45ನೇ ಹುಟ್ಟುಹಬ್ಬಕ್ಕೆ ದುಬಾರಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ನಟ ಸೈಫ್ ಅಲಿ ಖಾನ್ ಸಹೋದರಿ

ಭಾರತದಲ್ಲಿ ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಯೋಚಿಸಿದಾಗ, ಅವರು ಬಳಸುವ ಐಷಾರಾಮಿ ಕಾರುಗಳು ನಮ್ಮ ಮನಸ್ಸಿಗೆ ಬರುತ್ತದೆ. ಬಾಲಿವುಡ್ ಸೆಲಬ್ರಿಟಿಗಳು ಆಗಾಗ ತಮ್ಮ ದುಬಾರಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜನಪ್ರಿಯ ಬಾಲಿವುಡ್ ನಟಿ ಸೋಹಾ ಅಲಿ ಖಾನ್ (Soha Ali Khan) ಅವರು ತಮ್ಮ 45 ನೇ ಹುಟ್ಟುಹಬ್ಬದಂದು ಹೊಚ್ಚಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.

ಜನಪ್ರಿಯ ಬಾಲಿವುಡ್ ನಟಿ, ನಟ ಸೈಫ್ ಅಲಿ ಖಾನ್ ಅವರ ಸಹೋದರಿ, ಸೋಹಾ ಅಲಿ ಖಾನ್ ಅವರು ತಮ್ಮ 45ನೇ ಹುಟ್ಟುಹಬ್ಬಕ್ಕೆ ಹೊಚ್ಚಹೊಸ ಐಷಾರಾಮಿ ಮರ್ಸಿಡಿಸ್ ಬೆಂಝ್ GLE (Mercedes-Benz GLE) ಕಾರನ್ನು ಖರೀದಿಸಿದ್ದಾರೆ. "ರಂಗ್ ದೇ ಬಸಂತಿ" ಮತ್ತು "ತುಮ್ ಮೈಲ್" ನಂತಹ ಚಲನಚಿತ್ರಗಳಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿ ಸೋಹಾ ಅಲಿ ಖಾನ್ ಅವರು ಬಿಳಿ ಬಣ್ಣದ ಮರ್ಸಿಡಿಸ್ ಬೆಂಝ್ GLE-ಕ್ಲಾಸ್ ಕಾರನ್ನು ಆಯ್ಕೆಮಾಡಿಕೊಳ್ಳುತ್ತಾರೆ.

Soha Ali Khan

ಕರ್ನಾಟಕದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಹೃದ್ವಿಕ್ ರೋಷನ್ ಅವರಂತಹ ಟಾಪ್ ನಟರು ಮಾತ್ರವಲ್ಲದೆ ಇಮ್ರಾನ್ ಹಶ್ಮಿಯಂತಹ ಸ್ಟಾರ್‌ಗಳು ಸಹ ಇಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅಮೀರ್ ಖಾನ್ ಅವರ ರಂಗ್ ದೇ ಬಸಂತಿ ಮತ್ತು ಇಮ್ರಾನ್ ಹಶ್ಮಿ ಅಭಿನಯದ ತುಮ್ ಮೈಲ್ ಪ್ಯಾನ್-ಇಂಡಿಯನ್ ಲೆವೆಕ್ ನಲ್ಲಿ ಹಿಟ್ ಆಗಿವೆ. ನಾಯಕಿ ಸೈಫ್ ಅಲಿಖಾನ್ ಸಹೋದರಿ ಸೋಹಾ ಅಲಿಖಾನ್ ಅವರು ಆ ಕಾಲದಲ್ಲಿ ಇಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಹಾಗಾಗಿ ನಟಿಯನ್ನು ಪ್ರತ್ಯೇಕವಾಗಿ ಪರಿಚಯಿಸುವ ಅಗತ್ಯವಿಲ್ಲ. ನಟ ಈಗ ಮರ್ಸಿಡಿಸ್ ಬೆಂಜ್‌ನಿಂದ ಐಷಾರಾಮಿ ಎಸ್‍ಯುವಿಯ ಒಡತಿಯಾಗಿದ್ದಾರೆ. ಸೋಹಾ ಅಲಿ ಖಾನ್ ಅವರು ತಮ್ಮ 45ನೇ ಹುಟ್ಟುಹಬ್ಬದಂದು ಹೊಸ ಐಷಾರಾಮಿ ವಾಹನವನ್ನು ತಂದಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಹೊಸ ಐಷಾರಾಮಿ ಕಾರನ್ನು ಮರ್ಸಿಡಿಸ್‌ನ ಮುಂಬೈ ವಿತರಕರಾದ ಆಟೋಹ್ಯಾಂಗರ್ ಬೆಂಜ್‌ನಿಂದ ಸ್ಟಾರ್ ಗ್ಯಾರೇಜ್ ನಿಂದ ಖರೀದಿಸಲಾಗಿದೆ.

Soha Ali Khan

ನಟಿ ಸೋಹಾ ಅಲಿ ಖಾನ್ ಮರ್ಸಿಡಿಸ್ ಬೆಂಜ್ ಕಾರಿನ ಕೀ ಸ್ವೀಕರಿಸುತ್ತಿರುವ ಚಿತ್ರಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. GLC ಕ್ಲಾಸ್ ಮತ್ತು GLS ಕ್ಲಾಸ್ ಎಸ್‍ಯುವಿಗಳ ನಡುವೆ ಈ GLE ಎಸ್‍ಯುವಿಯು ಸ್ಥಾನವನ್ನು ಪಡೆದಿದೆ. ಭಾರತದಲ್ಲಿ ಮರ್ಸಿಡಿಸ್ ಬೆಂಝ್ GLE ಎಸ್‍ಯುವಿಯು GLE 300d, GLE 400d ಮತ್ತು GLE 450 ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಜ್ GLE-Class ಎಸ್‍ಯುವಿಯ ಬೆಲೆಯು ರೂ.91 ಲಕ್ಷದಿಂದ ರೂ.1.08 ಕೋಟಿಯಾಗಿದೆ. ಈ ಪ್ರೀಮಿಯಂ ಮಿಡ್ ಸೈಜ್ ಐಷಾರಾಮಿ ಎಸ್‍ಯುವಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಐದು-ಸೀಟುಗಳ ಸಂರಚನೆಯೊಂದಿಗೆ ಲಭ್ಯವಿದೆ. ರೂಪಾಂತರಗಳಿಗೆ ಸಂಬಂಧಿಸಿದಂತೆ, ಎಂಟ್ರಿ ಲೆವೆಲ್ GLE 300d 2.0-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ.

ಈ ಎಂಜಿನ್ 241 bhp ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ GLE 400d ರೂಪಾಂತರದಲ್ಲಿ 3.0-ಲೀಟರ್ ಇನ್‌ಲೈನ್-ಆರು ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 326 bhp ಮತ್ತು 700 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮರ್ಸಿಡಿಸ್ ಬೆಂಜ್ GLE ಏಕೈಕ ಪೆಟ್ರೋಲ್-ಚಾಲಿತ ಆವೃತ್ತಿಯು GLE 450 ಆಗಿದೆ, ಇದು 3.0-ಲೀಟರ್ ಇನ್‌ಲೈನ್-ಆರು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 362 bhp ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿಯ ಮೂರು ಆವೃತ್ತಿಗಳು ಲಾಂಗ್-ವೀಲ್‌ಬೇಸ್ ಮಾಡೆಲ್‌ಗಳಾಗಿವೆ. ಈ ಎಸ್‍ಯುವಿಯು ಆಲ್-ವೀಲ್ ಡ್ರೈವ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಜೋಡೀಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

More from DriveSpark

Article Published On: Friday, October 6, 2023, 11:41 [IST]
English summary
Actress soha ali khan buys new mercedes benz gle suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+