ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಕಾರುಗಳಲ್ಲಿ ರೇರ್ ವೀವ್ ಮಿರರ್ ಹಾಗೂ ಸೈಡ್ ವೀವ್ ಮಿರರ್‌ಗಳನ್ನು ಕಾಣಬಹುದು. ಕಾರಿನ ಒಳಗೆ ರೇರ್ ವೀವ್ ಮಿರರ್‌ಗಳನ್ನು ನೀಡಲಾಗಿರುತ್ತದೆ. ಇವುಗಳು ಹಿಂದಿನಿಂದ ಬರುವ ವಾಹನಗಳನ್ನು ನೋಡಲು ಚಾಲಕರಿಗೆ ನೆರವಾಗುತ್ತವೆ. ಇದೇ ವೇಳೆ ಸೈಡ್ ವೀವ್ ಮಿರರ್‌ಗಳನ್ನು ಕಾರಿನ ಎರಡೂ ಬದಿಗಳಲ್ಲಿ ನೀಡಲಾಗಿರುತ್ತದೆ.

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಇವುಗಳ ಮೂಲಕ ಚಾಲಕರು ಹಿಂದಿನಿಂದ ಬರುವ ವಾಹನಗಳನ್ನು ನೋಡಬಹುದು. ಕಾರುಗಳಿಗೆ ರೇರ್ ವೀವ್ ಮಿರರ್‌ಗಳು ಹಾಗೂ ಸೈಡ್ ವೀವ್ ಮಿರರ್‌ಗಳು ಬಹಳ ಮುಖ್ಯ. ರೇರ್ ವೀವ್ ಮಿರರ್‌ಗಳು ಹಾಗೂ ಸೈಡ್ ವೀವ್ ಮಿರರ್‌ಗಳು ಕಾರುಗಳು ಅಪಘಾತಕ್ಕೆ ಸಿಲುಕುವ ಸಾಧ್ಯತೆಯನ್ನು ತಪ್ಪಿಸುತ್ತವೆ. ಸೈಡ್ ವೀವ್ ಮಿರರ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವುಗಳ ಒಳಗೆ ಒಂದು ಸಣ್ಣ ಮಿರರ್ ಅನ್ನು ಕಾಣಬಹುದು.

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಈ ಮಿರರ್ ಅನ್ನು ಯಾವ ಕಾರಣಕ್ಕೆ ನೀಡಲಾಗಿರುತ್ತದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಈ ಲೇಖನದಲ್ಲಿ ಈ ಮಿರರ್ ಅನ್ನು ಯಾವ ಕಾರಣಕ್ಕೆ ನೀಡಲಾಗುತ್ತದೆ ಎಂಬುದನ್ನು ನೋಡೋಣ. ಸೈಡ್ ವೀವ್ ಮಿರರ್‌ಗಳಲ್ಲಿ ನೀಡಲಾಗುವ ಸಣ್ಣ ಮಿರರ್ ಅನ್ನು ಬ್ಲೈಂಡ್ ಸ್ಪಾಟ್ ಮಿರರ್ ಎಂದು ಕರೆಯಲಾಗುತ್ತದೆ.

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಬ್ಲೈಂಡ್ ಸ್ಪಾಟ್ ಎಂದರೇನು ಎಂದು ಹಲವರಿಗೆ ತಿಳಿದಿರುತ್ತದೆ. ತಿಳಿಯದವರಿಗಾಗಿ ಚಿಕ್ಕ ವಿವರಣೆ. ಚಾಲಕನಿಗೆ ಕಾಣದ ಪ್ರದೇಶಗಳನ್ನು ಬ್ಲೈಂಡ್ ಸ್ಪಾಟ್'ಗಳು ಎಂದು ಕರೆಯಲಾಗುತ್ತದೆ. ಚಾಲಕ ಈ ಪ್ರದೇಶಗಳನ್ನು ರೇರ್ ವೀವ್ ಮಿರರ್ ಹಾಗೂ ಸೈಡ್ ವೀವ್ ಮಿರರ್ ಮೂಲಕ ಕಾಣಲು ಸಾಧ್ಯವಿಲ್ಲ.

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಈ ಮಿರರ್‌ಗಳ ಮೇಲಿನ ಸ್ಪಾಟ್'ಗಳನ್ನು ಬ್ಲೈಂಡ್ ಸ್ಪಾಟ್'ಗಳು ಎಂದು ಕರೆಯಲಾಗುತ್ತದೆ. ಬ್ಲೈಂಡ್ ಸ್ಪಾಟ್ ಪ್ರದೇಶದಲ್ಲಿ ಬರುವ ವಾಹನಗಳನ್ನು ಚಾಲಕರು ನೋಡಲಾಗುವುದಿಲ್ಲ. ಏಕೆಂದರೆ ಆ ಪ್ರದೇಶಗಳು ರೇರ್ ವೀವ್ ಮಿರರ್ ಹಾಗೂ ಸೈಡ್ ವೀವ್ ಮಿರರ್‌ಗಳಲ್ಲಿ ಕಾಣುವುದಿಲ್ಲ.

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಬ್ಲೈಂಡ್ ಸ್ಪಾಟ್'ಗಳಲ್ಲಿ ವಾಹನಗಳು ಬರುವುದನ್ನು ಚಾಲಕರು ಗಮನಿಸದಿದ್ದರೆ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚು. ಸೈಡ್ ವೀವ್ ಮಿರರ್‌ಗಳಲ್ಲಿ ಬ್ಲೈಂಡ್ ಸ್ಪಾಟ್ ಮಿರರ್‌ಗಳನ್ನು ಅಳವಡಿಸಿದರೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಏಕೆಂದರೆ ಬ್ಲೈಂಡ್ ಸ್ಪಾಟ್ ಮಿರರ್‌ಗಳು ಚಾಲಕನ ನೋಟದಿಂದ ಮರೆಯಾಗಿರುವ ಪ್ರದೇಶಗಳನ್ನು ತೋರಿಸುತ್ತವೆ. ಬ್ಲೈಂಡ್ ಸ್ಪಾಟ್ ಪ್ರದೇಶದಲ್ಲಿ ಬರುವ ವಾಹನಗಳ ಮೇಲೆ ನಿಗಾ ಇಡಲು ಬ್ಲೈಂಡ್ ಸ್ಪಾಟ್ ಮಿರರ್‌ಗಳು ನೆರವಾಗುತ್ತವೆ.

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದ ಕಾರು ಚಾಲಕರು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಇದರ ಮುಖ್ಯ ಪ್ರಯೋಜನವೆಂದರೆ ಬ್ಲೈಂಡ್ ಸ್ಪಾಟ್ ಪ್ರದೇಶದಲ್ಲಿ ಬರುವ ವಾಹನಗಳನ್ನು ಸ್ಪಷ್ಟವಾಗಿ ನೋಡಬಹುದು. ಬ್ಲೈಂಡ್ ಸ್ಪಾಟ್ ಮಿರರ್‌ಗಳು ಚಾಲಕರಿಗೆ ಹೆಚ್ಚುವರಿ ಗೋಚರತೆಯನ್ನು ನೀಡುತ್ತವೆ.

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಸೈಡ್ ವೀವ್ ಮಿರರ್‌ಗಳಿಂದ ಕಾಣಲು ಸಾಧ್ಯವಾಗದ ಪ್ರದೇಶಗಳಲ್ಲಿ ಅಂದರೆ ಬ್ಲೈಂಡ್ ಸ್ಪಾಟ್ ಪ್ರದೇಶಗಳಲ್ಲಿ ಬರುವ ಇತರ ವಾಹನಗಳು ಹಾಗೂ ಪಾದಚಾರಿಗಳನ್ನು ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದ ಸ್ಪಷ್ಟವಾಗಿ ಕಾಣ ಬಹುದು.

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಬ್ಲೈಂಡ್ ಸ್ಪಾಟ್ ಮಿರರ್‌ಗಳು ಕರ್ವ್‌ಗಳಲ್ಲಿ ಕಾರುಗಳನ್ನು ತಿರುಗಿಸುವಾಗ, ಲೇನ್‌ಗಳನ್ನು ಬದಲಾಯಿಸುವಾಗ ಅಥವಾ ಇತರ ವಾಹನಗಳನ್ನು ಓವರ್ ಟೇಕ್ ಮಾಡುವಾಗ ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ತಡೆಯಲು ನೆರವಾಗುತ್ತವೆ.

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಚಲಿಸುತ್ತಿರುವ ಕಾರಿನ ಸುತ್ತಲೂ ಯಾವ ವಾಹನಗಳಿವೆ ಎಂಬುದನ್ನು ತಿಳಿಯಲು ಬ್ಲೈಂಡ್ ಸ್ಪಾಟ್ ಮಿರರ್‌ಗಳು ನೆರವಾಗುತ್ತವೆ. ಬ್ಲೈಂಡ್ ಸ್ಪಾಟ್ ಮಿರರ್‌ಗಳನ್ನು ಹೊಂದಿದ್ದರೆ, ಇತರ ವಾಹನಗಳಿಂದ ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡು ಹೆಚ್ಚು ಸುರಕ್ಷಿತವಾಗಿ ಕಾರನ್ನು ಚಾಲನೆ ಮಾಡಬಹುದು.

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಬ್ಲೈಂಡ್ ಸ್ಪಾಟ್ ಮಿರರ್‌ಗಳು ಕಾರುಗಳನ್ನು ಸುರಕ್ಷಿತವಾಗಿ ನಿಲ್ಲಿಸಲು ಸಹ ನೆರವಾಗುತ್ತವೆ. ಕೆಲವರಿಗೆ ಕಾರನ್ನು ರಿವರ್ಸ್ ಗೇರ್'ನಲ್ಲಿ ನಿಲ್ಲಿಸಲು ಸಾಧ್ಯವಾಗದೇ ಮುಗ್ಗರಿಸುತ್ತಾರೆ. ಇದರಿಂದ ಬೇರೆ ವಾಹನ ಚಾಲಕರಿಂದ ನಿಂದಿಸಿ ಕೊಳ್ಳ ಬೇಕಾಗುತ್ತದೆ.

ಬ್ಲೈಂಡ್ ಸ್ಪಾಟ್ ಮಿರರ್‌ಗಳಿಂದಾಗುವ ಪ್ರಯೋಜನಗಳಿವು

ಇಂತಹ ಚಾಲಕರಿಗೆ ಬ್ಲೈಂಡ್ ಸ್ಪಾಟ್ ಮಿರರ್‌ಗಳು ನೆರವಾಗುತ್ತವೆ. ಬ್ಲೈಂಡ್ ಸ್ಪಾಟ್ ಮಿರರ್‌ಗಳಿದ್ದರೆ ಇತರ ವಾಹನಗಳು ಅಥವಾ ವಸ್ತುಗಳಿಗೆ ಡಿಕ್ಕಿ ಹೊಡೆಯದೆ ಸುರಕ್ಷಿತವಾಗಿ ಕಾರನ್ನು ನಿಲ್ಲಿಸಬಹುದು. ಕಾರನ್ನು ಪಾರ್ಕಿಂಗ್ ಸ್ಥಳದಿಂದ ತುಂಬಾ ಸುರಕ್ಷಿತವಾಗಿ ಹೊರ ತೆಗೆಯಬಹುದು. ಜಗತ್ತಿನಲ್ಲಿ ಪ್ರತಿದಿನ ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಬ್ಲೈಂಡ್ ಸ್ಪಾಟ್ ಪ್ರದೇಶದಲ್ಲಿ ಬರುವ ವಾಹನಗಳನ್ನು ಸರಿಯಾಗಿ ಗಮನಿಸದಿರುವುದು. ಸೈಡ್ ವೀವ್ ಮಿರರ್‌ಗಳ ಒಳಗೆ ಇರುವ ಬ್ಲೈಂಡ್ ಸ್ಪಾಟ್ ಮಿರರ್‌ಗಳು ಇಂತಹ ರಸ್ತೆ ಅಪಘಾತಗಳು ನಡೆಯದಂತೆ ನೋಡಿಕೊಳ್ಳುತ್ತವೆ.

Most Read Articles

Kannada
English summary
Advantages of blind spot mirrors used in cars details
Story first published: Thursday, August 5, 2021, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X