ತನ್ನ ತಂಗಿಗೆ ದುಬಾರಿ ಉಡುಗೊರೆ ನೀಡಿದ ಬಾಲಿವುಡ್ ನಟಿ ತಾಪ್ಸಿ ಪನ್ನು

ಬಾಲಿವುಡ್ ಲೋಕದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ತೆಲುಗು ನಟಿ ತಾಪ್ಸಿ ಪನ್ನು ತಮ್ಮ ನಟನೆ ಮೂಲಕವೇ ಜನಪ್ರಿಯ ನಾಯಕಿಯಾಗಿ ಗುರುತಿಸಿಕೊಂಡಿರುವುಲ್ಲದೇ ಹಲವಾರು ಪಾತ್ರಗಳಲ್ಲಿ ಅಭಿಮಾನಿಗಳಿಗೆ ಸರ್ಫೈಸ್ ನೀಡಿದ್ದಾರೆ. ಇದೀಗ ತಮ್ಮ ಸಹೋದರಿ ಶಗುನ್ ಅವರಿಗೆ ಸರ್ಫೈಸ್ ಗಿಫ್ಟ್ ನೀಡುವ ಮೂಲಕ ಸುದ್ದಿಯಲ್ಲಿದ್ದು, ಅಕ್ಕನ ಪ್ರೀತಿಯ ಉಡುಗೊರೆ ಕಂಡು ತಂಗಿಯ ಖುಷಿಗೆ ಪಾರವೇ ಇಲ್ಲದಂತಾಗಿದೆ.

ತನ್ನ ತಂಗಿಗಾಗಿ ದುಬಾರಿ ಉಡುಗೊರೆ ನೀಡಿದ ಬಾಲಿವುಡ್ ನಟಿ ತಾಪ್ಸಿ ಪನ್ನು

ಹೌದು, ನಟಿ ತಾಪ್ಸಿ ಪನ್ನು ತಮ್ಮ ಕಿರಿಯ ಸಹೋದರಿ ಶಗುನ್‌ಗೆ ದುಬಾರಿ ಬೆಲೆಯ ಜೀಪ್ ಕಂಪಾಸ್ ಲಿಮಿಟೆಡ್ ಎಡಿಷನ್ ಪ್ಲಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಅಕ್ಕ ನೀಡಿದ ದುಬಾರಿ ಉಡುಗೊರೆಗೆ ಶಗುನ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಎಸ್‌ಯುವಿ ಕಾರು ಮಾರಾಟದಲ್ಲಿ ವಿಶೇಷ ಬೇಡಿಕೆ ಹೊಂದಿರುವ ಜೀಪ್ ಕಂಪಾಸ್ ಇದೀಗ ಚಿತ್ರನಟರ ಹಾಟ್ ಫೆವರಿಟ್ ಮಾದರಿಯಾಗಿ ಹೊರಹೊಮ್ಮಿದ್ದು, ಹಲವು ಬಾಲಿವುಡ್, ಸ್ಯಾಂಡಲ್‌ವುಡ್ ನಟ, ನಟಿಯರು ಕೂಡಾ ಈಗಾಗಲೇ ಜೀಪ್ ಕಂಪಾಸ್‌ಗೆ ಮನಸೋತು ಖರೀದಿ ಮಾಡಿದ್ದಾರೆ.

ತನ್ನ ತಂಗಿಗಾಗಿ ದುಬಾರಿ ಉಡುಗೊರೆ ನೀಡಿದ ಬಾಲಿವುಡ್ ನಟಿ ತಾಪ್ಸಿ ಪನ್ನು

ಸದ್ಯ ಮಾರುಕಟ್ಟೆಯಲ್ಲಿ ಸಿ ಸೆಗ್ಮೆಂಟ್ ಎಸ್‌ಯುವಿ ಮಾದರಿಗಳಲ್ಲಿ ಅತ್ಯುತ್ತಮ ಡ್ರೈವ್ ಮೊಡ್ ಸೌಲಭ್ಯದೊಂದಿಗೆ ಆಫ್ ರೋಡ್ ಮಾದರಿಯಾಗಿ ಹೊರಹೊಮ್ಮಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಕಂಪಾಸ್ ಕಾರು ಆರಂಭಿಕವಾಗಿ ರೂ.15.60 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 23.11 ಲಕ್ಷ ಬೆಲೆ ಪಡೆದುಕೊಂಡಿದೆ.

ತನ್ನ ತಂಗಿಗಾಗಿ ದುಬಾರಿ ಉಡುಗೊರೆ ನೀಡಿದ ಬಾಲಿವುಡ್ ನಟಿ ತಾಪ್ಸಿ ಪನ್ನು

ಇದರಲ್ಲಿ ನಟಿ ತಾಪ್ಸಿ ಪನ್ನು ಅವರು ತಮ್ಮ ಸಹೋದರಿಗಾಗಿ ಕಂಪಾಸ್ 2.0 ಲಿಮಿಟೆಡ್ ಪ್ಲಸ್ ಮಾದರಿಯನ್ನು ಖರೀದಿಸಿದ್ದು, ಇದು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.21.33 ಲಕ್ಷ ಬೆಲೆ ಪಡೆದುಕೊಂಡಿದೆ. ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲಿ ಲಭ್ಯವಿರುವ ಜೀಪ್ ಕಂಪಾಸ್ ಕಾರು ಡೀಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಟರ್ಬೋ ಎಂಜಿನ್ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ 1.4-ಲೀಟರ್ ಟರ್ಬೋ ಎಂಜಿನ್ ಪಡೆದುಕೊಂಡಿದೆ.

ತನ್ನ ತಂಗಿಗಾಗಿ ದುಬಾರಿ ಉಡುಗೊರೆ ನೀಡಿದ ಬಾಲಿವುಡ್ ನಟಿ ತಾಪ್ಸಿ ಪನ್ನು

ಆಕರ್ಷಕ ಹೊರ ನೋಟ, ಬಲಿಷ್ಠ ಎಂಜಿನ್ ಮತ್ತು ಆಫ್ ಚಾಲನೆಗೆ ಸಹಕಾರಿಯಾಗುವ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯವು ಜೀಪ್ ಕಂಪಾಸ್ ಖರೀದಿಗೆ ಪ್ಲಸ್ ಪಾಯಿಂಟ್ ಎನ್ನಬಹುದಾಗಿದ್ದು, 16-ಇಂಚಿನ ಅಲಾಯ್ ವೀಲ್ಹ್, ಪನೋರಮಿಕ್ ಸನ್‌ರೂಫ್, ಆಕರ್ಷಕ ಗ್ರಿಲ್ ಸ್ಲಾಟ್, ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಫೀಚರ್ಸ್ ಹೊಂದಿದೆ. ಹಾಗೆಯೇ ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ 7-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಕಲ್ವಿಸಿರುವ ಜೀಪ್ ಕಾಂಪಾಸ್ ಸಂಸ್ಥೆಯು ಪರ್ಫಾಮೆನ್ಸ್ ಬಯಸುವ ಗ್ರಾಹಕರಿಗೆ ಆಟೋ, ಸ್ನೋ, ಸ್ಯಾಂಡ್ ಮತ್ತು ಮಡ್ ಮೊಡ್‌ಗಳಲ್ಲಿ ಚಾಲನಾ ಸೌಲಭ್ಯ ನೀಡಿದೆ.

ತನ್ನ ತಂಗಿಗಾಗಿ ದುಬಾರಿ ಉಡುಗೊರೆ ನೀಡಿದ ಬಾಲಿವುಡ್ ನಟಿ ತಾಪ್ಸಿ ಪನ್ನು

ಇನ್ನು ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್, ಆಫ್ ವೈಟ್ ಬಣ್ಣದೊಂದಿಗೆ ಕೂಡಿದ ಸೀಟುಗಳು, ಅತ್ಯುತ್ತಮ ಆಸನ ವ್ಯವಸ್ಥೆ, ಹಿಂಭಾಗದ ಸೀಟಿನ ಮಧ್ಯದ ಆರ್ಮ್ ರೆಸ್ಟ್, 5-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಯುಎಸ್‌ಬಿ ಸೇರಿದಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಹಲವು ತಾಂತ್ರಿಕ ಸೌಲಭ್ಯಗಳು ಇದರಲ್ಲಿವೆ.

ತನ್ನ ತಂಗಿಗಾಗಿ ದುಬಾರಿ ಉಡುಗೊರೆ ನೀಡಿದ ಬಾಲಿವುಡ್ ನಟಿ ತಾಪ್ಸಿ ಪನ್ನು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇದರೊಂದಿಗೆ ಜೀಪ್ ಕಂಪಾಸ್ ಮಾದರಿಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 6 ಏರ್‌ಬ್ಯಾಗ್, ಡ್ಯುಯಲ್ ಸ್ಟೇಜ್ ಆಕ್ಟಿವೇಷನ್, ಟಿಸಿಎಸ್, ಇಬಿಡಿ, ಇಎಸ್‌ಪಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಮತ್ತು ಎಬಿಎಸ್ ತಂತ್ರಜ್ಞಾನಗಳ ಜೋಡಣೆ ಮಾಡಲಾಗಿದ್ದು, ಕೀ ಲೇಸ್ ಡ್ರೈವಿಂಗ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒದಗಿಸಲಾಗಿದೆ.

ತನ್ನ ತಂಗಿಗಾಗಿ ದುಬಾರಿ ಉಡುಗೊರೆ ನೀಡಿದ ಬಾಲಿವುಡ್ ನಟಿ ತಾಪ್ಸಿ ಪನ್ನು

ಸದ್ಯ ಮಾರುಕಟ್ಟೆಯಲ್ಲಿ ಅತಿಕಡಿಮೆಗಳಲ್ಲಿ ದೊರೆಯುತ್ತಿರುವ ಜೀಪ್ ನಿರ್ಮಾಣದ ಕಾರುಗಳಲ್ಲಿ ಕಂಪಾಸ್ ಕೂಡಾ ಒಂದಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪಾಸ್ ಮಾರಾಟದಲ್ಲಿ ಕೆಲವು ಬದಲಾವಣೆಗಳನ್ನು ತಂದಿರುವ ಜೀಪ್ ಸಂಸ್ಥೆಯು ಟ್ರೈಲ್‌ಹಾವ್ಕ್ ಎನ್ನುವ ಮತ್ತೊಂದು ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ತನ್ನ ತಂಗಿಗಾಗಿ ದುಬಾರಿ ಉಡುಗೊರೆ ನೀಡಿದ ಬಾಲಿವುಡ್ ನಟಿ ತಾಪ್ಸಿ ಪನ್ನು

ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಯ ಜೀಪ್ ಕಂಪಾಸ್ ಕಾರಿಗಿಂತಲೂ ತುಸು ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಕಂಪಾಸ್ ಟ್ರೈಲ್‌ಹಾವ್ಕ್ ಮಾದರಿಯು ದೆಹಲಿ ಎಕ್ಸ್‌‌ಶೋರೂಂ ಪ್ರಕಾರ ರೂ.26.80 ಲಕ್ಷ ಬೆಲೆ ಹೊಂದಿದ್ದು, ಜಾರಿಗೆ ಬರಲಿರುವ ಬಿಎಸ್-6 ವೈಶಿಷ್ಟ್ಯತೆಯ 2.0-ಲೀಟರ್ ಮಲ್ಟಿಜೆಟ್ ಟರ್ಬೋ ಡೀಸೆಲ್ ಎಂಜಿನ್‌ನೊಂದಿಗೆ ಅಕ್ರಮಣಕಾರಿ ಬಂಪರ್, ಟೋ ಹುಕ್ಸ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, 17-ಇಂಚಿನ ಅಲಾಯ್ ವೀಲ್ಹ್ ಮತ್ತು ಪನೋರಮಿಕ್ ಸನ್‍ರೂಫ್ ಅನ್ನು ಪಡೆದುಕೊಂಡಿದೆ.

Article Published On: Wednesday, July 17, 2019, 19:13 [IST]
English summary
Actress Taapsee Bought Jeep Compass SUV For Her Sister. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+