ಚಲಿಸುತ್ತಿದ್ದ ಮಹೀಂದ್ರಾ XUV700 ಕಾರಿನ ಡ್ರೈವರ್ ನಾಪತ್ತೆ!: ADAS ಫೀಚರ್‌ ದುರ್ಬಳಕೆ ಹೀಗಾ?

ಇತ್ತೀಚಿನ ದಿನಗಳಲ್ಲಿ ದುಬಾರಿ ಕಾರುಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ಒಂದು ಫೀಚರ್‌ ಈ ಆಡಾಸ್‌ (ADAS) ಅಥವಾ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟ್‌ ಸಿಸ್ಟಂ. ಅಂದರೆ ಚಾಲಕನಿಗೆ ಡ್ರೈವ್‌ ಮಾಡುವ ಸಂಧರ್ಭದಲ್ಲಿ ಸಹಾಯ ಮಾಡುವುದು ಈ ಪೀಚರ್‌ನ ಪ್ರಮುಖವಾದ ಕೆಲಸ. ರಸ್ತೆಯ ರಚನೆ ಮತ್ತು ಲೈನ್‌ಗಳನ್ನು ಅವಲೋಕಿಸಿಕೊಂಡು ಕಾರ್ಯ ನಿರ್ವಹಿಸುತ್ತದೆ.

ಇನ್ನು ಈ ಫೀಚರ್‌ ಇತ್ತೀಚೆಗೆ ಹಲವು ಕಾರುಗಳಲ್ಲಿ ಬಂದಿದ್ದು, ಜನರು ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಹಲವು ಬಾರಿ ಮಾಲೀಕರು ಈ ಫೀಚರ್‌ನ ದುರುಪಯೋಗ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ವಿಡಿಯೋ ಮಾಡಿ ಪೋಸ್ಟ್‌ ಮಾಡುವುದನ್ನು ನಾವು ನೋಡಿದ್ದೇವೆ. ಇಲ್ಲೊಂದು ಕಡೆ ಇದೇ ರೀತಿಯ ಮೂರ್ಖತನದ ಪರಮಾವಧಿಯ ವರ್ತನೆಯನ್ನು ತೋರಿದ್ದಾನೆ. ಇಂದಿನ ಈ ಲೇಖನದಲ್ಲಿ ಇದರ ಕುರಿತಾಗಿ ನೋಡೋಣ.

ADAS Misuse, Driver Disappeared From Running Mahindra XUV 700

ಮಹೀಂದ್ರಾ XUV700 ಎಂಬ ಕಾರು 2021 ರಲ್ಲಿ ಭಾರತೀಯ ಮಾರುಕಟ್ಟೆಗೆ ಲಾಂಚ್‌ ಆದಾಗ ಭಾರೀ ಸಂಚಲನವನ್ನೇ ಸೃಸ್ಟಿ ಮಾಡಿತ್ತು. ಮಾರುಕಟ್ಟೆಗೆ ಬಂದಷ್ಟೇ ವೇಗವಾಗಿ ಇದು ಜನರ ಮನದಲ್ಲಿ ಜಾಗವನ್ನೂ ಕಂಡು ಕೊಂಡಿತ್ತು. ಇದರಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದು ಇದರಲ್ಲಿದ್ದ ಆಡಾಸ್‌ (ADAS) ಅಥವಾ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟ್‌ ಸಿಸ್ಟಂ ಎಂಬ ಫೀಚರ್‌.

ಇದೀಗ ಮಹೀಂದ್ರಾ XUV700 ಕಾರಿನ ಲೆವೆಲ್‌ 2 ಅಡಾಸ್‌ ಬಳಸಿಕೊಂಡು ಕಾರು ಚಲಾವಣೆ ಮಾಡುತ್ತಾ, ಅದರ ಚಾಲಕ ಆ ಕಾರಿನ ಮೂರನೇ ಸಾಲಿನ ಸೀಟ್‌ನಲ್ಲಿ ಕುಳಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಹಿಂದೆಯೂ ಸಹ ಈ ಮಹೀಂದ್ರಾ XUV700 ಕಾರಿನ ಲೆವೆಲ್‌ 2 ಅಡಾಸ್ ಬಳಸಿಕೊಂಡು ಇದನ್ನು ದುರಪಯೋಗ ಪಡಿಸಿಕೊಂಡಿದ್ದ ವಿಡಿಯೋ ಸಹ ವೈರಲ್‌ ಆಗಿತ್ತು.

ಈ ವಿಡಿಯೋದಲ್ಲಿ ಚಾಲಕ ನಿದ್ದೆ ಮತ್ತು ಫೋನ್‌ಕಾಲ್ ಎರಡೂ ಸಹ ಜೀವನಕ್ಕೆ ಮುಖ್ಯ ಎಂಬ ಕಾಪ್ಷನ್‌ ನೀಡಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾನೆ. ವೈರಲ್‌ ಆಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಟೀಕಿಸುತ್ತಿದ್ದು, ಎಂದೂ ಕೂಡ ಭಾರತದಂತಹ ರಾಷ್ಟ್ರಗಳಲ್ಲಿ ಈ ರೀತಿ ಟೆಕ್ನಾಲಜಿಯನ್ನು ನಂಬಿಕೊಂಡು ಅಪಾಯಕಾರಿ ವರ್ತನೆಗಳಲ್ಲಿ ತೊಡಗಬಾರದು ಎಂದು ಹೇಳಿದ್ದಾರೆ.

ಇನ್ನು ಹೊಸದಾಗಿ ಇತ್ತೀಚೆಗೆ ಬಿಡುಗಡೆಗೊಂಡ 2024ರ ಮಹೀಂದ್ರಾ XUV700 ಎಸ್‍ಯುವಿಯ ಎಂಜಿನ್ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ಮಾದರಿಯು 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಪಡೆಯುತ್ತದೆ, ಆದರೆ ಡೀಸೆಲ್ ರೂಪಾಂತರವು 2.2-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಇದು ಹಿಂದಿನ ಮಾದರಿಯಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಇವುಗಳ ಪವರ್ ಮತ್ತು ಟಾರ್ಕ್ ಅಂಕಿಅಂಶಗಳು ಒಂದೇ ಆಗಿದೆ.

ADAS Misuse, Driver Disappeared From Running Mahindra XUV 700

ಬೇಸ್ ಸ್ಪೆಕ್ XUV700 SUV ಆಂಡ್ರಾಯ್ಡ್ ಆಟೋ ಜೊತೆಗೆ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆದರೆ, ನಾಲ್ಕು ಸ್ಪೀಕರ್‌ಗಳು, 7.0-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಿಲ್ಟ್-ಹೊಂದಾಣಿಕೆ ಸ್ಟೀರಿಂಗ್, ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್, ಪವರ್ ವಿಂಡೋಗಳು, ಫಾಲೋ ಮಿ ಹೋಮ್ ಹೆಡ್‌ಲೈಟ್‌ಗಳು, ಪವರ್ ವಿಂಗ್ ಮಿರರ್‌ಗಳು ಮತ್ತು ISOFIX ಆಂಕರ್‌ಗಳು ಹೊಂದಿರಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, February 16, 2024, 13:15 [IST]
English summary
Adas misuse driver disappeared from running mahindra xuv 700
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+