ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ: ನಿತಿನ್ ಗಡ್ಕರಿ

ದೇಶದಲ್ಲಿ ಪರ್ಯಾಯ ಇಂಧನಗಳ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಭಾಗವಾಗಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಪಾಣಿಪತ್‌ನಲ್ಲಿ ಎಥೆನಾಲ್ ಘಟಕವನ್ನು ಉದ್ಘಾಟಿಸಿದ್ದರು.

Recommended Video

Alto K10 vs Renault Kwid | Detailed Comparison | Specs Features And Design

ಹಾಗೆಯೇ ಗ್ರೀನ್ ಹೈಡ್ರೋಜನ್ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಕೆಲ ನೀತಿಗಳನ್ನು ಪ್ರಕಟಿಸಿದೆ, ಇದರ ಅಡಿಯಲ್ಲಿ ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮತ್ತು ಪೆಟ್ರೋಲ್ ಆಮದನ್ನು ಕಡಿಮೆ ಮಾಡುವ ಮೂಲಕ ಭಾರತದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವತ್ತ ಗಮನ ಹರಿಸಲಾಗಿದೆ.

ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ: ನಿತಿನ್ ಗಡ್ಕರಿ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭಾರತದಲ್ಲಿ ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಸಿವಿಲ್ ಎಂಜಿನಿಯರ್‌ಗಳು ಮತ್ತು ಸಂಬಂಧಿತ ಉದ್ಯಮಗಳ ವೃತ್ತಿಪರರಿಗಾಗಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದರು.

ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ: ನಿತಿನ್ ಗಡ್ಕರಿ

ಗ್ರೀನ್ ಹೈಡ್ರೋಜನ್ ಬಗ್ಗೆ ಮಾತನಾಡಿದ ಅವರು, ಭಾರತದಲ್ಲಿ ಹಸಿರು ಹೈಡ್ರೋಜನ್ ಅನ್ನು ಪ್ರತಿ ಕೆ.ಜಿಗೆ $1 (ರೂ. 79) ರಷ್ಟು ಕಡಿಮೆ ದರದಲ್ಲಿ ಒದಗಿಸುವುದು ನನ್ನ ಕನಸಾಗಿದೆ ಎಂದ ಅವರು, ಪೆಟ್ರೋಲಿಯಂ, ಬಯೋಮಾಸ್, ಸಾವಯವ ತ್ಯಾಜ್ಯ ಮತ್ತು ಒಳಚರಂಡಿ ನೀರಿನಿಂದ ಹೈಡ್ರೋಜನ್ ಅನ್ನು ಉತ್ಪಾದಿಸಬಹುದು ಎಂದು ತಿಳಿಸಿದರು.

ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ: ನಿತಿನ್ ಗಡ್ಕರಿ

ಹೀಗೆ ಉತ್ಪತ್ತಿಯಾದ ಗ್ರೀನ್ ಹೈಡ್ರೋಜನ್ ಅನ್ನು ವಿಮಾನಯಾನ, ರೈಲ್ವೆ ಮತ್ತು ಆಟೋ ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಿಗೆ ಲಭ್ಯವಾಗುವಂತೆ ಮಾಡಬಹುದು ಎಂದರು. ಪ್ರತಿ ಕೆ.ಜಿ.ಗೆ ಒಂದು ಡಾಲರ್ ದರದಲ್ಲಿ ಹಸಿರು ಜಲಜನಕ ದೊರೆಯುವಂತೆ ಮಾಡುವುದರಿಂದ ದೇಶದಲ್ಲಿ ಇಂಧನಕ್ಕೆ ಪರ್ಯಾಯವಾಗಿ ಹೈಡ್ರೋಜನ್ ಪೂರ್ಣ ಪ್ರಮಾಣದಲ್ಲಿ ಸ್ಥಿರವಾಗಲಿದೆ ಎಂದರು.

ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ: ನಿತಿನ್ ಗಡ್ಕರಿ

ಇನ್ನು ಎಥೆನಾಲ್ ಬೆಲೆ ಲೀಟರ್‌ಗೆ 62 ರೂಪಾಯಿ ಇದ್ದು, ಎಥೆನಾಲ್‌ನ ಕ್ಯಾಲೋರಿಫಿಕ್ ಮೌಲ್ಯವು ಪೆಟ್ರೋಲ್‌ಗಿಂತ ಕಡಿಮೆಯಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ರಷ್ಯಾದ ವಿಜ್ಞಾನಿಗಳ ಸಹಯೋಗದೊಂದಿಗೆ ಎಥೆನಾಲ್‌ನ ಕ್ಯಾಲೋರಿಫಿಕ್ ಮೌಲ್ಯವನ್ನು ಹೆಚ್ಚಿಸಲು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಪೆಟ್ರೋಲಿಯಂ ಸಚಿವಾಲಯವು ಈಗ ಆ ಹೊಸ ತಂತ್ರಜ್ಞಾನವನ್ನು ಪ್ರಮಾಣೀಕರಿಸಿದೆ ಎಂದು ಗಡ್ಕರಿ ಹೇಳಿದರು.

ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ: ನಿತಿನ್ ಗಡ್ಕರಿ

2024ರ ಅಂತ್ಯಕ್ಕೂ ಮೊದಲೇ ಭಾರತೀಯ ರಸ್ತೆ ಮೂಲಸೌಕರ್ಯವನ್ನು ಯುನೈಟೆಡ್ ಸ್ಟೇಟ್ಸ್‌ಗೆ ಸಮಾನವಾಗಿ ಮಾಡುವ ಗುರಿ ಹೊಂದಿರುವುದಾಗಿ ಗಡ್ಕರಿ ಬಹಿರಂಗಪಡಿಸಿದರು. ಹಸಿರು ಪರ್ಯಾಯ ವಸ್ತುಗಳನ್ನು ಬಳಸುವುದು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನದಲ್ಲಿ ದೇಶವು ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ: ನಿತಿನ್ ಗಡ್ಕರಿ

ಮುಂದಿನ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಪೆಟ್ರೋಲ್ ಚಾಲಿತ ಕಾರುಗಳಿಗೆ ಸಮನಾಗಿರುತ್ತದೆ ಎಂದು ಭರವಸೆ ನೀಡಿದ ಅವರು, ಭಾರತದಲ್ಲಿ ಟೊಯೊಟಾದ ಹೈಡ್ರೋಜನ್ ಫ್ಯೂಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ಸಂಬಂಧ ಮಿರಾಯ್‌ನಲ್ಲಿ ಪ್ರಾಯೋಗಿಕ ಅಧ್ಯಯನವನ್ನು ಪ್ರಾರಂಭಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ: ನಿತಿನ್ ಗಡ್ಕರಿ

ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳುತ್ತದೆ. ಭವಿಷ್ಯದಲ್ಲಿ, ಕಾರುಗಳು ಎಥೆನಾಲ್, ಹೈಡ್ರೋಜನ್, ಫ್ಲೆಕ್ಸ್ ಇಂಧನ, ಸಿಎನ್‌ಜಿ ಅಥವಾ ಎಲ್‌ಎನ್‌ಜಿಯಲ್ಲಿ ಚಲಿಸುತ್ತವೆ. ಜೈವಿಕ ಎಥೆನಾಲ್ ಪರಿಸರವನ್ನು ಮಾಲಿನ್ಯ ಮುಕ್ತಗೊಳಿಸುವುದಲ್ಲದೆ, ರೈತರಿಗೆ ಉದ್ಯೋಗಾವಕಾಶವನ್ನೂ ಒದಗಿಸಿ ಅವರ ಆದಾಯವೂ ಹೆಚ್ಚುತ್ತದೆ ಎಂದು ಹೇಳಿದರು.

ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ: ನಿತಿನ್ ಗಡ್ಕರಿ

ಕಾರು ಕಂಪನಿಗಳ ಮನವಿಗೆ ಬಗ್ಗದ ಗಡ್ಕರಿ

ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಎಲ್ಲಾ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಭಾರತದಲ್ಲಿನ ಎಲ್ಲಾ ಪ್ರಯಾಣಿಕ ವಾಹನಗಳಲ್ಲಿ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ನೀಡಲು ಒತ್ತಾಯಿಸಿದೆ.

ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ: ನಿತಿನ್ ಗಡ್ಕರಿ

ವಾಹನದಲ್ಲಿನ ಪ್ರತಿ ಹೆಚ್ಚುವರಿ ಏರ್‌ಬ್ಯಾಗ್‌ಗೆ ಕೇವಲ 800 ರೂಪಾಯಿಗಳಷ್ಟು ಹೆಚ್ಚಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಹೇಳಿಕೆಯೊಂದಿಗೆ, ಮುಂಬರುವ ತಿಂಗಳುಗಳಲ್ಲಿ ಸೈಡ್ ಮತ್ತು ಕರ್ಟನ್ ಏರ್‌ಬ್ಯಾಗ್‌ಗಳನ್ನು ಸರ್ಕಾರ ಕಡ್ಡಾಯಗೊಳಿಸಲಿದೆ ಎಂದು ಗಡ್ಕರಿ ದೃಢಪಡಿಸಿದ್ದಾರೆ.

ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ: ನಿತಿನ್ ಗಡ್ಕರಿ

ವಾಹನ ತಯಾರಕರ ಪ್ರಕಾರ, ಗ್ರಾಹಕರು ಏರ್‌ಬ್ಯಾಗ್‌ಗಳ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ, ಇದರ ಪರಿಣಾಮವಾಗಿ ಹೊಸ ಕಾರನ್ನು ಹೆಚ್ಚು ದುಬಾರಿ ಬೆಲೆಗೆ ಖರೀದಿಸಬೇಕಾಗುತ್ತದೆ. ಇದರೊಂದಿಗೆ ನಿರ್ಮಾಣ ವೆಚ್ಚವೂ ಹೆಚ್ಚಾಗಬಹುದು. ಆದರೆ, ಕೇಂದ್ರ ಸಚಿವರ ಪ್ರಕಾರ ಪ್ರತಿ ಹೆಚ್ಚುವರಿ ಏರ್‌ಬ್ಯಾಗ್‌ನ ಬೆಲೆ ಕೇವಲ 800 ರೂ. ಆಗಬಹುದು ಇದು ಕಾರುಗಳನ್ನು ಖರೀದಿಸಬಲ್ಲ ಹಾಗೂ ಗ್ರಾಹಕರಿಗೆ ಕೈಗೆಟುಕುವ ಬೆಲೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.

ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಅವಶ್ಯಕತೆ ಕೊನೆಗೊಳ್ಳಲಿದೆ: ನಿತಿನ್ ಗಡ್ಕರಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈಗ ಭಾರತದಲ್ಲಿನ ಎಲ್ಲಾ ಪ್ರಯಾಣಿಕ ವಾಹನಗಳಿಗೆ ಸೈಡ್ ಮತ್ತು ಕರ್ಟನ್ ಏರ್‌ಬ್ಯಾಗ್‌ಗಳನ್ನು ಪ್ರಮಾಣಿತಗೊಳಿಸಲು ಸರ್ಕಾರ ಸಜ್ಜಾಗಿದೆ. ವಾಹನ ಚಾಲಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮವು ಶ್ಲಾಘನೀಯವಾಗಿದ್ದರೂ, ವಾಹನಕ್ಕೆ ಹೆಚ್ಚುವರಿ ಏರ್‌ಬ್ಯಾಗ್‌ಗಳನ್ನು ಸೇರಿಸುವುದರಿಂದ ಬೆಲೆ ಹೆಚ್ಚಾಗುವುದರ ಜೊತೆಗೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತದೆ ಎಂಬುದು ಕಾರು ತಯಾರಕರ ವಾದವಾಗಿದೆ.

Most Read Articles

Kannada
English summary
After five years the need for petrol in the country will end Nitin Gadkari
Story first published: Tuesday, August 23, 2022, 18:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X