ಮಳೆಗೆ ವಿದೇಶದಿಂದ ರಫ್ತು ಮಾಡಿದ ದುಬಾರಿ ಬೆಲೆಯ ಮೂರು ಕಾರು ಕಳೆದುಕೊಂಡು ಕಣ್ಣೀರಿಟ್ಟಿದ್ದೆ ಎಂದ ಸನ್ನಿ

ಭಾರತದಲ್ಲಿ ಮಳೆಗಾಲದಲ್ಲಿ ಹಲವು ಪ್ರಮುಖ ನಗರಗಳು ವರುಣಾರ್ಭಟಕ್ಕೆ ತತ್ತರಿಸಿ ಸುದ್ದಿಯಾಗುತ್ತದೆ. ಮಳೆಗೆ ರಸ್ತೆಗಳು ನೀರಿನಿಂದ ಜಲಾವೃತವಾಗಿ ನದಿ ಹರಿಯುವಂತಹ ದೃಶ್ಯ ಕಂಡು ಬರುತ್ತದೆ. ರಸ್ತೆಯಲ್ಲಿ ನೀರು ಹರಿಯುವಾಗ ಹಲವು ಜನರ ಕಾರುಗಳು ಕೂಡ ಮುಳುಗಿ ಹೋಗುತ್ತದೆ. ಸಾಮಾನ್ಯ ಜನರ ಕಾರುಗಳ ಮಾತ್ರವಲ್ಲದೇ ಶ್ರೀಮಂತರ ಐಷಾರಾಮಿ ಕಾರುಗಳು ಕೂಡ ಮುಳುಗಿ ಸುದ್ದಿಯಾಗುತ್ತದೆ

ಬಾಲಿವುಡ್​ ನಟಿ ​ಸನ್ನಿ ಲಿಯೋನ್ (Sunny Leone) ಹಲವು ದುಬಾರಿ ಹಾಗೂ ಐಷಾರಾಮಿ ಕಾರು ಹೊಂದಿದ್ದಾರೆ. ಅಮೆರಿಕದಲ್ಲಿ ನೆಲೆಸಿದ್ದ ಸನ್ನಿ ಲಿಯೋನ್​ ಮೊದಲ ಬಾರಿಗೆ ಭಾರತಕ್ಕೆ ಬಂದಾಗ ಇಲ್ಲಿನ ಮಳೆಗಾಲ ಅನುಭವಿಸಿದ ಅನುಭವವನ್ನು ಶೇರ್ ಮಾಡಿದ್ದಾರೆ. ​ಮಾಧ್ಯಮದ ಸಂದರ್ಶನವೊಂದರ ವೇಳೆ ಮಾತನಾಡಿ, ಮುಂಬೈ ಮಳೆಯ ಬಗ್ಗೆ ತನಗೆ ತಿಳಿದಿರಲಿಲ್ಲ. ಆಕಾಶದಿಂದ ಇಷ್ಟು ಮಳೆ ಬರುತ್ತೆ ಎನ್ನುವ ಅಂದಾಜು ಕೂಡಾ ನನಗಿರಲಿಲ್ಲ.

Sunny Leone

ನಾನು ಭಾರತಕ್ಕೆ ಬಂದಾಗ ನಾನು ಮುಂಬೈನಲ್ಲಿದ್ದೆ. ಸಮುದ್ರಕ್ಕೆ ಸಮೀಪದಲ್ಲೇ ಇದ್ದೆ. ಇಲ್ಲಿಯ ಮಳೆಯ ರೌದ್ರ ನರ್ತನ ನೋಡಿ ಶಾಕ್​ ಆದೆ. ನನಗೆ ಹವಾಮಾನ ತುಂಬಾ ಇಷ್ಟವಾಗಿತ್ತು ಎಂದಿದ್ದಾರೆ. ಮಳೆಗಾಲದಲ್ಲಿ ತಮಗಾದ ಕೆಟ್ಟ ಅನುಭವವನ್ನು ನೆನಪಿಸಿಕೊಂಡರು. ಮೂರು ಕಾರುಗಳ ನಷ್ಟವನ್ನು ಹೇಗೆ ಅನುಭವಿಸಿದ ಬಗ್ಗೆ ಮಾತನಾಡಿ, ಭಾರೀ ಮಳೆಯಲ್ಲಿ ನನ್ನ ಐಷಾರಾಮಿ ಮೂರು ಕಾರುಗಳು ಕೊಚ್ಚಿ ಹೋದಾಗ ತುಂಬಾ ಬೇಸರವಾಗಿತ್ತು. ಆದರೂ ಪರವಾಗಿಲ್ಲ, ಕೆಲವೊಮ್ಮೆ ಹಾಗಾಗುತ್ತದೆ ಎಂದಿದ್ದಾರೆ.

ಆ ಸಮಯದಲ್ಲಿ ಅತ್ತಿದ್ದೆ. ಏಕೆಂದರೆ ಭಾರತಕ್ಕೆ ಆ ಕಾರುಗಳನ್ನು ಆಮದು ಮಾಡಿಕೊಂಡಿದ್ದೆ. ಆ ಸಂದರ್ಭದಲ್ಲಿ ದುಬಾರಿ ತೆರಿಗೆಯನ್ನು ಪಾವತಿಸಿದ್ದೆ ಎಂದಿದ್ದಾರೆ. ಈ ಕಾರುಗಳಲ್ಲಿ ಆಕೆಯ ಮರ್ಸಿಡಿಸ್ ಬೆಂಝ್ 8-ಸೀಟುಗಳ GL-ಕ್ಲಾಸ್ ಕೂಡ ಸೇರಿದೆ. ಆದರೆ ಅದೇ ಕೊನೆ. ಕೊನೆಗೆ ಯಾವುದೇ ಕಾರುಗಳನ್ನು ಆಮದು ಮಾಡಿಕೊಳ್ಳಲಿಲ್ಲ. ಈಗ ನಾನು ಈಗ ನನ್ನ ಭಾರತ ನಿರ್ಮಿತ ಕಾರುಗಳನ್ನು ಪ್ರೀತಿಸುತ್ತೇನೆ.

Sunny Leone

ಇಲ್ಲಿಯ ಕಾರುಗಳು ಮಳೆಗಾಲಕ್ಕೂ ತಕ್ಕಂತೆ ರೂಪಿಸಲಾಗುತ್ತದೆ ಎನ್ನುವುದನ್ನು ಅರಿತಿದ್ದೇನೆ. ಆಗ ನನ್ನ ಆಯ್ಕೆ ತಪ್ಪಾಗಿತ್ತು ಎಂದು ಎನಿಸುತ್ತದೆ ಎಂದು ಹೇಳಿದ್ದಾರೆ. ಸನ್ನಿ ಲಿಯೋನ್ ಭಾರತದಲ್ಲಿ MG ಗ್ಲೋಸ್ಟರ್ ಎಂಬ ದೊಡ್ಡ ಎಸ್‍ಯುವಿಯನ್ನು ಬಳಸುತ್ತಿದ್ದಾರೆ. ಇನ್ನು ಅವರ ಬಿಎಂಡಬ್ಲ್ಯು ಕಾರಿನಲ್ಲಿ ಕೆಲವು ಸಲ ಕಾಣಿಸಿಕೊಂಡಿದ್ದಾರೆ. ಇನ್ನು ಅವರು ಪ್ರಯಾಣಕ್ಕೆ ಹೆಚ್ಚು ಎಂಜಿ ಗ್ಲೋಸ್ಟರ್ ಎಸ್‍ಯುವಿಯನ್ನು ಬಳಸುತಿದ್ದಾರೆ.

ಎಂಜಿ ಗ್ಲೋಸ್ಟರ್ ಪ್ರಸ್ತುತ ಭಾರತದಲ್ಲಿ ತಯಾರಕರಿಂದ ಪ್ರಮುಖ ಎಸ್‌ಯುವಿಯಾಗಿದೆ. ಪೂರ್ಣ-ಗಾತ್ರದ ಎಸ್‍ಯುವಿ ಟೊಯೊಟಾ ಫಾರ್ಚುನರ್‌ನಂತಹ ಕಾರುಗಳೊಂದಿಗೆ ಸ್ಪರ್ಧಿಸುತ್ತದೆ. ಫೋರ್ಡ್ ಎಂಡೀವರ್ ಸಹ ಪ್ರತಿಸ್ಪರ್ಧಿಯಾಗಿತ್ತು ಆದರೆ ದುಃಖಕರವೆಂದರೆ ಅದು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಗ್ಲೊಸ್ಟರ್ ಎಸ್‍ಯುವಿ ಮಾದರಿ ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ಎನ್ನುವ ವೆರಿಯೆಂಟ್ ಗಳನ್ನು ಲಭ್ಯವಿದೆ.

ಇದು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಎಸ್‌ಯುವಿ ಮಾದರಿಗಳಲ್ಲೇ ಅತಿ ಹೆಚ್ಚು ವೀಲ್ಹ್ ಬೆಸ್ ಹೊಂದಿದೆ. ಈ ಎಸ್‍ಯುವಿಯು ಆಟೋನಮಸ್ ಲೆವಲ್ 1 ಟೆಕ್ನಾಲಜಿಯೊಂದಿಗೆ ಅತಿ ಹೆಚ್ಚು ಸುರಕ್ಷಿತ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಹೊಸ ಗ್ಲೊಸ್ಟರ್ ಎಸ್‌ಯುವಿಯಲ್ಲಿ ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್ (ಎಪಿಎ), ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ) ಮತ್ತು ಫಾರ್ವರ್ಡ್ ಕೂಲಿಷನ್ ವಾರ್ನಿಂಗ್ ಹೊಂದಿದೆ.

ಇದರೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹಾಗೂ ಲೇನ್ ಎಕ್ಸಿಟ್ ವಾರ್ನಿಂಗ್ ಅನ್ನು ಹೊಂದಿದೆ. ಗ್ಲೊಸ್ಟರ್ ಎಸ್‍ಯುವಿಯಲ್ಲಿ ಎಲ್‌ಇಡಿ ಲೈಟಿಂಗ್, ಆಟೋ ಲೆವೆಲಿಂಗ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳು, ಎಂಜಿ ಲೋಗೋ ಹೊಂದಿರುವ ಒಆರ್‌ವಿಎಂ, ಪನೊರಮಿಕ್ ಸನ್‌ರೂಫ್, 19 ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್, ಫ್ರಂಟ್-ರಿಯರ್ ಫಾಗ್ ಲ್ಯಾಂಪ್‌, ಸ್ಟೀರಿಂಗ್-ಅಸಿಸ್ಟ್ ಕಾರ್ನರಿಂಗ್ ಲ್ಯಾಂಪ್‌, ಡ್ಯುಯಲ್-ಬ್ಯಾರೆಲ್ ಟ್ವಿನ್ ಕ್ರೋಮ್ ಎಕ್ಸಾಸ್ಟ್ ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Saturday, August 12, 2023, 15:23 [IST]
English summary
Actress sunny leone totally lost 3 cars in mumbai flood details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+