Just In
- 3 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 5 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 5 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 7 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಷಾರಾಮಿ ಆಡಿ ಕ್ಯೂ7 ಎಸ್ಯುವಿ ಖರೀದಿಸಿದ ನಟಿ ತೇಜಸ್ವಿ ಪ್ರಕಾಶ್
ಸಿನಿಮಾ ರಂಗದಲ್ಲಿರುವ ನಟರು ಮಾತ್ರವಲ್ಲದೇ ನಟಿಯರಿಗೂ ಕೂಡ ಕಾರು ಕ್ರೇಜ್ ಹೆಚ್ಚು ಇರುತ್ತದೆ. ಸಿನಿಮಾ ನಟಿಯರು ಕೂಡ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ನಟಿಯರು ತಮ್ಮ ಮೆಚ್ಚಿನ ಬ್ರ್ಯಾಂಡ್ನ ಕಾರುಗಳನ್ನು ಖರೀದಿಸುತ್ತಾರೆ.
ಇತ್ತೀಚೆಗೆ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಹೊಸ ಆಡಿ ಕ್ಯೂ7 ಖರೀದಿಸಿದ್ದಾರೆ. ಅವರು ಬಿಳಿ ಬಣ್ಣದ ಎಸ್ಯುವಿಯನ್ನು ಆರಿಸಿಕೊಂಡಿದ್ದಾರೆ. ಹೊಸ ಆಡಿ ಕ್ಯೂ7 ಎಸ್ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.79.99 ಲಕ್ಷವಾಗಿದೆ. ನಟಿ ಅವರು ಯಾವ ರೂಪಾಂತರವನ್ನು ಆರಿಸಿಕೊಂಡರು ಎಂಬ ಮಾಹಿತಿ ಬಹಿರಂಗವಾಗಿಲ್ಲ. ಈ ಆಡಿ ಕ್ಯೂ7 ಎಸ್ಯುವಿಯು ಸೆಲೆಬ್ರಿಟಿಗಳಲ್ಲಿ ಸಾಕಷ್ಟು ಜನಪ್ರಿಯ ಆಯ್ಕೆಯಾಗಿದೆ. ಸಂಜಯ್ ಕಪೂರ್ ಅವರ ಮಗಳು ಶನಯಾ ಕಪೂರ್ ಕೂಡ ಇತ್ತೀಚೆಗೆ ಕ್ಯೂ7 ಅನ್ನು ಖರೀದಿಸಿದರು. ಆಡಿ ಕ್ಯೂ7 ಎಸ್ಯುವಿ ಇತರ ಸೆಲೆಬ್ರಿಟಿಗಳು ಸಂಜಯ್ ದತ್, ಯಾಮಿ ಗೌತಮ್, ಶ್ರುತಿ ಹಾಸನ್, ರಾಕೇಶ್ ಬಾಪಟ್ ಮತ್ತು ಕೃತಿ ಸನೋನ್ ಆಗಿದೆ.
ನಟಿ ತೇಜಸ್ವಿ ಅವರು ಹೊಸ ಎಸ್ಯುವಿಯನ್ನು ವಿತರಣೆ ಪಡೆಯುವ ಚಿತ್ರಗಳು ಮತ್ತು ವೀಡಿಯೊವನ್ನು ವರೀಂದರ್ ಚಾವ್ಲಾ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ. ತೇಜಸ್ವಿ ಅವರು ತೆಂಗಿನಕಾಯಿ ಒಡೆಯುವ ದೃಶ್ಯವು ವಿಡಿಯೋದಲ್ಲಿ ಇದೆ. ಈ ಹೊಸ ಕಾರಿನ ವಿತರಣೆ ಪಡೆಯುವ ವೇಳೆ ತೇಜಸ್ವಿ ಜೊತೆ ಕರಣ್ ಕುಂದ್ರಾ ಅವರು ಇದ್ದರು.
ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಸೀಸನ್ 15ರಲ್ಲಿ ತೇಜಸ್ವಿ ಪ್ರಕಾಶ್ ವಿಜೇತರಾಗಿದ್ದರು. ಬಿಗ್ ಬಾಸ್ನಲ್ಲಿ ಗೆದ್ದು ಸುಮಾರು 40 ಲಕ್ಷ ರೂಗಳನ್ನು ಬಹುಮಾನವಾಗಿ ನಟಿ ಪಡೆದಿದ್ದಾರೆ. ಜನಪ್ರಿಯ 'ನಾಗಿನ್' ಧಾರವಾಹಿಯ ಹೊಸ ಸೀಸನ್ನಲ್ಲಿ ತೇಜಸ್ವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಟಿ ತೇಜಸ್ವಿ ಪ್ರಕಾಶ್ ಖರೀದಿಸಿದ ಆಡಿ ಕ್ಯೂ7 ಕಾರಿನ ಬಗ್ಗೆ ಹೇಳುವುದಾದರೆ, ಆಡಿ ಕ್ಯೂ7 ಅನ್ನು ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಸೇರಿದಂತೆ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಇದು ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ಯುನಿಟ್ ಆಗಿ ಭಾರತಕ್ಕೆ ಬರುತ್ತದೆ ಮತ್ತು ಇದನ್ನು ಔರಂಗಾಬಾದ್ನಲ್ಲಿರುವ ಸ್ಕೋಡಾ ಆಟೋ ಫೋಕ್ಸ್ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸ್ಥಾವರದಲ್ಲಿ ತಯಾರಿಸಲಾಗುವುದು.
ಈ ಎರಡು ರೂಪಾಂತರಗಳಲ್ಲಿ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ. ನವೀಕರಿಸಿದ ಆಡಿ ಕ್ಯೂ7 ಎಸ್ಯುವಿಯಲ್ಲಿ 3.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 335 ಬಿಹೆಚ್ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಹೊಸ ಕ್ಯೂ5 ನಂತೆ ಕ್ಯೂ7 ಕೂಡ ಮೈಲ್ಡ್ -ಹೈಬ್ರಿಡ್ ಸಿಸ್ಟಂ ಅನ್ನು ಪಡೆಯುತ್ತದೆ, ಇದು 48-ವೋಲ್ಟ್ ಎಲೆಕ್ಟ್ರಿಕ್ ಮೋಟಾರು, ಲಿಥಿಯಂ-ಐಯಾನ್ ಬ್ಯಾಟರಿ ಮತ್ತು ಬೆಲ್ಟ್ ಆಲ್ಟರ್ನೇಟರ್ ಸ್ಟಾರ್ಟರ್ (BAS) ಅನ್ನು ಒಳಗೊಂಡಿರುತ್ತದೆ. ಇನ್ನು ಈ ಹೊಸ ಆಡಿ ಕ್ಯೂ7 ಫೇಸ್ಲಿಫ್ಟ್ ಎಸ್ಯುವಿಯು 250 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ,
ಬ್ರ್ಯಾಂಡ್ನ ಕ್ವಾಟ್ರೊ ಆಲ್-ವೀಲ್-ಡ್ರೈವ್ ಸಿಸ್ಟಂ ಸಹ ಈ ಎಸ್ಯುವಿಯಲ್ಲಿ ನೀಡಿದೆ. ಈ ಹೊಸ ಆಡಿ ಕ್ಯೂ7 ಫೇಸ್ಲಿಫ್ಟ್ನ ಎಂಟ್ರಿ ಲೆವೆಲ್ ಪ್ರೀಮಿಯಂ ಪ್ಲಸ್ ರೂಪಾಂತರವು 19-ಇಂಚಿನ ಅಲಾಯ್ ವ್ಹೀಲ್ ಗಳು, ಎಂಟು ಏರ್ಬ್ಯಾಗ್ಗಳು, ಪನರೋಮಿಕ್ ಸನ್ರೂಫ್, ಎಲ್ಇಡಿ ಹೆಡ್ಲ್ಯಾಂಪ್ಗಳು, ಅಡಾಪ್ಟಿವ್ ಏರ್ ಸಸ್ಪೆನ್ಷನ್, ಆಂಬಿಯೆಂಟ್ ಲೈಟಿಂಗ್ ಮತ್ತು ಎಲೆಕ್ಟ್ರಿಕಲಿ-ಹೊಂದಾಣಿಕೆ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ..
ಇದರೊಂದಿಗೆ ನಾಲ್ಕು- ಮುಂಭಾಗದ ಸೀಟುಗಳಿಗೆ ಲಂಬೂರ್ ಸಂಪೂರ್ಟ್, ಪಾರ್ಕಿಂಗ್ ಅಸಿಸ್ಟ್ ಜೊತೆಗೆ ಕ್ರೂಸ್ ಕಂಟ್ರೋಲ್, ಫ್ಹೋರ್ ಜೋನ್ ಕಂಟ್ರೋಲ್, ಪವರ್-ಹೊಂದಾಣಿಕೆ ಮುಂಭಾಗದ ಸೀಟುಗಳು ಮತ್ತು ಡ್ರೈವರ್ ಸೀಟ್ಗಾಗಿ ಮೆಮೊರಿ ಫಂಕ್ಷನ್, ವರ್ಚುವಲ್ ಕಾಕ್ಪಿಟ್ ಮತ್ತು ಲೇನ್ ಡಿಪರ್ಚರ್ ಎಕ್ಸಿಟ್ ಅನ್ನು ಒಳಗೊಂಡಿದೆ.
ಇದರೊಂದಿಗೆ ಡ್ಯುಯಲ್-ಸ್ಕ್ರೀನ್ ಎಂಎಂಐ ಪ್ಲಸ್, ಆಡಿ ಡ್ರೈವ್ ಆಯ್ಕೆ, ಆಡಿ ಸೌಂಡ್ ಸಿಸ್ಟಮ್, ವೈರ್ಲೆಸ್ ಚಾರ್ಜಿಂಗ್ನೊಂದಿಗೆ ಆಡಿ ಫೋನ್ ಬಾಕ್ಸ್ ಮತ್ತು ಆಡಿ ಸ್ಮಾರ್ಟ್ಫೋನ್ ಇಂಟರ್ಫೇಸ್ ಅನ್ನು ಒಳಗೊಂಡಿದೆ. ಮೇಲೆ ತಿಳಿಸಲಾದ ವೈಶಿಷ್ಟ್ಯಗಳ ಜೊತೆಗೆ, ಆಡಿ ಕ್ಯೂ7 ಫೇಸ್ಲಿಫ್ಟ್ ಟೆಕ್ನಾಲಜಿ ರೂಪಾಂತರವು ಅಡಾಪ್ಟಿವ್ ವಿಂಡ್ಶೀಲ್ಡ್ ವೈಪರ್ಗಳನ್ನು ಪಡೆಯುತ್ತದೆ, ಇನ್ನು ಸೆನ್ಸರ್-ಕಂಟ್ರೋಲ್ಡ್ ಲಗೇಜ್ ಕಂಪಾರ್ಟ್ಮೆಂಟ್ ರೀಲಿಸ್ ಕಂಫರ್ಟ್ ಕೀ, ಹಿಂಭಾಗದಲ್ಲಿ ಚಾರ್ಜಿಂಗ್ ಫಂಕ್ಷನ್ ನೊಂದಿಗೆ USB ಪೋರ್ಟ್ಗಳು, ಆಡಿ ಪಾರ್ಕ್ ಅಸಿಸ್ಟ್ ಜೊತೆಗೆ 3D ಸರೌಂಡ್ ಕ್ಯಾಮೆರಾಗಳು, 730W ಬ್ಯಾಂಗ್ ಮತ್ತು ಒಲುಫ್ಸೆನ್ ಮೂಲದ ಸರೌಂಡ್ ಸೌಂಡ್ ಸಿಸ್ಟಮ್, ಮತ್ತು ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ಲ್ಯಾಂಪ್ಗಳನ್ನು ಅನ್ನು ಹೊಂದಿದೆ.
ಈ ಎಸ್ಯುವಿಯು ವಿನ್ಯಾಸ ಬದಲಾವಣೆಗಳ ಬಗ್ಗೆ ಹೇಳುವುದಾದರೆ, ಈ ಹೊಸ ಎಸ್ಯುವಿಯಲ್ಲಿ ದೊಡ್ಡದಾದ, ಸಿಂಗಲ್ ಫ್ರೇಮ್ ಗ್ರಿಲ್ ಅನ್ನು ಹೊಂದಿದ್ದು, ನೇರವಾದ ಸ್ಲ್ಯಾಟ್ಗಳು, ಸ್ಪೋರ್ಟಿಯರ್ ಬಂಪರ್ ಎರಡು ಭಾಗಗಳ ಸೈಡ್ ಏರ್ ಇನ್ಲೆಟ್ಗಳು, ದಪ್ಪ ಕ್ಲಾಡಿಂಗ್ ಮತ್ತು ಎಲ್-ಆಕಾರದ ಏರ್ ಸ್ಪ್ಲಿಟರ್ ಅನ್ನು ಹೊಂದಿದೆ. ಈ ಆಡಿ ಲೇಸರ್ ಲೈಟ್ ನೊಂದಿಗೆ HD ಮ್ಯಾಟ್ರಿಕ್ಸ್ ಎಲ್ಇಡಿ ಒಂದು ಆಯ್ಕೆಯಾಗಿ ಬರುತ್ತದೆ. ಅದರ ಕೆಲವು ಇತರೆ ವಿನ್ಯಾಸಗಳು ಹೊಸದಾಗಿ ವಿನ್ಯಾಸಗೊಳಿಸಲಾದ 19-ಇಂಚಿನ ಅಲಾಯ್ ವ್ಹೀಲ್ ನೊಂದಿಗೆ ಕ್ರೋಮ್ ಸ್ಟ್ರಿಪ್ ಮೂಲಕ ಕನೆಕ್ಟ್ ಆಗಿರುವ ಹೊಸ ಟೈಲ್ಲ್ಯಾಂಪ್ಗಳು ಮತ್ತು ನವೀಕರಿಸಿದ ರೇರ್ ಬಂಪರ್ ಅನ್ನು ಒಳಗೊಂಡಿರುತ್ತದೆ.
ಈ ಎಸ್ಯುವಿ ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯು 11 ಎಂಎಂ ಹೆಚ್ಚುವರಿ ಸ್ಥಳಾವಕಾಶದೊಂದಿಗೆ 5063 ಎಂಎಂ ಉದ್ದ ಹೊಂದಿದೆ. ಇದು 1970 ಎಂಎಂ ಅಗಲ ಮತ್ತು 1741 ಎಂಎಂ ಎತ್ತರವನ್ನು ಹೊಂದಿದೆ. ಕ್ಯಾಬಿನ್ ಒಳಗೂ ಆಡಿ ಕಂಪನಿಯು ಸಮಗ್ರವಾಗಿ ನವೀಕರಣಗಳನ್ನು ಪರಿಚಯಿಸಿದೆ. ಇದು ಪಿಯಾನೋ ಬ್ಲಾಕ್, ಕ್ರೋಮ್ ಮತ್ತು ಬ್ರಷ್ಡ್ ಅಲ್ಯೂಮಿನಿಯಂ ಹೈಲೈಟ್ಗಳ ಜೊತೆಗೆ ಸಾಕಷ್ಟು ಸುಧಾರಿಸಿದೆ.
ಹೊಸ ಆಡಿ ಕ್ಯೂ7 ಫೇಸ್ಲಿಫ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಕ್ಯು ಎಕ್ಸ್5, ಮರ್ಸಿಡಿಸ್ ಬೆಂಝ್ ಜಿಎಲ್ಇ, ವೊಲ್ವೊ ಎಕ್ಸ್ಸಿ90 ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಎಸ್ಯುವಿಗಳಿಗೆ ಪೈಪೋಟಿ ನೀಡುತ್ತದೆ.