ಐಷಾರಾಮಿ BMW ಕಾರು ಖರೀದಿಸಿದ ನಟಿ ಸಂಯುಕ್ತ ಮೆನನ್

ಸಿನಿಮಾ ರಂಗದಲ್ಲಿ ನಟರು ಮಾತ್ರವಲ್ಲದೇ ನಟಿಯರು ಕೂಡ ಕಾರು ಕ್ರೇಜ್ ಹೊಂದಿದ್ದಾರೆ. ಸಿನಿಮಾ ನಟಿಯರು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ನಟಿಯರು ತಮ್ಮ ಮೆಚ್ಚಿನ ಬ್ರ್ಯಾಂಡ್‌ನ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ.

ಐಷಾರಾಮಿ BMW ಕಾರು ಖರೀದಿಸಿದ ನಟಿ ಸಂಯುಕ್ತ ಮೆನನ್

ಇತ್ತೀಚೆಗೆ ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಸಂಯುಕ್ತ ಮೆನನ್ (samyuktha menon) ಹೊಸ ಐಷಾರಾಮಿ ಬಿಎಂಡಬ್ಲ್ಯು 3-ಸೀರಿಸ್ ಗ್ರ್ಯಾನ್ ಲಿಮೊಸಿನ್ (BMW 3 Series Gran Limousine) ಕಾರನ್ನು ಖರೀದಿಸಿದ್ದಾರೆ. ನಟಿ ಕೇರಳದ ಕೊಚ್ಚಿಯ ಕಲಮಶ್ಸೆರಿಯಲ್ಲಿರುವ ಬಿಎಂಡಬ್ಲ್ಯುಯ ಇವಿಎಂ ಆಟೋಕ್ರಾಫ್ಟ್ ಡೀಲರ್ ಬಳಿಯಿಂದ ಕಾರನ್ನು ಖರೀದಿಸಿದ್ದಾರೆ. ನಟಿ ಹೊಸ ಬಿಎಂಡಬ್ಲ್ಯು ಕಾರು ವಿತರಣೆಯನ್ನು ಪಡೆಯುತ್ತಿರುವ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಕೆಳಗಡೆ ಕಾಮೆಂಟ್ ಮೂಲಕ ಅನೇಕ ಸೆಲಬ್ರಿಟಿಗಳು ಮತ್ತು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಐಷಾರಾಮಿ BMW ಕಾರು ಖರೀದಿಸಿದ ನಟಿ ಸಂಯುಕ್ತ ಮೆನನ್

ನಟಿ ಸಂಯುಕ್ತ ಮೆನನ್ ಖರೀದಿಸಿದ ಹೊಸ ಬಿಎಂಡಬ್ಲ್ಯು 3-ಸೀರಿಸ್ ಗ್ರ್ಯಾನ್ ಲಿಮೊಸಿನ್ ಕಾರಿನ ಬಂಬರ್ KL07CX3696 ಆಗಿದೆ, ಮಾಡಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ ಸಂಯುಕ್ತ ಮೆನನ್ 2016ರಲ್ಲಿ ಪಾಪ್​ ಕಾರ್ನ್​ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಐಷಾರಾಮಿ BMW ಕಾರು ಖರೀದಿಸಿದ ನಟಿ ಸಂಯುಕ್ತ ಮೆನನ್

ಸಂಯುಕ್ತ ಮೆನನ್ ತಮ್ಮ ಚೊಚ್ಚಲ ಚಿತ್ರ ಪಾಪ್‌ಕಾರ್ನ್ ಮೂಲಕ ಮಾಲಿವುಡ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ ನಟಿ. ಇನ್ನು ಮಲಯಾಳಂನಲ್ಲಿ ಲಿಲ್ಲಿ, ಉಯ್ಯಾರೆ, ಕಲ್ಕಿ ಸಿನಿಮಾಗಳು ಸೇರಿದಂತೆ ಸುಮಾರು 11ಕ್ಕೂ ಹೆಚ್ಚು ಮಾಲಿವುಡ್‌ ಚಿತ್ರಗಳಲ್ಲಿ ಮಿಂಚಿದ್ದಾರೆ. ಇನ್ನು ತಮಿಳು ಚಿತ್ರರಂಗದಲ್ಲಿಯೂ ನಟಿಸಿದ್ದಾರೆ.

ಐಷಾರಾಮಿ BMW ಕಾರು ಖರೀದಿಸಿದ ನಟಿ ಸಂಯುಕ್ತ ಮೆನನ್

ನಟಿ ಸಂಯುಕ್ತ ಮೆನನ್ ಖರೀದಿಸಿದ ಹೊಸ ಬಿಎಂಡಬ್ಲ್ಯು 3-ಸೀರಿಸ್ ಗ್ರ್ಯಾನ್ ಲಿಮೊಸಿನ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.51.50 ಲಕ್ಷವಾಗಿದೆ, ಹೊಸ ಲಿಮೋಸಿನ್ ಆವೃತ್ತಿಯು ಮೂಲತಃ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸ್ಟ್ಯಾಂಡರ್ಡ್ 3 ಸೀರಿಸ್ ದ್ಮಾದರಿಗಿಂತ ದೊಡ್ಡ-ವೀಲ್‌ಬೇಸ್ ಆವೃತ್ತಿಯಾಗಿದೆ.

ಐಷಾರಾಮಿ BMW ಕಾರು ಖರೀದಿಸಿದ ನಟಿ ಸಂಯುಕ್ತ ಮೆನನ್

ಬಿಎಂಡಬ್ಲ್ಯುಯ 3-ಸೀರಿಸ್ ಗ್ರ್ಯಾನ್ ಲಿಮೊಸಿನ್ ಕಾರಿನ ಬಗ್ಗೆ ಹೇಳುವುದಾದರೆ, ಈ ಐಷಾರಾಮಿ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಸ್, ಟರ್ನ್ ಇಂಡಿಕೇಟರ್, ಆಕರ್ಷಕವಾದ ಫ್ರಂಟ್ ಗ್ರಿಲ್, ಸ್ಟೈಲಿಷ್ ಆಗಿರುವ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, 3ಡಿ ಎಲ್ಇಡಿ ಲೈಟ್ಸ್ ಮತ್ತು ಪನೊರಮಿಕ್ ಸನ್‌ರೂಫ್ ಹೊಂದಿದೆ.

ಐಷಾರಾಮಿ BMW ಕಾರು ಖರೀದಿಸಿದ ನಟಿ ಸಂಯುಕ್ತ ಮೆನನ್

ಈ ಹೊಸ ಕಾರಿನ ಒಳಭಾಗವು ಕೂಡಾ ಸಾಕಷ್ಟು ಆಕರ್ಷಕವಾಗಿದೆ. ಲಾಂಗ್ ವೀಲ್ಹ್‌ಬೆಸ್ ಪರಿಣಾಮ ಮುಂಭಾಗದ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಅರಾಮದಾಯಕವಾದ ಕ್ಯಾಬಿನ್, ಪ್ರೀಮಿಯಂ ಲೆದರ್ ಆಸನಗಳು, 10.25 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಐಡ್ರೈವ್ ಟೆಕ್ನಾಲಜಿ ಪ್ರೇರಣೆಯೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಕನೆಕ್ಟಿವಿಟಿಯನ್ನು ಒಳಗೊಂಡಿದೆ.

ಐಷಾರಾಮಿ BMW ಕಾರು ಖರೀದಿಸಿದ ನಟಿ ಸಂಯುಕ್ತ ಮೆನನ್

ಇದಲ್ಲದೆ ಈ ಹೊಸ ಕಾರಿನಲ್ಲಿ ಮಲ್ಟಿ ಜೋನ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, ಆ್ಯಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೊಲ್, ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್ಸ್ ಸೇರಿದಂತೆ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವ ಹಲವಾರು ಫೀಚರ್ಸ್‌ಗಳನ್ನು ಒಳಗೊಂಡಿವೆ.

ಐಷಾರಾಮಿ BMW ಕಾರು ಖರೀದಿಸಿದ ನಟಿ ಸಂಯುಕ್ತ ಮೆನನ್

ಬಿಎಂಡಬ್ಲ್ಯುಯ 3-ಸೀರಿಸ್ ಗ್ರ್ಯಾನ್ ಲಿಮೊಸಿನ್ ಕಾರಿನಲ್ಲಿ 2.0-ಲೀಟರ್ ಟ್ವಿನ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಮತ್ತು 320ಎಲ್‌ಡಿ ಲಗ್ಷುರಿ ಲೈನ್ ಮಾದರಿಯು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ಇದರಲ್ಲಿ 2.0-ಲೀಟರ್ ಟ್ವಿನ್ ಟರ್ಬೋ ಪೆಟ್ರೋಲ್ ಎಂಜಿನ್ 258-ಬಿಎಚ್‌ಪಿ ಪವರ್ ಮತ್ತು 400-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 2.0-ಲೀಟರ್ ಡೀಸೆಲ್ ಎಂಜಿನ್ 188-ಬಿಎಚ್‌ಪಿ ಪವರ್ ಮತ್ತು 400-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಐಷಾರಾಮಿ BMW ಕಾರು ಖರೀದಿಸಿದ ನಟಿ ಸಂಯುಕ್ತ ಮೆನನ್

ಈ ಐಷರಾಮಿ ಬಿಎಂಡಬ್ಲ್ಯುಯ 3-ಸೀರಿಸ್ ಗ್ರ್ಯಾನ್ ಲಿಮೊಸಿನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಮತ್ತು ವೊಲ್ವೊ ಎಸ್60 ಕಾರುಗಳಿಗೆ ಪೈಪೋಟಿ ನೀಡುತ್ತಿದೆ,

ಐಷಾರಾಮಿ BMW ಕಾರು ಖರೀದಿಸಿದ ನಟಿ ಸಂಯುಕ್ತ ಮೆನನ್

ಬಿಎಂಡಬ್ಲ್ಯು ಇತ್ತೀಚೆಗಷ್ಟೇ ತನ್ನ iX M60 ಎಲೆಕ್ಟ್ರಿಕ್ ಎಸ್‌ಯು‌ವಿಯನ್ನು ಬಹಿರಂಗಪಡಿಸಿದೆ. ಈಗ ಕಂಪನಿಯು ಬಣ್ಣ ಬದಲಾಯಿಸುವ ತಂತ್ರಜ್ಞಾನವನ್ನು ಪರಿಚಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ಕೇವಲ ಒಂದು ಬಟನ್ ಪ್ರೆಸ್ ಮಾಡುವ ಮೂಲಕ ಕಾರಿನ ಬಣ್ಣವನ್ನು ಬದಲಿಸಬಹುದು. ಸದ್ಯಕ್ಕೆ, ಬಿಎಂಡಬ್ಲ್ಯು ಕಂಪನಿಯು ಈ ತಂತ್ರಜ್ಞಾನವನ್ನು ಯಾವ ವಾಹನಗಳಲ್ಲಿ ಅಳವಡಿಸಲಿದೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಕಂಪನಿಯ ಪ್ರಕಾರ ಈ ಪ್ರದರ್ಶನವು ಈ ತಂತ್ರಜ್ಞಾನದ ಪರಿಚಯದ ಒಂದು ಹಂತವಾಗಲಿದೆ. ಈ ತಂತ್ರಜ್ಞಾನದಿಂದ ಬಟನ್ ಪ್ರೆಸ್ ಮಾಡಿದರೆ ಕಾರು ಸ್ಟಾರ್ಟ್ ಆಗಲಿದೆ.

ಐಷಾರಾಮಿ BMW ಕಾರು ಖರೀದಿಸಿದ ನಟಿ ಸಂಯುಕ್ತ ಮೆನನ್

ನಂತರ ಕಾರಿನ ಬಾಹ್ಯ ಬಣ್ಣ ಬದಲಾಗುತ್ತದೆ. ಇದರ ಹೊರತಾಗಿ ವಾಹನವು ಎಷ್ಟು ಬಣ್ಣಗಳನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಿಎಂಡಬ್ಲ್ಯು ಕಂಪನಿಯ ಹೊಸ ಕಾರುಗಳು ಮರ್ಸಿಡಿಸ್‌ಗೆ ಪೈಪೋಟಿ ನೀಡುವ ತವಕದಲ್ಲಿವೆ. ಇನ್ನು ಭಾರತದಲ್ಲಿ ಸದ್ಯ ವಿವಿಧ ಸರಣಿಗಳಲ್ಲಿ ಒಟ್ಟು 16 ಕಾರುಗಳ ಮಾರಾಟ ಹೊಂದಿರುವ ಬಿಎಂಡಬ್ಲ್ಯು ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರುಗಳಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಪ್ರಮುಖ ಆಕರ್ಷಣೆಯಾಗಿವೆ.

Most Read Articles

Kannada
English summary
Actress samyuktha menon bought bmw 3 series gran limousine details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X