ಅಂದು ಸಾಮಾನ್ಯ ಕಾರಿನಲ್ಲಿ ಬಂದಿಳಿದ ನಟಿ, ಇಂದು 4.5 ಕೋಟಿಯ ದುಬಾರಿ ಕಾರು ಖರೀದಿ
ಕಾರುಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತದೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ.
ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳ ನಡುವೆ ಒಂದು ಟ್ರೆಂಡ್ ಆಗಿದೆ. ಇದೀಗ ಖ್ಯಾತ ನಟಿ ಶ್ರದ್ಧಾ ಕಪೂರ್ (Shraddha Kapoor) ಭಾರತದಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹೊಚ್ಚಹೊಸ ಲ್ಯಾಂಬೋರ್ಗಿನಿ ಹುರಾಕನ್ ಖರೀದಿಸಿದ್ದಾರೆ. ಶ್ರದ್ಧಾ ಕಪೂರ್ ಅವರು 4.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿ ಮಾದರಿಯನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಕಾರು ಕೆಂಪು ಬಣ್ಣ ಮಾದರಿಯಾಗಿದೆ.

ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿಕಾದ ವಿತರಣೆಯನ್ನು ತೆಗೆದುಕೊಂಡ ನಂತರ, ಶ್ರದ್ಧಾ ಸ್ವತಃ ಕಾರನ್ನು ಚಾಲನೆ ಮಾಡಿದ್ದಾರೆ. ಇದು ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾಯಿತು. ಸ್ಟ್ಯಾಂಡರ್ಡ್ EVO ಮಾದರಿಯು ಹೋಲಿಸಿದರೆ ಹೆಚ್ಚು ಶಕ್ತಿಶಾಲಿ ಆವೃತ್ತಿಯಾಗಿದೆ. ಆದರೆ ಟ್ರ್ಯಾಕ್-ಫೋಕಸ್ಡ್ STO ರೂಪಾಂತರವು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಇದು ಮಾರಾಟದಲ್ಲಿರುವ ಅತ್ಯಂತ ಶಕ್ತಿಶಾಲಿ ಹುರಾಕನ್ ಅಲ್ಲ.
ನಟಿ ಶ್ರದ್ಧಾ ಕಪೂರ್ ಅವರು ಖರೀದಿಸಿದ ಲ್ಯಾಂಬೋರ್ಗಿನಿಯ ಹುರಾಕನ್ ಟೆಕ್ನಿಕಾ ಕಾರು ಬಗ್ಗೆ ಹೇಳುವುದಾದರೆ, ಈ ಲ್ಯಾಂಬೋರ್ಗಿನಿಯ ಹುರಾಕನ್ ಟೆಕ್ನಿಕಾ ಕಾರು (Lamborghini Huracan Tecnica) ಕಾರು ಅನಾವರಣಗೊಳಿಸಿತು. ಸಿಯಾನ್ ಹೈಬ್ರಿಡ್ ಹೈಪರ್‌ಕಾರ್‌ನಿಂದ ಪ್ರೇರಿತವಾದ ವಿನ್ಯಾಸ ಅಂಶಗಳನ್ನು ಒಳಗೊಂಡಿದೆ. ಗಮನಾರ್ಹವಾಗಿ, ಮುಂಭಾಗ ಮತ್ತು ಹಿಂಭಾಗದ ಫಾಸಿಕದಲ್ಲಿ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ.

ಈ ಸೂಪರ್‌ಕಾರ್ ಕಾರ್ಬನ್-ಫೈಬರ್ ಬಾನೆಟ್, ಸ್ಟ್ಯಾಂಡರ್ಡ್ ಹ್ಯುರಾಕನ್ ಇವೊಗೆ ಹೋಲಿಸಿದರೆ ಹೆಚ್ಚು ಪ್ರಮುಖವಾದ ಹಿಂಬದಿ ಡಿಫ್ಯೂಸರ್ ಮತ್ತು ಡೌನ್‌ಫೋರ್ಸ್‌ನಲ್ಲಿ 35 ಪ್ರತಿಶತ ಬೂಸ್ಟ್ ಅನ್ನು ನೀಡುವ ಸ್ಥಿರ ಹಿಂಭಾಗದ ಸ್ಪಾಯ್ಲರ್ ಅನ್ನು ಸಹ ಒಳಗೊಂಡಿದೆ. ಹೆಚ್ಚು ಹಾರ್ಡ್‌ಕೋರ್ STO ನಲ್ಲಿ ಕಂಡುಬರುವ ಕ್ಲಾಮ್‌ಶೆಲ್ ಬಾಡಿವರ್ಕ್ ಅನ್ನು ಹೊಂದಿದೆ.
ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಸೂಪರ್ ಕಾರಿನಲ್ಲಿ 5.2-ಲೀಟರ್ V10 ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 640hp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. ಈ ಗೇರ್ ಬಾಕ್ಸ್ ಹಿಂಬಂದಿಯ ವ್ಹೀಲ್ ಗಳಿಗೆ ಪವರ್ ಅನ್ನು ನೀಡುತ್ತದೆ.

ಸ್ಟ್ಯಾಂಡರ್ಡ್ ಕಾರ್ಬನ್ ಸೆರಾಮಿಕ್ ಬ್ರೇಕ್‌ಗಳೊಂದಿಗೆ ಸಜ್ಜುಗೊಳಿಸಿದೆ. ಈ ಲ್ಯಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಸೂಪರ್ ಕಾರು 325 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಸೂಪರ್ ಕಾರಿನಲ್ಲಿ 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಸೂಪರ್ ಕಾರು 9.1 ಸೆಕೆಂಡುಗಳಲ್ಲಿ 200 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಬಾಲಿವುಡ್ ನಟಿ ಶ್ರದ್ಧಾ ಕಪೂರ್ಅವರು ಟೊಯೊಟಾ ಫಾರ್ಚೂನರ್ ಎಸ್‍ಯುವಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು.
ಟೊಯೊಟಾ ಫಾರ್ಚುನರ್ ಹೊರತುಪಡಿಸಿ, ಶ್ರದ್ಧಾ ಕಪೂರ್ ಅವರ ಬಳಿ ಹಲವಾರು ಕಾರುಗಳಿವೆ. "ಬಾಘಿ" ಖ್ಯಾತಿಯ ನಟಿ ಮೊದಲ ತಲೆಮಾರಿನ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಸಹ ಹೊಂದಿದ್ದಾರೆ. ನಟಿ ತಮ್ಮ ಈ ಎರಡೂ ಕಾರುಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅವರ ಬಳಿ ಮರ್ಸಿಡಿಸ್ ML-250 CDI ಎಸ್‍ಯುವಿ ಮತ್ತು ಮೊದಲ ತಲೆಮಾರಿನ BMW 3-ಸೀರಿಸ್ ಅನ್ನು ಹೊಂದಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications








