ಕಡಿಮೆ ಖರ್ಚಿನಲ್ಲಿ ಬೆಟ್ಟ-ಗುಡ್ಡ ದಾಟಬೇಕೆ?: ಹಾಗಾದರೆ ಈ ಎಸ್‌ಯುವಿಗಳನ್ನು ಆಯ್ಕೆ ಮಾಡಿ

ಸದ್ಯಕ್ಕೆ ನಮ್ಮಲ್ಲಿ ಆಫ್‌ರೋಡ್ ವಾಹನಗಳನ್ನು ಖರೀದಿಸುವವರಿಗೆ ಇದೊಂದು ಸುವರ್ಣಾವಕಾಶ. ಯಾಕೆಂದರೆ ಭಾರತೀಯ ಆಫ್‌ರೋಡ್‌ ಮಾರುಕಟ್ಟೆಯಲ್ಲಿ ಹಲವಾರು ಆಯ್ಕೆಗಳು ಲಭ್ಯವಿವೆ. ಸೆಗ್ಮೆಂಟ್‌ನಲ್ಲಿ ಹಲವಾರು ಅಯ್ಕೆಗಳಿರುವುದರಿಂದ ಸಹಜವಾಗಿಯೇ ಸ್ಪರ್ಧೆಗಳು ಸಹ ಇದೇ. ಕಾರಣದಿಂದಲೇ ಸ್ಪರ್ಧಾತ್ಮಕ ಬೆಲೆಯಲ್ಲಿ ಹಲವು ಆಫ್‌ರೋಡ್‌ ವಾಹನಗಳು ಲಭ್ಯವಿದೆ.

ಇಂದಿನ ಲೇಖನದಲ್ಲಿ ಸ್ಪರ್ಧಾತ್ಮಕ ಮೊತ್ತದಲ್ಲಿ ಸಿಗುವಂತಹ ಲೈಫ್ ಸ್ಟೈಲ್‌ ಆಫ್‌ರೋಡ್‌ ಎಸ್‌ಯುವಿಗಳು ಯಾವುದೆಂದು ನೋಡೋಣ. ಇದರಲ್ಲಿ ಪ್ರಮುಖ ಕಂಪನಿಯ ಕಾರುಗಳು ಸಹ ಸೇರಿವೆ. ಲೇಖನದಿಂದ ಒಂದು ಸರಿಯಾದ ಆಫ್ ರೊಡ್‌ ಎಸ್‌ಯುವಿಯನ್ನು ಪಡೆಯಬೇಕು ಎಂದು ಇರುವವರಿಗೆ ಇದು ಸಹಕಾರಿಯಾಗಬಹುದು.

Affordable Off-Roader SUVs

. ಮಾರುತಿ ಸುಜುಕಿ ಜಿಮ್ನಿ: ಹೊಸ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯಲ್ಲಿ K15B 1.5-ಲೀಟರ್ ನ್ಯಾಚುರಲ್-ಆಸ್ಪರ್ಡ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಎಂಜಿನ್ 6,000rpm ನಲ್ಲಿ 103.4bhp ಮತ್ತು 4,000rpm ನಲ್ಲಿ 134.2Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಳೆಯ ಜಿಪ್ಸಿಯಂತೆಯೇ, ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಬಳಸುತ್ತದೆ. ಇದರ ಬೆಲೆ 12.74 - 15.05 ಲಕ್ಷ ಎಕ್ಸ್‌ ಶೋ ರೂಮ್‌.

. ಮಹೀಂದ್ರಾ ಥಾರ್‌: ಮಹೀಂದ್ರಾ ಥಾರ್ (Mahindra Thar) ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ. ಇದರ ಬೆಲೆ 13.87 - 16.78 ಲಕ್ಷ ಎಕ್ಸ್‌ ಶೋ ರೂಮ್‌.

Affordable Off-Roader SUVs

. ಫೋರ್ಸ್‌ ಗೂರ್ಖಾ: ಹೊಸ ಫೋರ್ಸ್‌ ಗೂರ್ಖಾ ಮಾದರಿಯು ನ್ಯೂ ಜನರೇಷನ್ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಮಾದರಿಯು 90 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ. ಇದರ ಬೆಲೆ 14.75 ಲಕ್ಷ ಎಕ್ಸ್‌ ಶೋ ರೂಮ್‌.

. ಮಹೀಂದ್ರಾ ಸ್ಕಾರ್ಪಿಯೋ ಎನ್‌: ಮಹೀಂದ್ರಾ ಸ್ಕಾರ್ಪಿಯೋ ಎನ್ ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 2.0 ಲೀಟರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್, 200 bhp ಗರಿಷ್ಠ ಪವರ್ ಹಾಗೂ 380 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಆಟೋಮೆಟಿಕ್ ಅಥವಾ 6 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಿದೆ. ಇದರ ಬೆಲೆ 17.69 - 24.52 ಲಕ್ಷ ಎಕ್ಸ್‌ ಶೋ ರೂಮ್‌.

ಇದು ಮಾತ್ರವಲ್ಲದೇ ಇನ್ನೂ ಹಲವಾರು ಆಫ್‌ರೋಡ್‌ ವಾಹನಗಳು ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದರಲ್ಲಿ ಇಝುಝು ವಿ ಕ್ರಾಸ್‌ ಡಿ ಮ್ಯಾಕ್ಸ್‌ ಸಹ ಒಂದು. ಮೇಲಿನ ವಾಹನಗಳನ್ನು ಬಿಟ್ಟು ಇಝುಝು ಅನ್ನು ಸಹ ತೆಗೆದುಕೊಳ್ಳಬಹುದಾಗಿದೆ ಆದರೆ ಇದರ ಬೆಲೆ ಮೇಲಿನ ವಾಹನಗಳಿಗಿಂತ ಹೆಚ್ಚು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 17, 2023, 12:54 [IST]
English summary
Affordable off roader suvs of indian market mahindra thar to gurkha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+