ಎವರ್‌ಗ್ರೀನ್ ನಟಿ ರೇಖಾರ ಪರಿಸರ ಪ್ರೇಮ: ದುಬಾರಿ BMW ಎಲೆಕ್ಟ್ರಿಕ್ ಕಾರು ಖರೀದಿ.. ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ?
ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳು ಸಾಮಾನ್ಯರಿಂದ ಹಿಡಿದು ಚಿತ್ರ ನಟ, ನಟಿಯರನ್ನು ಸೆಳೆಯುತ್ತಿವೆ. ಇತ್ತೀಚಿನ ದಿನದಲ್ಲಿ ಬಹುತೇಕ ಸಿನಿಮಾ ಮಂದಿ, ಇವುಗಳತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಎವರ್‌ಗ್ರೀನ್ ನಟಿ ರೇಖಾ ಕೂಡ ಹೊಚ್ಚ ಹೊಸ ಐಷಾರಾಮಿ ಬಿಎಂಡಬ್ಲ್ಯೂ ಐ7 (BMW i7) ಎಲೆಕ್ಟ್ರಿಕ್ ಸೆಡಾನ್ ಖರೀದಿಸಿದ್ದಾರೆ.
ನಟಿ ರೇಖಾ, ನೂತನ ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋವನ್ನು 'ಕಾರ್ಸ್ ಫಾರ್ ಯೂ' ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕಾರ್ಯಕ್ರಮವೊಂದಕ್ಕೆ ಬಂದಾಗ, ಛಾಯಾಗ್ರಾಹಕರ ಫೋಟೋಗಳಿಗೆ ಪೋಸ್ ನೀಡುವುದನ್ನು ಸಹ ಇಲ್ಲಿ ಕಾಣಬಹುದು. ಈ ಬಿಎಂಡಬ್ಲ್ಯೂ ಐ7 ಕಾರಿನ ರಿಜಿಸ್ಟರ್ ಪ್ಲೇಟ್ ಇಲ್ಲದಿರುವುದರಿಂದ ಹೊಸ ಕಾರು ಎಂದು ಸುಲಭವಾಗಿ ಹೇಳಬಹುದು.

ರೇಖಾ ಅವರು ಖರೀದಿಸಿರುವ ಬಿಎಂಡಬ್ಲ್ಯೂ ಐ7 (BMW i7) ಬಗ್ಗೆ ಹೇಳುವುದಾದರೆ, ಈ ಸೆಡಾನ್ ಕೊಂಚ ದುಬಾರಿ ಬೆಲೆಯನ್ನು ಹೊಂದಿದೆ. ರೂ.2.03 ಕೋಟಿ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ ಆಕರ್ಷಕ ವೈಶಿಷ್ಟ್ಯ, ವಿನ್ಯಾಸ ಹಾಗೂ ಬಣ್ಣವನ್ನು ಪಡೆದಿರುವುದರಿಂದ ಹೆಚ್ಚಿನ ಮಂದಿಗೆ ಇಷ್ಟವಾಗುತ್ತದೆ.
ಈ ಕಾರು, 101.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 625 km ರೇಂಜ್ ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಡುಯಲ್ ಎಲೆಕ್ಟ್ರಿಕ್ ಮೋಟಾರ್, 544 PS ಗರಿಷ್ಠ ಪವರ್ ಹಾಗೂ 745 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.
ಬಿಎಂಡಬ್ಲ್ಯೂ ಐ7 ಕಾರಿನ ಚಾರ್ಜಿಂಗ್ ಆಯ್ಕೆ ಬಗ್ಗೆ ಮಾತನಾಡುವುದಾದರೆ, ಇದು ಎರಡು ಚಾರ್ಜರ್ ಆಯ್ಕೆಯಲ್ಲಿ ಲಭ್ಯವಿದೆ. 195 kW ಚಾರ್ಜರ್ ಬಳಕೆ ಮಾಡಿದರೆ, ಇದರ ಶೇಕಡ 10 ರಿಂದ 80% ಬ್ಯಾಟರಿ ಪ್ಯಾಕ್ ಚಾರ್ಜ್ ಆಗಲು 34 ನಿಮಿಷ ಸಾಕು. ಮತ್ತೊಂದು, 22 kW ವಾಲ್‌ಬಾಕ್ಸ್ ಚಾರ್ಜರ್ ಆಯ್ಕೆಯಲ್ಲಿ 5 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ.
ನೂತನ ಬಿಎಂಡಬ್ಲ್ಯೂ ಐ7 ಎಲೆಕ್ಟ್ರಿಕ್ ಕಾರು, ಬೆಲೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. 14.9 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹಿಂಭಾಗದ ಪ್ರಯಾಣಿಕರಿಗಾಗಿ 31.3 - ಇಂಚಿನ 8ಕೆ ಟಚ್‌ಸ್ಕ್ರೀನ್ ಡಿಸ್ಪ್ಲೇ, 12.3 - ಇಂಚಿನ ಕರ್ವ್ಡ್ ಡಿಜಿಟಲ್ ಕಾಕ್‌ಪಿಟ್, ಮಸಾಜ್ ಕಾರ್ಯಗತಗೊಂಡಿರುವ ಫ್ರಂಟ್ ಹಾಗೂ ರೇರ್ ಸೀಟ್ ಹಾಗೂ ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ.
ಇದಿಷ್ಟೇ ಅಲ್ಲದೆ, ನಟಿ ರೇಖಾ ಟಾಟಾ ನೆಕ್ಸಾನ್, ಬಿಎಂಡಬ್ಲ್ಯು 3 ಸಿರೀಸ್, ಲ್ಯಾಂಡ್ ರೋವರ್ ಡಿಸ್ಕವರಿ ಮುಂತಾದ ಕಾರುಗಳ ಮಾಲೀಕರೂ ಆಗಿದ್ದಾರೆ. ನೆಕ್ಸಾನ್ ಕಾರಿನ ಬಗ್ಗೆ ಹೇಳುವುದಾದರೆ, ಸದ್ಯ, ರೂ.8.10 ಲಕ್ಷದಿಂದ ರೂ.13 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 5 ಆಸನ ಆಯ್ಕೆ ವ್ಯವಸ್ಥೆ ಹೊಂದಿರುವ ನೆಕ್ಸಾನ್, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸೇರಿದಂತೆ ಹತ್ತಾರು ಫೀಚರ್ ಒಳಗೊಂಡಿದೆ.
ಬಿಎಂಡಬ್ಲ್ಯೂ 3 ಸೀರಿಯಸ್ (BMW 3 Series) ಕಾರು, ರೂ.71.50 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 3 - ಲೀಟರ್ 6 ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 387 PS ಗರಿಷ್ಠ ಪವರ್ ಹಾಗೂ 500 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. 13.02 kmpl ಮೈಲೇಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications