Shreegopika: ಹೊಸ ಮಹೀಂದ್ರಾ ಥಾರ್ ಖರೀದಿಸಿದ ಜನಪ್ರಿಯ ನಟಿ ಶ್ರೀಗೋಪಿಕಾ.. ಈ ಕಾರಿನ ವಿಶೇಷತೆಗಳೇನು?

ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಹೊಸ ಕನಸಿನ ಕಾರನ್ನು ಖರೀದಿಸಬೇಕೆಂಬ ಆಸೆಯಿರುತ್ತದೆ. ಈಗ ತಮಿಳು ಕಿರುತೆರೆ ಲೋಕದ ಖ್ಯಾತ ನಟಿ ಶ್ರೀಗೋಪಿಕಾ ಚಂದ್ರನ್ (Shreegopika Chandran), ಜಬರ್ದಸ್ತ್ ಮಹೀಂದ್ರಾ ಥಾರ್ 4x4 (Mahindra Thar 4x4) ಎಸ್‌ಯುವಿಯನ್ನು ಕೊಂಡುಕೊಂಡಿದ್ದಾರೆ.

ಈ ಬಗ್ಗೆ ನಟಿ ಶ್ರೀಗೋಪಿಕಾ ಚಂದ್ರನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಮಹೀಂದ್ರಾ ಥಾರ್ ಎಸ್‌ಯುವಿಯನ್ನು ವಿತರಣೆ ಪಡೆಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಟಿ ಶ್ರೀಗೋಪಿಕಾಗೆ ಸ್ನೇಹಿತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ವಿಡಿಯೋದಲ್ಲಿ ಶ್ರೀಗೋಪಿಕಾ ನೂತನ ಮಹೀಂದ್ರಾ ಥಾರ್ ಕಾರಿಗೆ ಪೂಜೆ ಸಲ್ಲಿಸಿ, ಶೋರೂಂನಿಂದ ಹೊರತರುತ್ತಿರುವುದನ್ನು ಕಾಣಬಹುದು.

Actress Shreegopika Chandran Buy New Mahindra Thar Suv: Details

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ 3 - ಡೋರ್ ಮಹೀಂದ್ರಾ ಥಾರ್ (Mahindra Thar), ರೂ.11.25 ಲಕ್ಷದಿಂದ ರೂ.17.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಎಸ್‌ಯುವಿ ಎಎಕ್ಸ್(ಒ), ಎಲ್‌ಎಕ್ಸ್ ಎಂಬ ರೂಪಾಂತರ ಹಾಗೂ ಎವರೆಸ್ಟ್ ವೈಟ್, ಅಕ್ವಾಮರೀನ್, ರೆಡ್ ರೇಜ್, ನಪೋಲಿ ಬ್ಲಾಕ್ ಸೇರಿದಂತೆ 5 ಆಕರ್ಷಕ ಬಣ್ಣಗಳೊಂದಿಗೆ ಲಭ್ಯವಿದೆ.

ಈ ಮಹೀಂದ್ರಾ ಥಾರ್ ವಿವಿಧ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. ಇದರ 1.5-ಲೀಟರ್ ಡೀಸೆಲ್ ಎಂಜಿನ್, 117 ಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 300 ಎನ್ಎಂ ಪೀಕ್ ಟಾರ್ಕ್, 2.2-ಲೀಟರ್ ಡೀಸೆಲ್ ಎಂಜಿನ್ 128 ಹೆಚ್‌ಪಿ ಪವರ್, 300 ಎನ್ಎಂ ಪೀಕ್ ಟಾರ್ಕ್, 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 150 ಹೆಚ್‌ಪಿ ಪವರ್ ಹಾಗೂ 320 ಎನ್ಎಂ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Actress Shreegopika Chandran Buy New Mahindra Thar Suv: Details

ಥಾರ್ ಎಸ್‌ಯುವಿ ರೂಪಾಂತರಗಳಿಗೆ ಅನುಗುಣವಾಗಿ 6 - ಸ್ವೀಡ್ ಮ್ಯಾನುವಲ್/ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಸಿಗುತ್ತದೆ. 4WD (ಫೋರ್ ವೀಲ್ ಡ್ರೈವ್), RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. ಆಫ್ ರೋಡ್ ಎಸ್‌ಯುವಿಯಾಗಿರುವುದರಿಂದ ಕೊಂಚ ಕಡಿಮೆ ಮೈಲೇಜ್ ನೀಡಲಿದ್ದು, 15.2 ಕೆಎಂಪಿಎಲ್ ಇಂಧನ ದಕ್ಷತೆಯನ್ನು ಪಡೆದಿದೆ.

ವಿನ್ಯಾಸದ ದೃಷ್ಟಿಯಿಂದಲೂ ಮಹೀಂದ್ರಾ ಥಾರ್ ಎಸ್‌ಯುವಿ ಅತ್ಯುತ್ತಮವಾಗಿದ್ದು, 4 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌, ಹ್ಯಾಲೊಜೆನ್ ಹೆಡ್‌ಲೈಟ್‌, ಎಲ್ಇಡಿ ಡಿಆರ್‌ಎಲ್‌ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಯಲ್ಲಿಯೂ ಥಾರ್ ಎಸ್‌ಯುವಿ ಅತ್ಯಾಧುನಿಕವಾಗಿದ್ದು, ಏರ್ ಬಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಿಲ್ ಡಿಸೆಂಟ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಒಳಗೊಂಡಿದೆ. ಈ ಕಾರಿಗೆ ಫೋರ್ಸ್ ಗೂರ್ಖಾ ಹಾಗೂ ಮಾರುತಿ ಸುಜುಕಿ ಜಿಮ್ನಿ ಪ್ರಬಲ ಎದುರಾಳಿಯಾಗಿವೆ. ಪ್ರಸ್ತುತ ಮಹೀಂದ್ರಾ 5 - ಡೋರ್ ಆಯ್ಕೆಯೊಂದಿರುವ ಥಾರ್ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, February 27, 2024, 8:30 [IST]
English summary
Actress shreegopika chandran buy new mahindra thar suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+