Just In
- 10 hrs ago
ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...
- 12 hrs ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 14 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 1 day ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
Don't Miss!
- Sports
ಐರ್ಲೆಂಡ್-ಭಾರತ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ: ಟಾಸ್ ಗೆದ್ದಿರುವ ಟೀಂ ಇಂಡಿಯಾ
- Movies
ಅಮ್ಮನಿಂದಲೇ ಮಗಳಿಗೆ ಮಹಾ ಮೋಸ!
- News
ಮಹಾ ಬಂಡಾಯ: ಸುಪ್ರೀಂಕೋರ್ಟ್ ಅಂಗಳಕ್ಕೆ 16 ಶಾಸಕರ ಅನರ್ಹತೆ ಚೆಂಡು!
- Finance
Gold Rate Today: ನಿಮ್ಮ ನಗರದಲ್ಲಿ ಜೂ.26ರಂದು ಚಿನ್ನದ ಬೆಲೆ ಎಷ್ಟಿದೆ ನೋಡಿ
- Technology
ಬೇರೆಯವರು ನಿಮ್ಮ ನೆಟ್ಫ್ಲಿಕ್ಸ್ ಖಾತೆ ಬಳಸುತ್ತಿದ್ದರೆ ತಿಳಿಯಲು ಹೀಗೆ ಮಾಡಿ?
- Education
PGCIL Recruitment 2022 : 32 ಡೆಪ್ಯುಟಿ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ನಟಿ ಸಮಂತಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..
ಸಿನಿಮಾ ರಂಗದಲ್ಲಿ ನಟರು ಮಾತ್ರವಲ್ಲದೇ ನಟಿಯರಿಗೂ ಕೂಡ ಕಾರು ಕ್ರೇಜ್ ಹೊಂದಿದ್ದಾರೆ. ಸಿನಿಮಾ ನಟಿಯರು ಕೂಡ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದೇ ರೀತಿ ಜನಪ್ರಿಯ ನಟಿ ಸಮಂತಾ ಕೂಡ ಕಾರು ಕ್ರೇಜ್ ಹೊಂದಿದ್ದಾರೆ.

ನಟಿ ಸಮಂತಾ ತೆಲುಗು ಮತ್ತು ತಮಿಳು ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. ನಟಿ ಸಮಂತಾ ಅವರು ವಿಚ್ಛೇದನದ ಬಳಿಕ ಚಿತ್ರರಂಗದಲ್ಲಿ ಹೆಚ್ಚು ಮಿಂಚುತ್ತಿದ್ದಾರೆ. ಸಮಂತಾಗೆ ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಬೇಡಿಕೆ ಹೆಚ್ಚುತ್ತಿದೆ. ಅವರು ಈಗ ಬಾಲಿವುಡ್ನಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರೋಕೆ ಪ್ರಯತ್ನಿಸುತ್ತಿದ್ದಾರೆ. ಸಮಂತಾಗೆ ‘ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸೀರಿಸ್ ಬಳಿಕ ಬೇಡಿಕೆ ಹೆಚ್ಚಿದೆ. ಆ ಬಳಿಕ ಬಾಲಿವುಡ್ ಕಡೆಯಿಂದ ಹೆಚ್ಚೆಚ್ಚು ಆಫರ್ ಬರುತ್ತಿದೆ. ಹೀಗಾಗಿ, ಅತ್ತ ಕಡೆ ಅವರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

'ಪುಷ್ಪ' ಸಿನಿಮಾದಲ್ಲಿ ಸಮಂತಾ ಅವರು ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಿ ಹೆಚ್ಚು ಸುದ್ದಿಯಾಗಿದ್ದರು. ಇನ್ನು ಇತ್ತೀಚೆಗೆ ಸಮಂತಾ ಬಾಲಿವುಡ್ನಲ್ಲಿ ನಡೆಯುವ ಹಲವು ಅವಾರ್ಡ್ ಕಾರ್ಯಕ್ರಮ ಕೆಲ ಸಿನಿಮಾ ಕಾರ್ಯಕ್ರಮಗಳಲ್ಲಿ ಸಮಂತಾ ಪಾಲ್ಗೊಳ್ಳುತ್ತಿದ್ದಾರೆ. ಈ ಜನಪ್ರಿಯ ನಟಿಯ ಬಳಿ ಹಲವಾರು ಐಷಾರಾಮಿ ಕಾರುಗಳಿವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬಿಎಂಡಬ್ಲ್ಯು 7 ಸೀರಿಸ್
ಬಿಎಂಡಬ್ಲ್ಯು 7 ಸೀರಿಸ್ ಕಾರಿನಲ್ಲಿ 3.0L ಟರ್ಬೋಚಾರ್ಜ್ಡ್ ಐ-6 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 335 ಬಿಹೆಚ್ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬಿಎಂಡಬ್ಲ್ಯು 7 ಸೀರಿಸ್ ಕಾರು 5.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು 250 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಫ್ಯಾಮಿಲಿ ಮ್ಯಾನ್ 2 ನಟಿ ಈ ಕಾರಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇದರ ಬೆಲೆ ರೂ.1.42 ಕೋಟಿಯಾಗಿದೆ.

ಹೊಸ ಸೆಡಾನ್ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‍ಲ್ಯಾಂಪ್‍ಗಳ ಜೊತೆಗೆ ದೊಡ್ಡ ಗಾತ್ರದ ಗ್ರಿಲ್ ಹಾಗೂ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‍ಎಲ್‍ಗಳನ್ನು ಹೊಂದಿದೆ. ಬಿಎಂಡಬ್ಲ್ಯು, ಫ್ರಂಟ್ ಬಂಪರ್ ಅನ್ನು ಸಹ ಅಪ್‍ಡೇಟ್‍ಗೊಳಿಸಿದೆ. ಈ ಬಂಪರ್‍ಗಳು ಕ್ರೋಮ್ ಅಸೆಂಟ್ ಹೊಂದಿದ್ದು, ಈ ಸೆಡಾನ್ ಕಾರಿಗೆ ಪ್ರೀಮಿಯಂನೆಸ್ ನೀಡುತ್ತವೆ. ಹೊಸ 7 ಸೀರಿಸ್‍ನ ಸೈಡ್ ಪ್ರೊಫೈಲ್ ಸ್ವಚ್ಛವಾದ ಡಿಸೈನ್ ಹೊಂದಿದೆ. ಸೆಡಾನ್‌ನ ಕೆಳಭಾಗದಲ್ಲಿ ಹಾಗೂ ವಿಂಡೋಗಳಲ್ಲಿ ತೆಳುವಾದ ಕ್ರೋಮ್ ಸ್ಟ್ರಿಪ್‍ಗಳಿವೆ. ಇವು ಕಾರಿನ ಪ್ರೀಮಿಯಂನೆಸ್ ಹೆಚ್ಚಿಸಿವೆ.

ಜಾಗ್ವಾರ್ ಎಕ್ಸ್ಎಫ್
ಈ ಜಾಗ್ವಾರ್ ಎಕ್ಸ್ಎಫ್ ಸೆಡಾನ್ 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯುತ್ತದೆ. ಈ ಎಂಜಿನ್ 247 ಬಿಹೆಚ್ಪಿ ಪವರ್ ಮತ್ತು 365 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಐಷಾರಾಮಿ ಸೆಡಾನ್ ಕೇವಲ 6.5 ಸೆಕೆಂಡ್‌ಗಳಲ್ಲಿ ಶೂನ್ಯದಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಸೆಡಾನ್ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಈ ಜಾಗ್ವಾರ್ ಎಕ್ಸ್ಎಫ್ ಕಾರಿನ ಬೆಲೆಯು ರೂ.70 ಲಕ್ಷಗಳಾಗಿದೆ. ಈ ಕಾರಿನಲ್ಲಿ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‍ಲ್ಯಾಂಪ್‍ಗಳ ಜೊತೆಗೆ ದೊಡ್ಡ ಗಾತ್ರದ ಗ್ರಿಲ್ ಹಾಗೂ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‍ಎಲ್‍ಗಳನ್ನು ಹೊಂದಿದೆ. ಬಿಎಂಡಬ್ಲ್ಯು, ಫ್ರಂಟ್ ಬಂಪರ್ ಅನ್ನು ಸಹ ಅಪ್‍ಡೇಟ್‍ಗೊಳಿಸಿದೆ. ಈ ಬಂಪರ್‍ಗಳು ಕ್ರೋಮ್ ಅಸೆಂಟ್ ಹೊಂದಿದ್ದು, ಈ ಸೆಡಾನ್ ಕಾರಿಗೆ ಪ್ರೀಮಿಯಂನೆಸ್ ನೀಡುತ್ತವೆ. ಹೊಸ 7 ಸೀರಿಸ್‍ನ ಸೈಡ್ ಪ್ರೊಫೈಲ್ ಸ್ವಚ್ಛವಾದ ಡಿಸೈನ್ ಹೊಂದಿದೆ. ಸೆಡಾನ್‌ನ ಕೆಳಭಾಗದಲ್ಲಿ ಹಾಗೂ ವಿಂಡೋಗಳಲ್ಲಿ ತೆಳುವಾದ ಕ್ರೋಮ್ ಸ್ಟ್ರಿಪ್‍ಗಳಿವೆ. ಇವು ಕಾರಿನ ಪ್ರೀಮಿಯಂನೆಸ್ ಹೆಚ್ಚಿಸಿವೆ.

ಆಡಿ ಕ್ಯೂ7
ಈ ಆಡಿ ಕ್ಯೂ7 ದೀಪಿಕಾ ಪಡುಕೋಣೆ, ಬಿಪಾಶಾ ಬಸು ಮತ್ತು ಜಾನ್ ಅಬ್ರಹಾಂ ಅವರಂತಹ ಹಲವಾರು ಸೆಲೆಬ್ರಿಟಿಗಳಲ್ಲಿ ಇದು ಅತ್ಯಂತ ಪ್ರೀತಿಯ ಕಾರುಗಳಲ್ಲಿ ಒಂದಾಗಿದೆ. ಈ ಆಡಿ ಕ್ಯೂ7 ಎಸ್‍ಯುವಿಯಲ್ಲಿ 3.0 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 241.4 ಬಿಹೆಚ್ಪಿ ಪವರ್ ಮತ್ತು 550 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಆಡಿ ಕ್ಯೂ7 ಎಸ್‍ಯುವಿಯಲ್ಲಿ 12 ಕಿ.ಮೀ ,ಮೈಲೇಜ್ ಅನ್ನು ನೀಡುತ್ತದೆ. ಇನ್ನು ಈ ಪ್ರೀಮಿಯಂ ಎಸ್‍ಯುವಿಯು 215 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ಆಡಿ ಕ್ಯೂ7 ಫೇಸ್‌ಲಿಫ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಕ್ಯು ಎಕ್ಸ್5, ಮರ್ಸಿಡಿಸ್ ಬೆಂಝ್ ಜಿಎಲ್ಇ, ವೊಲ್ವೊ ಎಕ್ಸ್‌ಸಿ90 ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ
ನಟಿ ಸಮಂತಾ ಬಳಿ ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ ಎಸ್‌ಯುವಿಯನ್ನು ಹೊಂದಿದ್ದಾರೆ. ಈ ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ ಎಸ್‍ಯುವಿಯು ಹೊಂದಿರುವ ಏಕೈಕ ನಟಿ ಇವರು ಆಗಿದ್ದಾರೆ. ಈ ಕಾರಿನ ಬೆಲೆಯು ಸುಮಾರು ರೂ.2.3 ಕೋಟಿ ಆಗಿದೆ.

ಈ ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ ಎಸ್‍ಯುವಿಯಲ್ಲಿ 5.5-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ ಹೊಂದಿದ್ದು, ಈ ಎಂಜಿನ್ 572 ಬಿಹೆಚ್ಪಿ ಪವರ್ ಮತ್ತು 760 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಸ್‍ಯುವಿಯು 8.0 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಈ ಎಸ್‍ಯುವಿಯು 210 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಪೋರ್ಷೆ ಕೇಮನ್ ಜಿಟಿಎಸ್
ನಟಿ ಸಮಂತಾಗೆ ಐಷಾರಾಮಿ ಕಾರು ಮಾತ್ರವಲ್ಲದೆ ಫ್ಯಾಶನ್ ಸ್ಪೋರ್ಟ್ಸ್ ಕಾರ್ ಕೂಡ ಇಷ್ಟ. ಬಹುಶಃ, ಇದು ಅವರ ಗ್ಯಾರೇಜ್‌ನಲ್ಲಿರುವ ಏಕೈಕ ಸ್ಪೋರ್ಟ್ಸ್ ಕಾರ್ ಆಗಿದೆ. ಈ ಕಾರಿನ ಬೆಲೆಯು ರೂ.1.19 ಕೋಟಿಯಾಗಿದೆ. ಈ ಎಸ್‍ಯುವಿಯಲ್ಲಿ 3.5 ಲೀಟರ್ 6 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 330 ಬಿಹೆಚ್ಪಿ ಪವರ್ ಮತ್ತು 370 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಕಾರು 9-16 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಕಾರಿನಲ್ಲಿ 283 ಕಿ.ಮೀ ಟಾಪ್ ಸ್ಪೀಡ್ ಅನ್ನು ಒಳಗೊಂಡಿದೆ. ಇನ್ನು ಈ ಕಾರು 4.5 ಸೆಕೆಂಡುಗಳಲ್ಲಿ 0-100 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಪೋರ್ಷೆ ಕೇಮನ್ ಜಿಟಿಎಸ್ ಜನಪ್ರಿಯ ಸ್ಪೋರ್ಟ್ಸ್ ಕಾರುಗಳಲ್ಲಿ ಒಂದಾಗಿದೆ.