚೀನಾದಲ್ಲಿ ತಯಾರಾದ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವುದು ಎಂದು ಟೆಸ್ಲಾ ಹೇಳಿದೆ. ಭಾರತಕ್ಕೆ ಆಮದು ಮಾಡಿಕೊಳ್ಳುವ ವಿದೇಶಿ ಕಾರುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವಂತೆ ಸರ್ಕಾರವನ್ನು ಕೇಳಿದೆ. ಇತರ ಕಂಪನಿಗಳಿಗೆ ಅನ್ವಯಿಸುವ ಅದೇ ಪ್ರಯೋಜನಗಳು ಟೆಸ್ಲಾಗೂ ಅನ್ವಯಿಸುತ್ತವೆ. ಈ ವಿಷಯದಲ್ಲಿ ಯಾವುದೇ ವಿಶೇಷ ರಿಯಾಯಿತಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಬಹುಭಾಷಾ ನಟಿ ರಂಭಾ ಅವರ ಕಾರಿಗೆ ಅಪಘಾತ: ಕಿರಿಯ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ...

ವಾಸ್ತವವಾಗಿ ಭಾರತದಲ್ಲಿ ಟೆಸ್ಲಾಗೆ ಯಶಸ್ಸಿನ ಸಾಧ್ಯತೆಗಳು ತುಂಬಾ ಹೆಚ್ಚು. ಆದರೆ ನಮ್ಮ ದೇಶವು ಪ್ರಸ್ತುತ ಅನುಸರಿಸುತ್ತಿರುವ ಆಮದು ಸುಂಕಗಳ ಬಗ್ಗೆ ಟೆಸ್ಲಾಗೆ ಅಸಂತೃಪ್ತಿಯಿದೆ. ಹೀಗಾಗಿ ಇಲ್ಲಿನ ಮಾರುಕಟ್ಟೆಗೆ ತಮ್ಮ ಕಾರುಗಳನ್ನು ಬಿಡುಗಡೆ ಮಾಡುವ ಕುರಿತು ಕಂಪನಿ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.

Article Published On: Wednesday, November 2, 2022, 13:13 [IST]
English summary
Actress Rambhas car accident Younger daughter treated in hospital
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+