ಬಾಲಿವುಡ್ ನಟಿಗಿಂತ ಕಮ್ಮಿಯಿಲ್ಲ ಬೆಂಕಿ ತನಿಷಾ ಕುಪ್ಪಂಡ: ಕೋಟಿ ಬೆಲೆಯ ಕಾರು ಖರೀದಿ
ನಟಿ ತನಿಷಾ ಕುಪ್ಪಂಡ (Tanisha Kuppanda) ಕರ್ನಾಟಕದಲ್ಲಿ ಸದಾ ಸುದ್ದಿಯಲ್ಲಿರುವ ಸೆಲಬ್ರಿಟಿ. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದರೂ ಬಿಗ್ ಬಾಸ್ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ತನಿಷಾ ಕುಪ್ಪಂಡ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ನಟಿ ತನಿಷಾ ಕುಪ್ಪಂಡ ಅವರು ಐಷಾರಾಮಿ ಲ್ಯಾಂಡ್ ರೋವರ್ ಡಿಸ್ಕವರಿ (land rover discovery) ಕಾರನ್ನು ಖರೀದಿ ಮಾಡಿದ್ದಾರೆ. ಸಿನಿಮಾದ ಜೊತೆ ನಟಿ ತನಿಷಾ ಕುಪ್ಪಂಡ ಅವರು ಉದ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.
'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ನಟಿಸಿದ್ದ ತನಿಷಾ ಕುಪ್ಪಂಡ ಆವರು ನಂತರದಲ್ಲಿ 'ಪೆಂಟಗನ್' ಸಿನಿಮಾದಲ್ಲಿ ಸಖತ್ ಬೋಲ್ಡ್ ಪಾತ್ರದ ಮೂಲಕ ಪಡ್ಡೆ ಹುಡುಗರ ಹೃದತ ಗೆದ್ದಿದ್ದರು. 'ಬಿಗ್ ಬಾಸ್' ಕನ್ನಡ ಸೀಸನ್ 10ರ ರಿಯಾಲಿಟಿ ಶೋ ಮೂಲಕ ಹೆಚ್ಚು ಗಮನಸೆಳೆದ ತನಿಷಾ ಅವರು ಬೆಂಗಳೂರಿನಲ್ಲಿ ಸಿಲ್ವರ್ ಜ್ಯುವೆಲರಿ ಶಾಪ್ ಅನ್ನು ಹೊಂದಿದ್ದಾರೆ. ಇದೀಗ ನಟಿ ತನಿಷಾ ಕುಪ್ಪಂಡ ಲ್ಯಾಂಡ್ ರೋವರ್ ಡಿಸ್ಕವರಿ ಕಾರನ್ನು ಖರೀದಿಸಿದ್ದಾರೆ.

ನಟಿ ತಮ್ಮ ಹೊಸ ಕಾರನ್ನು ವಿತರಣೆ ಪಡೆದುಕೊಳ್ಳುವ ವೀಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಅವರು ಬಿಎಂಡಬ್ಲ್ಯು ಕಾರಿನಲ್ಲಿ ಬಂದು ಹೊಸ ಕಾರಿನ ವಿತರಣೆ ಪಡೆಯುವುದು ನೋಡಬಹುದು. ಈ ವೀಡಿಯೋ ಕೆಳಕಡೆ ನಟ ನಟಿಯರು ಹಾಗೂ ಅಭಿಮಾನಿಗಳು ತನಿಷಾ ಕುಪ್ಪಂಡಗೆ ಕಾಮೆಂಟ್ ಮೂಲಕ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋನಲ್ಲಿ ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್ ನಡುವೆ ಆತ್ಮೀಯರಾಗಿದ್ದಾರೆ. ಈ ರಿಯಾಲಿಟಿ ಶೋ ಮುಗಿದ ಬಳಿಕವೂ ಅವರ ನಡುವಿನ ಸ್ನೇಹ ಮುಂದುವರಿದಿದೆ. ಹಾಗಾಗಿ ಅವರಿಬ್ಬರು ಮದುವೆ ಆಗಲಿ ಎಂದು ಕೆಲವು ಅಭಿಮಾನಿಗಳು ಆಸೆಪಟ್ಟು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುತ್ತಿರುತ್ತಾರೆ.

ನಟಿ ತನಿಷಾ ಕುಪ್ಪಂಡ ಅವರು ಖರೀದಿಸಿದ ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.97 ಲಕ್ಷದಿಂದ ರೂ.1.43 ಕೋಟಿವರೆಗೆ ಇದೆ. ಈ ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸೂಕ್ಷ್ಮವಾದ ಮತ್ತು ಗಮನಾರ್ಹವಾದ ಸ್ಟೈಲಿಂಗ್ ಟ್ವೀಕ್‌ಗಳೊಂದಿಗೆ ಬರುತ್ತದೆ. ಇವುಗಳಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್(ಡೇಟೈಮ್ ರನ್ನಿಂಗ್ ಲೈಟ್ಸ್) ನೊಂದಿಗೆ ಹೊಸ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ ಲ್ಯಾಂಪ್ ಹೊಂದಿದೆ.
ಡಿಸ್ಕವರಿ ಎಸ್‍ಯುವಿಗೆ ಹೆಚ್ಚಿನ ಸ್ಪೋರ್ಟಿ ಲುಕ್ ಹೊಂದಿದೆ. ಇನ್ನು ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯ ಸೈಡ್ ಪ್ರೊಫೈಲ್ ನಲ್ಲಿ ಉದ್ದಕ್ಕೂ ತೀಕ್ಷ್ಣವಾದ ಕ್ರೀಸ್ ನೀಡಿದೆ. ಡಿಸ್ಕವರಿ ಸ್ಟ್ಯಾಂಡರ್ಡ್ 20-ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ, ಇದರೊಂದಿಗೆ 21 ಇಂಚಿನ ವ್ಹೀಲ್ ಗಳನ್ನು ಆಯ್ಕೆಯಾಗಿ ನೀಡಲಾಗುತ್ತದೆ.ಇನ್ನು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲೈಟ್ ಗಳನ್ನು ಹೊಂದಿವೆ. ಹಿಂಭಾಗದಲ್ಲಿ 'ಡಿಸ್ಕವರಿ' ಬ್ಯಾಡ್ಜಿಂಗ್ ಅನ್ನು ಸಹ ಹೊಂದಿದೆ. ಹಿಂಭಾಗದ ಬಂಪರ್ ಅನ್ನು ಸಹ ನವೀಕರಿಸಲಾಗಿದೆ.
ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಯಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 296 ಹೆಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಇದರ 3.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 296 ಬಿಹೆಚ್‌ಪಿ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 3.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ.
ಈ ಡಿಸ್ಕವರಿ ಎಸ್‍ಯುವಿಯಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11.4 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ಲಿಯರ್‌ಸೈಟ್ ಗ್ರೌಂಡ್ ವ್ಯೂ ಹೊಂದಿರುವ 3ಡಿ ಸರೌಂಡ್ ಕ್ಯಾಮೆರಾ, 15-ವ್ಯಾಟ್ ವೈರ್‌ಲೆಸ್ ಚಾರ್ಜಿಂಗ್, ಪಿಎಂ 2.5 ಕ್ಯಾಬಿನ್ ಏರ್ ಫಿಲ್ಟರೇಶನ್, ಮತ್ತು ಎರಡನೇ ಸಾಲಿನ ಸೀಟುಗಳು 160 ಎಂಎಂ ವರೆಗೆ ಎಲೆಕ್ಟ್ರಾನಿಕ್ ಹೊಂದಾಣಿಕೆ ಮಾಡಬಹುದಾಗಿದೆ.


Click it and Unblock the Notifications








